Welcome to Prashantavanam

Tuesday, August 30, 2011

ರೈಟ್ ರೈಟ್ ಎಂಬ

ರೈಟ್ ರೈಟ್ ಸ್ವಾಮಿ ಮುಂದೆ ಹೋಗಿ
ಎಂಬ ಎಳೆಯ ದನಿ ಕಂಡಕ್ಟರ್
ಮೀಸೆ ಬೆಳೆಯೋದರೊಳಗೆ ಕಾಸನು
ಎಣಿಸೋ ಕೆಲಸ ಆಡೋ ಬದಲು
ಓದ ಕಸಿದುದು ಯಾವ ವೇದನೆಯೋ
ಎಳೆಯ ಹೆಗಲಿಗೇಕಿ ಹೊರೆ ಬ್ರಹ್ಮನೆ
ಬರಿ ಬೆವರ ಹಗಲ ಹಣೆ
ಬರಹವನರಿಯೆ,ಕನಸಿಲ್ಲದ ನಿಶೆ ಮರ್ಮವನರಿಯೆ


ತಳ್ಳಿ ಮುಂದೆ ನೀ ಹಿಂದೆ ಉಳಿದೆಯಾ
ಚಿಲ್ಲರೆ ನೀಡದ ಕಳ್ಳಿಯಾದೆಯಾ
ನಿನ್ನಲೆ ಇಲ್ಲದೆ ಏನ ನೀಡುವೆ?
ಮಾತು ದಾನಿಗಳ ದೂರವೆ ಇಡುವೆ
ಕೇಳರು ಯಾರೂ ನಿನ್ನಯ ರಗಳೆ
ಬೇಸರ ಬೇಡವೆ ಸುಂದರ ಮನಳೆ

No comments:

Post a Comment