Friday, October 26, 2018

Marriage , Reception and Book Release Invitation , ಮದುವೆ, ಆರತಕ್ಷತೆ ಮತ್ತು ಪುಸ್ತಕ ಬಿಡುಗಡೆಯ ಕರೆಯೋಲೆ

Dear Friends, 

As you might be already aware, I am getting married with Akshata on Nov 2nd and here is the wedding invite if you did not get it already . Please consider this as my personal invitation and bless us on the occasion. 

ಆತ್ಮೀಯ ಗೆಳೆಯರೇ, 
ಮುಂಬರುವ ನವೆಂಬರ್ ಎರಡರಂದು ನಾನು ಮತ್ತು ಅಕ್ಷತಾ ಹೊಸ ಬಾಳ ಹಾದಿಯಲ್ಲಿ ಜೊತೆಯಾಗಲಿದ್ದೇವೆ. ಅಂದು ತಾವೆಲ್ಲರೂ ಆಗಮಿಸಿ ನಮ್ಮನ್ನು ಆಶೀರ್ವದಿಸಬೇಕಾಗಿ ಈ ಆತ್ಮೀಯ ಕರೆಯೋಲೆ.. 

Nov 3rd is a special day for me as well as i would be releasing my first book in Kannada by the name "Prashantavana" which is a collection of short stories and followed by the reception in the same venue. Location details are above. Front page of the book is given below. We would also like to invite you for the auspicious day  with a small video


ಮಾರನೆಯ ದಿನ ಅಂದರೆ ನವೆಂಬರ್ ಮೂರರಂದು ನನ್ನ ಕಥಾಸಂಕಲನ "ಪ್ರಶಾಂತವನ" ದ ಲೋಕಾರ್ಪಣೆಯೂ ನಡೆಯಲಿದೆ. ತಾವುಗಳು ಎರಡೂ ಕಾರ್ಯಕ್ರಮಗಳಿಗೆ ಆಗಮಿಸಿ ಅವುಗಳನ್ನು ಚೆಂದಗಾಣಿಸಿಕೊಡಬೇಕಾಗಿ ವಿನಂತಿ .. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಪುಸ್ತಕ ಬಿಡುಗಡೆಗೆ ಬರಲಾಗದಿದ್ದು, ಪ್ರತಿಗಳ ಕೊಳ್ಳುವ ಆಸೆಯಿದ್ದಲ್ಲಿ  ಕೆಳಗಿನ ಮಿಂಚೆಗೆ ನಿಮ್ಮ ವಿಳಾಸವನ್ನು ಕಳುಹಿಸಿ. ಪುಸ್ತಕದ ಮುಖಪುಟ ಕೆಳಗಿದೆ ಮತ್ತು ಕರೆಯೋಲೆಯ ವೀಡಿಯೋ ಕೊಂಡಿ ಇಲ್ಲಿದೆ
prashasti.p@gmail.com 

ಇಂತಿ,
ತಮ್ಮ ವಿಶ್ವಾಸಿ/ Regards
ಪ್ರಶಸ್ತಿ/Prashasti

3 comments:

  1. ಜೀವನದ ಮುಖ್ಯ ಘಟ್ಟದ ಜೊತೆಯಲ್ಲಿ ಸಾಹಿತ್ಯದ ಘಟ್ಟವನ್ನು ದಾಟುತ್ತಿರುವುದು ಸಂತಸದ ವಿಚಾರ.. ಮನೆಗೆ ಮಹಾಲಕ್ಷ್ಮಿ ಬರುತ್ತಿದ್ದರೆ. .ಜೊತೆಯಲ್ಲಿ ನಿಮ್ಮೊಳಗಿನ ಸರಸ್ವತಿ ಹೊತ್ತಿಗೆಯಾಗಲಿದ್ದಾರೆ.. ಸುಂದರ ಅನುಬಂಧ.. ನಿಮ್ಮ ಹೆಸರಲ್ಲಿಯೇ ಇದೆ ಬಹುಮಾನ.. ಅದನ್ನು ಅಕ್ಷಯವಾಗಿಸಲು ಅಕ್ಷತಾ ನಿಮ್ಮ ಹೃದಯದೊಳಗೆ ಹೆಜ್ಜೆ ಇಡುತ್ತಿದ್ದಾರೆ.. ಸೂಪರ್ ಅನುಭವ..

    ಎಲ್ಲವೂ ಶುಭವಾಗಲಿ.. ಬೆಂಗಳೂರಿಗೆ ಬಂದ ಮೇಲೆ ನನಗೊಂದು ಪುಸ್ತಕದ ಪ್ರತಿ ಕಾದಿರಿಸಿ..

    ಶುಭವಾಗಲಿ..

    (ಕಾರಂತರಗಳಿಂದ ಬರಲಾಗುತ್ತಿಲ್ಲ.. ಕ್ಷಮೆ ಇರಲಿ.. ನನ್ನ ಹಾರೈಕೆ ಸದಾ ನಿಮ್ಮ ಕುಟುಂಬಕ್ಕೆ)

    ReplyDelete
    Replies
    1. ಧನ್ಯವಾದಗಳು ಶ್ರೀಕಾಂತಣ್ಣ.. ನಿಮ್ಮ ಬರುವಿಕೆ ಮಿಸ್ ಮಾಡ್ಕೋಳ್ತೀನಿ. ನಿಮ್ಮ ಇನ್ಬಾಕ್ಸ್ ನೋಡಿ.. ಅಡ್ರೆಸ್ ಕೊಡಿ.. ಪುಸ್ತಕ ಕಳಿಸೋಕೆ

      Delete
  2. ಹಾರ್ದಿಕ ಶುಭಾಶಯಗಳು

    ReplyDelete