Showing posts with label ಲೇಖನ.Science. Show all posts
Showing posts with label ಲೇಖನ.Science. Show all posts

Monday, February 4, 2019

ಗುಡ್ ಬೈ ಗೂಗಲ್ ಪ್ಲಸ್



ಸೆಪ್ಟೆಂಬರ್ ೩೦,೨೦೧೪
ಅಂತರ್ಜಾಲದ ದೈತ್ಯ ಗೂಗಲ್ಲಿನ ಉತ್ಪನ್ನವಾಗಿದ್ದ ಆರ್ಕುಟ್ಟಿನ ಬಳಕೆದಾರರ ಪಾಲಿಗೆ ಕರಾಳ ದಿನ. ಸಮಾನ ಆಸಕ್ತರನ್ನು ಒಂದೆಡೆ ಸೆಳೆಯುವ ಆರ್ಕುಟ್ ಗ್ರೂಪುಗಳ ಮೂಲಕ ಸಹಸ್ರಾರು ಜನರನ್ನು ಒಂದೆಡೆ ಸೆಳೆದಿದ್ದ ಆರ್ಕೂಟ್ ಬಾಗಿಲು ಹಾಕಿದಾಗ ಮುಂದೇನಪ್ಪ ಅಂತ ಸುಮಾರು ಜನ ಬೇಸರಗೊಂಡಿದ್ದರು. ಆಗ ಅದು ಬಾಗಿಲು ಹಾಕೋಕೆ ಮುಖ್ಯ ಕಾರಣ ಅದರ ಪ್ರತಿಸ್ಪರ್ಧಿ ಫೇಸ್ಬುಕ್ಕು. ೨೦೦೪ರಲ್ಲೇ ಶುರುವಾದ ಫೇಸ್ಬುಕ್ಕು ಮತ್ತು ಅದರ ಪ್ರತಿಸ್ಪರ್ಧಿ ಗೂಗಲ್ಲಿನ ಜಟಾಪಟಿಗೆ ಈಗ ಹದಿನೈದರ ಹರೆಯ ! 

ಫೇಸ್ಬುಕ್ ವರ್ಸಸ್ ಗೂಗಲ್:
೨೦೦೪ರಲ್ಲಿ ಶುರುವಾಗಿದ್ದ ಆರ್ಕುಟ್ ಸೇವೆ ೨೦೦೬ ರ ಹೊತ್ತಿಗೆ ವಿಶ್ವದಲ್ಲಿ ಹೆಚ್ಚು ಬಳಸಲ್ಪಡುವ ಸಾಮಾಜಿಕ ಜಾಲತಾಣವಾಯಿತು. ಅದರ ೭೦% ಪ್ರತಿಶತ ಬಳಕೆದಾರರು ಬ್ರೆಜಿಲಿಯನ್ನರು ಎಂದು ಆಗ ಅಂದಾಜಿಸಲಾಗಿತ್ತು. ೨೦೦೯ರ ಹೊತ್ತಿಗೆ ಭಾರತದಲ್ಲೂ ಅದರ ಹೆಚ್ಚುತ್ತಿರುವ ಪ್ರಖ್ಯಾತಿಯನ್ನರಿತ ಫೇಸ್ಬುಕ್ಕಿನ ಸಿ.ಇ.ಒ ಮಾರ್ಕ್ ಜುಕರ್ ಬರ್ಗ್ ಭಾರತಕ್ಕೆ ಭೇಟಿಯಿತ್ತು ಇಲ್ಲಿನ ತಂತ್ರಜ್ಞರೊಂದಿಗೆ ಚರ್ಚಿಸಿ ಫೇಸ್ಬುಕ್ಕನ್ನು ಕನ್ನಡ, ಹಿಂದಿ, ತಮಿಳು ಮುಂತಾದ ಭಾರತೀಯ ಭಾಷೆಗಳಲ್ಲಿ ದೊರೆಯುವಂತೆ ಮಾಡಿ ಆರ್ಕುಟ್ಟಿಗೆ ಸಡ್ಡು ಹೊಡೆಯತೊಡಗಿದರು. ೨೦೦೬ರಲ್ಲಿ ಮೊದಲನೆಯ ಸ್ಥಾನದಲ್ಲಿದ್ದ ಮೈ ಸ್ಪೇಸನ್ನು ಹೇಳ ಹೆಸರಿಲ್ಲದಂತೆ ಮಾಡಿದ ಫೇಸ್ಬುಕ್ ಮತ್ತು ಆರ್ಕುಟ್ಟಿನ ಸಮರದಲ್ಲಿ ಮೊದಲನೇ ಸ್ಥಾನವನ್ನು ಆರ್ಕುಟ್ಟೇ ಹಲವು ವರ್ಷಗಳ ಕಾಲ ಕಾಯ್ದುಕೊಂಡಿತ್ತು.  ಈ ಯಶಸ್ಸಿನಿಂದ ಪ್ರೇರೇಪಿತರಾದ ಗೂಗಲ್ಲಿನವರು ಗೂಗಲ್ ಪ್ಲಸ್ ಎಂಬ ಹೊಸ ಸಾಮಾಜಿಕ ತಾಣವನ್ನು ತಂದರು. ಇದರಿಂದ ಆರ್ಕುಟ್ಟಿನಿಂದ ತಲುಪಲಾಗದ ಜನರನ್ನು ತಲುಪೋದು ಮತ್ತು ಫೇಸ್ಬುಕ್ಕಿನ ಪ್ರಾಬಲ್ಯವನ್ನು ಕಡಿಮೆ ಮಾಡೋದು ಗೂಗಲ್ಲಿನ ಉದ್ದೇಶವಾಗಿರಬಹುದು. ಆದರೆ ನಿಧಾನವಾಗಿ ಹೆಚ್ಚುತ್ತಿದ್ದ ಫೇಸ್ಬುಕ್ಕಿನ ಪ್ರಖ್ಯಾತಿಯ ಮುಂದೆ ಇದು ನಿಲ್ಲಲಿಲ್ಲ ಮತ್ತು ೨೦೧೪ರಲ್ಲಿ ಗೂಗಲ್ಲು ಆರ್ಕುಟನ್ನು ಬಂದ್ ಮಾಡಬೇಕಾಯಿತು ! ಆಗ ಜನರಿಗಿದ್ದ ಆಶಾಕಿರಣವೆಂದರೆ ಗೂಗಲ್ ಪ್ಲಸ್. ಅದಾಗಿ ನಾಲ್ಕೇ ವರ್ಷಗಳಲ್ಲಿ ಗೂಗಲ್ ತನ್ನ ಮತ್ತೊಂದು ತಾಣವಾದ ಗೂಗಲ್ ಪ್ಲಸ್ ಅನ್ನೂ ಬಂದ್ ಮಾಡಬೇಕಾಗಿದೆ. ಕಮ್ಮಿಯಾಗುತ್ತಿರುವ ಬಳಕೆ ಮತ್ತು ಗ್ರಾಹಕರ ಮೆಚ್ಚಿನ ಉತ್ಪನ್ನವನ್ನು ನಿರ್ವಹಿಸೋಕೆ ಆಗುತ್ತಿರೋ ಕಷ್ಟದಿಂದ ಇಂತಹ ನಿರ್ಧಾರವನ್ನು ಕೈಗೊಳ್ಳಬೇಕಾಗ್ತಿದೆ ಅಂತ ಡಿಸೆಂಬರ್ ೨೦೧೮ರಲ್ಲಿ ಗೂಗಲ್ ಪ್ರಕಟಿಸಿದ್ದರೂ ಇದರ ಮುಖ್ಯ ಕಾರಣ ಕಮ್ಮಿಯಾಗುತ್ತಿರೋ ಬಳಕೆ ಅಂತಲೇ ಕಾಣುತ್ತಿದೆ. 

ಎಂದು ಬಾಗಿಲು ಗೂಗಲ್ ಪ್ಲಸ್ಸಿನ ಮನೆಗೆ? : 
ಫೆಬ್ರವರಿ ೩, ೨೦೧೯ರಂದು ಎಲ್ಲಾ ಗೂಗಲ್ ಪ್ಲಸ್ ಬಳಕೆದಾರರಿಗೆ ಗೂಗಲ್ ಕಳಿಸಿರುವ ಮಿಂಚೆಯ ಪ್ರಕಾರ ಏಪ್ರಿಲ್ ೨,೨೦೧೯ಕ್ಕೆ ಗೂಗಲ್ ಪ್ಲಸ್ ಬಾಗಿಲು ಹಾಕಲಿದೆ. ಅಂದರೆ ಇನ್ನು ಎರಡು ತಿಂಗಳೂ ಇಲ್ಲ ! 

ಫೆಬ್ರವರಿ ಮೂರಕ್ಕೇ ಯಾಕೆ ಮಿಂಚೆ? :
ಯಾವುದಾದ್ರೂ ಸೇವೆಯನ್ನ ಸ್ಥಗಿತಗೊಳಿಸೋಕೆ ಮುಂಚೆ ಮಾಹಿತಿ ತಿಳಿಸೋದು ಸಾಮಾನ್ಯವಾದ್ರೂ ಇಷ್ಟು ಮುಂಚೆ ಯಾಕೆ ಅಂತ ಕೆಲವರಿಗಾದ್ರೂ ಅನಿಸಿರಬಹುದು. ಆರ್ಕುಟ್ಟಿನಲ್ಲೆಂತೂ ಇಷ್ಟು ಮುಂಚೆ ತಿಳಿಸಿರಲಿಲ್ಲ. ಗೂಗಲ್ಲಿನ ಮಿಂಚೆಯನ್ನು ಓದಿದವರಿಗೆ ಅದರಲ್ಲಿನ ಒಂದು ಸಾಲು ಮಿಸ್ಸಾಗಿರಬಹುದು. ಅದೆಂದರೆ ಫೆಬ್ರವರಿ ನಾಲ್ಕರ ನಂತರ ಗೂಗಲ್ ಪ್ಲಸ್ಸಿನಲ್ಲಿ ಯಾವುದೇ ಹೊಸ ಪೇಜನ್ನೋ, ಪ್ರೊಫೈಲನ್ನೋ, ಸಮುದಾಯಗಳನ್ನೋ, ಘಟನೆಗಳನ್ನೋ ತೆರೆಯಲಾಗೋದಿಲ್ಲ ಅನ್ನೋದು ! ಲಕ್ಷಾಂತರ ಜನರು ಬಳಸಲ್ಪಡುವ ಯಾವುದೋ ಒಂದು ಸೇವೆಯನ್ನು ಏಕದಂ ಬಂದ್ ಮಾಡಲಾಗೋದಿಲ್ಲ. ಅದರಲ್ಲಿರೋ ಜನರು ತಮಗೆ ಸಂಬಂಧಿಸಿದ ಮಾಧ್ಯಮಗಳನ್ನು ಬೇರೆಡೆ ಸ್ಥಳಾಂತರಿಸೋಕೆ ಒಂದಿಷ್ಟು ಸಮಯ ಕೊಡಬೇಕಾಗುತ್ತೆ. ಆದರೆ ಅವರಿಗೆ ಹೊಸ ಮಾಧ್ಯಮಗಳನ್ನು ಇಲ್ಲಿ ಹಾಕೋಕೆ ಅವಕಾಶ ಕೊಟ್ರೆ ಅವರು ಅದನ್ನು ಇಲ್ಲಿ ಕೊನೆಯ ಕ್ಷಣದವರೆಗೂ ಹಾಕ್ತಾನೇ ಇರ್ತಾರೇ ಹೊರತು ಇರೋದನ್ನ ಬೇರೆಡೆ ಸ್ಥಳಾಂತರಿಸೋಲ್ಲ. ಹಾಗಾಗಿ ಸದ್ಯದಲ್ಲೇ ಇಲ್ಲಿಂದ ಜಾಗ ಖಾಲಿ ಮಾಡಿ ಅನ್ನೋ ಪರೋಕ್ಷ ಸೂಚನೆ ಇದು ! 


ಗೂಗಲ್ ಪ್ಲಸ್ ಬಾಗಿಲು ಹಾಕಿದ್ರೆ ಏನಾಗುತ್ತೆ? 
೧. ಫೋಟೋಗಳು: 
ನಿಮ್ಮ ಮೊಬೈಲಲ್ಲಿ ಜಿಮೇಲ್ ಐಡಿಯನ್ನ್ ಹಾಕಿದ್ರೆ ನಿಮ್ಮ ಫೋಟೋಗಳು ತಾವಾಗೇ ಗೂಗಲ್ ಡ್ರೈವಿನಲ್ಲಿ ಬ್ಯಾಕಪ್ ಆಗ್ತಿರೋದನ್ನು ನೀವು ಗಮನಿಸಿರಬಹುದು ! ಅದನ್ನು ಬದಲಾಯಿಸಬಹುದಾದರೂ ಸುಮಾರು ಜನ ಮೊಬೈಲ್ ತಗೊಂಡವ್ರು ಅದರಲ್ಲಿ ಬರೋ ಎಲ್ಲಾ ಮಾಹಿತಿಗೂ ಸರಿ ಸರಿ ಅಂತ ತಲೆಯಾಡಿಸೋದ್ರಿಂದ ಇದರ ಬಗ್ಗೆ ತಲೆ ಕೆಡಿಸಿಕೊಂಡಿರೋಲ್ಲ ! ಗೂಗಲ್ ಪ್ಲಸ್ ಬಾಗಿಲ್ ಹಾಕಿದ್ರೆ ಗೂಗಲ್ಲಿನ ಆ ಫೋಟೋಗಳೂ ಡಿಲಿಟ್ ಆಗುತ್ತಾ ಅಂತ ಕೆಲವರು ಅಂದುಕೊಂಡಿರಬಹುದು. ಆದರೆ ಹಾಗೇನೂ ಆಗೋಲ್ಲ. ಅವೆಲ್ಲಾ ಇರೋದು ಗೂಗಲ್ಲಿನ ಬೇರೊಂದು ಉತ್ಪನ್ನವಾದ ಗೂಗಲ್ ಫೋಟೋಸ್ ನಲ್ಲಿ. ಗೂಗಲ್ ಪ್ಲಸ್ಸಿನಲ್ಲಿ ನಿಮ್ಮದೊಂದು ಖಾತೆ ತೆಗೆದು ಅದರಲ್ಲೇ ನೇರವಾಗಿ ಅಪ್ಲೋಡ್ ಮಾಡಿರೋ ಫೋಟೋಗಳು ಆ ಅಕೌಂಟಿನಲ್ಲಿರುವ ಬೇರೆ ಮಾಹಿತಿಗಳಂತೆ ಏಪ್ರಿಲ್ ೨ರಂದು ಅಳಿಸಲ್ಪಡುತ್ತೆ. 

೨. ಗ್ರೂಪುಗಳು: 
ಇಲ್ಲಿರೋ ಗ್ರೂಪುಗಳೂ ಏಪ್ರಿಲ್ ೨ರಂದು ಅಳಿಸಲ್ಪಡುತ್ತೆ. ಆದರೆ ಇದರಲ್ಲಿರೋ ಗ್ರೂಪಿನಲ್ಲಿ ಸುಮಾರು ಮುಖ್ಯ ಇಮೇಲ್ ಐಡಿಗಳೆಲ್ಲಾ ಇದ್ವು. ಅದನ್ನೆಲ್ಲಾ ಏನು ಮಾಡೋದಪ್ಪ ಅಂತ ತಲೆಕೊಡಿಸಿಕೊಂಡಿದ್ದೀರಾ ? ಗೂಗಲ್ಲಿನವರ ಪ್ರಕಾರ ಅದಕ್ಕೆ ತಲೆಕೆಡಿಸಿಕೊಳ್ಳೋ ಆಗತ್ಯವಿಲ್ಲಾ. ಎಲ್ಲಾ ಗ್ರೂಪಿನ ಅಡ್ಮಿನ್ನು ಮತ್ತು ಮಾಡರೇಟರುಗಳಿಗೆ ಗುಂಪಿನ ಮಾಹಿತಿಯನ್ನು ಎಕ್ಸಪೋರ್ಟ್ ಮಾಡುವ ಸೌಲಭ್ಯ ಮಾರ್ಚಿನ ಮೊದಲ ವಾರದಿಂದ ಲಭಿಸಲಿದೆ. ಅದು ಎಂದಿನಿಂದ ಎಂದು ಹೇಳದಿದ್ದರೂ ಅದೂ ಮಾರ್ಚ್ ೨ಕ್ಕೇ ಶುರುವಾಗಬಹುದು ಎಂಬುದು ಹಲವರ ಅಂದಾಜು !

೩. ಬ್ಲಾಗರ್: 
ಕನ್ನಡದ ಮಟ್ಟಿಗೆ ಅತೀ ಹೆಚ್ಚು ಅಂತರ್ಜಾಲದ ಬ್ಲಾಗರ್ರುಗಳಿರೋದು ಗೂಗಲ್ಲಿನ ಬ್ಲಾಗರ್ ಮತ್ತು ಪ್ರತಿಸ್ಪರ್ಧಿಯಾದ ವರ್ಲ್ ಪ್ರೆಸ್ಸಿನಲ್ಲಿ. ನೀವು ಈ ಬ್ಲಾಗುಗಳನ್ನ ಓದುತ್ತಿದ್ರೆ , ಮತ್ತು ಅಂತರ್ಜಾಲದ ಹಲವು ತಾಣಗಳನ್ನು ಓದುತ್ತಿದ್ರೆ ಅವುಗಳ ಪ್ರತೀ ಪೋಸ್ಟಿನ ಕೆಳಗೆ ಕಮೆಂಟ್/ಪ್ರತಿಕ್ರಿಯೆ ಎಂಬ ಆಯ್ಜೆಯಿರೋದನ್ನ ನೋಡಿರುತ್ತೀರಿ. ಅಲ್ಲಿ ಕಾಮೆಂಟ್ ಮಾಡಿದವರು ಯಾರು ಎಂಬುದನ್ನು ತಿಳಿಸೋಕೆ ಹಲವು ಆಯ್ಕೆಗಳಿರುತ್ತೆ. ಅಂದರೆ ಅಲ್ಲಿ ನಿಮ್ಮ ಫೇಸ್ಬುಕ್ ಐಡಿಯ ಮೂಲಕ ಕಾಮೆಂಟ್ ಮಾಡಬಹುದು. ಅಥವಾ ಗೂಗಲ್ ಪ್ಲಸ್ಸಿನ ಮೂಲಕ ಮಾಡಬಹುದು. ಇದೇ ತರಹ ಹಲವು ಆಯ್ಕೆಗಳಿರುತ್ತೆ. ಬ್ಲಾಗರ್ರುಗಳಿಗೆ ಈ ಗೂಗಲ್ ಪ್ಲಸ್ಸಿನ ಆಯ್ಕೆ ಫೆಬ್ರವರಿ ನಾಲ್ಕರಿಂದ ಮತ್ತು ಬೇರೆ ತಾಣಗಳಿಗೆ ಮಾರ್ಚ್ ಏಳರಿಂದ  ಕಾಣೆಯಾಗುತ್ತೆ ! ನಿಮ್ಮದೇ ಆದ ಬ್ಲಾಗಿದ್ದರೆ ಆ ಬ್ಲಾಗಿನಲ್ಲಿ ಈ ಹಿಂದೆ ಗೂಗಲ್ ಪ್ಲಸ್ಸಿನ ಮೂಲಕ ಮಾಡಿದ ಕಾಮೆಂಟುಗಳೂ ಗೂಗಲ್ ಪ್ಲಸ್ಸಿನ ಬಾಗಿಲು ಹಾಕೋ ದಿನ ಅಂದರೆ ಏಪ್ರಿಲ್ ಎರಡರಂದು ಅಳಿಸಲ್ಪಡುತ್ತೆ ಅನ್ನುತ್ತೆ ಗೂಗಲ್ಲು ! ಹಾಗಾಗಿ ನೀವೊಬ್ಬ ಬ್ಲಾಗಿಗರಾಗಿದ್ದು ಅದಕ್ಕೆ ಬಂದಿದ್ದ ಹೆಚ್ಚಿನ ಕಮೆಂಟುಗಳು ಗೂಗಲ್ ಪ್ಲಸ್ಸಿನಿಂದಲೇ ಆಗಿದ್ದರೆ ಇದು ನಿಮ್ಮ ಪಾಲಿಗೆ ದೊಡ್ಡ ಹೊಡೆತವೇ ಸರಿ !


೪. ಉಳಿದೆಡೆ: 
ಹಾಗಂತ ಎಲ್ಲೆಲ್ಲಿ ಗೂಗಲ್ ಪ್ಲಸ್ ಬಳಸಲ್ಪಡುತ್ತಿತ್ತೋ ಅಲ್ಲೆಲ್ಲಾ ಬಾಗಿಲು ಹಾಕಲಾಗಿದೆ ಅಂತಲ್ಲ. ನೀವು ಗೂಗಲ್ಲಿನ ಮತ್ತೊಂದು ಉತ್ಪನ್ನವಾದ ಜಿ-ಸೂಟನ್ನು ಬಳಸುತ್ತಿದ್ರೆ ಅದರಲ್ಲಿ ಮುಂದೆಯೂ ಗೂಗಲ್ ಪ್ಲಸ್ಸನ್ನು ಬಳಸಬಹುದೆಂದೂ , ಗೂಗಲ್ ಪ್ಲಸ್ಸಿನ್ ಡೆವಲಪರಾಗಿದ್ರೆ ಅಲ್ಲೂ ಸ್ವಲ್ಪ ಬದಲಾವಣೆಗಳು ಬೇಕಾದ ಹೊರತು ಬೇರೆ ಚಿಂತೆಯಿಲ್ಲವೆಂದು ಗೂಗಲ್ ತಿಳಿಸಿರೋದ್ರಿಂದ ಜನಸಾಮಾನ್ಯರ ಪಾಲಿಗೆ ಗೂಗಲ್ ಪ್ಲಸ್ ಮರೆಯಾದ್ರೂ ತೆರೆಮರೆಯಲ್ಲಿ ಅದು ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ ಎಂದು ತಿಳಿದುಬರುತ್ತೆ. 

ಮುಂದೇನು ? 
ಆರ್ಕುಟ್ ಹೋಯ್ತು ಗೂಗಲ್ ಪ್ಲಸ್ ಬಂತು ಡುಂ ಡುಂ ಡುಂ. .. ಎಂದು ಹೇಳುತ್ತಿದ್ದ ಜನರಿಗೆ ಗೂಗಲ್ ಪ್ಲಸ್ ಹೋಯ್ತು.. ಮತ್ತೊಂದು ಬಂತು ಎನ್ನೋಕೆ ಆ ಮತ್ತೊಂದು ಯಾವುದು ಎಂದು ಹೇಳೋಕೆ ಗೂಗಲ್ ಯಾವ ಆಯ್ಕೆಯನ್ನೂ ನೀಡಿಲ್ಲ ಸದ್ಯದ ಮಟ್ಟಿಗೆಂತೂ. ಹಾಗಾಗಿ ಇಷ್ಟವಿದ್ದರೂ , ಇಲ್ಲದಿದ್ದರೂ ಫೇಸ್ಬುಕ್ಕಿನ ಪ್ರಾಬಲ್ಯ ಇನ್ನೂ ಹೆಚ್ಚಾಗೋ ಸಾಧ್ಯತೆಯಿದೆ. ವಿಶ್ವದ ಹಲವು ದೇಶಗಳಲ್ಲಿ ಬೇರೆ ಬೇರೆ ಜಾಲತಾಣಗಳಿದ್ದರೂ ಅವ್ಯಾವದೂ ಭಾರತದಲ್ಲಿ ಫೇಸ್ಬುಕ್ ಹೊಕ್ಕಿರುವಷ್ಟು ಹೊಕ್ಕಿಲ್ಲ. ಹಾಗಾಗಿ ಗೂಗಲ್ ಪ್ಲಸ್ಸಿನ ನಿರ್ಗಮನದಿಂದ ಖಾಲಿಯಾಗೋ ಜಾಗವನ್ನು ತುಂಬೋರು ಯಾರು ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. 

Saturday, June 27, 2015

ವೈರಸ್ಸಿಲ್ಲದ ಲೋಕದಲ್ಲಿ

ಏ ನನ್ನ ಕಂಪ್ಯೂಟರ್ ಸಿಕ್ಕಾಪಟ್ಟೆ ನಿಧಾನವಾಗ್ಬಿಟ್ಟಿದೆ, ಒಂದು ಫೋಲ್ಡರ್ ತೆರೆಯೋಕೆ ೨-೩ ನಿಮಿಷ ಬೇಕು. ಅದೆಂತದೋ ವೈರಸ್ ಬಂದು ಕೂತ್ಬಿಟ್ಟಿದೆ ಕಣೋ ಅಂತಿದ್ದ ಫ್ರೆಂಡು.ಹೂಂ, ಇವ ಯಾವುದೇ ಜಾಲತಾಣ ತೆರೆದ್ರೂ ಅದೆಂತದೋ ಜಾಹೀರಾತು ಬಂದು ಕುಣ್ಯತ್ತೆ ಮಾರಾಯ. ವೈರಸ್ಸು, ಟ್ರೋಜನ್ನು, ಮಾಲ್ವೇರು.. ಇನ್ನೆಂತೆಂತ ಹಾಳು ಮೂಳು ಬಂದು ಕೂತಿದ್ಯೋ ಇದ್ರಲ್ಲಿ ಅಂದ ಇನ್ನೊಬ್ಬ.ಈ ವಿಂಡೋಸು, ಇದ್ರ ದುಬಾರಿ ದುಡ್ಡು ಕೊಟ್ರೂ ಕೆಲಸ ಮಾಡದ . ಎಂಥದದು ? ಆಂಟಿ ವೈರಸ್ಸಾ ? ಅದ್ನ ಹಾಕೂ ಈ ಕತೆ ನಂದು. ವೈರಸ್ಸೇ ಬರದ್ದೆಂತೋ ಇದ್ಯಂತಲ್ಲ, ಎಂಥ ಎಕ್ಸೋ ಅದು, ಅದನ್ನ ಹಾಕ್ಕೊಡೋ ಎಂದ ಮೊದಲನೆಯ ಗೆಳೆಯ.

ವೈರಸ್ಸೇ ಬಾರದ ಸಾಫ್ಟವೇರೇ ?
ವೈರಸ್ಸನ್ನ ತಡೆಯುವಂತಹ ತಂತ್ರಾಂಶಗಳ್ಇದ್ರೂ ಅದ್ರಲ್ಲಿ ಎಲ್ಲಾ ವೈರಸ್ಸುಗಳಿಗೂ ಉತ್ತರವಿರಲೇಬೇಕೆಂದಿಲ್ಲ. ಹೊಸ ವೈರಸ್ಸಿನೆದ್ರು ಹಳೇ ಆಂಟೀ ವೈರಸ್ಸು ಥಂಡಾ ಹೊಡಿಬಹುದು. ಈ ತಂತ್ರಾಂಶದ ಮೂಲಕ ವೈರಸ್ಸನ್ನ ತಡೆಯೋ ಬದಲು ನಮ್ಮ ಗಣಕದ ಎಲ್ಲಾ ತಂತ್ರಾಂಶಗಳು ಕಾರ್ಯನಿರ್ವಹಿಸಲು ಅಗತ್ಯ ವೇದಿಕೆಯಾದ ಕಾರ್ಯನಿರ್ವಹಣಾ ವ್ಯವಸ್ಥೆಯೇ(operating system) ವೈರಸ್ಸುಗಳನ್ನು ಒಳಬರೋಕೆ ಬಿಡದಿದ್ರೆ ?

ವೈರಸ್ ಬಾರದ ಕಾರ್ಯನಿರ್ವಹಣಾ ವ್ಯವಸ್ಥೆ ಇದೆಯೇ ?
ಸಾವಿಲ್ಲದ ಮನೆಯಿಂದ ಸಾಸಿವೆ ತಾ ಎಂಬ ಬುದ್ಧನ ಮಾತನ್ನು ಪಾಲಿಸಲಾಗದ ತಾಯ ಗತಿಯೇ ವೈರಸ್ಸಿಲ್ಲದ ಕಾರ್ಯನಿರ್ವಹಣಾ ವ್ಯವಸ್ಥೆ ಹುಡುಕಹೊರಟವನದೂ ! ದುಡ್ಡು ಕೊಟ್ಟು ಕೊಳ್ಳಬೇಕಾದ(ಪೈರೇಟೆಡ್ ಕಾಪಿಗಳ ಬಗ್ಗೆ ಹೇಳುತ್ತಿಲ್ಲವಿಲ್ಲಿ) ವಿಂಡೋಸಿನಲ್ಲಿ ಮಾತ್ರ ವೈರಸ್ಸುಗಳಿರುತ್ವೆ, ಮುಕ್ತ ತಂತ್ರಾಂಶವಾದ ಲಿನಕ್ಸಿನಲ್ಲಿ ಯಾವುದೇ ವೈರಸ್ಸಿರೋಲ್ಲ ಎಂಬ ಮಾತಿತ್ತು ಮುಂಚೆ. ಆದ್ರೆ ಈಗಿನ ಲಿನಕ್ಸಿನಲ್ಲಿ ವೈರಸ್ ಬರೋ ಸಾಧ್ಯತೆ ವಿಂಡೋಸಿಗಿಂತ ತುಂಬಾನೇ ಕಮ್ಮಿ ,ಆದ್ರೆ ಬರಲೇಬಾರದೆಂದಿಲ್ಲ ಅಂತಾರೆ ತಜ್ಞರು.

ಅಂತಾದ್ದೇನಿದೆ ಲಿನಕ್ಸಿನಲ್ಲಿ ?
ಅ.ಲಿನಕ್ಸೆಂಬೋ ಕಾರ್ಯನಿರ್ವಹಣಾ ವ್ಯವಸ್ಥೆ ಮುಕ್ತವಾದರೂ ಅದನ್ನ ಬಳಸೋರ ಸಂಖ್ಯೆ ತುಂಬಾ ಕಮ್ಮಿ. ಎಲ್ಲೋ ಒಬ್ಬಿಬ್ಬರು ಬಳಸೋ ವ್ಯವಸ್ಥೆಗೆ ಯಾರಪ್ಪಾ ವೈರಸ್ ಬರೀತಾರೆ ಅನ್ನೋದು ಒಂದು ಗುಂಪಿನ ಮಾತು. ಆದ್ರೆ ಅದು ಪೂರ್ಣ ಸತ್ಯವಲ್ಲ. ಉಂಬುಂಟು, ಕುಬುಂಟು, ಎಡುಬುಂಟು ಲಿನಕ್ಸುಗಳ ಜೊತೆಗೆ ಸೂಸೆ(ಸೊಸೆ ಅಲ್ಲ ಮತ್ತೆ), ರೆಡ್ ಹ್ಯಾಟ್, ಮಿಂಟ್ ಅಂತ ಹತ್ತಾರು ವೆರೈಟಿಗಳಿವೆ ಲಿನಕ್ಸಿನದು. ಅವೆಲ್ಲದರ ಒಟ್ಟು ಬಳಕೆದಾರದ ಸಂಖ್ಯೆ ಕಮ್ಮಿಯೇನಲ್ಲ. ಆದ್ರೆ ಪ್ರತಿಯೊಂದರ ಕಾರ್ಯನಿರ್ವಹಣಾ ವಿಧಾನದಲ್ಲೂ ಭಿನ್ನತೆಯಿರೋದ್ರಿಂದ ಒಂದ್ರಲ್ಲಿ ಕೆಲಸ ಮಾಡಿದ(ಕೆಲಸ ಹಾಳು ಹಾಡಿದ) ವೈರಸ್ಸು ಮತ್ತೊಂದೆಡೆ ಕೆಲಸ ಮಾಡದೇ ಇರಬಹುದು.ಹಾಗಾಗಿ ಯದ್ವಾ ತದ್ವಾ ತೊಂದರೆ ಕೊಡುವಂತಹ ವೈರಸ್ಸುಗಳು ಲಿನಕ್ಸಿಗೆ ಕಮ್ಮಿಯೆಂದೇ ಹೇಳಬಹುದು.

ಆ.ರಿಪೋಸ್:
ಲಿನಕ್ಸ್ ಹೆಚ್ಚು ಸುರಕ್ಷಿತವೆಂದು ನಂಬೋಕೆ ಮತ್ತೊಂದು ಕಾರಣ ರಿಪೋಸ್(repo).ವಿಂಡೋಸಿನಲ್ಲಿ ಯಾವ ಜಾಲತಾಣದಿಂದ ಇಳಿಸಿಕೊಂಡ ತಂತ್ರಾಂಶವನ್ನಾದರೂ ಸ್ಥಾಪಿಸ(install)ಬಹುದು. ಆ ತರಹ ಇಳಿಸಿಕೊಂಡ ತಂತ್ರಾಂಶಗಳ ಜೊತೆಗೇ ಎಷ್ಟೋ ವೈರಸ್ಸುಗಳು, ಮಾಲ್ವೇರುಗಳು ಉಚಿತವಾಗಿ ನಮ್ಮ ಗಣಕವನ್ನು ಪ್ರವೇಶಿಸಿರುತ್ತವೆ ! ಹಾಗಾಗಿ ಆ ತಂತ್ರಾಂಶವನ್ನು ಸ್ಥಾಪಿಸುವಾಗ ಅಥವಾ ಆ ತಂತ್ರಾಂಶದ ಕಾರ್ಯನಿರ್ವಹಣಾ ವೇಳೆ ಯಾವ ಅನಾಹುತವಾದರೂ ಆಗಬಹುದು ! ಆದರೆ ಲಿನಕ್ಸಲ್ಲಿ ಹಾಗಲ್ಲ.ಅದ್ರದ್ದೇ ಆದ ರಿಪೋಸಿಟರಿಗಳಿಂದ ಮಾತ್ರ ಸಂಬಂಧಪಟ್ಟ ತಂತ್ರಾಂಶಗಳು ಅಪ್ ಗ್ರೇಡ್ ಅಥವಾ ಸ್ಥಾಪನೆ ಆಗುತ್ವೆ. ಆ ರಿಪಾಸಿಟರಿಗಳ ಪ್ರತೀ ತಂತ್ರಾಂಶಕ್ಕೂ ತನ್ನದೇ ಆದ ಗಣಕೀಕೃತ ಸಹಿ(digital signature) ಇರುತ್ತೆ.ಹಾಗಾಗಿ ಅದ್ರಲ್ಲೇನಾದ್ರೂ ಹೆಚ್ಚು ಕಮ್ಮಿ ಮಾಡಿ ಗಣಕದ ಒಳಗೆ ತುರುಕೋಕೆ ಹೋದ್ರೆ ಅದ್ರ ಸಹಿಯಲ್ಲಿನ ವ್ಯತ್ಯಾಸವನ್ನು ಸುಲಭವಾಗಿ ಕಂಡುಹಿಡಿಯೋ ಕಾರ್ಯನಿರ್ವಹಣಾ ವ್ಯವಸ್ಥೆ ಮುಂದುವರಿಯಲೇ ಬಿಡೋಲ್ಲ. ನಂಬಿಕೆಗೆ ಅರ್ಹವಲ್ಲದ ಯಾವುದೇ ತಾಣದಿಂದ ಇಳಿಸಿದ ಅಥವಾ ಸ್ವತಃ ಕಿತಾಪತಿ ಮಾಡಿದ ಏನನ್ನೂ ಗಣಕಕ್ಕೆ ತುರುಕಲು ಸಾಧ್ಯವಿಲ್ಲ ಅಂದ ಮೇಲೆ ವೈರಸ್ಸೆಲ್ಲಿಂದ ಬರಬೇಕು ? ರಿಪೋಗಳ ಮುಖಾಂತರವೇ ತಂತ್ರಾಂಶದ ಅಪ್ ಗ್ರೇಡ್ ಆಗುವುದನ್ನು ಚಿತ್ರ ೧-೨ ರಲ್ಲಿ ನೋಡಬಹುದು.


ಇ.. Discretionary Access Control(DAC).
ಈ DAC ಅನ್ನೋದು ಲಿನಕ್ಸ್ ಸುಭದ್ರ ಅನ್ನೋಕೆ ಮತ್ತೊಂದು ಕಾರಣ. ಯಾವುದೇ ಬಳಕೆದಾರ ಒಂದು ಫೈಲನ್ನ ಅಥವಾ ಡೈರೆಕ್ಟರಿಯನ್ನ ಸೃಷ್ಟಿಸುವಾಗ ಅದನ್ನು ಯಾರ್ಯಾರು ಉಪಯೋಗಿಸಬಹುದು ಎಂಬುದನ್ನ ನಿರ್ಧರಿಸಬಹುದು. ಲಿನಕ್ಸಿನಲ್ಲಿ ಯಾವುದೇ ಕಡತಕ್ಕಿರುವ ಭದ್ರತೆಯನ್ನು ಅದರ ಬಗೆಗಿನ ಮಾಹಿತಿಹ ಹತ್ತು ಅಕ್ಷರಗಳಿಂದ ಗುರುತಿಸಬಹುದು. ಉದಾಹರಣೆಗೆ ಒಂದು ಕಡತದ ಭದ್ರತಾ ಮಟ್ಟ drwr--r-- ಅಂತ ಇರಬಹುದು(ಚಿತ್ರ ೩). ಇದರಲ್ಲಿ ಮೊದಲನೆಯ ಅಕ್ಷರ D ಅಂತಿದ್ದರೆ ಅದು ಡೈರೆಕ್ಟರಿ(ಹಲವು ಕಡತ ಅಥವಾ ಇನ್ನುಳಿದ ಡೈರೆಕ್ಟರಿಗಳ ಸಂಗ್ರಹ)ವೆಂತಲೂ ಅದಿಲ್ಲದಿದ್ದರೆ ಅದೊಂದು ಕಡತವೆಂದಲೂ ಅರ್ಥ. ನಂತರದ ಮೂರು ಅಕ್ಷರಗಳು ಕಡತವನ್ನು ಸೃಷ್ಠಿಸಿದವ ಏನು ಮಾಡಬಹುದು ಅಂತ. R--read(ಓದು), w--write(ಬರೆ), x--execute(ಆ ಕಡತವನ್ನು ಚಲಾಯಿಸುವ ಅನುಮತಿ). . ನಂತರದ ಮೂರು ಅಕ್ಷರಗಳು ಬಳಕೆದಾರನ ಗುಂಪಿಗೆ ಯಾವ ಅನುಮತಿ ಇರುತ್ತೆ ಎಂದು. ಕೊನೆಯ ಮೂರು ಅಕ್ಷರಗಳು ಉಳಿದವರಿಗೆ ಯಾವ ಅನುಮತಿ ಇರುತ್ತೆ ಅಂತ. ಮೇಲಿನ ಉದಾಹರಣೆಯಲ್ಲಿ(ಚಿತ್ರದಲ್ಲಿರುವಂತೆ) ಬಳಕೆದಾರ ತಾನು ಸೃಷ್ಠಿಸಿದ ಕಡತವನ್ನು ಓದಬಹುದು ಮತ್ತು ಅದಕ್ಕೆ ಬರೆಯಬಹುದು.ಬಳಕೆದಾರ ಇರುವ ಗುಂಪಿಗೆ ಸೇರಿದ ಉಳಿದ ಬಳಕೆದಾರರು ಆ ಕಡತಕ್ಕೆ ಬರೆಯಬಹುದು ಅಥವಾ ಅದನ್ನೋದಬಹುದು. ಹೊರಗಿನವರು ಅದನ್ನು ಓದಲಷ್ಟೇ ಸಾಧ್ಯ ಎಂಬುದು ಅದರರ್ಥ. ಹಾಗಾಗಿ ಮತ್ತೊಬ್ಬ ಬಳಕೆದಾರ ತನ್ನ ಕಡತಗಳನ್ನು ಬಳಸಿಕೊಳ್ಳಲು ಅನುಮತಿ ನೀಡದ ಹೊರತು ಒಂದು ಬಳಕೆದಾರನ ಮೂಲಕ ಹೇಗೋ ಒಳನುಗ್ಗಿದ ವೈರಸ್ಸು ಆ ಬಳಕೆದಾರನಿಗೆ ಸಂಬಂಧಪಟ್ಟ ಕೆಲ ಕಡತಗಳನ್ನು ಮಾತ್ರ ಸ್ಪರ್ಷಿಸಲು ಅಥವಾ ಹಾಳು ಮಾಡಲು ಸಾಧ್ಯ.

ಈ.root ಬಳಕೆದಾರ ಮತ್ತು ಭದ್ರತಾ ಕವಚಗಳು.

ಲಿನಕ್ಸನ್ನು ಸ್ಥಾಪಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ root ಎಂಬ ಬಳಕೆದಾರನನ್ನು ಮತ್ತು ಐಚ್ಚಿಕವಾಗಿ ನಮ್ಮ ಹೆಸರಿನ ಅಥವಾ ಹಲವು ಬಳಕೆದಾರರನ್ನು ಸೃಷ್ಠಿಸಲಾಗುತ್ತದೆ. ಮತ್ತು ಸೃಷ್ಠಿಸಿದ ಪ್ರತೀ ಬಳಕೆದಾರನಿಗೂ  ಅವನಿಗೆ ಸಂಬಂಧಪಟ್ಟ ಒಂದು ಕವಚ(shell) ವಿದ್ದು ಆ ಕವಚದೊಳಗಡೆ ಅನುಮತಿಸಿದಂತಹ ಕೆಲಸಗಳನ್ನು ಮಾತ್ರ ಅವನು ಮಾಡಬಹುದು. . ಉದಾಹರಣೆಗೆ ಎರಡು ಬಳಕೆದಾರರಿದ್ದರೆ ಇಬ್ಬರನ್ನೂ ಹಲವು ರೀತಿಯ ಭದ್ರತಾ ಕ್ರಮಗಳಿಂದ ಪ್ರತ್ಯೇಕಿಸಲಾಗಿರುತ್ತದೆ. ಉದಾಹರಣೆಗೆ ram ಅನ್ನೋ ಬಳಕೆದಾರ ಲಾಗಿನ್ ಆದಾಗ ಅವನ ಕೆಲಸಗಳು /usr/../ram/home ಎನ್ನುವ ಜಾಗಕ್ಕೆ ಅಥವಾ /home/ram ಅನ್ನುವ ಜಾಗಕ್ಕೆ ಹೋಗುತ್ತಾನೆ. ಅವನು ಮಾಡುವ ಕೆಲಸಗಳೆಲ್ಲಾ ಅಲ್ಲೇ ಕೇಂದ್ರಿತ.ಅವನು ಎಲ್ಲಿ ಹೋಗಬೇಕು ಎಂಬುದನ್ನ /etc/passwd ಅನ್ನೋ ಕಡತದಲ್ಲಿ ದಾಖಲಿಸಲಾಗಿರುತ್ತದೆ.ಅದೇ ತರಹ bheem ಅನ್ನುವವನ ಲಾಗಿನ್ ಆದಾಗ ಬರುವ ಜಾಗ /usr/.../bheem/home ಆಗಿರಬಹುದು . ಮುಂಚೆಯೇ ತಿಳಿಸಿದ ಭದ್ರತಾ ಕ್ರಮಗಳ ಜೊತೆಗೆ ಒಬ್ಬ ಮತ್ತೊಬ್ಬನ ಕಡತಗಳನ್ನು ಗೊತ್ತಿಲ್ಲದೇ ಡಿಲಿಟ್ ಮಾಡುವುದಾಗಲಿ, ಎಗರಿಸುವುದಾಗಲಿ ಮಾಡದಂತೆ ಈ ಕವಚಗಳಿಂದ ತಡೆಯಬಹುದು. ವಿಂಡೋಸಲ್ಲೂ ಈ ಕ್ರಮವಿದ್ದರೂ ಲಿನಕ್ಸಿನ ಭದ್ರತಾ ಕ್ರಮಗಳು ಅದಕ್ಕಿಂತ ಎಷ್ಟೋ ಹೆಚ್ಚಿವೆ ಅಂತಾರೆ.  ತನಗೆ ಸಂಬಂಧಿಸಿದ ಕೆಲಸಗಳನ್ನು ಬಿಟ್ಟು ಕಾರ್ಯನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಯಾವ ಜಾಗಕ್ಕೆ ಹೋಗಲು, ಅಲ್ಲಿ ಯಾವ ಕೆಲಸವನ್ನೂ ಮಾಡಲು ಬಳಕೆದಾರನ ಕವಚ ಬಿಡೋದಿಲ್ಲ. ಆ ಎಲ್ಲಾ ಕೆಲಸ ಈ ಎಲ್ಲಾ ಬಳಕೆದಾರರ ದೊಡ್ಡಣ್ಣ root ನದು. ಇವರಿಗ್ಯಾರಿಗೂ ಇಲ್ಲದಷ್ಟು ಶಕ್ತಿ ಹೊಂದಿರೋ ಅವನು ಗಣಕದಲ್ಲಿ ಏನು ಬೇಕಾದ್ರೂ ಮಾಡಬಹುದು ! ಉದಾಹರಣೆಗೆ ಯಾವುದೇ ಬಳಕೆದಾರನಿಗೆ ಕೆಲಸವೊಂದಕ್ಕಾಗಿ ಹೆಚ್ಚಿನ ಅನುಮತಿಗಳನ್ನು ಕೊಡುವುದು, ಕಿತ್ತುಕೊಳ್ಳುವುದು, ಕಾರ್ಯನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಕೆಲಸಗಳನ್ನು root ಬಳಕೆದಾರನ ಮೂಲಕ ಮಾಡಬಹುದು. ಈ root ನ ಪಾಸವರ್ಡ್  ಅದನ್ನು ಸ್ಥಾಪಿಸಿದ ನಿಮಗೆ ಮಾತ್ರ ತಿಳಿದಿರುತ್ತೆ. ಹಾಗಾಗಿ ಯಾವುದೇ ಬಳಕೆದಾರನ ಮೂಲಕ ಗಣಕವ ಹೊಕ್ಕ ವೈರಸ್ಸಿಗೆ root ನ ಶಕ್ತಿ ಸಿಗುವ ತನಕ, ಅದು ಸಿಗದ ಕಾರಣ ಏನೂ ಮಾಡಲಾಗದೇ ಸುಮ್ಮನೇ ಕೂರಬೇಕಾಗುತ್ತದೆ.
ಉದಾಹರಣೆಗೆ ಚಿತ್ರ-೪ ರಲ್ಲಿರುವಂತೆ ಬಳಕೆದಾರ ತನಗೆ ಸಂಬಂಧವಿಲ್ಲದ ಕೆಲಸವನ್ನು ಮಾಡಲು ಹೊರಟಾಗ ಕಾರ್ಯನಿರ್ವಹಣಾ ವ್ಯವಸ್ಥೆ ಅದನ್ನು ಅನುಮತಿಸುವುದಿಲ್ಲ.

ಉ. ಮುಕ್ತತೆ:

The cathedral and the bazaar ಎಂಬ ಪುಸ್ತಕದಲ್ಲಿ ಎರಿಕ್ ಎಸ್.ರೈಮಂಡ್ ಎಂಬ ಲೇಖನ ಒಂದು ಮಾತು  ಹೇಳುತ್ತಾನೆ. ನೋಡೋ ನೂರು ಕಣ್ಣಿದ್ರೆ ಚುಕ್ಕಿಯಂತಹ ತಪ್ಪೂ ಪರ್ವತದಂತೆ ಗುರುತಿಸಲ್ಪಡುತ್ತೆ ಅಂತ. ಈ ಮಾತು ಲಿನಕ್ಸಿನ ಜನಕನೆಂದೇ ಖ್ಯಾತನಾದ ಲಿನಸ್ ಟೊವಾರ್ಡಸ್ಸಿನ ನೆನಪಿನಲ್ಲಿ "ಲಿನಸ್ ನಿಯಮ" ಅಂತಲೇ ಖ್ಯಾತಿ ಹೊಂದಿದೆ. ಇಲ್ಲಿ ಹೇಳೋಕೆ ಹೊರಟಿರುವುದೇನೆಂದರೆ  ಲಿನಕ್ಸಿನ ತಂತ್ರಾಂಶಗಳ ಕೋಡುಗಳು(code) ಅಂತರ್ಜಾಲದೆಲ್ಲೆಡೆ ಮುಕ್ತವಾಗಿ ಲಭ್ಯವಿರುತ್ತದೆ. ಹಾಗಾಗಿ ಅನೇಕ ತಂತ್ರಜ್ಞರು ಅದನ್ನ ತಮ್ಮ ಅದನ್ನ ಗಣಕಕ್ಕೆ ಹಾಕಿ ಬಳಸೋಕೆ ಪ್ರಯತ್ನಿಸ್ತಾರೆ. ಅದ್ರಲ್ಲಿರೋ ಹಲವು ಸೌಲಭ್ಯಗಳನ್ನ ಬಳಸುವಾಗ ಕಂಡುಬಂದ ನ್ಯೂನತೆಗಳನ್ನ ಸರಿಪಡಿಸೋಕೂ ಪ್ರಯತ್ನಿಸ್ತಾರೆ. ಜನ ಮುಕ್ತವಾಗಿ ಸಿಗೋ ತಂತ್ರಾಂಶದ ತಪ್ಪುಗಳ ಸರಿಪಡಿಸೋಕೆ ಪ್ರಯತ್ನಿಸ್ತಾರೇ ಹೊರತು ಅದಕ್ಕೆ ಹೊಸ ವೈರಸ್ಯಾಕೆ ಬರೀತಾರೆ ಅನ್ನೋದು ಮತ್ತೊಂದು ಗುಂಪಿನ ಪ್ರಶ್ನೆ. ಆದ್ರೆ ಅದೇ ಕೋಡಿನ ನ್ಯೂನತೆಗಳನ್ನ ತಿಳಿದುಕೊಂಡು ಅದಕ್ಕೊಂದು ಹೊಸ ವೈರಸ್ ಬರೀಬಾರದು ಅಂತೇನಿಲ್ಲ !

ಕೊನೇ ಗುಟುಕು:

ನೀವು, ನಿಮ್ಮ ಗಣಕ ಮತ್ತು ಅದರ ರೋಗಗಳು ನೀವದನ್ನ ಹೇಗೆ ಬಳಸ್ತೀರ ಅನ್ನೋದರ ಮೇಲೆ ನಿರ್ಧಾರಿತವಾಗಿರುತ್ತೆ.ನೆಟ್ಟಿಗೆ ಕನೆಕ್ಟೇ ಆಗದ , ಪೆನ್ ಡ್ರೈವೇ ಹಾಕದ ಗಣಕಕ್ಕೆ ಯಾವ ವೈರಸ್ಸೂ ಬರೋಲ್ಲ ಅನ್ನೋದು ಸಾರ್ವಕಾಲಿಕ ಸತ್ಯ ! ನೀವೆಲ್ಲಿಗೆ ಹೋಗ್ತೀರ, ಏನು ಮಾಡ್ತೀರ ಅನ್ನೋದ್ರ ಮೇಲೆ ನಿಮ್ಮ ಆರೋಗ್ಯ ಹೇಗಿರುತ್ತೋ ಅದೇ ತರಹ ನಿಮ್ಮ ಗಣಕ ಅನ್ನೋದು ಅದರ ಆರೋಗ್ಯದ ಗುಟ್ಟು.



ಈ ಲೇಖನ , ೨೬/೬/೨೦೧೫ ರ, ವಿಜಯ ನೆಕ್ಟ್ ಪತ್ರಿಕೆಯ, ಪುಟ ೧೬ರಲ್ಲಿ ಪ್ರಕಟವಾಗಿದೆ

Tuesday, June 16, 2015

ಕಾಡೋ ಕಾಡು

ಅಡವಿ ದೇವಿಯ ಕಾಡು ಜನಗಳ ಈ ಹಾಡು.. ನಾಡಿನ ಜೀವ ತುಂಬಿದೆ..ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ಎಸ್.ಪಿ.ಬಿ ಸಂಗಡಿಗರು ಹಾಡಿದ ಮೇಲಿನ ಹಾಡು ಕೇಳದವರಿಲ್ಲ ಅನಿಸುತ್ತೆ(ಕೊಂಡಿ ೧). ಜಂಗಲ್ ಬುಕ್ಕಿನ ಮೋಗ್ಲಿಯ ಕತೆಗಳನ್ನು ಕೇಳದ ಒಂದು ಪೀಳಿಗೆಯವರೇ ಇಲ್ಲವೆನ್ನುವಷ್ಟು ಪ್ರಸಿದ್ದಿ ಪಡೆದಿತ್ತು ಒಂದು ಪುಸ್ತಕ ಒಂದು ಕಾಲಕ್ಕೆ.ಕಾಡಲ್ಲಿ ಕಳಲೆಯನ್ನೋ, ಮರಗೆಸವನ್ನೋ , ಜೇನನ್ನೋ ಕೊಯ್ಯಲು ಹೋಗುತ್ತಿದ್ದ ಅಪ್ಪ, ಅಜ್ಜ ಅಲ್ಲೇ ಸಿಗುತ್ತಿದ್ದ ಹಲಸಿನ ಹಣ್ಣು ತೀರಾ ದೊಡ್ಡದಿದ್ರೆ ಮಾತ್ರ ಮನೆಗೆ ತರುತ್ತಿದ್ದರಂತೆ. ಸಣ್ಣ ಪುಟ್ಟದ್ದೆಲ್ಲಾ ಅಲ್ಲೇ ಸ್ವಾಹಾ ! ಆಹಾ, ಈ ತರದ ಮಾತುಕತೆಗಳನ್ನ ಹಳ್ಳೀಬದಿಯ ಒಂದಿಷ್ಟು ಜನರೆಂತೂ ಕೇಳೇ ಇರುತ್ತೀರಿ. ಪೇಟೇಲಿರೋ ಮಕ್ಕಳೂ ಈ ತರದ ಕಥಾನಕಗಳನ್ನ ಅವರಜ್ಜನ, ಅಜ್ಜಿಯ ಬಾಯಲ್ಲಿ ಕೇಳ್ತಿದ್ದಾಗ ಅವರ ಕಾಡಿನ ಕಲ್ಪನೆಯಲ್ಲಿ ಮಾಡರ್ನ್ ಜಂಗಲ್ ಬುಕ್ ಬಂದಿರಲು ಸಾಕು.  ಜೂಲಿಯಾನೆ ಕೊಪ್ಕೆ ಅವರ Girl against the jungle ಪುಸ್ತಕದ ಭಾಗವೊಂದು(ಕೊಂಡಿ ೨)ನಮ್ಮ ಹೈಸ್ಕೂಲಿನ ಇಂಗ್ಲೀಷಿನಲ್ಲಿ ಪಾಠವಾಗಿತ್ತು. ಲಾಕ್ ಹೀಡ್ ಎಲೆಕ್ಟ್ರಾವೆಂಬ ವಿಮಾನದಲ್ಲಿ ತಾಯಿಯ ಜೊತೆಗೆ ಹೊರಟ ಹುಡುಗಿ ಆ ವಿಮಾನ ಕಗ್ಗಾಡಿನಲ್ಲಿ ಪತನವಾದಾಗ ಹೇಗೆ ಒಬ್ಬಂಟಿಯಾಗಿ ದಿನಗಳ ಕಾಲ ತನ್ನ ಜೀವವುಳಿಸಿಕೊಂಡು ಕೊನೆಗೂ ಕಾಡಿನಿಂದ ಹೊರಬರುವಲ್ಲಿ ಯಶಸ್ವಿಯಾಗ್ತಾಳೆ ಅನ್ನೋ ಕತೆ ಹೈಸ್ಕೂಲು ಪಟ್ಯವಾಗಿದ್ದರೂ ಆಸಕ್ತಿ ಹೊರಳಿಸುತ್ತಾ ಸಾಗೋದ್ರಲ್ಲಿ  ಲೇಖಕನ ನಿರೂಪಣೆಯಷ್ಟೇ ಅಮೇಜಾನಿನ ಕಾಡುಗಳ ದಟ್ಟ ಹಸಿರೂ ಕಾರಣವಲ್ಲವಾ ಅಂತ ಎಷ್ಟೋ ಬಾರಿ ಅನಿಸಿದ್ದಿದೆ. ಕಾಡೆಂದರೆ ಹೀಗೇ ಅಲ್ವೇ ? ಸದಾ ಕುತೂಹಲವನ್ನು, ಜೀವಚೈತನ್ಯವನ್ನು, ಉತ್ಸಾಹದ ಚಿಲುಮೆಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ತಾಣ. ಅದೆಷ್ಟೋ ಜೀವಿಗಳ ಕಲರವದ ತಾಣ. ಮಾನವನ ಮೂಲವೂ ಒಮ್ಮೆ ಇದ್ದಿದ್ದು ಅಲ್ಲೇ. ಹಾಗಿದ್ದೂ ಮಾನವ ತಾನು ಹತ್ತಿದ ಏಣಿಯನ್ನೇ ಒದೆವ ಮೂರ್ಖನಾಗಿರೋದು ಏಕೆ ?

ಮನೆ ಕಟ್ಟೋಕೆ ಮರ ಬೇಕಾ ? ಕಾಡು ಕಡಿ. ಫುಲ್ ವುಡನ್ ಪ್ಲೋರ್ ಬೇಕು, ರೆಸ್ಟೋರೆಂಟುಗಳಲ್ಲಿ ಮರಗಳದ್ದೇ ಚಮಚಮಿಸಬೇಕು. ಮರಗಳ ಮೇಲೆ ಮನೆಕಟ್ಟೋ ಶೋಕಿ. ಸರಿ ಅದಕ್ಕೆ ಮರ  ? ಕಡಿ ಇನ್ನೊಂದಿಷ್ಟು ಕಾಡು. ಗಂಧ, ತೇಗ, ಚಂದನಗಳನ್ನೆಲ್ಲಾ ದೊಡ್ಡ ಮಟ್ಟದಲ್ಲಿ ಸ್ಮಗಲ್ ಮಾಡಿ ಊರಬದಿ ಕಾಡುಗಳಲ್ಲಿ ಅವುಗಳೇ ಇಲ್ಲದ ಪರಿಸ್ಥಿತಿ ಬಂದು ಹೋಗಿದೆ ಈಗ. ದುಡ್ಡುಳ್ಳವರ ಶೋಕಿಗಳ ಮರಗಳ ಸಮಾಧಿಯ ಮೇಲಷ್ಟೇ ಅಲ್ಲ, ಅವರ ಭವಿಷ್ಯದ ಸಮಾಧಿಯ ಮೇಲೂ ಬದುಕುತ್ತಿವೆಯೆಂಬ ಅರಿವಾಗುತ್ತಿಲ್ಲ ಅವರಿಗೆ. ಇನ್ನು ಹಳ್ಳಿಯವರೇನು ಕಮ್ಮಿಯಿಲ್ಲ. ಉರುವಲಿಗೆ ಸೌದೆ ? ಕೊಟ್ಟಿಗೆಗೆ ಹಾಸೋಕೆ ಸೊಪ್ಪು ? ಟೇಬಲ್ಲು, ಕುರ್ಚಿ, ಬರೆಯೋ ಡೆಸ್ಕು.. ಎಲ್ಲಾ ಮರದ್ದೇ ಬೇಕು. ಅದಕ್ಕೆ ಬೇಕಾದ ಮರ ? ಮಾನವನೇ ನಿರ್ಮಿಸಿದ ಪ್ಲಾಂಟೇಷನ್ಗಳಿಂದಲೂ ಬರಬಹುದು. ಆದರೆ ತರಬೇಕಲ್ಲ ! ಸುಲಭವಾಗಿ ಸಿಕ್ಕೋ ಕಡಿಯೋಕೆ ಬರೋ ಕಾಡಿರಬೇಕಿದ್ರೆ, ಯಾರು ಬಿಡ್ತಾರೆ ? ಒಂದಿಷ್ಟು ಕೊಡಲಿ ಹಾಕು ಮತ್ತೆ ಸೈಕಲ್ಲೋ, ರಿಕ್ಷಾದಲ್ಲೋ ಅದನ್ನು ಹೊತ್ತು ಇನ್ನೆಲ್ಲೋ ಮಾರಿ ನಾಲ್ಕೈದು ದಿನ ಆರಾಮಾಗಿರೋಕೆ ಬೇಕಾದಷ್ಟು ದುಡ್ಡು ಸಂಪಾದನೆ ಮಾಡ್ಕೋ. ಕೂಲಿಗಾಗಿ ಕಾಳಿದೆ. ಆದ್ರೆ ಯಾರು ಅಲ್ಲಿ ಹೋಗಿ ದಿನಾ ಮೈಬಗ್ಗಿಸಿ ದುಡಿಯೋರು ? ಅದೂ ಯಾವಾಗ್ಲೋ ಒಮ್ಮೆ ಇರೋ ಕೆಲಸ. ಆದ್ರೆ ಈ ಕಾಡಿರೋ ತನಕ ಸೌದೆ ಮಾರೋ ಕೆಲಸಕ್ಕೇನೂ ತೊಂದ್ರೆ ಇಲ್ವಾ ? ನಾಳೆ ಏನೋ ಆಗುತ್ತೆ ಅಂತ ಕೂತ್ಕೊಂಡ್ರೆ ಇವತ್ತಿನ ಹೊಟ್ಟೆ ತುಂಬೋದು ಹೇಗೆ ಅನ್ನೋ ಪ್ರಶ್ನೆ ಮರ ಕಡಿಯುವವರದು !

ಈ ರೀತಿಯ ಹುಚ್ಚುತನದ ಪರಮಾವಧಿಗಳಿಂದ ೨೦೦೦ರಿಂದ ೨೦೧೦ರ ಬರೀ ಹತ್ತು ವರ್ಷದ ಅವಧಿಯಲ್ಲಿ ಇಡೀ ಪ್ರಪಂಚದಲ್ಲಿ ಕಡಿಯಲ್ಪಟ್ಟ ಕಾಡಿನ ಪ್ರಮಾಣ ಎಷ್ಟು ಗೊತ್ತೇ ? ಅಂದಾಜು ೧೩ ಮಿಲಿಯನ್ ಹೆಕ್ಟೇರ್/ವರ್ಷಕ್ಕೆ ಅನ್ನುತ್ತೆ FAO ದ ಒಂದು ವರದಿ !(ಕೊಂಡಿ ೩) ಈ ಒಂದು ಲಕ್ಷ ಹೆಕ್ಟೇರು ಅಂದ್ರೆ ಎಷ್ಟು ಅಂದ್ರಾ ? ಇಡೀ ಗೋವಾದ ಭೂಭಾಗ ೨೧,೦೩೮ ಹೆಕ್ಟೇರುಗಳಷ್ಟೆ ! ಶ್ರೀಲಂಕಾದಂತಹ ದೇಶದ ಒಟ್ಟು ಭೂಭಾಗ ೬.೫ ಮಿಲಿಯನ್ ಹೆಕ್ಟೇರುಗಳು(ಕೊಂಡಿ ೪). ಅಂತಾದ್ರಲ್ಲಿ ಪ್ರತೀ ವರ್ಷ ೧೩ ಮಿಲಿಯನ್ ಹೆಕ್ಟೇರಿನಷ್ಟು ಕಾಡು ಕಡೀತಿದಾರೆ ಅಂದ್ರೆ ಲೆಕ್ಕ ಹಾಕಿ ! ಅಬ್ಬಾ ಅಂದ್ರಾ  ? ೯೦ರಿಂದ ೨೦೦೦ರ  ಅವಧಿಯಲ್ಲಿ ಈ ಪ್ರಮಾಣ ವರ್ಷಕ್ಕೆ ೧೬ ಮಿಲಿಯನ್ ಹೆಕ್ಟೇರ್ ಇತ್ತಂತೆ ! ಇರೋ ಬರೋ ಕಾಡೆಲ್ಲಾ ಕಡಿದಾದ ಮೇಲೆ ಇನ್ನೇನು ಉಳಿದಿರುತ್ತೆ ಕಡಿಯೋಕೆ ಅಂದ್ರಾ ? ಕೆಟ್ಟ ಮೇಲೆ ಬುದ್ದಿ ಬಂತು ಅಂದ್ರಾ ? ಆದ್ರೆ ತಜ್ಞರ ಅಭಿಪ್ರಾಯ ಕೊಂಚ ಭಿನ್ನವೇ ಆಗಿದೆ. ಅರಣ್ಯನಾಶದ ಪ್ರಭಾವ ಕಮ್ಮಿಯಾಗೋಕೆ ಹೆಚ್ಚೆಚ್ಚು ಮರಗಳನ್ನು ಬೆಳೆಸಿ, ಕಾಡನ್ನು ಉಳಿಸಿಕೊಳ್ಳೋಕೆ ಇತ್ತೀಚೆಗೆ ನಡೆಯುತ್ತಿರೋ ಪ್ರಯತ್ನಗಳೂ ಕಾರಣ ಅಂತಾರೆ ತಜ್ಞರು. FAO ದ ವರದಿಯ ಪ್ರಕಾರ ಭಾರತ, ಚೀನಾ ಮತ್ತು ವಿಯಟ್ನಾಮಿನಂತಹ ದೇಶಗಳಲ್ಲಿನ ಅರಣ್ಯೀಕರಣದ ಕ್ರಮಗಳಿಂದ ವರ್ಷಕ್ಕೆ ಅಂದಾಜು ೪ ಮಿಲಿಯನ್ ಹೆಕ್ಟೇರುಗಳಷ್ಟು ಅರಣ್ಯ ಭೂಮಿ ಹೆಚ್ಚಾಗುತ್ತಿದೆ. ಅದಾಗ್ಯೂ ೨೦೦೦ರಿಂದ ೨೦೧೦ರ ನಡುವಿನ ಅರಣ್ಯನಾಶದ ಒಟ್ಟಾರೆ ಪ್ರಮಾಣ ವರ್ಷಕ್ಕೆ ೫ ಮಿಲಿಯನ್ ಹೆಕ್ಟೇರ್ ಎನ್ನುತ್ತಾರೆ. ಹಿಂದಿನ ಹತ್ತುವರ್ಷಗಳಲ್ಲಿ ವರ್ಷಕ್ಕೆ ೮.೩% ಇದ್ದ ನಾಶದ ಪ್ರಮಾಣ ಈಗ ಐದು ಚಿಲ್ಲರೆಗೆ ಇಳಿದಿರೋದ್ರ ಹಿಂದಿರೋ ಆ ಕಾರ್ಯಕ್ರಮಗಳಾವುದು ? ಅದೆಷ್ಟೋ ಕೊಡಲಿಗಳ ಮಧ್ಯೆಯೋ ಉಳಿದಿರೋ ನೀರೆರೆಯೋ ಕೈಗಳ ಬಗ್ಗೆಯೊಂದಿಷ್ಟು ಹೆಮ್ಮೆ ಪಡೋಣ ಅಂದ್ರಾ  ? ಮುಂದಿನ ಭಾಗ ಅದರ ಕುರಿತಾದ್ದೆ.

ಪರಿಸರ, ಕಾಡಿನ ರಕ್ಷಣೆ, ಅಭಿವೃದ್ಧಿಗೆ ಅಂತಲೇ ಕೇಂದ್ರ ಸರ್ಕಾರದವರು ೧೯೯೨ರಲ್ಲಿ National Afforestation and Eco-Development Board (NAEB) ಅಂತೊಂದು ಬೋರ್ಡನ್ನ ಸ್ಥಾಪಿಸಿದ್ದಾರೆ. ಅದರ ಮುಖ್ಯ ಉದ್ದೇಶ ಏನಪ್ಪಾ ಅಂದ್ರಾ ? ಅರಣ್ಯಗಳನ್ನು ಉಳಿಸೋ ಕ್ರಮಗಳಿಗೆ ಉತ್ತೇಜನ ಕೊಡೋದು, ಸಸಿ ನೆಡುವಿಕೆ,ಹಾಳಾದ ಕಾಡುಗಳನ್ನ ಮತ್ತೆ ಸಹಜ ಸ್ಥಿತಿಗೆ ತರುವಂತಹ ಪ್ರಯತ್ನಗಳನ್ನು ನಡೆಸುತ್ತಾರೆ. ಅಭಯಾರಣ್ಯಗಳು, ಸಂರಕ್ಷಿತ ಅರಣ್ಯಗಳು, ಪಕ್ಷಿಧಾಮಗಳಂತಹ ಕಾಡಿನ ಸುತ್ತಮುತ್ತಲಿನ ಜಾಗಗಳಲ್ಲೇನೋ ಕಾಡು ಕಡಿಯೋಕೆ ಅನುಮತಿ ಇರಲ್ಲ.ಆದ್ರೆ ಅದ್ರ ಅಕ್ಕಪಕ್ಕದ ಜಾಗಳಲ್ಲಿ ? ಆ ರೀತಿ ವಿಪರೀತ ಹಾನಿಗೀಡಾದ ಸುತ್ತಲ ಕಾಡನ್ನು ಅದರ ಗತವೈಭವದತ್ತ ಕೊಂಡೊಯ್ಯೋ ಪ್ರಯತ್ನ ಈ ಬೋರ್ಡಿನದು. ಹಿಮಾಲಯದ ಶ್ರೇಣಿ, ಪಶ್ಚಿಮ ಘಟ್ಟಗಳು, ಅರಾವಳಿ ಅರಣ್ಯ ಮತ್ತಿತರ ಕಡೆ ಸದ್ದಿಲ್ಲದಂತೆ ಕೆಲಸ ಮಾಡ್ತಿರೋ ಇವರ ಕೆಲ್ಸದ ಮಾಹಿತಿಯಿರ್ಲಿ, ಈ ತರವೂ ಒಂದು ಬೋರ್ಡಿದೆ ಎಂಬೋ ಸುದ್ದಿಯೇ ಎಷ್ಟು ಖುಷಿ ಕೊಡುತ್ತೆ ಅಲ್ವಾ ?   .ಈ NAEB ಅವ್ರು National Afforestation Programme (NAP) through Community Participation ಅಂತೊಂದು ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಅವರ ಜಾಲತಾಣವ ಹೊಕ್ರೆ ಅದರಲ್ಲಿ ರಾಜ್ಯಾವಾರು ನಡೆಯುತ್ತಿರುವ ಕಾರ್ಯಕ್ರಮಗಳ ವಿವರವನ್ನು ಪಡೆಯಬಹುದು. ಕೆಲವೊಂದು ಉಪಕೊಂಡಿಗಳಲ್ಲಿ ಇನ್ನೂ ಮಾಹಿತಿಯನ್ನು ತುಂಬಿಲ್ಲವಾದರೂ ಈ ತರದ್ದೊಂದು ಕಾರ್ಯ ನಡೆಯುತ್ತಿರುವುದನ್ನು ಕಂಡು ಖುಷಿಯಾಗುತ್ತೆ.

ಇನ್ನು ಕಾಡೆಂದ್ರೆ ಊರ ಹೊರಗೆ, ಜನದಟ್ಟಣಿಯಿಂದ ದೂರ ದೂರ ಇರಬೇಕೆಂಬ ಕಲ್ಪನೆಯೇ ಇರಬೇಕೆ ? ಆದಿ ಮಾನವ ಕಾಡಲ್ಲೇ ಬದುಕುತ್ತಿದ್ದನಂತೆ. ಅವನಂತೆ, ಊರನ್ನು ಕಾಡಾಗಿಸದಿದ್ದರೂ, ಕಾಡಲ್ಲಿ ಹೋಗಿ ಬದುಕಲಾಗದಿದ್ದರೂ ನಾವಿದ್ದೆಡೆ ಒಂದಿಷ್ಟು ಹಸಿರು ಬೆಳೆಸೊ ಪ್ರಯತ್ನವನ್ನೇಕೆ ಮಾಡಬಾರದು ? ಗೋಮಾಳ, ಬೆಟ್ಟಕ್ಕಂಟಿರೋ ಕಾಡನ್ನು ವರ್ಷವರ್ಷವೂ ಕಡಿದು ಹಾಕೋ ನಾವು, ಪಾಳು ಬಿದ್ದ ಜಾಗಗಳಲ್ಲೊಂದಿಷ್ಟು ಸಸಿಗಳ ನೆಡೋ ಕೆಲಸವನ್ನೇಕೆ ಮಾಡಬಾರದು ? ರಸ್ತೆ ಬದಿಯಲ್ಲಿನ ಬೋಳು ಗುಂಡಿಗಳಿಗಿಂತ ತಂಪೆರೆವ ಮರವೊಂದು ಕಾಡೆನಿಸಿಕೊಳ್ಳದಿದ್ದರೂ ಕಾಡು ಕಡಿತದಿಂದ ವಾಸ ಕಳೆದುಕೊಂಡು ಒಂದಿಷ್ಟು ಮಂಗಗಳಿಗಾದರೂ ಮನೆಯಾದೀತು ! ಗಿಳಿಗೊಂದಿಷ್ಟು ಗೂಡಾದೀತು. ತೋಟದ ಹಿಂದಿನ ಬೆಟ್ಟದಲ್ಲೇ ಒಂದಿಷ್ಟು ಮರಗಳಿದ್ರೆ ಪ್ರಾಣಿಗಳೇಕೆ ಹೊಟ್ಟೆಗಿಲ್ಲದೇ ತೋಟಕ್ಕೆ ದಾಳಿಯಿಡುತ್ವೆ ? ಬೆಟ್ಟಗಳ ನೆನಪು ವರ್ಷಕ್ಕೊಮೆ ತರಗೆಲೆ ಗುಡಿಸುವಾಗ ಮಾತ್ರ ಆಗದೇ ಅವನ್ನು ಕಾಡ್ಗಿಚ್ಚಿನಿಂದ, ಅಕ್ರಮ ಮರಗಳ್ಳತನದಿಂದ ಕಾಪಾಡಿಕೊಳ್ಳುವಾಗಲೂ ಆಗಬೇಕು. ಅಗಲೇ ಕಾಡೆನ್ನುವುದು ನಮ್ಮನ್ನು ಕನಸಲ್ಲೂ ಕಾಡದೇ ಎಂತಾ ಕಷ್ಟದಲ್ಲೂ ಕಾಪಾಡೋ ಸುರಕ್ಷಾ ಕವಚವಾಗಲು ಸಾಧ್ಯ

ಇದೆಲ್ಲಾ ಹೇಳೋಕೆ,ಕೇಳೋಕೆ ಚೆಂದ. ಒಬ್ಬ ಅಬ್ಬಬ್ಬಾ ಅಂದ್ರೆ ಎಷ್ಟು ಮರ ಬೆಳೆಸಬಹುದು ? ಒಂದೈದು ? ಹತ್ತು. ಅಬ್ಬಬ್ಬಾ ಅಂದ್ರೆ ನೂರು ? ಇದ್ರಿಂದ ಏನಾದ್ರೂ ಬದಲಾವಣೆ ಆಗುತ್ತಾ ? ಇದೆಲ್ಲಾ ಆಗಹೋಗದ ಮಾತು . ಸರ್ಕಾರದ ಸಹಾಯ ಇಲ್ಲದೇ , ಸಂಘ ಸಂಸ್ಥೆ ಅಂತ ಏನೂ ಕಟ್ಟಿಕೊಳ್ಳದೇ ಮರಬೆಳೆಸೋ ಕೆಲ್ಸ ಸಾಧ್ಯವಾ ಯಾರಿದ್ಲಾಂದ್ರೂ ಅಂದ್ರಾ ?ಈ ರೀತಿಯ ಪ್ರಶ್ನೆಗಳು ಬಂದಾಗ್ಲೆಲ್ಲಾ ಒಂದಿಬ್ಬರು ಮುಖ್ಯವಾಗಿ ನೆನಪಾಗ್ತಾರೆ. ಯಾವುದೇ ಯೋಜನೆಗಳ ನೆರವು ಪಡೆಯದೇ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಸಾಲುಮರದ ತಿಮ್ಮಕ್ಕ, ಇಲ್ಲಿಯವರೆಗೆ ೧.೩೩ ಲಕ್ಷ ಸಸಿಗಳನ್ನು ಬೆಳೆಸಿರುವ, ಈ ವರ್ಷದ ಪರಿಸರ ಪ್ರಶಸ್ತಿ ಪಡೆದ  ಬೆಂಗಳೂರಿನ ಶಿಕ್ಷಕ ಸಿ.ಲಕ್ಷ್ಮಣ್ ಅವರಂತಹ (ಕೊಂಡಿ ೬ರ ಪುಟ ೧೬) ಹಲವು ಜನರು ನಗರಗಳಲ್ಲೂ ಮರಗಳನ್ನು ಬೆಳೆಸಿ ಕಾಂಕ್ರೀಟೀಕರಣದ ಮಧ್ಯೆ ಹಸಿರನ್ನು ಉಳಿಸುವುದರಲ್ಲಿ ನೆರವಾಗುತ್ತಿದ್ದಾರೆ. ಲಕ್ಷ್ಮಣ್ ಅವರು ಹೇಳುವಂತೆ ಶಾಲೆಗೆ ಸೇರುವ ಪ್ರತೀ ವಿದ್ಯಾರ್ಥಿಯ ಪೋಷಕರಿಗೂ ಒಂದೊಂದು ಗಿಡ ಕೊಟ್ಟು , ಅದನ್ನ ನೆಡೆಸಿ ಆ ಗಿಡ ಚೆನ್ನಾಗಿ ಬೆಳೆದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಲಾಗುತ್ತಿತ್ತಂತೆ. ಪೋಷಕರಿಗೂ ಆ ಗಿಡಕ್ಕೂ ಭಾವನಾತ್ಮಕ ಬಂಧ ಬೆಳೆಯುತ್ತಿದ್ದುದರಿಂದ ಅವರೂ ಆ ಗಿಡಕ್ಕೆ ಚೆನ್ನಾಗಿ ನೀರೆರೆದು ಅದು ಹೆಮ್ಮರವಾಗಿ ಬೆಳೆಯುವುದಕ್ಕೆ ಕಾಣಿಕೆ ನೀಡುತ್ತಿದ್ದರಂತೆ. ಎಂತಹ ಒಳ್ಳೆಯ ವಿಚಾರವಲ್ಲವೇ ? ಬೆಳಕಿಗೆ ಬಂದ ಇಂತಾ ಉದಾಹರಣೆಗಳು ಕೆಲವಾದರೆ ತೆರೆಮರೆಯ ಯೋಗಿಗಳು ಅದೆಷ್ಟೋ. ಆದರೆ ಕಾಡಿನ ಉಳಿವು ಅನ್ನೋದು  ಈ ತರಹ ಕೆಲವರಿಂದ ಆಗುವಂತಹ ಕೆಲಸವಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಶ್ರಮವಹಿಸಬೇಕು. ಪರಿಸರದ ರಕ್ಷಣೆ ಮತ್ತು ಬೆಳವಣಿಗೆ ನಮ್ಮೆಲ್ಲರ ಕರ್ತವ್ಯ. ಕಾಡಿದ್ದರೆ ಮಳೆ, ಮಳೆಯಿದ್ದರೆ ಬೆಳೆ. ಬೆಳೆಯಿದ್ದರೆ ನಮ್ಮೆಲ್ಲರ ಉಳಿವು. ಅದಕ್ಕೇ ಅಲ್ಲವೇ, ನಮ್ಮ ಹಿರಿಯರು ಹೇಳಿದ್ದು.."ವೃಕ್ಷೋ ರಕ್ಷತಿ ರಕ್ಷಿತಃ" ಅಂತ.ಆದದ್ದಾಯಿತು. ಇನ್ನಾದರೂ ಅಳಿದುಳಿದ ಕಾಡನ್ನು ಉಳಿಸಿಕೊಳ್ಳುವತ್ತ, ಇನ್ನಷ್ಟು ಬೆಳೆಸುವತ್ತ ಗಮನಹರಿಸೋಣವೇ ?

ಇನ್ನೊಂದಿಷ್ಟು ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ:
೧)http://madhurageete.blogspot.in/2014/10/adavi-deviya-kadu-janagala-ee-hadu-from.html
೨)http://www.preservearticles.com/201105257058/summary-of-girl-against-the-jungle-by-julianekoepcke.html
೩)http://www.fao.org/news/story/en/item/40893/icode/
೪)https://books.google.co.in/books?id=J4VYBQAAQBAJ&pg=PA145&lpg=PA145&dq=what+is+the+land+area+of+srilanka+in+hectares&source=bl&ots=mZOxk2Oty0&sig=ih60ipEfSTbwyjZXtjEN2A_Pb00&hl=en&sa=X&ei=0pFyVYn3KtLjuQT7hYPABA&ved=0CDsQ6AEwBQ#v=onepage&q=what%20is%20the%20land%20area%20of
%20srilanka%20in%20hectares&f=false
೫)http://www.naeb.nic.in/progSchem.html
೬)http://www.vijaykarnatakaepaper.com/epapermain.aspx?queryed=9&eddate=6/4/2015 , page 16

ಈ ಲೇಖನ  "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ

Saturday, May 16, 2015

ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ-ಒಂದು ವರದಿ

ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ-ಒಂದು ವರದಿ
ದಿನಾಂಕ:ಮೇ ೧೬,೨೦೧೫, ಸ್ಥಳ: ಟೆಕ್ಸಾಸ್ ಇಸ್ಟ್ರುಮೆಂಟ್ಸ್ ಸಂಸ್ಥೆ, ಸಿ.ವಿ.ರಾಮನ್ ನಗರ, ಬೆಂಗಳೂರು.


From left: Ashwath Sampaje, Me, Dr.Pavanaja, Dr.RaviKumar, Dr Sudheendra Halddoderi, Lecturer from Vijapur, T.G.Srinidhi, Belur Sudarshan

ಶನಿವಾರ ಮುಂಜಾನೆ ಹೆಚ್.ಎ.ಎಲ್> ಬಿ.ಇ.ಎಂ.ಎಲ್> ಜಿ.ಎಂ.ಪಾಳ್ಯ> ಬೆಗಮೆ ಟೆಕ್ ಪಾರ್ಕಿನ ಹಿಂದಿನ ಗೇಟು> ಅದರಲ್ಲೊಳಗಿನ ಕೆರೆ ಅಂತ ದಾಟಿ ಬಂದವ್ರಿಗೆ ಟೆಕ್ಸಾಸ್ ಇನ್ಸ್ಟುಮೆಂಟ್ಸಿನಲ್ಲಿನ ಕನ್ನಡ ಬರಹಗಾರರ ಸಮ್ಮೇಳನದ ಸ್ವಾಗತ ಕಾದಿತ್ತು. ಎಂಟರಿಂದ ಒಂಭತ್ತರವರೆಗಿನ ನೋಂದಣಿ ಮತ್ತು ಉಪಾಹಾರದ ಸಮಯದಲ್ಲಿ ಉಡುಪಿ, ವಿಜಾಪುರ, ಹೆಚ್.ಡಿ ಕೋಟೆಯಲ್ಲಿ "ಗಣಿತದ ಕಟ್ಟೆ" ಅಂತ ಕಮ್ಯುನಿಟಿ ರೇಡಿಯೋದಲ್ಲಿನ ಕಾರ್ಯಕ್ರಮ ನಡೆಸಿಕೊಡುತ್ತಿರುವ ತಂಡದವರು,  ಬೆಂಗಳೂರಿನ ಹಲವೆಡೆಗಳ ಬರಹಗಾರದು ಇಲ್ಲಿ ನೆರೆದಿದ್ದರು.ಪರಸ್ಪರ ಪರಿಚಯದ ಮಾತುಕತೆ. ತಿಂಡಿಯ ನಂತರ ಸಭಾಂಗಣದಲ್ಲಿ ಸೇರಿದ ಎಲ್ಲರೂ ಉಳಿದವರಿಗೆ ತಮ್ಮ ಪರಿಚಯ ಮಾಡಿಕೊಡುವ ಮೂಲಕ ಕಾರ್ಯಕ್ರಮ ೯:೨೦ ಕ್ಕೆ ಪ್ರಾರಂಭವಾಯಿತು. ಮೊದಲಿಗೆ ಕಾರ್ಯಕ್ರಮದ ಹಲವು ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಟಿ.ಜಿ ಶ್ರೀನಿಧಿ ಅವರು ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ,ಸಿ.ಎಫ್, ಟಿ.ಆರ್.ಐ ಮೈಸೂರಿನ ಹಿರಿಯ ವಿಜ್ಞಾನಿಗಳಾದ ಶ್ರೀ ಕೊಳ್ಳೇಗಾಲ ಶರ್ಮ ಅಥವಾ ಎ.ಎಸ್.ಕೆ.ವಿ.ಎಸ್ ಶರ್ಮ ಅವರನ್ನು ಪರಿಚಯಿಸಿದರು.ಮುಖ್ಯ ಭಾಷಣಕಾರರ ಭಾಷಣದ ವಿಷಯ "ವಿಜ್ಞಾನ ಸಂವಹನ:ಏನು ? ಏಕೆ ?ಹೇಗೆ?"

ವೈಜ್ಞಾನಿಕ ಅರಿವನ್ನು ಮೂಡಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯಗಳಲ್ಲೊಂದು ಎಂಬ ಸಂವಿಧಾನದ ಉಲ್ಲೇಖದೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಶರ್ಮರವರು ಕನ್ನಡದಲ್ಲೇ ಯಾಕೆ ಬರೆಯಬೇಕು ಎಂಬುದರ ಬಗ್ಗೆ ಹಲವು ಅಂಕಿ ಅಂಶಗಳನ್ನು ತೆರೆದಿಟ್ಟರು.ಉದಾಹರಣೆಗೆ: ಸುಮಾರು ೮ ಲಕ್ಷ ವಿದ್ಯಾರ್ಥಿಗಳು ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದರು . ಅವರಲ್ಲಿ ಸುಮಾರು ಎರಡೂವರೆ ಲಕ್ಷ ಜನಕ್ಕಷ್ಟೇ ಮುಂದೆ ವಿಜ್ಞಾನ ವಿಷಯದಲ್ಲಿ ಪಿಯುಸಿಗೆ ಸೇರಲು, ಇಂಗ್ಲೀಷಿನಲ್ಲಿ ಮುಂದಿನ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತೆ. ಉಳಿದ ಆರು ಲಕ್ಷ ಜನರ ಕತೆ ? ಪ್ರತೀವರ್ಷ ಸೃಷ್ಟಿಯಾಗುತ್ತಿರುವ ಆರು ಲಕ್ಷಕನ್ನಡ ಓದುಗರು ಮತ್ತು ಎಸ್ಸೆಸ್ಸೆಲ್ಸಿಯವರೆಗೂ ಬಾರದಂತಹ ಓದುಗರನ್ನ ತಲುಪಲು ಕನ್ನಡದಲ್ಲೇ ಬರೆಯಬೇಕೆಂದು ಪ್ರಸ್ತಾಪಿಸಿದರು.  ನಂತರ ಜನಪ್ರಿಯ ವಿಜ್ಞಾನದ ಬಗ್ಗೆ ಬರೆಯುವಾಗ ಮುಖ್ಯವಾಗುವ ಅಂಶಗಳಾದ ಆಸಕ್ತಿ, ಆಕರ, ಮಾಧ್ಯಮದ ಅರಿವು ಮತ್ತು ಪರಿಕರ ಎಂಬ ಅಂಶಗಳ ಬಗ್ಗೆ ತಿಳಿಸಿದರು. ಸಂಶೋಧನಾ ಪತ್ರಿಕೆಗಳು, ಇ ಪತ್ರಿಕೆಗಳು, peer reviewed journals, ಮುಕ್ತ ಆಕರಗಳು, ಇ ಪ್ರಿಂಟ್ ಭಂಡಾರಗಳು, ಆನ್ ಲೈನ್ ಗ್ರಂಥಾಲಯ, ವರ್ಚುಯಲ್ ಪತ್ರಿಕೆಗಳ  ಬಗ್ಗೆ ತಿಳಿಸಿದರು. ಸೈನ್ಸ್ ಡೈರೆಕ್ಟ್, ವೈಲಿ, ಸ್ಪ್ರಿಂಗರ್, ಎಸಿಎಸ್, ಎಐಇಇಇ ಮುಂತಾದ ಡೈರೆಕ್ಟ್ರಿಗಳು, ಯುರೇಕ ಅಲರ್ಟ್, ಆಲ್ಪ ಗೆಲಿಲಿಯೋನಂತಹ ಪತ್ರಿಕಾ ಪ್ರಕಟಣೆಗಳ ಮಾಹಿತಿ ನೀಡೋ ಸೇವೆಗಳು, ಗುಬ್ಬಿ ಲ್ಯಾಬ್ಸಿನಂತಹ ತಾಣಗಳ ಬಗೆಗಿನ ಮಾಹಿತಿ  ನೆರೆದ ಬರಹಗಾರರಿಗೆ ಮಾಹಿತಿಯ ಹಲವು ಆಕರಗಳೆಡೆಗೆ ದಿಕ್ಸೂಚಿಯಾಗಲು ಅಣಿಯಾಗಿತ್ತು.ಸೈನ್ಸ್ ಡೈರಿಯಂತಹ ವೆಬ್ ತಾಣಗಳು ಕನ್ನಡಕ್ಕೆ ಬೇಕೆಂದು ಪ್ರತಿಪಾದಿಸಿದ ಶ್ರೀಯುತರು ಅಭಿವೃದ್ಧಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸೈಡೆವ್ ನೆಟ್ ನಲ್ಲಿ ಕನ್ನಡ ಅನುವಾದಕರಿಗಿರುವ ಅಗತ್ಯವನ್ನು ತಿಳಿಸಿದರು.

ಬರಹಗಾರರು ಮಾಧ್ಯಮವೆಂದರೆ ಸಾಮಾನ್ಯವಾಗಿ ಮುದ್ರಣ ಮಾಧ್ಯಮವೊಂದೇ ಎಂದುಕೊಳ್ಳುತ್ತಾರೆ. ಆದರೆ ಅದರ ಹೊರತಾಗಿ, ಶ್ರವಣ, ದೃಶ್ಯ ಮಾಧ್ಯಮಗಳ ಬಳಸಬಹುದಾದ ಹೊಸ ಸಾಧ್ಯತೆಗಳತ್ತ ಶರ್ಮರವರು ನಂತರದ ಭಾಷಣದಲ್ಲಿ ದಾರಿ ತೋರಿದರು.ಉದಾಹರಣೆಗೆ ಶ್ರವಣ ಮಾಧ್ಯಮದಲ್ಲಿ ಸ್ಪಷ್ಟತೆ, ನಿಖರತೆ ಮತ್ತು ಯಾರಿಗೆ ತಲುಪುತ್ತದೆ ಎಂಬ ವ್ಯಾಪ್ತಿಯ ಅರಿವು ಇರಬೇಕು. ರೇಡಿಯೋ, ಪಾಡ್ ಕಾಸ್ಟಿಂಗ್, ತಮ್ಮ ಹೆಚ್ಚಿನ  ಸಮಯವನ್ನು ಪ್ರಯಾಣದಲ್ಲಿ ಕಳೆಯುವ ಯುವ ಪೀಳಿಗೆಗಾಗಿ ರೆಕಾರ್ಡ್ ಮಾಡಲಾದ ಎಂ.ಪಿ.ತ್ರೀಯ ಮೂಲಕ ವಿಜ್ಞಾನವನ್ನು ತಲುಪಿಸುವ ಸಾಧ್ಯತೆ, ಕಮ್ಯುನಿಟಿ ರೇಡಿಯೋಗಳ ಬಗೆಗಿನ ಮಾಹಿತಿ ಅವರ ಪ್ರಸ್ತುತಿಯಲ್ಲಿ ಮೂಡಿಬಂತು. ದೃಶ್ಯ ಮಾಧ್ಯಮ ಅಂದರೆ ಕನ್ನಡ ವೀಡಿಯೋಗಳು, ಯೂಟ್ಯೂಬ್, ಕನ್ನಡದಲ್ಲಿನ ವಿಜ್ಞಾನ ಸಂಬಂಧಿ ಚಿತ್ರಗಳು, ಛಾಯಾಚಿತ್ರಗಳು, ಅನಿಮೇಷನ್, ಟೆಲಿವಿಷನ್ ಡಬ್ಬಿಂಗಿನಂತಹ ಕ್ಷೇತ್ರಗಳಲ್ಲಿ,  ಖಾನ್ ಅಕಾಡೆಮಿ ಡಬ್ಬಿಂಗ್ ಎಂಬಲ್ಲಿ ಕನ್ನಡದ ಅನುವಾದಕ್ಕೆ ಇರುವ ಅಗತ್ಯದ ಬಗ್ಗೆಯೂ ತಿಳಿಸಲಾಯಿತು.ವಿಜ್ಞಾನದ ಬಗೆಗಿನ ಮಾಹಿತಿ ಸಿದ್ದಪಡಿಸಲು, ಹಂಚಲು ಇಂದಿರೋ ಅನುಕೂಲಗಳಾದ ಗಣಕ, ಅಂತರ್ಜಾಲ, ಡಿಜಿಟಲ್ ಕ್ಯಾಮೆರಾಗಳು, ಎಂ.ಪಿ.ತ್ರೀ ಪ್ಲೇಯರ್ಗಳು, ಇ-ರೀಡರ್, ಇ.ಪುಸ್ತಕಗಳು, ಸ್ಮಾರ್ಟ್ ಫೋನುಗಳು, ಸಾಮಾಜಿಕ ಜಾಲತಾಣಗಳು, ವಾಟ್ಸಾಪಿನಂತಹ ಆಪ್ಗಳು, SMS ನಂತಹ ಹಲವು ಪರಿಕರಗಳ ಬಗ್ಗೆ ತಿಳಿಸಿ ಮನಸ್ಸಿದ್ದಲ್ಲಿ ಮಾರ್ಗವೆಂಬುದನ್ನು ತಿಳಿಸಿದರು.

ನಂತರದ ಭಾಷಣ "ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳು" ಎಂಬ ವಿಷಯದ ಬಗ್ಗೆ, ಟಿ.ಜಿ ಶ್ರೀನಿಧಿ ಅವರಿಂದ. ಹೊಸ ಆವಿಷ್ಕಾರಗಳಿಂದ, ಈಗಷ್ಟೇ ಘಟಿಸಿದ ಸಂಗತಿಯವರೆಗೆ, ವರ್ಲ್ಡ್ ಫೋಟೋ ಡೇ, ಮೊದಲ ವಿಶ್ವ ಮಹಾಯುದ್ದದ ನೂರು ವರ್ಷದ ಸಂದರ್ಭ, ಹೀಗೆ  ಪ್ರಮುಖ ಘಟನೆಯೊಂದರ ವಾರ್ಷಿಕೋತ್ಸವದಿಂದ , ಯಾವುದೋ ದಿನಾಂಕದವರೆಗೆ ಹೇಗೆ ಮತ್ತು ಯಾವ್ಯಾವ ವಿಷಯಗಳನ್ನು ಗುರುತಿಸಬಹುದು ಎಂಬುದನ್ನು ತಿಳಿಸಿದ ಶ್ರೀನಿಧಿ ಅವರು ಈ ನಿಟ್ಟಿನಲ್ಲಿ ಬರೆಯಲು ಶುರು ಮಾಡುವವರು ಬಾವಿಯೊಳಗಿನ ಕಪ್ಪೆಯಂತೆ ಒಂದೇ ಕೇತ್ರಕ್ಕೆ ಅಂಟಿಕೊಳ್ಳದಿದ್ದರೂ ಪ್ರಾರಂಭದಲ್ಲಿ ತಮ್ಮದೊಂದು ಆದ್ಯತೆಯ ಕ್ಷೇತ್ರ(area of expertise) ಅಂತ ಗುರುತಿಸಿಕೊಂಡು ಅದರಲ್ಲಿ ಅಭಿವೃದ್ಧಿ ಹೊಂದಬಹುದೆಂದು ಅಭಿಪ್ರಾಯಪಟ್ಟರು. ಎಲ್ಲೋ ಓದಿದ ಮಾಹಿತಿಯನ್ನು ಕಲೆಹಾಕಲು ಅನುವಾಗೋ cam scanner App ಬಗ್ಗೆ ತಿಳಿಸುತ್ತಾ ಅಧ್ಯಯನಶೀಲತೆಯ ಅಗತ್ಯವನ್ನು ತಿಳಿಸಿದ ಅವರು ಬರಹಗಾರ ಕೇಳಿಕೊಳ್ಳಬಹುದಾದ ಪ್ರಶ್ನೆಗಳ ಬಗ್ಗೆಯೂ ಬೆಳಕು ಚೆಲ್ಲಿದರು.

ಕನ್ನಡದಲ್ಲಿ ಪಾರಿಭಾಷಿಕ ಪದಗಳ ಬಳಕೆ ಅಂದರೆ ಪ್ರೋಗ್ರಾಮಿಂಗ್ ಅಂತ ಬಳಸಬೇಕಾ ಅಥವಾ ಅದನ್ನು ಕನ್ನಡೀಕರಿಸಿ ಅನುಸ್ಥಾಪನೆ ಎಂದು ಬಳಸಬೇಕಾ ಎಂದು ನಡೆಯುತ್ತಿರುವ ಬಲುದಿನಗಳ ಚರ್ಚೆಯ ಬಗ್ಗೆಯೂ ತಿಳಿಸಿದ ಅವರು ಜನ ಸಾಮಾನ್ಯರ ಬಳಕೆಯ ಭಾಗವೇ ಆಗಿರೋ ಪದಗಳನ್ನು ಕನ್ನಡದಲ್ಲಾದರೂ ಬಳಸಿ, ಆದ್ರೆ ಆ ಪದಗಳ ಪ್ರಮಾಣ ಮಿತಿಮೀರದಿರಲಷ್ಟೇ ಎಂದು ಅಭಿಪ್ರಾಯ ಪಟ್ಟರು.ವಿಜ್ಞಾನಕ್ಕೆ ಸಂಬಂಧಿಸಿದ ಲೇಖನವನ್ನು ಒಂದು ದ್ರಾವಣಕ್ಕೆ ಹೋಲಿಸಿ ಸಾಮಾನ್ಯ ಓದುಗನಿಗೆ ಅರ್ಥವಾಗುವಂತೆ ಬರೆಯುವಾಗ ಅದನ್ನು ದುರ್ಬಲ ದ್ರಾವಣವಾಗಿಸೋ ಕೆಲಸದಲ್ಲಿ ಎಷ್ಟು ದುರ್ಬಲಗೊಳಿಸಬೇಕು ಎಂಬ ಅಂಶದ ಬಗೆಗಿನ ಎಚ್ಚರಿಕೆಯಿರಬೇಕಾದ ಅಗತ್ಯವನ್ನೂ ತಿಳಿಸಿದರು.ಲೇಖನದ ಶೈಲಿ-ಸ್ವರೂಪ, ಪತ್ರಿಕೆಗಳ ಒಡನಾಟ, ಓದುಗರ ಸಂಪರ್ಕ ಬರಹಗಾರನಿಗೆ ಹೇಗೆ ಮುಖ್ಯ ಎಂಬಲ್ಲಿನ ಹಲವು ಅಂಶಗಳನ್ನು ಪರಿಚಯಿಸಿದ ಶ್ರೀಯುತ ಶ್ರೀನಿಧಿಯವರ ಭಾಷಣದ ನಂತರ ಮುಂದಿನ ಭಾಷಣಕಾರರಾದ ಡಾ|| ಯು.ಬಿ ಪವನಜ ಅವರನ್ನು ಪರಿಚಯಿಸಿ ಮುಂದಿನ ಭಾಷಣವಾದ "ವಿಶ್ವಕೋಶಗಳಿಗೆ ಬರವಣಿಗೆ" ಎಂಬ ವಿಷಯಕ್ಕೆ ಅನುವು ಮಾಡಿಕೊಟ್ಟರು.

ಸೆಂಟರ್ ಫಾರ್ ಇಂಟರ್ನೆಟ್ ಸೊಸೈಟಿ, ಬೆಂಗಳೂರಿನ ಅಧ್ಯಕ್ಷರಾದ , ವಿಕಿಪೀಡಿಯದ ಅತೀ ಸಕ್ರಿಯ ಸಂಪಾದಕರಲ್ಲೊಬ್ಬರಾದ ಶ್ರೀ ಪವನಜ ಅವರು ವಿಶ್ವಕೋಶಗಳಿಗೆ, ವಿಕಿಪೀಡಿಯಾಕ್ಕೆ ಬರೆಯುವಾಗ ಇರಬೇಕಾದ ಮಾಹಿತಿಯ ನಿಖರತೆಯ ಅಗತ್ಯತೆಯ ಬಗ್ಗೆ ಮಾತನಾಡುತ್ತಾ ಮಾಹಿತಿ ಸಂಗ್ರಹದ ಆಕರಗಳ ಬಗ್ಗೆ ಪ್ರಸ್ತಾಪಿಸಿದರು.ಪಾರಿಭಾಷಿಕ ಪದಗಳನ್ನು ಬಳಸುವಾಗ ಇರಬೇಕಾದ ಏಕರೂಪತೆ, ಮಾನಕ, ಶಿಷ್ಟತೆಗಳ ಬಗ್ಗೆಯೂ ತಿಳಿಸಿಕೊಟ್ಟರು. ಉದಾ:ಲೇಖನದ ಉದ್ದಗಲಕ್ಕೂ ಒಂದೋ ಇಂಗ್ಲಿಷಿನ ಪದ ಅಥವಾ ಅದರ ಕನ್ನಡೀಕರಿಸಿದ ಪದ ಅಂತ ಒಂದೇ ರೀತಿ ಬರೆಯುವುದು, ಎಲ್ಲೆಡೆ ಇಂಚು ಅಥವಾ ಮಿ.ಮಿ ಎಂಬ ಒಂದೇ ಮಾಪನವನ್ನು ಬಳಸುವುದು(ಒಂದೆಡೆ ಇಂಚಿನಲ್ಲಿ ಮತ್ತೊಂದೆಡೆ ಮಿ.ಮೀನಲ್ಲಿ ಬಳಸದೇ ಇರುವುದು) ಮುಂತಾದ ಅಗತ್ಯತೆಗಳ ಬಗ್ಗೆ ತಿಳಿಸಿದರು.ವಿಕಿಪೀಡಿಯಾಕ್ಕೆ ಬರೆಯಬೇಕಾದ ಅನುಸರಿಸಬೇಕಾದ ಸಾಮಾನ್ಯ ನಿಯಮಗಳಾದ ಬರಹದ ರಂಜನೀಯವಲ್ಲದ ಭಾಷೆ, ಕಥಾರೂಪ,ಉಪಮೆ, ಕಾವ್ಯಮಯವಲ್ಲದ ಭಾಷೆ, ಹೊಗಳಿಕೆ, ತೆಗಳಿಕೆ ವಿಶೇಷಣಗಳಿಲ್ಲದಿರುವಿಕೆ, ವ್ಯವಸ್ಥಿತ ಮಾಹಿತಿ ನಿರೂಪಣೆ, ಕಾವ್ಯಮಯ ಶೀರ್ಷಿಕೆಯಿಲ್ಲದಿರುವಿಕೆ ಮುಂತಾದ ಅಂಶಗಳ ಬಗ್ಗೆ ತಿಳಿಸಿದರು.ವಿಕಿಪೀಡಿಯಾ, ಕನ್ನಡ ವಿಕಿಪೀಡಿಯಾದ ಪ್ರಸಕ್ತ ಸ್ವರೂಪ, ಅದರ ಎಡಿಟಿಂಗ್ ಬಗ್ಗೆ ತಿಳಿಸಿದ ಅವರು ಕನ್ನಡ ವಿಕಿಪೀಡಿಯಾದಲ್ಲಿ ಸದ್ಯ ನಡೆಯುತ್ತಿರುವ ಯೋಜನೆಗಳ ಬಗ್ಗೆ, ಮುಂದೊಮ್ಮೆ ವಿಕಿಪೀಡಿಯಾ ವರ್ಕ್ ಶಾಪ್ ಎಂದು ಆಯೋಜಿಸೋ ಯೋಜನೆಗಳ ಬಗ್ಗೆಯೂ ತಿಳಿಸಿದರು.

ಮೊದಲೆರಡು ವಿಷಯಗಳಂತೆಯೂ ಇದಕ್ಕೂ ಹತ್ತು ನಿಮಿಷದ ಪ್ರಶ್ನಾವಳಿಯ ಅವಧಿ ಮತ್ತು ಚಹಾ ವಿರಾಮದ ನಂತರ ೧೧:೩೨ ಕ್ಕೆ ನಾಲ್ಕನೇ ವಿಷಯದ ಪ್ರಾರಂಭವಾಯ್ತು. "ವಿಜ್ಞಾನದ ಪತ್ರಿಕಾವರಧಿಗಳು" ಎಂಬ ವಿಷಯದ ಬಗ್ಗೆ ಮಾತನಾಡಿದ ಶ್ರೀ ಬೇಳೂರು ಸುದರ್ಶನ್ ಅವರು ವಿಜ್ಞಾನ ಅಂದ್ರೆ ಏನೇನು ಆಗ್ಬೋದು ಎಂದು ಹೇಳುತ್ತಾ ವಿಜ್ಞಾನ ಎಂದರೆ ಬದುಕು ಎಂದು ಅಭಿಪ್ರಾಯಪಟ್ಟರು. ತಲೆಕೆಳಗಾದ ಪಿರಮಿಡ್ ಎಂಬ ಪತ್ರಿಕೋದ್ಯಮದ ಶೈಲಿಯನ್ನು ಇಲ್ಲಿ ಅಳವಡಿಸಿಕೊಳ್ಳುತ್ತಾ ರೋಟಿ, ಕಪಡಾ, ಮಕಾನ್, ವಾಹನ್ ಮತ್ತು ತಂತ್ರಜ್ಞಾನ್ ಎಂಬ ಪಂಚ ಸೂತ್ರಗಳಲ್ಲಿ ವಿಜ್ಞಾನದ ಏನೊಂದನ್ನೂ ತಂದು ಅದರ ಬಗ್ಗೆ ಬರೆಯಬಹುದಾದ ಸಾಧ್ಯತೆಗಳ ಬಗ್ಗೆ ಮಾತನಾಡಿದ ಶ್ರೀಯುತರು A field guide for technical writers ಎಂಬ ಪುಸ್ತಕ, ವಿಜ್ಞಾನ ವರದಿಗಾರಿಕೆಯಲ್ಲಿನ ಎರಡು ಕವಲುಗಳ ಬಗ್ಗೆ ಪ್ರಸ್ತಾಪಿಸಿದರು. ಮೊದಲನೆಯ ಕವಲಾದ data journalism ಅಂದ್ರೆ ಸಿಕ್ಕಿದ ಅಂಕಿ ಅಂಶಗಳಲ್ಲಿ ಯಾವುದು ಸೂಕ್ತ, ಅದನ್ನು ಹೇಗೆ ಬಳಸುವುದು ಎಂಬುದು.ಇದಕ್ಕೆ ಸಂಬಂಧಿಸಿದ ಕಾನ್ವಾಸ್.ನೆಟ್ನಲ್ಲಿನ ಎರಡು ತಿಂಗಳ ಮುಕ್ತ ಅಂತರ್ಜಾಲ ಕೋರ್ಸಿನ ಬಗ್ಗೆಯೂ ಪ್ರಸ್ತಾಪಿಸಿದ ಶ್ರೀಯುತರು ನಂತರ ಎರಡನೆಯ ಕವಲಾದ visualization ಅಥವಾ infographics ಮತ್ತು ಪಾಕೇಜಿಂಗ್ ಬಗ್ಗೆ ತಿಳಿಸಿದರು. ಬರೆಯಲು ಅನುಕೂಲ ಮಾಡಿಕೊಡೋ ಇನ್ನಷ್ಟು ತಂತ್ರಾಂಶಗಳ ಪರಿಚಯಿಸಿದ ಸುದರ್ಶನರು ಲೆಬರೇ ಇಂದ ಇರೋ ಮುಕ್ತ ತಂತ್ರಾಂಶವಾದ spreadsheet, ಓಪನ್ ರಿಫೈನ್, ಗೂಗಲ್ spreadsheet, ಗೂಗಲ್ ಕೀಪ್, ಗೂಗಲ್ ನ್ಯೂಸ್ ಅಲರ್ಟ್, ಕಣಜ.ಇನ್ ಮುಂತಾದ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ನಂತರದ ವಿಷಯ "ಸಂವಹನಕ್ಕೆ ಸಿದ್ದತೆ:ಸಾಹಿತ್ಯ ಕೃತಿಗಳ ಓದು, ಭಾಷಾಜ್ಞಾನ ಮತ್ತು ಅಧ್ಯಯನ" ಶ್ರೀಯುತ ಡಾ| ಸಿ.ಪಿ ರವಿಕುಮಾರ್ ಅವರಿಂದ. ವಿಜ್ಞಾನ ಬರಹಗಾರನಾದವನು ಜನರಿಗೂ , ವಿಜ್ಞಾನಿಗಳಿಗೂ ನಡುವಣ ಸೇತುವೆ ಎಂದು ಅಭಿಪ್ರಾಯಪಟ್ಟ ಶ್ರೀಯುತರು ಲೇಖನಕ್ಕೆ ಬೇಕಾದ ಪೂರ್ವಸಿದ್ದತೆ, ಹಸ್ತಪ್ರತಿಯನ್ನು ಕೆಲ ಕಾಲ ಬಿಟ್ಟು ಮತ್ತೊಮ್ಮೆ ಪರಾಮರ್ಶಿಸಬೇಕಾದ ಅಗತ್ಯ, ಕನ್ನಡ ಅಂತರ್ಜಾಲ ಪದಕೋಶಗಳ ಬಳಕೆಗಳ ಬಗ್ಗೆ ತಿಳಿಸಿದರು. ಕನ್ನಡವಿಜ್ಞಾನ ಬರವಣಿಗೆಯಲ್ಲಿ ಪ್ರಯತ್ನವನ್ನೇ ಮಾಡದಿರುವಷ್ಟು ಕಮ್ಮಿ ಸಾಹಿತ್ಯವಿರುವ ಕ್ಷೇತ್ರಗಳಾದ ವಿಜ್ಞಾನಕ್ಕೆ ಸಂಬಂಧಪಟ್ಟ ಕಥೆ, ಕವಿತೆಗಳನ್ಯಾಕೆ ಪ್ರಯತ್ನಿಸಬಾರದೆಂಬ ನೆರೆದ ಕೇಳುಗರಲ್ಲಿ ಆಸಕ್ತಿಯನ್ನು ಕೆರಳಿಸಿದರು. ಆಗ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೀಟಗಳ ಬಗ್ಗೆ ಪರಿಚಯಿಸೋ ಅಂಕಣವನ್ನು ಬರೆವ, ಭೂರಮೆ ಬ್ಲಾಗಿನ ಶ್ರೀಮತಿ ಸುಮಾ ರವಿಕಿರಣ್ ಅವರು ತಾವು ವಿಜ್ಞಾನದ ಬಗೆಗಿನ ಕವಿತೆಗಳನ್ನು ಬರೆದಿರುವ, ತಮ್ಮ ಪತಿ ಸೋಲಾರ್ ಕವಿತೆಗಳು ಅಂತ ಬರೆದಿರುವ ವಿಷಯ ಪ್ರಸ್ತಾಪಿಸಿದರು. ಶ್ರೀಯುತ ಬೇಳೂರು ಸುದರ್ಶನ್ ಅವರು ತಮ್ಮ ವಿಜ್ಞಾನಕ್ಕೆ ಸಂಬಂಧಪಟ್ಟ ಗೀತೆಗಳ ಕ್ಯಾಸೆಟ್ "ಜೈವಿಕ ಇಂಧನ ಹಾಡುಗಳು" ಕೂಡ ಬಂದಿರೋ ವಿಚಾರ ತಿಳಿಸಿದಾಗ ಹೀಗೂ ಎಂಟೆ ಒಂಬ ಭಾವ ನೆರೆದ ಅನೇಕರಲ್ಲಿ.ಪ್ರತೀ ವರ್ಷ ಸೆಪ್ಟೆಂಬರ್ ೧೫,೧೬,೧೭ ರಂದು "ಸ್ವದೇಶೀ ವಿಜ್ಞಾನ ಸಮೇಳನ" ಅಂತ ನಡೆಯುತ್ತೆ ಎಂಬ  ಹೊಸ ವಿಷಯ ತಿಳಿದುಬಂದ ಸಂದರ್ಭದಲ್ಲಿ ಈ ವರ್ಷದ ಸಮ್ಮೇಳನ ರಾಯಚೂರಿನಲ್ಲಿ ನಡೆಯುತ್ತಿದೆ ಅಂತಲೂ ತಿಳಿಯಿತು.

ಪ್ರಶ್ನೋತ್ತರದ ನಂತರ ಪುಸ್ತಕಗಳಿಗಾಗಿ ಬರೆಯುವುದು ಹೇಗೆ, ಪುಸ್ತಕಗಳ ಪ್ರಕಾಶನ ಮಾಡೋದು ಹೇಗೆ ಎಂಬ ವಿಷಯದ ಚರ್ಚೆ ಹಲವು ಪ್ರಶ್ನೋತ್ತರಗಳೊಂದಿಗೆ, ಭಾಗವಹಿಸಿದವರ ಹಲವು ಅನುಭವಗಳೊಂದಿಗೆ ಹೊಸತಾಗಿ ಪುಸ್ತಕ ಹೊರತರೋ ಆಸೆಯಲ್ಲಿರುವವರಿಗೆ ಒಂದಿಷ್ಟು ಅಂಶಗಳತ್ತ ಬೆಳಕು ಚೆಲ್ಲಿತು. ಪೋತಿ.ಕಾಂ, ನ್ಯೂಸ್ ಹಂಟ್ ನಲ್ಲಿ ಅಂತರ್ಜಾಲದಲ್ಲಿ ಮಾರಾಟ, custom publishing ,ಫ್ರೀ ಬುಕ್ ಕಲ್ಚರ್.ಕಾಂ ನಂತಹ ಹೊಸ ವಿಷಯಗಳ ಪ್ರಸ್ತಾಪವಾದವು. ನಂತರ ಊಟದ ಜೊತೆಗೆ ಸಮ್ಮೇಳನಕ್ಕೆ ಆಗಮಿಸಿದ ಹಲವು ಕ್ಷೇತ್ರಗಳ ಬರಹಗಾರರೊಂದಿಗೆ ಮಾತನಾಡೋ ಅವಕಾಶ. ನಂತರ ಭಾಗವಹಿಸುವವರು ಬರೆದು ತಂದ ಇನ್ನೂರು ಪದಗಳ ಲೇಖನದ ಜೊತೆಗೆ ಬೆಳಗಿನಿಂದ ಕಲಿತ ಅಂಶಗಳ ಅಳವಡಿಸಿಕೊಂಡು ನೂರರಿಂದ ಇನ್ನೂರು ಪದಗಳ ಅವಧಿಯ ಇನ್ನೊಂದು ಲೇಖನವನ್ನು ಬರೆಯಲು ತಿಳಿಸಲಾಯಿತು. ಮೂವತ್ತು ನಿಮಿಷದ ಅವಧಿಯ ನಂತರ ನಾವು ಬರೆದ ಲೇಖನಗಳ ಓದು ಮತ್ತು ಮುಂದಿನ ಬೆಳವಣಿಗೆಗೆ ಸಹಾಯಕವಾಗುವಂತಹ ವಿಮರ್ಶೆಯನ್ನು ನಡೆಸಲಾಯಿತು. ಈ ನಡುವೆ ವಿಜಯ ಕರ್ನಾಟಕದಲ್ಲಿ ಅಂಕಣಕಾರರಾದ ಅವಿನಾಶ್ ಅವರ ಮತ್ತು ವಿಜಾಪುರದ ನಾರಾಯಣ  ಬಾಬಾನಗರ್ ಬಾಬಾನಗರ್ ಅವರ ಅನುಭವಗಳನ್ನೂ ಕೇಳಲಾಯಿತು.

ತದನಂತರದ ಚಹಾವಿರಾಮದ ಸಂವಹನಕ್ಕೆ ಸಿದ್ದತೆ ಎಂಬ ವಿಷಯದಲ್ಲಿ zotero ಎಂಬ ಫೈರ್ಫಾಕ್ಸಿನ ಪ್ಲಗ್ಗಿನ್, evernote, flipboard, endnote, pocket ಮುಂತಾದ ತಂತ್ರಾಂಶಗಳ ಬಳಕೆಯ ಸಾಧ್ಯತೆಗಳನ್ನು ಪರಿಚಯಿಸಲಾಯಿತು.ನಂತರ ಅಂಕಣಕಾರ, ವಿಜ್ಞಾನಿಗಳಾದ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿಯವರು ಲೇಖನಕ್ಕೆ ಬೇಕಾದ ಅಧ್ಯಯನ, ಮಾಹಿತಿ ಸಂಗ್ರಹಣೆ, ಬರೆದ ಲೇಖನಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ನಮ್ಮ ಓದುಗರು ಯಾರು ಎಂಬ ಅರಿವಿನ ಮೇಲೆ ನಮ್ಮ ಶೈಲಿಯನ್ನು ಮಾರ್ಪಡಿಸಿಕೊಳ್ಳುವುದು ಮುಂತಾದ ವಿಷಯಗಳ ಮೇಲೆ ಮಾತಾಡಿದರು.ಶ್ರವಣ, ಮುದ್ರಣ ಮಾಧ್ಯಮಗಳಲ್ಲಿರುವ ಸಿದ್ದತಾ ಸಮಯದ ಬಗ್ಗೆ, ದೃಶ್ಯ ಮಾಧ್ಯಮದಲ್ಲಿರುವ ತುರ್ತಿನ ಬಗ್ಗೆ ತಿಳಿಸಿದ ಅವರು ತಮ್ಮ ಜೀವನದಲ್ಲಾದ ಸ್ವಾರಸ್ಯಕರ ಪ್ರಸಂಗಗಳನ್ನೂ ಉಲ್ಲೇಖಿಸಿದರು. ಒಂದಿಷ್ಟು ಫೋಟೋಗಳು ಮತ್ತೊಂದಿಷ್ಟು ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ವಿನಿಮಯದೊಂದಿಗೆ ಮತ್ತೆ ಸಿಗೋಣ ಎಂಬ ಬೀಳ್ಕೊಡಿಗೆ.ಬರುವಾಗ ಯಾರೂ ಗೊತ್ತಿಲ್ಲ ಎಂಬ ಭಾವದೊಂದಿಗೆ ಬಂದವರಿಗೆ ಹೋಗುವಾಗ ಮೇಲೆ ಹೇಳಿದ ಹೆಸರುಗಳಲ್ಲದೇ ವಿಕಾಸ್ ಹೆಗಡೆ, ಸವಿತಾ ಅವರು, ನಿರಂಜನ ಪ್ರಭು, ಶ್ರೀನಿವಾಸ್, ಅಶ್ವಥ್ ಸಂಪಾಜೆ, ಶ್ರೀಕಾಂತ್ ಭಟ್, ಗಣಿತದ ಕಟ್ಟೆ ತಂಡ, ರಾಮಯ್ಯ ಕಾಲೇಜಿನ ಹಲವು ಪ್ರೊಫೆಸರ್ಗಳು.. ಹೀಗೆ ಹತ್ತು ಹಲವು ಜನರ ಭೇಟಿಯಾದ ಖುಷಿ.ತಮ್ಮ ಬರಹಕ್ಕೆ ಹೊಸ ಹೊಳವನ್ನು ಕೊಡುವ ಉತ್ಸಾಹ.ಪರಸ್ಪರ ಸಂಪರ್ಕದಲ್ಲಿರೋಣ, ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಕೈಲಾದ ಕಿರುಗಾಣಿಕೆಯನ್ನು ಕೊಡೋ ನಿಟ್ಟಿನಲ್ಲಿ ಹೆಜ್ಜೆ ಹಾಕುವಂತಹ ಹಂಬಲವನ್ನು ಮೂಡಿಸಿದ ಕಾರ್ಯಕ್ರಮದ ಎಲ್ಲಾ ಆಯೋಜಕರಿಗೂ, ಸ್ಥಳಾವಕಾಶ ಕಲ್ಪಿಸಿಕೊಟ್ಟ ಟೆಕ್ಸಾಸ್ ಇನ್ಸಸ್ಟ್ರುಮೆಂಟ್ಸ್ ಸಂಸ್ಥೆಗೆ ಮತ್ತು ಸಹಪ್ರಾಯೋಜಕತ್ವ ವಹಿಸಿದ ಎ.ಐ.ಇ.ಇ.ಇ ಗೆ ಒಂದು ಥ್ಯಾಂಕ್ಸ್ ಹೇಳಲೇಬೇಕಲ್ಲವೇ ?

ಮತ್ತೊಮ್ಮೆ ಇಂತದ್ದೇ ಕಾರ್ಯಕ್ರಮದಲ್ಲಿ ಸಿಗೋಣವೆಂಬ ವಿಶ್ವಾಸದಲ್ಲಿ ನಿಮ್ಮೊಲವಿನ
-ಪ್ರಶಸ್ತಿ
Blogger Mrs Savitha S.R @the left
ನಾನು ಮತ್ತು ಅಂಕಣಕಾರ ಅವಿನಾಶ್ ಎಡಭಾಗದಲ್ಲಿ. ಫೋಟೋ ತೆಗೆದವರು "ವಿಕಾಸವಾದ" ಬ್ಲಾಗಿನ ವಿಕಾಸಣ್ಣ :-)
ಸೂಚನೆ: ಕಾರ್ಯಕ್ರಮದ ಗ್ರೂಪ್ ಫೋಟೋ ಮತ್ತು ಇನ್ನಿತರ ಚಿತ್ರಗಳು ಆಯೋಜಕರಿಂದ ಸಿಕ್ಕ ನಂತರ

Monday, April 13, 2015

ಲಿನಕ್ಸ್ install ಮಾಡೋದು ಹೇಗೆ ?:

ಕಂಪ್ಯೂಟರನ್ನು ಹೆಚ್ಚೆಚ್ಚು ಬಳಸೋರಿಗೆ ಲಿನಕ್ಸೆನ್ನೋದು ಪರಿಚಿತವಾದ್ರೂ ಹೊಸದಾಗಿ ಬಳಸೋರಿಗೆ ಅದ್ರ ಬಗ್ಗೆ ಇಲ್ಲದ ಭಯ ಇರ್ಬೋದು.ಏ ಲಿನಕ್ಸು ಸಿಕ್ಕಾಪಟ್ಟೆ ಕಷ್ಟ ಮಾರಾಯ, ಎಲ್ಲದಕ್ಕೂ ಕಮಾಂಡ್ ಕೊಡ್ತಾ ಕೂರ್ಬೇಕು ಅಂತ ಓಬಿರಾಯನ ಕಾಲದಲ್ಲಿ ಯಾರೋ ಹೇಳಿದ್ದನ್ನೇ ನಂಬಿಕೊಂಡು ಕೂರೋರು ಅದ್ರಲ್ಲಿ ಎಷ್ಟು ಪ್ರತಿಶತ ಸತ್ಯವಿದೆ ಅಂತ ಪರೀಕ್ಷಿಸಲೂ ಹೋಗೋಲ್ಲ. ಕಂಪ್ಯೂಟರ್ ಕೊಳ್ಳುವಾಗ ಕೆಲವೇ ಕೆಲವು ಕಂಪ್ಯೂಟ್ರುಗಳ ಜೊತೆಗೆ ಮಾತ್ರ ಒರಿಜಿನಲ್ ವಿಂಡೋಸ್ ಬರುತ್ತೆ. ಉಳಿದಿದ್ದೆಲ್ಲಾ ಪೈರೇಟೆಡ್ ಅಥವಾ ಕಳ್ಳಮಾಲು ! ಚೈನಾ ಬಜಾರ್ಗೆ ಹೋಗಿ ಒಂದು ಕಳ್ಳಮಾಲಿನ ಶರ್ಟೋ ಪ್ಯಾಂಟೋ ಕೊಂಡು ಹಾಕೋದು ಹೇಗೋ ಹಾಗೆಯೇ ಪೈರೇಟೆಡ್ ವಿಂಡೋಸ್ ಬಳಸೋದೂ ಕೂಡ !! ಅದ್ರ ಬದ್ಲು ತನ್ನ ಪ್ರತಿಯೊಂದು ಅಂಶದ ತಂತ್ರಾಂಶವನ್ನೂ ಜಗತ್ತಿಗೆ ಮುಕ್ತವಾಗಿ ತೆರೆದಿಡುವ(open source) ತಂತ್ರಾಂಶಗಳ ಬಳಕೆ ಹೆಚ್ಚೆಚ್ಚು ಪ್ರೋತ್ಸಾಹಿಸೋದು ಪ್ರಜ್ನಾವಂತ ಕಂಪ್ಯೂಟರ್ ಬಳಕೆದಾರರಾದ ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ನಮ್ಮ ಕಂಪ್ಯೂಟ್ರಲ್ಲಿ ಲಿನಕ್ಸ್ ಹಾಕಿಕೊಳ್ಳೋದು.ಇದ್ದ ವಿಂಡೋಸನ್ನು ತೆಗೆದು ಲಿನಕ್ಸನ್ನು ಹಾಕೋ ಬಗ್ಗೆ ಹೇಳ್ತಾ ಇಲ್ಲ ಇಲ್ಲಿ. ವಿಂಡೋಸ್ ಜೊತೆ ಜೊತೆಗೇ ಲಿನಕ್ಸನ್ನು ಹಾಕೋ ಬಗ್ಗೆ ಹೇಳ್ತಾ ಇರೋದು.

೧.ಪೂರ್ವ ತಯಾರಿ:
ಅ.ಲಿನಕ್ಸಲ್ಲಿ ಹಾಕೋಕೆ ಎಷ್ಟು ಜಾಗ ಬೇಕು? :
 ಹಲವು ವಿಧ. ಮಿಂಟ್ os ಅನ್ನು ಪೆನ್ ಡ್ರೈವ್ ಜೊತೆಗೆ ಎಲ್ಲಿ ಬೇಕಾದ್ರೂ ಕೊಂಡೊಯ್ದು ಪೆನ್ ಡ್ರೈವಿನಿಂದಲೇ os ಮಾಡೋ ಎಲ್ಲಾ ಕೆಲಸಗಳನ್ನು ಮಾಡಬಹುದಾದರೂ, ಸುಧಾರಿತ ತಂತ್ರಾಂಶಗಳನ್ನು ಹಾಕಲು ನಾಲ್ಕರಿಂದ ೬ ಜಿ.ಬಿ ಜಾಗ ಸಾಕು. ಹಾಗಾಗಿ ಒಂದು ಹದಿನೈದು ಜಿ.ಬಿಯ ಖಾಲಿ ಡ್ರೈವ್ ಇದ್ದರೆ ಸಾಕು, ಅದರಲ್ಲಿ ಲಿನಕ್ಸ್ ಹಾಕಬಹುದು.

ಆ.ನನ್ನ ಕಂಪ್ಯೂಟ್ರಲ್ಲಿ ಒಂದೇ ಡ್ರೈವ್ ಇದೆ. ಅದರಲ್ಲಿ ಕಂಪ್ಯೂಟ್ರ ಜೊತೆಗೆ ಬಂದ ಒರಿಜಿನಲ್ ವಿಂಡೋಸ್ ಇದೆ. ಅದನ್ನು ಹಾಳು ಮಾಡಿಕೊಳ್ಳಲು ಇಷ್ಟ ಇಲ್ಲ. ಹಾಗಾದ್ರೆ ಲಿನಕ್ಸ್ ಹಾಕೋದು ಹೇಗೆ?
ಇಲ್ಲಿ ಎರಡು ಆಯ್ಕೆಗಳಿವೆ.
ಒಂದು: vmware ಅಂತ ಇನ್ಟಾಲ್ ಮಾಡಿಕೊಂಡು, ಅದ್ರ ಮೇಲೆ ಲಿನಕ್ಸ್ ಹಾಕಬಹುದು.ಇದು ಒಂದು os ಒಳಗೆ ಮತ್ತೊಂದು os ನ ಕೂರಿಸೋ ವಿಧಾನ. ಹಾಗಾಗಿ ಸ್ವಲ್ಪ ನಿಧಾನವಾಗಿ ನಡೆಯುತ್ತೆ ಮತ್ತು ಹೆಚ್ಚು RAM ಬೇಕು
ಎರಡು: ನಿಮ್ಮ ಕಂಪ್ಯೂಟರ್ ಐಕಾನ್ ಮೇಲೆ ಬಲ ಕ್ಲಿಕ್ ಮಾಡಿ.ಅದರಲ್ಲಿ storage > Disk management ಗೆ ಹೋದ್ರೆ ಅದರಲ್ಲಿ ನಿಮ್ಮ ಡಿಸ್ಕುಗಳು ತೋರಿಸುತ್ತವೆ. ಇದರಲ್ಲಿ ನಿಮ್ಮ ಡ್ರೈವಿನ ಮೇಲೆ ಕ್ಲಿಕ್ ಮಾಡಿ shrink volume ಅಂತ ಕೊಟ್ಟು, ನಂತರ ೧೫ ಜಿ.ಬಿ ಅಂತ ಕೊಟ್ರೆ ೧೫ ಜಿ.ಬಿ.ಯಷ್ಟು ಖಾಲಿ ಜಾಗ ಸೃಷ್ಟಿಯಾಗುತ್ತೆ. ನಂತರ ಆ ಖಾಲಿ ಜಾಗ(un allocated free space) ಮೇಲೆ ಕ್ಲಿಕ್ ಮಾಡಿ create logical volume ಅಂತ ಕೊಟ್ರೆ ಆಯ್ತು. ಹೊಸದೊಂದು ಡ್ರೈವ್ ರೆಡಿಯಾಗುತ್ತೆ. ಆದನ್ನ ನಂತರ ಲಿನಕ್ಸ್ ಹಾಕಲು ಬಳಸಬಹುದು. ನಿಮ್ಮ ಬಳಿ ಮೂರ್ನಾಲ್ಕು ಡ್ರೈವ್ಗಳಿದ್ದು ಯಾವುದೂ ಖಾಲಿಯಿಲ್ಲದಿದ್ದರೆ, ಹಿಂಗೇ ಒಂದು ಖಾಲಿ ಜಾಗ ಸೃಷ್ಠಿಸಿ, ಅದರಲ್ಲಿ ಹೊಸ ಡ್ರೈವ್ ಮಾಡಿ ಅದರಲ್ಲಿ ಲಿನಕ್ಸನ್ನು ಇನಸ್ಟಾಲ್ ಮಾಡಬಹುದು.

1. Creating one of the/only drive to create free space for linux installation


ಇ. ಲಿನಕ್ಸ್ ಡಿ.ವಿಡಿ:
ಲಿನಕ್ಸ್ ಇನ್ಸಸ್ಟಾಲ್ ಮಾಡಲು ಬೇಕಾದ ಮತ್ತೊಂದು ವಸ್ತು ಲಿನಕ್ಸ್ ಡಿವಿಡಿ. ನಿಮ್ಮ ಹತ್ರ ಅದಿದ್ರೆ ಓಕೆ. ಇಲ್ಲದಿದ್ರೆ ಚಿಂತೆಯಿಲ್ಲ. ಲಿನಕ್ಸ್.ಆರ್ಗ್ ಜಾಲತಾಣದಿಂದ ಹೊಸಾ ಲಿನಕ್ಸನ್ನ ಡೌನ್ ಲೋಡ್ ಮಾಡಿ ಅದನ್ನ ಇನಸ್ಟಾಲ್ ಮಾಡಲು ಉಪಯುಕ್ತವಾಗುವಂತಹ ರೂಪದಲ್ಲಿ( bootable image) ಆಗಿ ಒಂದು ಡಿವಿಡಿಗೆ ಬರೆದ್ರಾಯ್ತು. bootable image ನ ಬರೆಯೋದಕ್ಕೇ ಅಂತ poweriso ಮುಂತಾದ ಹಲವಾರು ತಂತ್ರಾಂಶಗಳಿವೆ.
creating linux DVD using power ISO


ಈ:ಇನ್ಸ್ಟಾಲ್ ಮಾಡೋ ಸಂದರ್ಭದಲ್ಲಿ ಇಂಟರ್ನೆಟ್ ಇದ್ರೆ ಓಕೆ, ಇಲ್ಲದಿದ್ರೂ ತೊಂದ್ರೆ ಇಲ್ಲ
೨. ಇನ್ ಸ್ಟಾಲ್ ಮಾಡೋಕೆ ಶುರು:
ಲಿನಕ್ಸ್ನ ಡಿವಿಡಿ ಹಾಕಿ, ಕಂಪ್ಯೂಟರ್ನ restart ಮಾಡಿ f12 ಕೀಲಿ ಒತ್ತಿದ್ರೆ ಡಿವಿಡಿ, ಹಾರ್ಡ್ ಡಿಸ್ಕ್, ಸಿ.ಡಿ ಹೀಗೆ ಹಲವಾರು ವಿಧಗಳಲ್ಲಿ ಯಾವುದರಿಂದ ಕಂಪ್ಯೂಟರನ್ನು ಚಾಲೂ ಮಾಡಬೇಕು ಎಂಬ ಆಯ್ಕೆ ಸಿಗುತ್ತೆ. ಅದ್ರಲ್ಲಿ DVD ಅಂತ ಕೊಡಿ.ಡಿ.ವಿಡಿ ಅನ್ನೋ ಆಯ್ಕೆ ಬರಲಿಲ್ಲ ಅಂದ್ರೆ ಇನ್ನೊಂದೇ ಒಂದು ಸಣ್ಣ ಹೆಜ್ಜೆಯಿದೆ. ಆದ್ರೆ ಈಗ ಬರ್ತೀರೋ ಹೊಸ ಕಂಪ್ಯೂಟರ್ಗಳಲ್ಲಿ ಆ ಸಮಸ್ಯೆಯೇ ಇಲ್ಲದ್ದರಿಂದ ಆ ಹಂತವನ್ನಿಲ್ಲಿ ಬರೆಯುತ್ತಿಲ್ಲ. ಯಾರಿಗಾದರೂ ಆ ಸಮಸ್ಯೆ ಬಂದ್ರೆ ಖಂಡಿತಾ ತಿಳಿಸಿ, ಆ ಹಂತದ ಬಗ್ಗೆ ಉತ್ತರಿಸುತ್ತೇನೆ.
2. Choose boot from DVD after hitting F12


೩. ಡಿವಿಡಿ ಹಾಕಿದ ಮೇಲೆ ಒಂದಿಷ್ಟು ಚಿತ್ರ ಚಿತ್ತಾರಗಳು ಬರುತ್ತಾ ಹೋಗುತ್ತೆ. ಆ ಚಿತ್ರಗಳೇ ಏನು ಮಾಡಬೇಕಂತ ಹೇಳುತ್ವೆ. ಇಲ್ಲಿ ಬರೋ ಒಂದೇ ಒಂದು ಮುಖ್ಯವಾದ ಘಟ್ಟ ಅಂದ್ರೆ ಲಿನಕ್ಸನ್ನ ಎಲ್ಲಿ ಹಾಕ್ಬೇಕು ಅಂತ ಆಯ್ಕೆ ಮಾಡೋದು. 
ಅ)use whole disk ಅಂತ ಕೊಟ್ರೆ ಈಗಿರೋ ವಿಂಡೋಸ್ ಅಳಿಸಿ ಇಡೀ ಹಾರ್ಡ್ ಡಿಸ್ಕಿನಲ್ಲಿ ಲಿನಕ್ಸ್ ಕೂರುತ್ತೆ. ಇದು ತುಂಬಾ ಅಪಾಯಕಾರಿಯಾದ್ದರಿಂದ ಇದನ್ನು ಕೊನೆಯಲ್ಲಿ ಕೊಟ್ಟಿರುತ್ತಾರೆ.
ಆ)upgrade existing linux: ಈಗ ನಿಮ್ಮ ಬಳಿ ಯಾವುದಾದರೂ ಲಿನಕ್ಸ್ ಇದ್ದರೆ, ಅದನ್ನು ಉನ್ನತೀಕರಿಸಲು ಈ ಆಯ್ಕೆ ಬಳಸಬಹುದು.
ಇ)clean the selected disk and install linux:ಈಗ ಇರೋ ಒಂದು ಡ್ರೈವಿನಲ್ಲಿ(ಲಿನಕ್ಸೋ, ವಿಂಡೋಸೋ ಏನಾದ್ರೂ ಇರ್ಲಿ)ರೋ ಮಾಹಿತಿ ಅಳಿಸಿ , ಅಲ್ಲಿ ಲಿನಕ್ಸ್ ಹಾಕೋಕೆ ಇದ್ನ ಉಪಯೋಗಿಸಬಹುದು.
9. Choose Upgrade or erase earlier linux option.


3. Choose to install Linux
4. If you have internet connection and want to download latest updates during installation, choose "connect to this network" or else choose "I don't want to connect to wi-fi"
 ಇನ್ನು ಮುಂದಿನ ಹಂತಗಳ ಬಗ್ಗೆ ಬರೆಯೋದಕ್ಕಿಂತ ನಾನು ಇನ್ಸ್ಟಾಲ್ ಮಾಡಿದ ಚಿತ್ರಗಳನ್ನೇ ಹಾಕುತ್ತಿದ್ದೇನೆ. ಇದರಿಂದ ಉಪಯೋಗವಾಗಬಹುದೆಂಬ ನಂಬಿಕೆಯಲ್ಲಿ.. ಅಂದಾಗೆ ಫ್ರೀಯಿದ್ದಾಗ ಪ್ರಯತ್ನಿಸಿ. ಎಲ್ಲಾದ್ರೂ ಸಿಕ್ಕಾಕ್ಕೊಂಡ್ರೆ ಅದ್ರ ಬಗ್ಗೆ ತಿಳಿಸಿ, ಮುಂದಿನ ಓದುಗರಿಗೆ ಉಪಯೋಗವಾದೀತು ;-)
5. Minor errors like this during installation can be ignored and installation can be resumed
6. Home screen of the installer. Choose install Linux

7. Choose the language for installed. In some versions of linux like Fedora, you can choose Kannada as well

8. Conditions to be checked before starting the installer
10. you can use windows partion manager to create disk and use that during installation or jut create free space and use that during linux installation to create drive( and optional swap space as in next step)

11. You can create SWAP space of around 1GB or 500 MB which can act as virtual RAM for the linux being installed(this is optional.Ignore if you have more RAM)
12. Choose drive/Free space where you want to install Linux

13. Confirm the disk where linux is being installed

14. Choose the timezone

15. Select the language for the linux system

16. Set up Admin username/password

17.Installation is going on
18. Some minor errors like above are OK

19. Once installation is done, reboot the PC/Laptop
20. After installing Linux, you can access both Linux, windows drives from linux

Tuesday, March 31, 2015

Time to C something :-)

One of my friend wanted to know what is function, what is pointer, pass by value, what is pass by reference in C. So, i thought to scribble something in linux to show what it is

Here is a simple code which explains some basic concept
===========
#include <stdio.h>
int add(int a, int b)//pass by value function
{
    return a+b;
}

int addr(int *c,int *d)//pass by reference function
{
    return( *c + *d );
}

int main()
{
    //printf("Hello, World!\n");
    int a,b;
    printf("enter 2 digits");
   
    scanf("%d%d", &a,&b);
    printf("there sum is %d",add(a,b)); //invoking pass by value
   
    int *p; //creating a pointer to variable
    p=&a;
    *p=26;
   
    printf("\nmodified value of a is %d",a);
  
    printf("\n using reference\n");
    printf("%d",addr(&a,&b)); //invoking pass by reference function

    return 0;
}

===========

But somehow, it did not work in linux. "using namespace std" did not help.
So, i thought of some online editor and it eased the job.
Ide One compilation
Modified the add() function to edit the value of a,b to show that does not affect the passed values
however similar thing in addr() affecting value of passed variable(as address of the variable is being passed and not the value of it.


The happiness to see the concepts being understood made me happy as well and scribble down the same scriplet here as well.. 

Thursday, October 16, 2014

ಮಂಗಳಪ್ರಿಯನೊಬ್ಬನ ಮಮಕಾರದ ಮಾತುಗಳು

ನಮ್ಮ ಉಪಗ್ರಹ ಮಂಗಳನ ಮೇಲಿಳಿದಂದು ಮೂಡಿದ ಖುಷಿ ಮುಖಹೊತ್ತಿಗೆಯಲ್ಲಿನ್ನೂ ಇಳಿದಂತಿಲ್ಲ. ಮತ್ತೆ ಮತ್ತೆ ಮಂಗಳನದೇ ಸುದ್ದಿ, ಚರ್ಚೆಗಳಿಲ್ಲಿ. ಮಂಗಳನ ಮೇಲೆ ಮೊದಲ ಪ್ರಯತ್ನದಲ್ಲೇ ಕಾಲಿಟ್ಟ ಮೊದಲ ದೇಶ ನಮ್ಮದು ಎಂಬ ಹೆಮ್ಮೆ ಪಟ್ಟ ಜನರೆಷ್ಟೋ , ಮೂಲಭೂತ ಉದ್ದೇಶಗಳ ಸಾಕಾರವೇ ಸಂದೇಹವಿರೋ ಯೋಜನೆಗೆ ನಾನೂರೈವತ್ತು ಕೋಟಿ ಸುರಿದದ್ದು ಹುಚ್ಚಾಟದ ಪರಮಾವಧಿಯೆಂದು ಗೋಳಿಟ್ಟ ಜನರೂ ಅಷ್ಟೇ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನಭಕ್ಕೆ ನೆಗೆವ ರಾಕೆಟ್ಟುಗಳ ನಿರ್ಮಾಣಕ್ಕೆ ನೂರಾರು ಕೋಟಿ ಸುರಿಸುವ ವಿಜ್ಞಾನಿಗಳ ವಿಚಾರಹೀನತೆಯ ಬಗ್ಗೆ ಹಿಗ್ಗಾಮುಗ್ಗಾ ಖಂಡಿಸಿದ ಬುದ್ದಿಜೀವಿಗಳು, ಆ ದುಡ್ಡಿನಲ್ಲಿ ಅದೆಷ್ಟೋ ಉದ್ದಾರದ ಯೋಜನೆಗಳನ್ನು ಮಾಡಬಹುದಿತ್ತೆನ್ನೋ ದೇಶೋದ್ದಾರಕರು(?), ವಿಜ್ಞಾನ-ತಂತ್ರಜ್ಞಾನಗಳು ಬೇಡ, ಅದರಿಂದಾಗ ಪ್ರಯೋಜನ ಮಾತ್ರ ಬೇಕು, ವಾಹನಗಳಿಂದ ವಿಪರೀತ ಮಾಲಿನ್ಯ. ಹಾಗಾಗಿ ಎತ್ತಿನಗಾಡಿಯೇ ಇರಲಿ. ಉಪಗ್ರಹ ಉಡಾವಣೆ ಶುದ್ದ ದುಂದು, ಆದ್ರೆ ಅವುಗಳನ್ನು ಬಳಸೋ ಉನ್ನತ ತಾಂತ್ರಿಕತೆಯ ಮೊಬೈಲು ಮಾತ್ರ ಇರಲಿ! ಅನ್ನೋ ಇಬ್ಬಂದಿಯ ವಿಚಿತ್ರವಾದಿಗಳನ್ನು ನೋಡಿದಾಗೆಲ್ಲಾ ಮೂಡೋದು ಒಂದೇ ಆಲೋಚನೆ . ಮೇರಾ ಭಾರತ್ ಮಹಾನ್ !!. ಮೇರಾ ಭಾರತ್ ಮಹಾನ್ !!

ನಾನು ಹತ್ತನೇ ತರಗತಿಯಲ್ಲಿದ್ದ ಸಮಯ ಅನಿಸತ್ತೆ. ನಮ್ಮ ಸಂಸ್ಕೃತಿಯ ಮೇಲೆ ವೈಜ್ಞಾನಿಕ ಆವಿಷ್ಕಾರಗಳ ಪ್ರಭಾವ ಅನ್ನೋ ಒಂದು ವಿಷಯದ ಮೇಲೆ ಒಂದು ವಲಯಮಟ್ಟದ ಚರ್ಚಾಸ್ಪರ್ಧೆ.  ಸ್ಪರ್ಧೆಗಾಗಿ ಹೇಳಿದ ಎಲ್ಲಾ ಅಂಶಗಳೂ ನಮ್ಮ ವೈಯುಕ್ತಿಕ ಅಭಿಪ್ರಾಯಗಳೇ ಆಗಿದ್ದು, ನಮ್ಮ ಜೀವನದಲ್ಲಿ ಹಾಗೇ ಬಾಳಿ ಬದುಕಬೇಕೆಂಬ ನಿಲುವು ನನ್ನದಾಗಿರದಿದ್ದರೂ, ಪರ ಅಥವಾ ವಿರೋಧ ಇವುಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳೋ ಸ್ವಾತಂತ್ರ್ಯವಿದ್ದರೂ ಒಂದು ರೀತಿಯ ಗೊಂದಲ ಮೂಡಿತ್ತು ನನ್ನಲ್ಲಾಗ. ಈ ಟೀವಿಯೆಂಬ ಟೀವಿ ಬಂದು ನಮ್ಮ ಯಕ್ಷಗಾನನ ತೆಂಕು ಬಡಗುಗಳಲ್ಲಿ, ದೊಡ್ಡಾಟ, ಬಯಲಾಟಗಳಲ್ಲಿ, ಭರತನಾಟ್ಯ, ನಾಟಕ, ಶ್ರೀ ಕೃಷ್ಣ ಪಾರಿಜಾತ, ಕರಡಿ ಮಜಲುಗಳಲ್ಲಿ ಖುಷಿ ಕಂಡುಕೊಳ್ಳುತ್ತಿದ್ದ ಜನರ ಮನೋಭಾವ ಟೀವಿಯೇ ಸರ್ವಸ್ವವೆಂಬಂತೆ ಬದಲಾಗಿ ನಮ್ಮಲ್ಲಿನ ಅನೇಕ ಕಲೆಗಳೇ ನಾಶದ ಹಂತ ತಲುಪುತ್ತಿರುವುದರ ಬಗೆ ಹೇಳಲೋ ಅಂತ ಒಂದೆಡೆ. ಎಫ್. ಎಮ್ ಅಂತೆಲ್ಲಾ ಚಾನಲ್ಲುಗಳ ಮೂಲಕ ಪಾಶ್ಚಾತ್ಯದ ಹೇರಿಕೆಯಂತೆ ಕಂಡರೂ ದೂರದರ್ಶನದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅನೇಕ ಕಲೆಗಳಿಗೊಂದು ದೊಡ್ಡ ವೇದಿಕೆ, ಗ್ಯಾನ್ ದರ್ಶನಿನಂತಹ ಸರಣಿಗಳ ಮೂಲಕ ಜ್ಞಾನಪ್ರಸಾರದಂತಹ ಒಳ್ಳೆಯ ಕೆಲಸಗಳು ನಡೆಯುತ್ತಿರೋದ್ರ ಬಗ್ಗೆ ಕೂಡ ಮನ ತುಡಿಯುತ್ತಿತ್ತು. ಕ್ಷಣಮಾತ್ರದಲ್ಲಿ ಕೂತಲ್ಲಿಂದಲೇ ಯಾರನ್ನಾದರೂ ಸಂಪರ್ಕಿಸಬಹುದಾದ ಇಂಟರ್ನೆಟ್ಟು,ಮೊಬೈಲ್ ಬಗ್ಗೆ ಹೇಳಲೇ ಅಥವಾ ಇವುಗಳಿಂದ ಆಗುತ್ತಿರುವ ದುಷ್ಪರಿಣಾಮಗಳ, ಹಾಳಾಗುತ್ತಿರುವ ನೈತಿಕತೆಯ ಬಗ್ಗೆ ಹೇಳಲೇ ಅನ್ನೋ ದ್ವಂದ್ವ. ಕೊನೆಗೆ ಯಾವ ವಿಷಯದ ಪರ ಮಾತನಾಡಿದೆ ಅನ್ನೋದು ಬೇರೆ ವಿಷಯವಾಗಿದ್ರೂ ವಿಷಯದ ಎರಡೂ ಮಗ್ಗುಲಗಳ ಬಗ್ಗೆ ಯೋಚಿಸುವ ಇಬ್ಬಣಗಳಲ್ಲು ಇರೋ ಸತ್ಯಾಸತ್ಯತೆಯನ್ನು ಸಮಾನವಾಗಿ ಸ್ವೀಕರಿಸೋ ಭಾವವನ್ನು ಆ ಸ್ಪರ್ಧೆ ಮೂಡಿಸಿದ್ದಂತೂ ಹೌದು.

ಇನ್ನು ವಿಷಯಕ್ಕೆ ಮರಳಿ ವಿಜ್ಞಾನದ ಬಗೆಗಿನ ಮಂಗಳನ ಬಗೆಗಿನ ಮಾತುಕತೆಗೆ ಬರೋಣ . ವಿಜ್ಞಾನ ಅಂದರೆ ವಿಶೇಷವಾದ ಜ್ಞಾನ ಎಂದರ್ಥ. ಒಂದು ವಿಷಯದ ಒಳಹೊರಗಿನ ಬಗೆಗಿನ, ಅದರ ಕಣಕಣದ ಬಗೆಗಿನ, ಅಣುವಣುವಿನ ನಡುವಿನ ಹೊಂದಾಣಿಕೆಯ ಬಗೆಗಿನ, ಕಣಕಣದ ವ್ಯೂಹಗಳ ಪರಿಕ್ರಮದಲ್ಲಿ ಆಗೋ ಪ್ರಭಾವ, ದುಷ್ರಭಾವಗಳ ಬಗೆಗಿನ ಆಳದ ಅಧ್ಯಯನವೇ ವಿಜ್ಞಾನ. ಮನದಾಳದ ಭಾವಗಳನ್ನು ಮನಮುಟ್ಟುವಂತೆ ನಿರೂಪಿಸುವ ಸಾಹಿತಿಯನ್ನು ಮಹಾನ್ ಅನ್ನೋದಾದರೆ ವಿಜ್ಞಾನದ ಸೂತ್ರಗಳನ್ನು , ತತ್ವಗಳನ್ನು ಅರ್ಥ ಮಾಡಿಕೊಂಡು ಅದರಿಂದ ಲೋಕೋದ್ದಾರಕ್ಕನುವಾಗುವಂತಹ ಸಾಧನವನ್ನು ರೂಪಿಸೋ ವಿಜ್ಞಾನಿಯನ್ನು ಮಹಾನ್ ಅನ್ನೋದರಲ್ಲಿ ತಪ್ಪೇನಿದೆ ? ತಿಂಗಳುಗಳ ಕಾಲ ಮಾಹಿತಿ ಕಲೆ ಹಾಕಿ ತಮ್ಮನ್ನು ಆ ವಿಷಯದಲ್ಲೇ ತೊಡಗಿಸಿಕೊಂಡು ಒಂದು ಕಾದಂಬರಿ(ಉತ್ತಮ ಅಥವಾ ಕೆಟ್ಟ ಅನ್ನೋದು ನನ್ನನ್ನು ಒಂದು ಪಂಕ್ತಿಯ ಕಡೆ ವಾಲಿಸಿಕೊಂಡತಾದೀತೆಂದು ಆ ಯಾವ ಭಾವಗಳಿಲ್ಲದೇ ಮುಂದೆ ಸಾಗುತ್ತಿದ್ದೇನೆ)ರಚಿಸೋ ಭೈರಪ್ಪನವರನ್ನಾಗಲಿ, ಡಾನ್ ಬ್ರೌನನ್ನಾಗಲೀ ಗೌರವಿಸೋ ಮನೋಭಾವವಿರೋ ನಮ್ಮಲ್ಲಿ ಒಂದಿಡೀ ವರ್ಷ ಒಂದು ಉಪಗ್ರಹದ ಉಡಾವಣೆಯ ಬಗ್ಗೆ ತಲೆಕೆಡಿಸಿಕೊಂಡ , ಅದಕ್ಕಿಂತ ಮುಂಚಿನ ವರ್ಷವರ್ಷಗಳ ಕಾಲ ಶ್ರಮಪಟ್ಟ ವಿಜ್ಞಾನಿಗಳ ಶ್ರಮದ ಬಗ್ಗೆ ಕೇವಲವಾಗಿ ಮಾತನಾಡೋ ಯಕಶ್ಚಿತ್ ಭಾವ ಮೂಡೋ ಬಗ್ಗೆ ಬೇಸರವೆನಿಸುತ್ತೆ. ಅಮೇರಿಕಾದವ್ರು ಆಗಲೇ ಯೋಜನೆ ಕೈಗೊಂಡಿದ್ರು. ಈಗ ನಮಗೆ ಸಿಗಬಹುದಾದ ಮಾಹಿತಿಗಳೆಲ್ಲಾ ಆಗಲೇ ಅವರ ಬಳಿ ಇದೆ ಎಂದು ಮಾತಾಡೋದು ಸುಲಭ, ಆದ್ರೆ ಅದ್ರಲ್ಲಿ ಒಂದು ಪ್ರತಿಶತವನ್ನಾದ್ರೂ ನಮಗೆ ಹಂಚುತ್ತಾರಾ ಅವ್ರು ಅಂತ ಯೋಚಿಸಿದಾಗ ಈ ಮಂಗಳಯಾನದ ಮಹತ್ವ ಅರ್ಥವಾಗುತ್ತೆ ! ಸ್ನೇಹದ ಮಾತಾಡುತ್ತಲೇ ರಷ್ಯಾ ಕೊಟ್ಟ ಗನ್ನು, ವಿಮಾನಗಳಿರಬಹುದು, ರೋಗಗಳ ವಿರುದ್ದ ಹೋರಾಟ ಅಂತ ಅಮೇರಿಕಾ ತಂದು ಸುರಿದ ರಾಸಾಯನಿಕಗಳಿರಬಹುದು.  ಯಾವುದೂ ಪುಕ್ಕಟೆಯಲ್ಲ. ಅಲ್ಲಿ ಉಪಯೋಗವಿಲ್ಲ ಅಂತ ಎಲ್ಲಾದರೂ ತಂದು ಸುರಿಯಲು ಬೇಕಾಗಿದ್ದ ಗೊಬ್ಬರಗುಂಡಿಗಳಂತೆ ಭಾರತ ಅದೆಷ್ಟೋ ಸಲ ಭಾಸವಾಗಿರಬಹುದು  ಪರದೇಶಗಳಿಗೆ. ಇಲ್ಲಿಗೆ ಬಂದ ಡಿ.ಡಿ.ಟಿಯಂತಹ  ಕೆಮಿಕಲ್ಲುಗಳು ಅದೆಷ್ಟೋ ದೇಶಗಳಲ್ಲಿ ಟಾಯ್ಲೆಟ್ಟು, ರಸ್ತೆ ತೊಳೆಯೋ ಪೆಪ್ಸಿ, ಕೋಕುಗಳನ್ನ ಇಲ್ಲಿನ ಜನಮನದ ಪೇಯಗಳಂತೆ ತಲೆಗೆ ಕಟ್ಟಲು ಪ್ರಯತ್ನಿಸುತ್ತಿರೋ ಹುನ್ನಾರಗಳನ್ನ ನೋಡಿದಾಗ್ಲೂ ನಮ್ಮದೇ ಆದ , ಸ್ವಂತಿಕೆಯ ತಂತ್ರಜ್ನಾನದ ಬೆಳವಣಿಗೆ ಬೇಕು ಅನಿಸೋಲ್ವಾ ? ಇದ್ದದ್ದನ್ನು ಸರ್ವನಾಶ ಮಾಡಿ ಹೊಸದನ್ನು ತರೋದು ತಂತ್ರಜ್ನಾನ ಅಂತಲ್ಲ. ಇದ್ದುದರ ಬೆಳವಣಿಗೆ ಸಹಾಯವಾಗೋ ಉದ್ದಾರಕ್ಕೆ ಸಹಾಯವಾಗೋ ತಂತ್ರಜ್ನಾನದ ಬಗ್ಗೆ ಮಾತಾಡುತ್ತಿರೋದು ಇಲ್ಲಿ. 

ದಿನದ ಐದೋ ಆರೋ ಘಂಟೆ ಮಾತ್ರ ಕರೆಂಟಿರೋ ಹಳ್ಳಿಗಳು.. ಈ ಮಾತು ತಮಾಷೆಯಲ್ಲ ಸ್ವಾಮಿ. ಇಂಥವು ಬೇರೆ ಎಲ್ಲೋ ಅಲ್ಲ. ನಮ್ಮ ಕರ್ನಾಟಕದಲ್ಲೇ ಇವೆ. ಮಳೆಗಾಲ ಬಂದಾಗ ಯಾವುದೋ ಮರಬಿದ್ದು ಹೋದ ಕರೆಂಟು ಯಾವಾಗ ಬರುತ್ತೆ ಅಂತಹ ಯಾರಿಗೂ ಗೊತ್ತಿಲ್ಲದ ಹಳ್ಳಿಗಳು ಅದೆಷ್ಟೋ ನಮ್ಮಲ್ಲಿ. ಅಂಥಹ ಹಳ್ಳಿಗಳ ಮೂಲೆ ಮೂಲೆಗಳಲ್ಲೂ ಮನೆಗೊಂದು ಮೊಬೈಲು, ಎಲ್ಲ ಮನೆಗಳಲ್ಲಿ ಅಲ್ಲದಿದ್ದರೂ ಬೀದಿಗೊಂದಂತಾದರೂ ಮನೆಗಳ ತಲೆ ಮೇಲೊಂದು ಡಿಶ್ ಟೀವಿಯ ಆಂಟೆನಾ ಕೊಡೆಗಳು ಕಾಣಸಿಗುತ್ತೆ ಈಗ. ಒಂದು ಹದಿನೈದು ನಿಮಿಷ ಕರೆಂಟು ಹೋದರೂ "ವಾಟ್ ಅ … ಮ್ಯಾನ್" ಅಂತ ಉದ್ಗರಿಸೋ ಬೆಂಗಳೂರೋ, ಮೈಸೂರೂ ಅಥವಾ ಮತ್ತಿನ್ಯಾವುದೋ ಮಹಾನಗರದಲ್ಲಿ ಕೂತು  ಈ ಉಪಗ್ರಹ ತಂತ್ರಜ್ನಾನ ದುಡ್ಡಿನ ಪೋಲು ಅಂತ ಮಾತನಾಡೋ ಮಹಾಜನಗಳೇ , ಇದರ ಬದಲು ಹಳ್ಳಿಗಳ ಉದ್ದಾರ ಮಾಡಬಹುದಿತ್ತೆಂದು ಭಾಷಣ ಬಿಗಿಯೋ ಪುಣ್ಯ ಪ್ರಜೆಗಳೇ ಒಮ್ಮೆ ನಿಜವಾದ ಹಳ್ಳಿಗಳತ್ತ ಬಂದು ನೋಡಿ ಅಂತ ಕರೆಯಬೇಕನ್ನಿಸುತ್ತೆ. ಮಾತಲ್ಲಿನ ವಿಡಂಬನೆ ಜಾಸ್ತಿಯೆನಿಸಿದರೂ ಅದರಲ್ಲಿ ಸತ್ಯವಿಲ್ಲದೇ ಇಲ್ಲ. ಆಣೆಕಟ್ಟೆಯ ಬಾಗಿಲು ತೆರಿತಾ ಇದ್ದಾರೆ ಕೆಳಗಿರೋ ಜನರೆಲ್ಲಾ ನೀರ ಸಮೀಪ ತೆರಳಬೇಡಿ, ಎತ್ತರದ ಜಾಗಕ್ಕೆ ತೆರಳಿ ಅಂತ ಟೀವಿ, ರೇಡಿಯೋ ಮೂಲಕ ಎಚ್ಚರಿಸೋ ಟೀವಿ, ಸಮುದ್ರದಲ್ಲಿ ಉಬ್ಬರ ಹೆಚ್ಚಾಗಿದೆ ಅಂತ ಉಪಗ್ರಹಗಳಿಂದ ಮಾಹಿತಿ ಬಂದಿದೆ ಇಂದು ಮೀನುಗಾರಿಕೆಗೆ ತೆರಳಬೇಡಿ ಅಂತ  ಎಚ್ಚರಿಸೋ ರೇಡಿಯೋ ಜೀವರಕ್ಷಕ ಈ ಜನರಿಗೆ. ಎಲ್ಲಾ ಹಾಳಾಗುತ್ತಿರೋದು ನಮ್ಮಿಂದಲೇ ಅಂತ ಅದೆಷ್ಟೋ ವಾದಿಸಿದರೂ ಹಿಂದಿನ ಅದೆಷ್ಟೋ ಪ್ರಕೃತಿ ವಿಕೋಪಗಳಲ್ಲಿ, ಕಾಶ್ಮೀರದ ಇತ್ತೀಚಿಗಿನ ಪ್ರವಾಹದಲ್ಲಿ ಲಕ್ಷಾಂತರ ಜನರ ಜೀವ ರಕ್ಷಣೆಗೆ ಸಹಾಯಕವಾಗಿದ್ದು ಉನ್ನತ ತಂತ್ರಜ್ನಾನದ ಬೋಟುಗಳು, ಹೆಲಿಕಾಪ್ಟರುಗಳು, ಹಸಿವಿಂಗಿಸಿದ್ದು ಅದೆಷ್ಟೋ ದಿನ ಕೆಡದಂತೆ ತಯಾರಿಸಿದ ಆಹಾರ ಅನ್ನುವುದನ್ನು ಮರೆಯೋ ಹಾಗಿಲ್ಲ.

ನಮ್ಮ ದೇಶೀ ತಾಂತ್ರಿಕತೆ ಸ್ವಂತಂತ್ರವಾಗಿ ಹಲವು ಮಜಲುಗಳಲ್ಲಿ ಎದ್ದು ನಿಲ್ಲೋ ಪ್ರಯತ್ನದಲ್ಲಿದೆ. ಅಂತಹ ಒಂದು ಪ್ರಯತ್ನವೇ ಮಂಗಳಯಾನ. ಅಲ್ಲಿ ತಾಮ್ರವಿರಬಹುದು, ನೀರಿರಬಹುದು, ಪ್ಲಾಟಿನಂ ಇರಬಹುದು. ಮನುಕುಲಕ್ಕೆ ಸದ್ಯದಲ್ಲಿ ತಿಳಿಯದಿದ್ದರೂ ಭವಿಷ್ಯತ್ತಿನಲ್ಲಿ ಉಪಯೋಗಕ್ಕೆ ಬರಬಹುದಾದಂತಹ ಅದೆಷ್ಟೂ ಖನಿಜಗಳಿರಬಹುದು. ಅದರ ಬಗೆಗಿನ ಮಾಹಿತಿ ಕಲೆಹಾಕೋಕೆ ನಡೆಯುತ್ತಿರುವ ಪ್ರಯತ್ನ ಶುದ್ದ ವೇಸ್ಟು ಅಂತ ಯಾವುದೋ ಪೂರ್ವಾಧ್ಯಯನವಿಲ್ಲದೇ ಒಂದು ಸಾಧಾರಣ ಕಟ್ಟೆ ಪಂಚಾಯ್ತಿಯಲ್ಲಿ ನಿರ್ಧರಿಸೋದು ಎಷ್ಟು ಸುಲಭ ಅಲ್ವಾ ? ! ನಮ್ಮಲ್ಲಿನ ಪ್ರತಿಭೆಗಳೆಲ್ಲಾ ಅಮೇರಿಕಾಕ್ಕೋ ಇಂಗ್ಲೆಂಡಿಗೋ ಪಲಾಯನವಾಗುತ್ತಿದೆ ಅಂತ ಬೊಬ್ಬೆಹಾಕೋ ಮಹಾಜನಗಳೇ ಅದಕ್ಕೆ ಕಾರಣಗಳೇನಿರಬಹುದು ಅಂತ ಒಮ್ಮೆಯಾದರೂ ಯೋಚಿಸಿದ್ದೀರಾ ? ಪರವಿರೋಧಗಳ ಚರ್ಚೆಯಿರಬೇಕು ನಿಜ. ಅದಿದ್ದಾಗಲೇ ವಸ್ತುವಿನ ನಿಜಗುಣ ಹೊರಬರುತ್ತೆನ್ನೋದು ನಿಜ. ಆದ್ರೆ ಚರ್ಚೆಯಾಗಬೇಕೆಂಬ ಒಂದೇ ಕಾರಣಕ್ಕೆ ಕಂಡಿದ್ದೆಲ್ಲವನ್ನೂ ವಿರೋಧಿಸುವುದು ಯಾವ ಸಿದ್ದಾಂತ !! ? ಕಂಡ ಯೋಜನೆಗಳಲ್ಲೆಲ್ಲಾ ತಪ್ಪು ಹುಡುಕೋ ನೀವು ಈ ತಪ್ಪು ಹುಡುಕೋ ಗುಣದಲ್ಲೇ ಏನಾದರೂ ತಪ್ಪು ಹುಡುಕೋ ಪ್ರಯತ್ನವನ್ನು ಎಂದಾದರೂ ನಡೆಸಿದ್ದೀರಾ ? ದಿನಾ ಏಳೂವರೆಗೆ ಬರುತ್ತಿದ್ದ ಪೇಪರ್ರು ಇವತ್ತು ಏಳೂ ಮೂವತ್ತೊಂದಕ್ಕೆ ಬಂತು ಅನ್ನೋದ್ರಿಂದ, ದಿನ ಬೆಳಗ್ಗೆ ಎದ್ದು ಪೇಪರ್ ಹಾಕುವಂತೆ ಒಬ್ಬನನ್ನು ಒತ್ತಾಯಿಸುವುದು ಮಾನವತೆಯ ಮೇಲಿನ ದಬ್ಬಾಳಿಕೆ ಅಂತ ಅದರ ವಿರುದ್ದವೂ ಪ್ರತಿಭಟನೆಗೆ ಮುಂದಾಗಲು ತೊಡಗೋ ಮನೋಭಾವವಿರೋರ ಬಗ್ಗೆ ಯಾವ ಸನ್ನಿರೀಕ್ಷೆಗಳನ್ನಿಟ್ಟುಕೊಳ್ಳೋದೂ ತಪ್ಪೇ ಅನಿಸೋಕೆ ಶುರುವಾಗಿಬಿಡುತ್ತೆ ಒಮ್ಮೊಮ್ಮೆ.

ಮುಗಿಸೋ ಮುನ್ನ:
ಲೇಖನದ ಶೀರ್ಷಿಕೆ ನೋಡಿದಾಗ ಇದು ಮಂಗಳಯಾನದ ಬಗ್ಗೆಯೇ ಅನ್ನೋ ನಿರೀಕ್ಷೆ ಮೂಡಿರಬಹುದು ಕೆಲವರಲ್ಲಾದರೂ. ಆದರೆ ಮೂಲ ಉದ್ದೇಶವದಲ್ಲ. ಈ ಮಂಗಳಯಾನ ಅನ್ನೋದು ನಮ್ಮ ಭಾರತೀಯ ತಂತ್ರಜ್ನಾನ ಎತ್ತರೆತ್ತರಕ್ಕೆ ಸಾಗುತ್ತಿರೋ ಒಂದು ದ್ಯೋತಕವಷ್ಟೇ. ಈ ತಂತ್ರಜ್ನಾನ ಬೆಳವಣಿಗೆಯ ಬಗೆಗಿನ, ಅದರ ಅಗತ್ಯತೆಗಳ ಬಗೆಗಿನ , ಅದರಿಂದ ಎಲ್ಲರಿಗೂ ಮಂಗಳವೇ ಆಗಲಿ ಎಂಬ ಒಂದು ಮಗ್ಗುಲಿನ ವಿಚಾರವನ್ನು ಪ್ರಸ್ತುತಪಡಿಸೋ ಪ್ರಯತ್ನವಷ್ಟೇ ಇದು. ಓದಿದ್ದಕ್ಕೆ ವಂದನೆಯೆನ್ನುತ್ತಾ ಸದ್ಯಕ್ಕೊಂದು ವಿರಾಮ.

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

Monday, December 2, 2013

ಟೆಲಿಪತಿ:

ಪೀಠಿಕೆ:
ನಂಬಿಕೆ-ಮೂಡನಂಬಿಕೆಗಳ ನಡುವಿನ ವಾದ ಪ್ರತಿವಾದಗಳೇನೇ ಇರ್ಲಿ. ವಿಜ್ಞಾನದ ಸೂಕ್ಷ್ಮದರ್ಶಕಗಳ , ಪರೀಕ್ಷಾ ವಿಧಾನಗಳ ಕಣ್ಣಿಗೆ ಕಂಡಿದ್ದು ಮಾತ್ರ ಸತ್ಯ ಅನ್ನೋ ವೈಜ್ಞಾನಿಕರು, ನಮ್ಮಲ್ಲಿನ ವಸ್ತು, ವಿದ್ಯೆ, ಜ್ಞಾನಗಳನ್ನೆಲ್ಲಾ ಅವಲಕ್ಷಿಸುತ್ತಿದ್ದಾರೆ ಎಂದು ಅಲವತ್ತುಕೊಳ್ಳೋ ಪ್ರಾಚೀನರಿಗೂ ಇಂದಿನ ಮಹಾನ್ ಜ್ಞಾನಿ ಬುದ್ದಿಜೀವಿಗಳಿಗೂ ನಡುವೆ ನಡೀತಿರೋ ಸಂಘರ್ಷಗಳೇನೇ ಇದ್ರೂ ಕೆಲವೊಮ್ಮೆ ಈ ಮನಸ್ಸು ಅನ್ನೋದು ಯಾರ ಊಹೆಗೂ ನಿಲುಕದಂತೆ ವರ್ತಿಸುತ್ತಿರುತ್ತೆ. ನಾವು ಫೋನ್ ಮಾಡ್ಬೇಕು ಅಂತಿದ್ದಾಗಲೇ ಆತ್ಮೀಯರೊಬ್ಬರು ಫೋನ್ ಮಾಡೋದು, ಗೆಳತಿಯ ಹತ್ರ ನಾವೇನೋ ಮಾತಾಡಬೇಕು ಅಂತಿರುವಾಗ ಅವಳೇ ಅದ್ರ ಬಗ್ಗೆ ಮಾತಾಡಿಬಿಡೋದು..ಹೀಗೆ ನಮ್ಮ ಮನಸ್ಸಿನ ಭಾವನೆಗಳು ಬೇರೆಯವರಿಗೆ ದಾಟೋದು, ಅವರ ಭಾವಗಳು ನಮಗೆ ಬಂದು ತಲುಪೋದು ಆಗ್ತಿರುತ್ತೆ ಅಂತ ಅನೇಕರ ಅಭಿಪ್ರಾಯ. ಇವೆಲ್ಲಾ ಕಾಕತಾಳೀಯ ಅಂತ ಎಷ್ಟೇ ನಿರಾಕರಿಸಿದ್ರೂ ಪದೇ ಪದೇ ನಡೆಯೋಕೆ ಶುರು ಆದಾಗ ಅದರ ಬಗ್ಗೆ ಆಲೋಚಿಸೋ ಹಾಗೆ ಮಾಡುತ್ತೆ. ವಿಜ್ಞಾನಿಗಳ ಪ್ರಕಾರ ಅದೊಂದು ಭ್ರಮೆ ಅಥವಾ ಮನಸ್ಸಿನ ಅವಸ್ತೆ ಅಷ್ಟೇ. ಉಳಿದವರ ಮಾತಿನಲ್ಲಿ ಹೇಳೋದಾದ್ರೆ ಅದೇ ಟೆಲಿಪತಿ.

ಮುಂಚೆ ಲ್ಯಾಂಡ್ ಲೈನಿದ್ದಾಗ್ಲೇ ಚೆನ್ನಾಗಿತ್ತಪ್ಪ. ಚಿಕ್ಕಪ್ಪನ ಮನೆಗೋ, ದೊಡ್ಡಪ್ಪನ ಮನೆಗೋ ಫೋನ್ ಮಾಡಿದ್ರೆ ಅಲ್ಲಿದ್ದ ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಅಕ್ಕ ಎಲ್ರತ್ರನೂ ಮಾತಾಡತಿದ್ವಿ. ಅವ್ರೂ ಹಾಗೆ, ನಮ್ಮನೆಯಲ್ಲಿರೋ ಎಲ್ರತ್ರನೂ ಮಾತಾಡೋವರ್ಗೂ ಸಮಾಧಾನ ಆಗ್ತಿರಲಿಲ್ಲ. ಫೋನ್ ಬಿಲ್ಲು ಸಿಕ್ಕಾಪಟ್ಟೆ ಬರತ್ತೆ ಬೇಗ ಮಾತಾಡ್ರೋ ಅಂತ ಅಮ್ಮ ಅಂದ್ರೆ, ಹೇ ಹಾಗೇನಿಲ್ಲ. ಮಾತಾಡ್ಲಿ ಬಿಡು. ನಾವು ಅಲ್ಲಿಗೆ ಹೋಗಿ ಬಂದಷ್ಟೇನು ಖರ್ಚಾಗಲ್ಲ. ಈ ಫೋನಲ್ಲಿ ಮಾತಾಡ್ತಾ ಇದ್ರೆ, ಅಲ್ಲಿಗೆ ಹೋಗಿ ಬಂದಂಗೇ ಆಗತ್ತೆ ಅಂತ ಸಮಾಧಾನ ಮಾಡ್ತಿದ್ರು ಅಪ್ಪ. ಈಗ ಎಲ್ರ ಕೈಗೊಂದು ಮೊಬೈಲು ಬಂದ್ರೂ ಯಾರೂ ಮಾತಿಗೆ ಸಿಗಲ್ಲ. ಎಲ್ಲಿಗಾದ್ರೂ ಫೋನ್ ಮಾಡಿದ್ರೂ ಅವ್ರ ಮಕ್ಕಳೋ, ಮನೆಯವ್ರೋ ಸಿಗಲ್ಲ. ಹೇ ಹೊರಗಿದೀನಿ ಕಣೋ ಅಂತನೋ, ಅವ್ರು ಇನ್ನೇನೋ ಬಿಸಿ ಇದಾರೆ ಕಣೋ ಅಂತಾನೋ ಉತ್ರ ಬರತ್ತೆ. ಮುಂಚೆಯಾದ್ರೂ ಫ್ರೀಯಾದ ಮೆಸ್ಸೇಜುಗಳಾದ್ರೂ ಇರ್ತಿತ್ತು. ಈಗ ಅದಕ್ಕೂ ಕತ್ರಿ ಹಾಕಿದ ಮೇಲೆ ಗೆಳೆಯ ಗೆಳೆಯರ ನಡುವಿನ ಬಂಧನೇ ದೂರಾಗ್ತಿರೋ ಹಾಗೆ ಅನಿಸುತ್ತಿದೆ. ಈ ಫೇಸ್ಬುಕ್ಕು, ವಾಟ್ಸಾಪುಗಳಿದ್ರೂ ಎಲ್ಲಕ್ಕೂ ನೆಟ್ಟು ಬೇಕು.. ಆಗೆಲ್ಲಾ ಅನಿಸೋದು ಒಂದೇ. ನಾವು ಮತ್ತೊಬ್ರ ಮನಸ್ಸಿನ ಜೊತೆ ಸೀದಾ ಮಾತಾಡೋ ಹಾಗಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತಾ... ಹೂಂ. ಈ ತರ ಅನ್ಕೊಂಡಿದ್ದು ನಾವು ನೀವುಗಳಷ್ಟೇ ಅಲ್ಲ. ನಮ್ಮ  X-Men ಸೀರೀಸ್ ಅಲ್ಲಿ ಬರೋ ಪ್ರೊಫೆಸರ್ ಎಕ್ಸ್(ಮಾರ್ವೆಲ್), ಗೀತಾ ಮತ್ತು ಶಕ್ತಿಮಾನ್, ಮಹಾ ಗುರುಗಳ ಮಧ್ಯೆಯ ಟೆಲಿಪತಿಕ್ ಸಂಭಾಷಣೆ, Shiva Tilogyಯ Secret of Nagas ಅಲ್ಲಿ ಎದುರಿಗಿರುವವರ ಮನಸ್ಸಿನಲ್ಲಿರೋದನ್ನ ಅರಿತಿದ್ದ ಭೃಗು ಮಹರ್ಷಿ, ದ್ರೌಪದಿ ಸಭೆಯೊಳಗಿಂದ ಕೃಷ್ಣಾ ಅಂದಿದ್ದನ್ನು ಎಲ್ಲೋ ಇದ್ದ ತನ್ನ ಅಂತಃಪುರದಿಂದ ಕೇಳಿಸಿಕೊಂಡ ಮುರಾರಿ.. ಹೀಗೆ ನಮ್ಮ ಕಥಾ ಹಂದರಗಳಲ್ಲಿ, ಶತ ಶತಮಾನಗಳ ಹಿಂದಿನಿಂದಲೇ ಈ ತರದ ಪ್ರಯತ್ನಗಳೂ, ಇತ್ತೀಚೆಗೆ ಅವುಗಳ ಸತ್ಯಾಸತ್ಯತೆಯನ್ನು ಪ್ರಮಾಣಿಸಲು ಅನೇಕ ಪ್ರಯೋಗಗಳೂ ನಡೆದೇ ಇದೆ.ಬನ್ನಿ ಈ ಮನೋಲೋಕದಲ್ಲೊಂದು ಸುತ್ತು ಹಾಕಿ ಬರೋಣ.

ಈಗಿನ ಹಲವರಿಗೆ ವಿಜ್ಞಾನ ಅಂದರೆ ಪಾಶ್ಚಾತ್ಯ ಜಗತ್ತಿನದು ಮಾತ್ರ. ಉಳಿದದ್ದೆಲ್ಲಾ ಮೂಢನಂಬಿಕೆ. ಹಾಗಾಗಿ ಈ ಟೆಲಿಪತಿಯ ಬಗ್ಗೆ ಅಲ್ಲಿಂದಲೇ ಶುರು ಮಾಡೋಣ. ಟೆಲಿಪತಿ ಅನ್ನೋದು ಟೆಲಿ(ದೂರ), ಪ್ಯಾಥಿಯೋಸ್(ಸಂವೇದನೆ, ಭಾವನೆ, ಅನುಭವ) ಅನ್ನೋ ಎರಡು ಗ್ರೀಕ್ ಪದಗಳ ಸಂಯೋಗದಿಂದ ಉದ್ಭವಿಸಿದ್ದು. ಅಂದಾಗೆ ಈ ಪದವನ್ನು ೧೮೮೨ ರಲ್ಲಿ ಫೆಡರಿಕ್ ಮೈರಿಸ್ ಅನ್ನೋ ಲೇಖಕ ಬಳಸಿದನಂತೆ. ಅದಕ್ಕಿಂತ ಮುಂಚೆ ಇದು ಇರಲಿಲ್ಲವೇ ಅನ್ನೋದು ಮತ್ತೊಂದು ವಾದ. ಅದಕ್ಕೆ ಆಮೇಲೆ ಬರೋಣ. ಇದನ್ನು ಪ್ರಮಾಣಿಕರಿಸಲು ನಡೆದ ವೈಜ್ಞಾನಿಕ(?) ಪ್ರಯೋಗಗಳಲ್ಲಿ ಮೊದಲನೆಯದು  ಅಮೇರಿಕನ್ ಲೇಖಕ ಉಂಪ್ಟನ್ ಸಿಂಕ್ಲೇರ್(umpton sinclair) ನ ಮೆಂಟನ್ ರೇಡಿಯೋ ಎಂಬ ಪುಸ್ತಕದಲ್ಲಿನ ಪ್ರಯೋಗ. ಅದರಲ್ಲಿ ಆತ ತನ್ನ ಎರಡನೇ ಹೆಂಡತಿ  ಮೇರಿಗೆ ತಾನು ಬರೆದಿದ್ದ, ಆದರೆ ಆಕೆಗೆ ತೋರಿಸದಿದ್ದ ೨೨೫ ಚಿತ್ರಗಳನ್ನು ಈ ಟೆಲಿಪತಿಯ ಮೂಲಕ ಪುನಃ ಬಿಡಿಸಲು ಕೊಡುತ್ತಾನೆ. ಅದರಲ್ಲಿ ಆಕೆ ೬೫ನ್ನು ಯಥಾವತ್ ಬಿಡಿಸುತ್ತಾಳೆ. ೧೫೫ ಭಾಗಷಃ ಸರಿ, ೭೦ ರಲ್ಲಿ ಫೇಲ್ ಆಗ್ತಾಳೆ ಅಂತ ಬರೆದುಕೊಳ್ತಾನೆ ಲೇಖಕ. ಆದರೆ ಇದನ್ನು ಯಾವುದೇ ವೈಜ್ಞಾನಿಕ ವಿಧಾನದಲ್ಲಿ ಮಾಡಲಾಗದೇ ಇದ್ದಿದ್ರಿಂದ ಇದನ್ನು ಒಪ್ಪಲಾಗದು ಅಂತ ವಿಜ್ಞಾನಿಗಳು ತಳ್ಳಿ ಹಾಕಿ ಬಿಡ್ತಾರೆ. ನಂತರ ನಡೆದ ಪ್ರಯೋಗ ಅಕ್ಟೋಬರ್ ೧೯೩೭ರಲ್ಲಿ ನಡೆದ ಲೇಖಕ ಹೆರಾಲ್ಡ್ ಶೆರ್ಮಾನ್ ಮತ್ತು ಹ್ಯೂಬರ್ಟ್ ವಿಲ್ಕಿನ್ಸನ ನಡುವಿನದು. ಶೆರ್ಮಾನ್ ನ್ಯೂಯಾರ್ಕಿನಲ್ಲಿದ್ದರೆ, ವಿಲ್ಕಿನ್ಸ್ ಆರ್ಕಟಿಕ್ ಧೃವ ಪ್ರದೇಶದಲ್ಲಿ ಸಂಶೋಧನೆಯಲ್ಲಿ ತೊಡಗಿರುತ್ತಾನೆ. ಪ್ರತಿ ನಿತ್ಯ ಅವರು ತಮಗನಿಸಿದ ಭಾವಗಳನ್ನ ಒಂದು ಡೈರಿಯಲ್ಲಿ ದಾಖಲಿಸುತ್ತಾ, ಅದರ ಒಂದು ಪ್ರತಿಯನ್ನು ಕೊಲಂಬಿಯಾ ಯೂನಿವರ್ಸಿಟಿಯ ಒಬ್ಬ ಸೈಕಾಲಜಿ ಪ್ರೊಫೆಸರ್ ಗಾರ್ಡನರ್ ಮರ್ಫಿಗೆ ಕಳುಹಿಸುತ್ತಾ ಇರುತ್ತಾರೆ. ಐದೂವರೆ ತಿಂಗಳ ನಂತರ ಅವರು ಸಿಕ್ಕಾಗ ನೋಡಿದರೆ ೭೫% ಭಾವಗಳು ಒಂದೇ ಇರುತ್ತದೆ. ಅದರಲ್ಲಿರೋ ಕೆಲವೊಂದು ಒಂದು ದಿನದ  ಟೆಲಿಪತಿಗಳು ಅಥವಾ ಇನ್ನೊಂದು ಗುಂಪಿನವರ ಪ್ರಕಾರ ಕಾಕತಾಳೀಯತೆಗಳು ಹೀಗಿವೆ ನೋಡಿ. ಒಂದೇ ದಿನ ಇಬ್ಬರಿಗೂ ಕೆಟ್ಟ ಹವಾಮಾನದ ಕಾರಣದಿಂದ ಕೆಲಸ ಕೆಟ್ಟಿರುತ್ತೆ, ಯಾರದೋ ಕೈ ಚರ್ಮ ಉಗುರಿನ ಬಳಿ ಕಿತ್ತು ಬಂದಿರೋದು ನೋಡಿರ್ತಾರೆ, ಚೆನ್ನಾಗಿ ಕುಡಿದಿರ್ತಾರೆ, ಸಿಗಾರ್ ಪೆಟ್ಟಿಗೆ ಇವರು ಬರೋ ದಾರಿಯಲ್ಲಿ ಎದುರಾಗಿರುತ್ತೆ.ಮತ್ತೊಂದು ಪ್ರಸಂಗ ನೋಡಿ.  ಆರ್ಕಟಿಕ್ ನಲ್ಲಿದ್ದ ವಿಲ್ಕಿನ್ಸ್ ಅಮೇರಿಕನ್ ಸೇನಾಧಿಕಾರಿಗಳ ಜೊತೆಗೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿರತ್ತೆ. ಆದ್ರೆ ಕೆಟ್ಟ ಹವೆಯ ಕಾರಣದಿಂದ ಆತನ ವಿಮಾನವನ್ನ ಮಧ್ಯೆಯೇ ಒಂದು ಕಡೆ ನಿಲ್ಲಿಸಬೇಕಾಗಿರತ್ತೆ. ಅಂದು ಕಾರ್ಯಕ್ರಮಕ್ಕೆ ಒಳ್ಳೆಯ ಕೋಟನ್ನೂ ಹಾಕಿಲ್ಲವಲ್ಲಪ್ಪ. ನನ್ನ ಸಂಜೆಯ ಕೋಟು ಗಿಡ್ಡವಾಗುತ್ತಿದೆ ಎಂಬ ವೇದನೆಯಲ್ಲಿರುತ್ತಾನೆ ವಿಲ್ಕಿನ್ಸ್. ಇತ್ತ ಕೂತಿರೋ ಶರ್ಮನ್ ಕವಿ ಮಹಾಶಯ ಬರೆದಿರುತ್ತಾನೆ. ನೀನು ಮಿಲಿಟರಿ ಡ್ರೆಸ್ಸಿನಲ್ಲಿರೋ ಜನರೊಂದಿಗೆ ಇದ್ದೀಯ. ಸಖತ್ತಾದ ಮಾತುಕತೆಗಳು ನಡಿತಾ ಇದೆ. ನೀನಿನ್ನು ಸಂಜೆಯ ಡ್ರೆಸ್ಸಿನಲ್ಲೇ ಇದೀಯ... ಅಂತ !!  ಯಪ್ಪಾ.. ಕೆಲವೊಂದು ಕಾಕತಾಳೀಯಗಳು ಇದ್ದರೂ ಇಷ್ಟೆಲ್ಲಾ ಸಮಾನತೆಗಳಿರಲು ಸಾಧ್ಯವೇ ಇಲ್ಲ. ಐದೂವರೆ ತಿಂಗಳುಗಳ ನಂತರ ಇವರ ಡೈರಿಗಳನ್ನ, ಇವರು ತಮಗೆ ಕಳುಹಿಸಿದ ದಾಖಲೆಗಳನ್ನ ಪರಾಮರ್ಶಿಸಿದ ಕೊಲಂಬಿಯಾ ಯೂನಿವರ್ಸಿಟಿಯ ಪ್ರೊಫೆಸರ್ ದಂಗಾಗುತ್ತಾರೆ. ಇಲ್ಲಿಯವರಿಗೆ ಪ್ರಮಾಣೀಕರಿಸದ "ಏನೋ"  ಸತ್ಯ  ಇದೆ ಎಂದು ಆ ಯೂನಿವರ್ಸಿಟಿ ಪ್ರೊಫೆಸರ್ ಅಭಿಪ್ರಾಯ ಪಡುತ್ತಾರೆ.

ಈ ತರದ ಅಸಂಖ್ಯ ಪ್ರಯೋಗಗಳು ನಡೆದಿರಬಹುದು. ಈ "ಟೆಲಿಪತಿ"ಯನ್ನು ವೈಜ್ಞಾನಿಕವಾಗಿ ವಿವರಿಸಲೂ ಅನೇಕ ಸಿದ್ಧಾಂತಗಳು ಹುಟ್ಟಿಕೊಂಡವು. ಅದರಲ್ಲೊಂದು ವಿಲಿಯಮ್ ಕ್ರೂಕನ ಮನೋಅಲೆ(ಬ್ರೈನ್ ವೇವ್) ಸಿದ್ದಾಂತ. ಮೆದುಳಿನಲ್ಲಿನ ಈಥರ್ನ ವೈಬ್ರೇಶನ್ಗಳಿಂದ ಉಂಟಾಗೋ ಅಲೆಗಳೇ ಈ ಟೆಲಿಪತಿಗೆ ಕಾರಣ ಇರಬಹುದೆಂದು ಆತ ಪ್ರತಿಪಾದಿಸಿದ್ದ.  ಇಪ್ಪತ್ತನೆಯ ಶತಮಾನದ ಹೊತ್ತಿಗೆ ಇನ್ನೊಂದಿಷ್ಟು ಸಿದ್ದಾಂತಗಳು ಹುಟ್ಟಿಕೊಂಡವು. ಅದರಲ್ಲೊಂದು ದೈವಿಕ ಸಿದ್ದಾಂತ(spiritual theory). ಇದರ ಪ್ರಕಾರ ಹೊರಗ್ರಹದಿಂದ ಬಂದ ಜೀವಿಗಳು, ಮಾನವಾತೀತ ಶಕ್ತಿಗಳು, ದೈವೀಕ ಶಕ್ತಿಗಳು ನಮ್ಮ ಯೋಚನೆಗಳನ್ನು ನಿಯಂತ್ರಿಸುತ್ತವೆ! ನಂತರ ವಿಜ್ಞಾನಿಗಳು ಇದನ್ನು ಅಲ್ಲಗಳೆದು ಈ ತರ ಅಂದುಕೊಳ್ಳೋ ಮನಸ್ಥಿತಿಯನ್ನೇ ಒಂದು ಖಾಯಿಲೆ ಅಂತ ಹೆಸರಿಟ್ಟಿದ್ದು ಇತಿಹಾಸ !! ಸ್ಕ್ರೀಜೋಫೀನಿಯಾ ಎಂಬ ಮಾನಸಿಕ ಅವಸ್ಥೆ(ಖಾಯಿಲೆ ಅನ್ನೋದು ತಪ್ಪಾಗಬಹುದೇನೋ)ಯ ಜನರಿಗೆ ನಮ್ಮ ಆಲೋಚನೆಗಳು ನಮ್ಮದಲ್ಲ. ಇದು ಯಾವುದೋ ದೆವ್ವ, ಪ್ರೇತ, ದಯ್ಯ, ಅಪ್ಸರೆ, ಅಥವಾ ಇನ್ಯಾವುದೋ ಮಾನವಾತೀತ ಶಕ್ತಿಯದು. ಇದನ್ನ ಯಾರೋ ತಮ್ಮ ಮನಸ್ಸಿನೊಳಗೆ ತುರುಕುತ್ತಿದ್ದಾರೆ ಅನ್ನಿಸುತ್ತಂತೆ. ಇನ್ನು ಕೆಲವರಿಗೆ ತಮ್ಮ ಭಾವನೆ, ಕಲ್ಪನೆಗಳನ್ನ ಯಾರೋ ತಮ್ಮ ಮನಸ್ಸಿನಿಂದ ಕಿತ್ತು ಹೊರಗೆ ಹಾಕುತ್ತಿದ್ದಾರೆ ಅಂತಲೂ ಅನಿಸುತ್ತಂತೆ. ಈ ತರಹದ ಭಾವಗಳ ಬಗ್ಗೆ ಮೆಲನಿ ಕ್ಲೈನ್ ಅನ್ನೋ ಮನೋವಿಜ್ಞಾನಿ ಬರೀತಾ ಹೋಗ್ತಾಳೆ. ತಾಯಿಯ ಹೊಟ್ಟೆಯೊಳಗಿರೋ ಮಗುವಿಗೆ ಅದರ ಮನಸ್ಸಿನಲ್ಲಿ ನಡಿತಿರೋ ಭಾವಗಳಿಗೂ ಅದನ್ನು ಹೊತ್ತಿರೋ ತಾಯಿಯ ಮನಸ್ಸಿನ ಭಾವಗಳಿಗೂ ನಡುವಿನ ವ್ಯತ್ಯಾಸ ತಿಳಿಯಲು ಆಗೋದಿಲ್ಲ. ಆದರೆ ಬೆಳಿತಾ ಬೆಳಿತಾ ಮಗು ತನ್ನದೇ ಆದ ಭಾವಗಳನ್ನ ಹೊಂದುತ್ತಾ ಹೋಗುತ್ತೆ. ಇದು ಸಾಧ್ಯವಾಗದಂತಹ ವ್ಯಕ್ತಿಗಳು ಈ ಸ್ಕ್ರೀಜೋಫೀನಿಯಾ ಅಂತ ಆ ಮಾನಸಿಕ ಅವಸ್ಥೆಯನ್ನು ವರ್ಣಿಸಲು ಪ್ರಯತ್ನಿಸ್ತಾ ಹೋಗ್ತಾಳೆ.


Zener Cards
ನಂತರ ಬಂದ ವಿಜ್ಞಾನಿಗಳು ಈ ಮನೋ ಅಲೆಗಳೆಂಬುದು ಇದ್ರೂ ಅವು ತುಂಬಾ ಕ್ಷೀಣವಾಗಿದ್ದು ಇದರಿಂದ ಯಾವುದೇ ತರಹದ ಮಾಹಿತಿ ವಿನಿಮಯ ಸಾಧ್ಯವಿಲ್ಲವೆಂದು ತಳ್ಳಿ ಹಾಕಿದ್ರು.  ಆದ್ರೂ ಈ ಟೆಲಿಪತಿಯನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸೋ/ಅಲ್ಲಗಳೆಯೋ ಯಾವ ಪ್ರಯೋಗಗಳೂ ಇದ್ದಿರಲಿಲ್ಲ. ಆಗ ಬಂದಿದ್ದು ಎರಡು ಪ್ರಸಿದ್ದ ಪ್ರಯೋಗಗಳು. ಮೊದಲನೆಯದು "ಜೀನರ್ ಕಾರ್ಡ್ ಪ್ರಯೋಗ". ಒಬ್ಬನಿಗೆ ಸಂದೇಶ ಕಳುಹಿಸುವವನು ಎಂದು ಅವನಿಗೆ ಐದು ಜೀನರ್ ಕಾರ್ಡುಗಳಲ್ಲಿ ಯಾವದಾದರೂ ಒಂದನ್ನು ತನ್ನ ಮನಸ್ಸಿನಲ್ಲೇ ಕಲ್ಪಿಸಿಕೊಂಡು ಅದನ್ನು ಮತ್ತೊಬ್ಬನಿಗೆ ಈ "ಟೆಲಿಪತಿ"ಯ ಮೂಲಕ ತಿಳಿಸಬೇಕು. ಅದನ್ನು ಅರಿತ ಆತ ಮೊದಲನೆಯವನು ಯಾವ ಕಾರ್ಡನ್ನು ಆರಿಸಿದ್ದಾನೆ ಎಂದು ತಿಳಿಸಬೇಕು. ಸುಮ್ಮನೇ ಊಹಿಸಿದರೂ ೨೦% ಸತ್ಯ ಹೇಳೋ ಸಾಧ್ಯತೆಯಿರೋದ್ರಿಂದ ೨೦% ಗಿಂತ ಜಾಸ್ತಿ ಸರಿಯಾದರೆ ಮಾತ್ರ ಇದು "ಟೆಲಿಪತಿ" ಎಂಬುದು ಇರುವುದರ ಸಾಧ್ಯತೆಯನ್ನು ಸಾರುತ್ತದೆ ಎಂದು ಇದರ ಹೇಳಿಕೆ.  ಆದರೆ ಮೊದಲನೆಯವ ಗ್ಲಾಸ್ ಹಾಕಿಕೊಂಡಿದ್ರೆ ಅವನ ಗ್ಲಾಸುಗಳನ್ನ ನೀಟಾಗಿ ಗಮನಿಸ್ತಾ ಇದ್ರೆ ಅವನು ನೋಡುತ್ತಿರೋ ಕಾರ್ಡುಗಳು ಯಾವುದು ಎಂದು ಗಮನಿಸಬಹುದು ! ಈ ತರಹದ್ದೇ ಹಲವು ಮೋಸಗಳಾಗೋ ಸಾಧ್ಯತೆಯಿದ್ದಿದ್ರಿಂದ ಬಂದ ಮತ್ತೊಂದು ಪ್ರಯೋಗ ಗ್ಯಾಂಗ್ ಫೆಲ್ಡ್ ಪ್ರಯೋಗ. ಇದರಲ್ಲಿ ಇಬ್ಬರನ್ನು ಯಾವ ತರದಲ್ಲೂ ಸಂಪರ್ಕಿಸಲು ಸಾಧ್ಯವೇ ಆಗದಂತಹ ಎರಡು ಪ್ರತ್ಯೇಕ ಕೋಣೆಗಳಲ್ಲಿ ಕುಳ್ಳಿರಿಸಿ ಮೊದಲನೆಯ ಪ್ರಯೋಗವನ್ನು ನಡೆಸುತ್ತಾರೆ.

ತದನಂತರ ಇನ್ನೂ ಹಲವು ಸಿದ್ದಾಂತಗಳು ಬಂದವು. ಕೆಲವರು ಇದನ್ನೂ ಒಂದು ಪ್ರಕಾರದ ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳು( ನಿರ್ವಾತ(vacuum) ಮೂಲಕವೂ ಹಾದು ಹೋಗಬಹುದಾದ ಬೆಳಕು, xray , gamma ರೇ ನಂತಹವು ) ಎಂದರೆ ಗೆರಾಲ್ಡ್ ಫಿನ ಬರ್ಗ್ ಅನ್ನೋನು ಇದು ಇನ್ನೂ ಕಂಡು ಹಿಡಿಯಲಾಗದ "ಸೈಕಾನ್" ಅಥವಾ "ಮೈಂಡಾನ್" ಅನ್ನೋ ಕಣಗಳಿಂದ ಆಗುತ್ತವೆ ಅಂತ ಪ್ರತಿಪಾದಿಸಿದ. ಇತ್ತೀಚಿನ ವಿಜ್ಞಾನಿಗಳಾದ ಚಾರ್ಲ್ಸ್ ಟಾರ್ಟ್ ಅಂತಹ ಕೆಲವರು ಈ "ಟೆಲಿಪತಿ" ಅನ್ನೋದು ಒಂದು ಇದೆ ಅಂತ ಒಪ್ಪಿಕೊಂಡರೂ ಅದು ಭೌತಿಕವಾಗಿಲ್ಲ. ಆದರೆ ಮಾನಸಿಕವಾದ ಸಿದ್ದಾಂತಗಳಿಂದ ಅದನ್ನು ಪ್ರಮಾಣಿಸಬಹುದೇನೋ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ತರಹದ ನಂಬಿಕೆಗಳು ಬೆಳೆಯುತ್ತಾ ಮನೋಸಾರಿಗೆ (ಟೆಲಿ ಟ್ರಾನ್ಸಪೋರ್ಟ್) ಅನ್ನೋ ಕಲ್ಪನೆ ಕೂಡ ಬರ್ತಾ ಇದೆ. ಅಂದ್ರೆ ವಸ್ತುಗಳನ್ನೇ ಅಣು ಅಣುಗಳಾಗಿ ವಿಭಜಿಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಗಳ ಮೂಲಕ ಸಾಗಿಸಿ ಅಲ್ಲಿ ಮತ್ತೆ ಜೋಡಿಸೋದು !. ಕಲ್ಪನೆಗೆ ಬರ್ತಿಲ್ವಾ ?
ಸುಮ್ನೇ ಹಿಂಗೆ ಊಹಿಸಿ. ನೀವು ನಿಮ್ಮ ಸ್ನೇಹಿತನ ಜೊತೆಗೆ ಒಂದು ಫೋನಿನಲ್ಲಿ ಮಾತಾಡ್ತಿರೀರಿ. ಸದ್ಯಕ್ಕೆ ಲ್ಯಾಂಡ ಲೈನೇ ಅಂತಿಟ್ಕೊಳ್ಳಿ. ಆ ಲ್ಯಾಂಡ್ ಲೈನಿನ ಮೂಲಕವೇ ನೀವು ತೂರಿ ಹೋಗಿ, ಆ ಕಡೆಯ ಫೋನಿನಿಂದ ಆಚೆ ಬಂದ್ರೆ ಹೇಗಿರುತ್ತೆ ? ಅದೂ ಕ್ಷಣ ಮಾತ್ರದಲ್ಲಿ .. ಸೂಪರ್ ಅಲ್ವಾ ? :-) ಈ ಬಸ್ಸು, ಆಟೋ, ರೈಲುಗಳಿಗೆ ಕಾಯೋ ಜಂಜಾಟ, ಟ್ರಾಫಿಕ್ ತಲೆನೋವುಗಳೇ ಇಲ್ಲ ! ಲ್ಯಾಂಡ್ ಲೈನ್ ಓಕೆ. ಮೊಬೈಲಾದ್ರೆ .. ? ಆಗ ತರಂಗಾಂತರಗಳಲ್ಲಿ ಒಂದಾಗಿ ಆಕಾಶ ಮಾರ್ಗದಲ್ಲಿ ಹಾದು ಮತ್ತೆ ಆಚೆ ಕಡೆ ಪಂಚಭೂತಗಳಲ್ಲಿ ಒಂದಾದ ದೇಹದಲ್ಲಿ ಬದಲಾಗೋದು.. ಹೇಳೋಕೆ ಕೇಳೋಕೆ ಚೆನ್ನಾಗೇ ಇದೆ. ಆದ್ರೆ ಫುಲ್ಲು ಕಾಗೆ ಅಂದ್ರಾ ? ಇಲ್ಲಪ್ಪ. ಆ ತರಹದ ಪ್ರಯೋಗಗಳು ನಡೀತಾ ಇದೆ. ನಿಜವಾಗ್ಲೂ. ಈಗಾಗ್ಲೇ ನಮ್ಮ ಪುರಾಣಗಳಲ್ಲಿ ಬಂದ ಕ್ಷಣಮಾತ್ರದಲ್ಲಿ ಎಲ್ಲಿಗೆ ಬೇಕಾದ್ರೂ ಸಂಚರಿಸೋ ಪರಶುರಾಮ, ನಾರದರಂತ ಎಷ್ಟೋ ಉದಾಹರಣೆಗಳಿವೆ ಅಂದ್ರಾ ? ಹೂಂ ಸರ್.. ಸ್ಟಾರ್ ಟ್ರೆಕ್ಕುಗಳಂತ ಕತೆಗಳಲ್ಲಿ ಇದು ಆಗ್ಲೇ ಬಂದೋಗಿದೆ ಅಂದ್ರಾ.. ಅದೂ ಹೌದು ಸಾರ್.. ಆದ್ರೆ ವೈಜ್ನಾನಿಕವಾಗಿ, ಪ್ರಾಕ್ಟಿಕಲ್ಲಾಗಿ ಇದನ್ನು ಸಾಧ್ಯವಾಗಿಸೋ ಪ್ರಯತ್ನಗಳು ಇನ್ನೂ ನಡೀತಾ ಇದೆ ಅಂದೆ ಅಷ್ಟೇ,, 


ಮುಗಿಸೋ ಮೊದಲು:
ನನ್ನ ಗೆಳೆಯರೊಬ್ರು ಕೇಳ್ತಾ ಇದ್ರು . ಈ  ಭೂತ ಕೋಲ, ದೇವರು ಅನ್ನದೆಲ್ಲಾ ನೀನು ನಂಬ್ತೀಯ ಅಂತ. ಅಲ್ಲ ಕಣೋ ಈ ರೇಖಿ, ಪ್ರಾಣಿಕ್ ಹೀಲಿಂಗ್, ಸಿದ್ದಿ ಸಮಾಧಿ, ಸುದರ್ಶನ ಕ್ರಿಯೆ ಎಲ್ಲಾ ಸತ್ಯ ಅಂತಾದ್ರೆ ಟೆಲಿಪತಿ, ಭೂತ ಕೋಲ, ದೇವರೂ ಯಾಕಿರ್ಬಾದ್ರು ? ವರ್ಣಿಸಲಾಗದ, ಅನುಭವಕ್ಕೆ ಬರದ ಶಕ್ತಿಯೊಂದು ಇದೆ. ಅದು ಒಳ್ಳೆಯದೇ ಮಾಡುತ್ತೆ ಅನ್ನೋ ನಂಬಿಕೆಯಿಂದ ಅದನ್ನ  ಕರೆಯೋ ಹೆಸರುಗಳು ಬೇರೆ ಇರ್ಬೋದು. ಆದರೆ ನನ್ನೊಬ್ಬನ್ನ ಕಣ್ಣಿಗೆ ಕಂಡಿಲ್ಲ ಅಂದ ಮಾತ್ರಕ್ಕೆ ಅದು ಇಲ್ಲ ಅಂತಲೇ ಯಾಕೆ ಅಂದುಕೊಳ್ಳಬೇಕು ? ನಮಗೆ ತಿಳಿದದ್ದೊಂದೇ ಸತ್ಯ ಆಗಿರಬೇಕು. ನಮ್ಮ ಗ್ರಹಿಕೆಗೆ ಬರದ ಪ್ರಪಂಚದ ಉಳಿದೆಲ್ಲಾ ಸಂಗತಿಗಳು ಶುದ್ದ ಸುಳ್ಳೆನ್ನುವುದು ಎಷ್ಟರ ಮಟ್ಟಿಗೆ ಸರಿ ಅಂತ ಕೇಳಿದೆ.. ಅಲ್ವಾ ? ಇದೇ ಸತ್ಯ ಅಂತಲ್ಲ. ಆಗಿರಬಾರದೇಕೆ ಅನ್ನೋ ಅಭಿಪ್ರಾಯವಷ್ಟೇ.

ಮಾಹಿತಿ ಮೂಲಗಳು:
http://en.wikipedia.org/wiki/Telepathy
http://learn-telekinesis-training.com/learn-telepathy.php
http://powerlisting.wikia.com/wiki/Telepathy
http://powerlisting.wikia.com/wiki/Aether_Manipulation
http://content.time.com/time/health/article/0,8599,1874760,00.html
http://science.howstuffworks.com/science-vs-myth/everyday-myths/teleportation.htm

Saturday, November 19, 2011

ಜಾಬ್ಸ್ ಜಾತ್ರೆಯಲ್ಲಿ ಮರೆತೋದ ರಿಚ್ಚಿ

ಆಪಲ್ ಸ್ಥಾಪಕ ಸ್ಟೀವ್ ಜಾಬ್ಸನ ವಿಚಾರಗಳೆಲ್ಲಾ ಕದ್ದಿದ್ದು. ಅವನ ಸ್ವಂತದ್ದು ಏನೂ ಇಲ್ಲ. ಅವನ ಸಾವಿಗೆ ಅಷ್ಟು ಮನ್ನಣೆ. C, Unix ಗಳನ್ನು ಕಂಡು ಹಿಡಿದ ಡೆನ್ನಿಸ್ ರಿಚ್ಚಿಯ ಸಾವು ಯಾರೂ ಕಂಡೂ ಕೇಳದಂತೆ ಮರೆಯಾಗಿ ಹೋಯಿತಲ್ಲಾ ಎಂಬ ವೇದನೆಯ ಹಲರೂಪಾಂತರಗಳು ಅಂತರ್ಜಾಲದಲ್ಲೆಲ್ಲಾ ಸುತ್ತಾಡುತ್ತಿದ್ದವು ಕೆಲವಾರದ ಹಿಂದೆ. ಇನ್ನೂ ಅಲ್ಲೊಂದು , ಇಲ್ಲೊಂದು ಅಂತಹ ಫೋಟೋಗಳು, ಪೋಸ್ಟುಗಳು ಸುತ್ತಾಡುತ್ತಲೇ ಇವೆ. ಇಬ್ಬರಲ್ಲಿ ಯಾರು ಹೆಚ್ಚೆಂಬ ವಿಮರ್ಶೆಯನ್ನು ಮಾಡೋದು ಆ ದೈತ್ಯ ಪ್ರತಿಭೆಗಳೆದುರು ಪಾಮರನಾದ ನನ್ನಿಂದೆಂತೂ ಅಸಾಧ್ಯ. ಆದರೆ ಇಂದು ಮತ್ತೊಂದು ಅಂತಹದೇ ಪೋಸ್ಟನ್ನೋದಿದಾಗ ನನಗನಿಸಿದ ಭಾವಗಳನ್ನು ಹಂಚಿಕೊಳ್ಳುತ್ತಿದ್ದೇನೆ.

 
ಪಿಯುಸಿಯಲ್ಲಿ ಕಂಪ್ಯೂಟರ್ ಓದಿದವರಿಂದ ಹಿಡಿದು,BCA, BE, BCom (Computers) , Diploma ಹೀಗೆ ಹಲವು ವಿಷಯಗಳನ್ನೋದಿದ ಜನರೆಲ್ಲಾ C ಎಂಬ Programming ಭಾಷೆಯನ್ನು ಓದೇ ಇರುತ್ತಾರೆ. ಬಲ್ಬು ಕಂಡುಹಿಡಿದವರು ಯಾರು ಎಂದರೆ ಎಂಥಾ ಟ್ಯೂಬ್ಲೈಟಾದರೂ ಥಾಮಸ್ ಅಲ್ವಾ ಎಡಿಸನ್ ಅಂತ ಹೇಳ್ತಾರಲ್ವಾ ಹಾಗೇನೆ ಇವರಿಗೆಲ್ಲಾ C ಯನ್ನು ಕಂಡುಹಿಡಿದವರು ಯಾರು ಅಂದರೆ ತಟ್ಟನೆ ಬರುವ ಉತ್ತರ ಡೆನ್ನಿಸ್ ರಿಚ್ಚಿ, ಕೆರಿಂಗ್ ಹ್ಯಾಮ. ನಾನೂ ಓದಿ ಇಷ್ಟಪಟ್ಟ Programming ನ ಮೊದಲ ಪುಸ್ತಕ The C Programming Language . ಆಗ ರಿಚ್ಚಿಯ ಬಗ್ಗೆ ಅಷ್ಟು ತಿಳಿದಿರಲಿಲ್ಲ. ನಂತರ ಮೂರನೆಯ ಸೆಮಿಸ್ಟರಿನಲ್ಲಿ Unix ಅನ್ನೋ ವಿಷಯ ಇತ್ತು. ಅದರ ಬಗ್ಗೆ ಗೊತ್ತಿಲ್ದೇ ಇರೋರಿಗೆ ಹೇಳೋದಾದರೆ ನೀವು ಬಳಸ್ತಾ ಇರೋ Windows XP, Windows 7, Vista ಗಳಂತೆ ದುಡ್ಡು ಕೊಟ್ಟು Genuine ಅವತರಣಿಕೆ ಪಡೆಯಬೇಕೆಂಬ ರೇಜಿಗೆಯಿಲ್ಲದ್ದದು. ಯಾರು ಬೇಕಾದರೂ ಉಚಿತವಾಗಿ ಬಳಸಬಹುದಾದ ದತ್ತಾಂಶ Open Source ಗಳ ಪರಿಕಲ್ಪನೆಯನ್ನು ಹುಟ್ಟಿಹಾಕಿದ್ದೇ Unix ನ ಮತ್ತೊಂದು ರೂಪ Linux. ಇರಲಿ, ಆ Linux ಅನ್ನು ರೂಪಿಸುವಲ್ಲಿಯೂ ಕೆನ್ ಥಾಮ್ಸನ್ ಅನುವವರೊಂದಿಗೆ ಕೈ ಜೋಡಿಸಿದ್ದು ಇದೇ ರಿಚ್ಚಿ.
 
ಸರಿ, ಪ್ರೋರ್ಗಾಮಿಂಗ್ ಭಾಷೆಯನ್ನು , ಇನ್ನೊಂದು ಕಂಪ್ಯೂಟರ್ ಭಾಷೆಯನ್ನು ಕಂಡುಹಿಡಿದಾಕ್ಷಣ ಅದು ಮಹಾನ್ ಸಾಧನೆಯೇ ಎಂಬ ಸಂದೇಹ ಈಗಾಗಲೇ ಬಂದಿದ್ದರೆ ಅದನ್ನು ಪರಿಹರಿಸಲೋಸುಗ ಈ ಕೆಲವು ಸಾಲುಗಳು..ರಿಚ್ಚಿ ಸತ್ತ ದಿನ ಅವರ ದೀರ್ಘ ಕಾಲೀನ ಸಹೋದ್ಯೋಗಿ ರೋಬ್ ಪೈಕ್ ಸೂಚಿಸಿದ ಸಂತಾಪ ನುಡಿಗಳಿಂದ.

" C ಹಳೆಯದಾಗಿದೆ. ಆದರೂ ಇನ್ನೂ ಅದರ ಉಪಯೋಗ ಕಡಿಮೆಯಾಗಿಲ್ಲ. ಯುನಿಕ್ಸ, ಲಿನಕ್ಸ, ಮ್ಯಾಕ್(ಸ್ಟೀವ್ ಜಾಬ್ಸನದು),ವಿಂಡೋಸ್ನ(XP) ಒಳಪದರ(Kernel) ಲನ್ನು ಬರೆದಿರೋದು C ನಲ್ಲೇ:-). ಹೆಚ್ಚಿನ ಎಲ್ಲಾ ಬ್ರೌಸರ್ಗಳನ್ನು, ಪರಿಚಾರಕ(web server) ಬರೆದಿರೋದು C,C++ ನಲ್ಲೇ. ಅಂತರ್ಜಾಲದ ಹೆಚ್ಚೆಲ್ಲಾ ವಾತಾವರಣವಿರುವುದು C, ಅಥವಾ ಅದರಿಂದ ಸ್ಪೂರ್ತಿ ಪಡೆದ Java, Ruby, Python ನಂತಹ ಭಾಷೆಗಳಲ್ಲಿಯೇ. ದೂರವಾಣಿಯನ್ನು ನಿರ್ವಹಿಸುವಂತಹ ಜಾಲವನ್ನೂ C ಯಲ್ಲೇ ಬರೆಯಲಾಗಿದೆ.

ಇಷ್ಟೇ ಅಲ್ಲ. ಮುಂಚೆ ಎಲ್ಲ ಕಂಪ್ಯೂಟರ್ ಕಾರ್ಯನಿರ್ವಹಿಸಲು ಬೇಕಾದ ಮಾಹಿತಿಯನ್ನು ಕೆಳಮಟ್ಟದ ಕಂಪ್ಯೂಟರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆಗಳಲ್ಲಿ ಬರೆಯುತ್ತಿದ್ದರು(assembly). ಅದನ್ನು ಮೇಲ್ಮಟ್ಟದ, ಮನುಷ್ಯರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ಬರೆದ ಶ್ರೇಯಸ್ಸು ಸಲ್ಲಬೇಕಾದ್ದು Unix ಮತ್ತು ರಿಚ್ಚಿಗೆ. ಅವರು ಸ್ಟೀವ್ ಜಾನ್ಸನ್ ಜೊತೆ ಸೇರಿ ಒಂದೆಡೆ ಬರೆದ ಪ್ರೋಗ್ರಾಮ್ ಯಾವುದೇ ಕಂಪ್ಯೂಟರಿನಲ್ಲಿ , ಏನೊಂದೂ ಬದಲಾವಣೆಯಿಲ್ಲದಂತೆ ವ್ಯವಹರಿಸುವಂತೆ ರೂಪಿಸಲು ಶ್ರಮಿಸಿದರು. ಮೇಲ್ಗಡೆ ಇರುವ ಆಪರೇಟಿಂಗ್ ವ್ಯವಸ್ಥೆಗೂ ಕೆಳಗಣ ಹಾರ್ಡವೇರ ಮೇಲೆಯೇ ನೇರವಾಗಿ ಅವಲಂಭಿತವಾಗೋ ವ್ಯವಸ್ಥೆ ತಪ್ಪಿಸಿದ ಶ್ರೇಯ ಅವರಿಗೇ ಸಲ್ಲಬೇಕು."


(ಇಂದು ಎಷ್ಟೊಂದು ಬಗೆಬಗೆಯ ಕಂಪ್ಯೂಟರ್ ಹಾರ್ಡವೇರ್ಗಳಿವೆ. ಅದು ಪ್ರತಿಯೊಂದಕ್ಕೂ ಪ್ರತ್ಯೇಕ ತಂತ್ರಾಂಶ ಬರೆಯೋದಂದ್ರೆ ಬರೆಯೋನಿಗೂ ತಲೆನೋವು. ಬಳಸೋನಂತೂ ಹುಡುಕಿ ಹಾಕೋದ್ರೊಳಗೆ ಸುಸ್ತೋ ಸುಸ್ತು.)

"ಸ್ಟೀವ್ ಜಾಬ್ಸನ ಸಂತಾಪಸಂದೇಶದಲ್ಲಿ ಅಂತರ್ಜಾಲ ಕಂಡುಹಿಡಿದ ಬರ್ನರ್ಸ್ ಲೀ, ಜಾಬ್ಸನಿಂದ ಕಂಡುಹಿಡಿದ ನೆಕ್ಟಬಾಕ್ಸನ್ನ ಉಪಯೋಗಿಸಿದ ಅಂತ ಓದಿದೆ. ಆದರೆ ಅದರಲ್ಲಿದ್ದ ಆಪರೇಟಿಂಗ್ ಸಿಸ್ಟಂ ಮತ್ತು ಅದನ್ನು ಬರೆದ ಭಾಷೆ ಯಾವುದಾಗಿತ್ತು ಎಂದು ಮರೆಯಬಾರದು"
 
ಮುಗಿಸುವ ಮುನ್ನ
ಮುಕ್ತ ತಂತ್ರಾಂಶ ಎಂದರೆ ಅದನ್ನು ಯಾರು ಬೇಕಾದರೂ ಉಪಯೋಗಿಸಬಹುದೆಂದೇ ಅರ್ಥ. ಅಂತದ್ರಲ್ಲಿ ಅದನ್ನು ಬೆಳೆಸಿಕೊಂಡು ಬೆಳೆದ ಅಂದ ಮಾತ್ರಕ್ಕೆ ಜಾಬ್ಸ್ ಒಬ್ಬ ಕಳ್ಳನಾಗುತ್ತಾನೆಯೇ? ಅದನ್ನು ಬಳಸಿದವ ಅವನೊಬ್ಬನೇ ಅಲ್ಲವಲ್ಲಾ? ನೂರಾರು, ಸಾವಿರಾರು ಜನರ ಮಧ್ಯೆ ಅವನೂ ಒಬ್ಬ. ಆದರೂ ಜಾಬ್ಸನೇ ಯಾಕೆ ಬೇಕು? ಅವನೇನೂ ಪುಕ್ಕಟೆ ನೀಡಿ ಅಪಪ್ರಚಾರ ಮಾಡಲಿಲ್ಲವಲ್ಲ, ಆಪಲ್ಲನ್ನು ಬಳಸಲು ಇಷ್ಟವಿದ್ದವರೇ ಅದರ ಬೆಲೆ ಹೆಚ್ಚಾದರೂ ತೆಗೆದುಕೊಂಡರು. XWindow ಅನ್ನೋ ಪರಿಕಲ್ಪನೆಯನ್ನು ಮೊದಲಿಗೆ ತಂದಿದ್ದು ಲಿನಕ್ಸು. GUI ಇದ್ದ ಮೊದಲ ಬ್ರೌಸರು Mosaic ಬ್ರೌಸರು ಕೂಡ ಲಿನಕ್ಸಿನದೇ. ಇದನ್ನೆಲ್ಲಾ ಬಳಸಿಕೊಂಡ ಮೈಕ್ರೋಸಾಪ್ಟನ್ನೂ ಕಳ್ಳರೆನ್ನುತ್ತೀರಾ ಹಾಗಾದರೆ?

ಮೊದಲೇ ಹೇಳಿದಂತೆ ಜಾಬ್ಸ ಮತ್ತು ರಿಚ್ಚಿ ಇಬ್ಬರೂ ಅಗಾಧ ಪ್ರತಿಭೆಗಳೆ. ಆದರೆ ರಿಚ್ಚಿ ಹೆಚ್ಚು ಸಮಯ ಕಳೆದಿದ್ದು ಪ್ರಯೋಗಾಲಯದಲ್ಲೇ. ಹೊಸತೊಸತು ಹುಡುಕುವ ಬಗ್ಗೆ , ತಮ್ಮ ಅನ್ವೇಷಣೆಗಳ ಪ್ರಯೋಜನವನ್ನು ಬೇರೆ ಕ್ಷೇತ್ರಗಳಿಗೆ ದಾಟಿಸುವ ಬಗ್ಗೆ ಅವರು ಶ್ರಮಪಟ್ಟಿರಬಹುದೇ, ಆ ವಿಜಯವನ್ನೇ ಆನಂದಿಸಿರಬಹುದೇ ಹೊರತು ಪ್ರಚಾರದಲ್ಲಲ್ಲ. ಆದರೂ ಟ್ಯಾರಿಂಗ್ ಪ್ರಶಸ್ತಿ, ಹಾಮಿಂಗ್ ಪದಕ, ಗಣಕೇತಿಹಾಸ ಸಂಘದ ಗೌರವ ಸದಸ್ಯ,ಜಪಾನ್ ಪ್ರಶಸ್ತಿ, ದೇಶದ ತಂತ್ರಜ್ಞಾನ ಪ್ರಶಸ್ತಿಗಳಂತವು ಅವರನ್ನು ಹುಡುಕಿಕೊಂಡು ಬಂದವು. ಆದರೆ ಜಾಬ್ಸ ಹಾಗಲ್ಲ. ಪ್ರತೀ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ತಂದಾಗಲೂ ಅದಕ್ಕೆ ಪ್ರಚಾರ ನೀಡಲೇ ಬೇಕಲ್ಲವೇ? ಕಂಪೆನಿ ಮೊದಲು , ನಂತರ ತಾನು ಎಂಬತಹ ತತ್ವವನ್ನಿಟ್ಟುಕೊಂಡಿದ್ದರೂ ಆಪಲ್ನ ಹಲವು ಉತ್ಪನ್ನಗಳೊಂದಿಗೆ ಆತನೂ ಪ್ರಖ್ಯಾತನಾದ.

ಮುಗಿಸುವ ಮೊದಲ ಕೊನೆಯ ಪ್ರಶ್ನೆ. ಒಬ್ಬ ವ್ಯಕ್ತಿಯನ್ನು ಹೊಗಳುವಾಗ ಮತ್ತೊಬ್ಬನನ್ನು ತೃಣೀಕರಿಸಲೇ ಬೇಕೆ? ಸರ್ವಕಾಲಿಕ ಸತ್ಯವೆಂಬುದಿರಲು ಸಾಧ್ಯವಿಲ್ಲ. ನನಗೆ ಸತ್ಯವೆಂದನಿಸಿದ್ದು ನಿಮಗೆ ಸುಳ್ಳೆನಿಸಬಹುದು. ಆದರೆ ಎರಡರ ಸಾಧ್ಯತೆಯನ್ನು ಒಟ್ಟಿಗೆ ಅಂಗೀಕರಿಸಬಹುದಲ್ಲವೇ?

ಮಾಹಿತಿ, ಚಿತ್ರ ಮೂಲ: ವಿಕಿಪೀಡಿಯ, ಜೈವೀರ್ ರಾವ್, https://plus.google.com/u/0/101960720994009339267/posts/33mmANQZDtY#101960720994009339267/posts/33mmANQZDtY 
(ವಿನಂತಿ: ನಾನಿಲ್ಲಿ ಬಳಸಿದ ಆಂಗ್ಲ ಪದಗಳಿಗೆ ಪರ್ಯಾಯವಾದ ಕನ್ನಡ ಪದಗಳಿದ್ದರೆ ದಯವಿಟ್ಟು ತಿಳಿಸಿ. ಮುಂದೆ ಬರೆಯುವಾಗ ಅದನ್ನೇ ಬಳಸಲು ಪ್ರಯತ್ನಿಸುತ್ತೇನೆ)

Tuesday, November 15, 2011

ಎಚ್ಚರ ಬ್ಲಾಗಿಗರೆ, ಕಳ್ಳರಿಹರು

ಒಳ್ಳೆ ಸಾಹಿತ್ಯವನು ಸೃಷ್ಟಿಸಿಯೂ ಮುಂದೆ
ಕಳ್ಳನೆಂದೊಂದು ದಿನ ಬಿರುದು ಬೇಕೆ?
ನೀ ಮೊದಲು ಬರೆದದ್ದು ಎಂಬುದಕೆ ಏನುಂಟು
ಮಿಥ್ಯಾರೋಪಗಳ ಒಪ್ಪಬೇಕೆ?
ಪುಗಸಟ್ಟೆ ಮಾತುಗಳ ನುಂಗಬೇಕೆ?

 ನೀವು ಕವಿಯೇ?ಸಾಹಿತಿಯೇ? ಬರೆದದ್ದ ನಿಮ್ಮ ಬ್ಲಾಗಲ್ಲಿ ಹಾಕುತ್ತಿದ್ದೀರಾ? ಜನ ಮೆಚ್ಚಲಿ , ಇಲ್ಲದಿರಲಿ ನಿಮಗೊಂದು ನಮನ ಮತ್ತು ಅಭಿನಂದನೆ. ನೀವು ಬರೆದಿದ್ದದು ಎಂಬುದಕ್ಕೆ ಅಲ್ಲಿರುವ ದಿನಾಂಕವೇ ಸಾಕ್ಷಿ. ಬೇರೆ ಯಾರಾದರೂ ಅದನ್ನು ಕದ್ದು ತನ್ನ ಹೆಸರಲ್ಲಿ ಪ್ರಕಟಿಸಿದರೆ ನೀವು ನಿಮ್ಮ ಬ್ಲಾಗಿನ ಪ್ರಕಟಗೊಂಡ ದಿನಾಂಕವನ್ನು ತೊರಿಸಿ ಅದನ್ನು ನೀವೇ ಬರೆದದ್ದೆಂದು ನಿರೂಪಿಸಬಹುದು.ಹಾಗಾಗಿ ಬ್ಲಾಗೆಂಬುದು ನಿಮ್ಮ ಕವನಕ್ಕೆ ಶ್ರೀ ರಕ್ಷೆ..ಹಾಂ.. ತಡೀರಿ, ಇಷ್ಟಿದ್ದೂ ನಿಮ್ಮ ಕವನವನ್ನು, ಲೇಖನವನ್ನು ಯಾರಾದರೂ ಕದೀಬಹುದು. ಅದನ್ನು ನಿಮಗಿಂತ ಮುಂಚಿನ ದಿನಾಂಕದಲ್ಲಿ ತನ್ನ ಬ್ಲಾಗಲ್ಲಿ ಹಾಕಿಕೊಳ್ಳಬಹುದು. ಅವಾಗೇನ್ಮಾಡ್ತೀರ? ಹೆಚ್ಚು ಕೇಳ ಹೋದರೆ ನೀವೇ ಕಳ್ಳರೆನ್ನುತ್ತಾರೆ.. ಅರೇ, ಇದು ಹೇಗೆ ಸಾಧ್ಯ? ಇದಕ್ಕೆ ಪರಿಹಾರವೇ ಇಲ್ಲವೇ ಅನಿಸುತ್ತಿದೆಯಾ? ಅದನ್ನು ತಿಳಿಸುವ ಒಂದು ಪುಟ್ಟ ಪ್ರಯತ್ನವೇ ಈ ಕಿರು ಲೇಖನ.

ಬ್ಲಾಗಿನ ಪೋಸ್ಟಿಗೆ ಇಂದಿನದು ಬಿಟ್ಟು ಹಿಂದಿನ ದಿನಾಂಕ ಹಾಕಬಹುದೇ?
ಹೌದು. ಹಾಕಬಹುದು. post options ಗೆ ಹೋಗಿ ಅಲ್ಲಿರುವ ದಿನಾಂಕದಲ್ಲಿ ಹಳೆಯ ದಿನಾಂಕವನ್ನು ಹಾಕಬಹುದು. (ಚಿತ್ರ ನೋಡಿ)


ಹಾಗೇನಾದರೂ ಹಾಕಿದರೆ ಅದು ಪ್ರಕಟಗೊಂಡ ದಿನಾಂಕ ತೋರಿಸೋ ಜಾಗದಲ್ಲಿ ಆ ದಿನಾಂಕವನ್ನೇ ತೋರಿಸುತ್ತದೆ. ಉದಾಹರಣೆಗೆ ಚಿತ್ರ ನೋಡಿ.. :-) :-)

ಇದಕ್ಕೇನು ಪರಿಹಾರ
ತಾಂತ್ರಿಕವಾಗಿ ಹಲವಾರು ಪರಿಹಾರ ಇರಬಹುದು. ಆದರೆ ಸುಲಭವಾದದ್ದೊಂದು ಇಲ್ಲಿದೆ.
) ನೀವು ಬ್ಲಾಗಿಗೆ ಹಾಕುವ ಮೊದಲು ಅದನ್ನ ನಿಮ್ಮ ಮೆಂಚೆಯಿಂದ ನಿಮ್ಮದೇ ಇನ್ನೊಂದು ಮಿಂಚೆಗೆ ಕಳುಹಿಸಿ.ಆ ದಿನಾಂಕವನ್ನು ಬದಲಿಸಲು ಸಾಧ್ಯವಿಲ್ಲ (ಎಂಬುದು ನನ್ನ ಇಲ್ಲಿಯವರೆಗಿನ ತಿಳುವಳಿಕೆ). ಅಲ್ಲಿಗೆ ಅದನ್ನು ಯಾವತ್ತು ಕಳುಹಿಸಿದ್ದಾರೆ ಎಂಬ ಪ್ರಮಾಣ ಸಿಕ್ಕಂತಾಯಿತಲ್ಲವೇ. ಆದರೆ ನಿಮ್ಮನ್ನು ಕಳ್ಳ/ಕಳ್ಳಿ ಎಂದವರ ಹತ್ತಿರ ಈ ತರದ ಮಿಂಚೆ ಇರಲಿಕ್ಕೆ ಸಾಧ್ಯವೇ ಇಲ್ಲ.. ಹಾಗೆ ಮಾಡಬೇಕು ಅಂತ ಗೊತ್ತಿರಲಿಲ್ಲ, ಹೊಳೆಯಲಿಲ್ಲ, ಮರೆತೋಯ್ತು ಇತ್ಯಾದಿ ನೂರಾರು ಕಾರಣ ಆಮೇಲೆ ಹೇಳಿದರೂ, ಗೋಗರೆದರೂ ಯಾರೂ ನಂಬೋಲ್ಲ ಆಮೆಲೆ. ಹಾಗಾಗಿ ಕಷ್ಟಪಟ್ಟು ಬರೆದ ನೀವು ಇಷ್ಟಾದರೂ ಎಚ್ಚರವಹಿಸಿ

ನಿಮ್ಮದು ಎರಡು ಮಿಂಚೆ ಇಲ್ಲದಿದ್ದರೆ
ನಿಮ್ಮ ಮಿಂಚೆಯಿಂದ ನಿಮ್ಮ ಮಿಂಚೆ ವಿಳಾಸಕ್ಕೇ ಕಳುಹಿಸಿಕೊಳ್ಳಿ.. Draft ಅಲ್ಲಿ ಇಡಬಹುದು. ಆದರೆ ಎಲ್ಲಿಗಾದರೂ ಕಳುಹಿಸಿದಾಕ್ಷಣ Draft ಪಟ್ಟಿಯಿಂದ ತಂತಾನೇ ಅಳಿಸಿಹೋಗುತ್ತದೆ ಸುಮಾರು ಮಿಂಚೆಗಳಲ್ಲಿ. ಕಳುಹಿಸಿದ ದಿನಾಕ ಮೂಡುತ್ತದೆ ಅಷ್ಟೇ ಅದರ ಮೇಲೆ.. ಹಾಗಾಗಿ ಆ ವಿಚಾರದಲ್ಲಿ ಕಾಳಜಿ ಅಗತ್ಯ

ಇದಕ್ಕೆ ಬೇರೆ ಪರಿಹಾರಗಳು ನಿಮಗೂ ತಿಳಿದಿರಬಹುದು. ತಿಳಿದಿದ್ದರೆ ಹಂಚಿಕೊಳ್ಳಿ. ಅಥವಾ ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ಅದನ್ನೂ ಪ್ರತಿಕ್ರಿಯಿಸಿ.ಸರಿಪಡಿಸಿಕೊಳ್ಳುವೆ.