ಕಳ್ಳನೆಂದೊಂದು ದಿನ ಬಿರುದು ಬೇಕೆ?
ನೀ ಮೊದಲು ಬರೆದದ್ದು ಎಂಬುದಕೆ ಏನುಂಟು
ಮಿಥ್ಯಾರೋಪಗಳ ಒಪ್ಪಬೇಕೆ?
ಪುಗಸಟ್ಟೆ ಮಾತುಗಳ ನುಂಗಬೇಕೆ?
ನೀವು ಕವಿಯೇ?ಸಾಹಿತಿಯೇ? ಬರೆದದ್ದ ನಿಮ್ಮ ಬ್ಲಾಗಲ್ಲಿ ಹಾಕುತ್ತಿದ್ದೀರಾ? ಜನ ಮೆಚ್ಚಲಿ , ಇಲ್ಲದಿರಲಿ ನಿಮಗೊಂದು ನಮನ ಮತ್ತು ಅಭಿನಂದನೆ. ನೀವು ಬರೆದಿದ್ದದು ಎಂಬುದಕ್ಕೆ ಅಲ್ಲಿರುವ ದಿನಾಂಕವೇ ಸಾಕ್ಷಿ. ಬೇರೆ ಯಾರಾದರೂ ಅದನ್ನು ಕದ್ದು ತನ್ನ ಹೆಸರಲ್ಲಿ ಪ್ರಕಟಿಸಿದರೆ ನೀವು ನಿಮ್ಮ ಬ್ಲಾಗಿನ ಪ್ರಕಟಗೊಂಡ ದಿನಾಂಕವನ್ನು ತೊರಿಸಿ ಅದನ್ನು ನೀವೇ ಬರೆದದ್ದೆಂದು ನಿರೂಪಿಸಬಹುದು.ಹಾಗಾಗಿ ಬ್ಲಾಗೆಂಬುದು ನಿಮ್ಮ ಕವನಕ್ಕೆ ಶ್ರೀ ರಕ್ಷೆ..ಹಾಂ.. ತಡೀರಿ, ಇಷ್ಟಿದ್ದೂ ನಿಮ್ಮ ಕವನವನ್ನು, ಲೇಖನವನ್ನು ಯಾರಾದರೂ ಕದೀಬಹುದು. ಅದನ್ನು ನಿಮಗಿಂತ ಮುಂಚಿನ ದಿನಾಂಕದಲ್ಲಿ ತನ್ನ ಬ್ಲಾಗಲ್ಲಿ ಹಾಕಿಕೊಳ್ಳಬಹುದು. ಅವಾಗೇನ್ಮಾಡ್ತೀರ? ಹೆಚ್ಚು ಕೇಳ ಹೋದರೆ ನೀವೇ ಕಳ್ಳರೆನ್ನುತ್ತಾರೆ.. ಅರೇ, ಇದು ಹೇಗೆ ಸಾಧ್ಯ? ಇದಕ್ಕೆ ಪರಿಹಾರವೇ ಇಲ್ಲವೇ ಅನಿಸುತ್ತಿದೆಯಾ? ಅದನ್ನು ತಿಳಿಸುವ ಒಂದು ಪುಟ್ಟ ಪ್ರಯತ್ನವೇ ಈ ಕಿರು ಲೇಖನ.
ಹೌದು. ಹಾಕಬಹುದು. post options ಗೆ ಹೋಗಿ ಅಲ್ಲಿರುವ ದಿನಾಂಕದಲ್ಲಿ ಹಳೆಯ ದಿನಾಂಕವನ್ನು ಹಾಕಬಹುದು. (ಚಿತ್ರ ನೋಡಿ)
ಹಾಗೇನಾದರೂ ಹಾಕಿದರೆ ಅದು ಪ್ರಕಟಗೊಂಡ ದಿನಾಂಕ ತೋರಿಸೋ ಜಾಗದಲ್ಲಿ ಆ ದಿನಾಂಕವನ್ನೇ ತೋರಿಸುತ್ತದೆ. ಉದಾಹರಣೆಗೆ ಚಿತ್ರ ನೋಡಿ.. :-) :-)
ಇದಕ್ಕೇನು ಪರಿಹಾರ
ತಾಂತ್ರಿಕವಾಗಿ ಹಲವಾರು ಪರಿಹಾರ ಇರಬಹುದು. ಆದರೆ ಸುಲಭವಾದದ್ದೊಂದು ಇಲ್ಲಿದೆ.
೧) ನೀವು ಬ್ಲಾಗಿಗೆ ಹಾಕುವ ಮೊದಲು ಅದನ್ನ ನಿಮ್ಮ ಮೆಂಚೆಯಿಂದ ನಿಮ್ಮದೇ ಇನ್ನೊಂದು ಮಿಂಚೆಗೆ ಕಳುಹಿಸಿ.ಆ ದಿನಾಂಕವನ್ನು ಬದಲಿಸಲು ಸಾಧ್ಯವಿಲ್ಲ (ಎಂಬುದು ನನ್ನ ಇಲ್ಲಿಯವರೆಗಿನ ತಿಳುವಳಿಕೆ). ಅಲ್ಲಿಗೆ ಅದನ್ನು ಯಾವತ್ತು ಕಳುಹಿಸಿದ್ದಾರೆ ಎಂಬ ಪ್ರಮಾಣ ಸಿಕ್ಕಂತಾಯಿತಲ್ಲವೇ. ಆದರೆ ನಿಮ್ಮನ್ನು ಕಳ್ಳ/ಕಳ್ಳಿ ಎಂದವರ ಹತ್ತಿರ ಈ ತರದ ಮಿಂಚೆ ಇರಲಿಕ್ಕೆ ಸಾಧ್ಯವೇ ಇಲ್ಲ.. ಹಾಗೆ ಮಾಡಬೇಕು ಅಂತ ಗೊತ್ತಿರಲಿಲ್ಲ, ಹೊಳೆಯಲಿಲ್ಲ, ಮರೆತೋಯ್ತು ಇತ್ಯಾದಿ ನೂರಾರು ಕಾರಣ ಆಮೇಲೆ ಹೇಳಿದರೂ, ಗೋಗರೆದರೂ ಯಾರೂ ನಂಬೋಲ್ಲ ಆಮೆಲೆ. ಹಾಗಾಗಿ ಕಷ್ಟಪಟ್ಟು ಬರೆದ ನೀವು ಇಷ್ಟಾದರೂ ಎಚ್ಚರವಹಿಸಿ
ನಿಮ್ಮದು ಎರಡು ಮಿಂಚೆ ಇಲ್ಲದಿದ್ದರೆ
ನಿಮ್ಮ ಮಿಂಚೆಯಿಂದ ನಿಮ್ಮ ಮಿಂಚೆ ವಿಳಾಸಕ್ಕೇ ಕಳುಹಿಸಿಕೊಳ್ಳಿ.. Draft ಅಲ್ಲಿ ಇಡಬಹುದು. ಆದರೆ ಎಲ್ಲಿಗಾದರೂ ಕಳುಹಿಸಿದಾಕ್ಷಣ Draft ಪಟ್ಟಿಯಿಂದ ತಂತಾನೇ ಅಳಿಸಿಹೋಗುತ್ತದೆ ಸುಮಾರು ಮಿಂಚೆಗಳಲ್ಲಿ. ಕಳುಹಿಸಿದ ದಿನಾಕ ಮೂಡುತ್ತದೆ ಅಷ್ಟೇ ಅದರ ಮೇಲೆ.. ಹಾಗಾಗಿ ಆ ವಿಚಾರದಲ್ಲಿ ಕಾಳಜಿ ಅಗತ್ಯ
ಇದಕ್ಕೆ ಬೇರೆ ಪರಿಹಾರಗಳು ನಿಮಗೂ ತಿಳಿದಿರಬಹುದು. ತಿಳಿದಿದ್ದರೆ ಹಂಚಿಕೊಳ್ಳಿ. ಅಥವಾ ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ಅದನ್ನೂ ಪ್ರತಿಕ್ರಿಯಿಸಿ.ಸರಿಪಡಿಸಿಕೊಳ್ಳುವೆ.
ನನ್ನ ಬ್ಲಾಗ್ ನಲ್ಲಿ ಕವನದ ಕೆಳಗೆ ಮೊದಲ ಕಾಮೆಂಟ್ ನಲ್ಲಿ
ReplyDeleteಆ ಕವನದ ಸಾಲುಗಳನ್ನು ಪುನಃ ಹಾಕಿದ್ದೇನೆ
ಕಾರಣ ನಾಳೆ ಆ ಜಾಗದಲ್ಲಿ ಪೋಸ್ಟ್ ಬದಲಾಯಿಸಬಹುದು
ಆದರೆ ಯಾವುದೇ ಕಾರಣಕ್ಕೂ ಆ ಕಾಮೆಂಟ್ ದಿನಾಂಕ ಬದಲಾಯಿಸಲು ಆಗದು
ಅದು ಒಳ್ಳೆಯ ದಾಖಲೆ ..
ನನ್ನ ನೋಡಿ
ಎಲ್ಲಾ ಕವಿಗಳೂ ಹಾಗೆ ಮಾಡಿ
ನಿಮ್ಮ ಬ್ಲಾಗ್ ನಲ್ಲಿ ನಿಮ್ಮ ಕವನ ಹಾಕಿದ ಮೇಲೆ
ಅದರ ಕೆಳಗೆ ಆ ಕವನದ ಒಂದು ಎರಡು ಸಾಲನ್ನು
ಮೊದಲ ಕಾಮೆಂಟ್ ನಲ್ಲಿ ಹಾಕಿ
ನಾಳೆ ಅದು ಒಳ್ಳೆಯ ದಾಖಲೆ ......
ಓ.. ಇದು ತುಂಬಾ ಒಳ್ಳೆಯ ದಾಖಲೆ :-) ಒಂದು ಒಳ್ಳೆಯ ಅಭಿಪ್ರಾಯಕ್ಕೆ ಧನ್ಯವಾದಗಳು ಪ್ರಕಾಶ್ ಶ್ರೀನಿವಾಸರೇ :-) ಬ್ಲಾಗಿಗೆ ಬಂದಿದ್ದಕ್ಕೂ ವಂದನೆಗಳು :-)
ReplyDeleteಪ್ರಶಸ್ತಿ,ಕದ್ದವ ತನ್ನ ಬ್ಲಾಗಿನಲ್ಲಿ ನಿನ್ನ ಲೇಖನಕ್ಕಿಂತಲೂ ಹಿಂದಿನ ದಿನಾಂಕವನ್ನು ಹೊಂದಿಸಿಟ್ಟರೆ?
ReplyDeleteಹೊಂದಿಸ್ಲಕ್ಕು. ಆದರೆ ಅವನತ್ರ ಅದನ್ನ ತಾನೇ ಬರದಿದ್ದು ಹೇಳ ಅಂತ ಮಿಂಚೆ ದಾಖಲೆ ಅಥವಾ ಪ್ರಕಾಶರು ಹೇಳಿದಂತ ದಿನಾಂಕದ ದಾಖಲೆ ಇರದಿಲ್ಲೆ.. ಹಂಗಾಗಿ ಅವ ಸುಳ್ಳು ಹೇಳ್ತಿದ್ದ ಅಂತ ನಾ ಹೇಳಲಕ್ಕು
ReplyDelete