ತೆರೆ ನನ್ನ ಎಂದೊಮ್ಮೆ ಕೂಗು ಹಾಕಿ
ಹೇಗೆ ಮರೆಯುವೆಯೋ ನೀ ಆ ದಿನಗಳ
ಎಂದು ಬೈದವು ಶಿಷ್ಟ ಸೋಗು ಹಾಕಿ|೧|

ಹದಿನಾಲ್ಕು ಬಂತಂದ್ರೆ ಹಲವಾರು ಸ್ಪರ್ಧೆಗಳು
ಚಿತ್ರಕಲೆ, ಹಾಡುಗಳು, ಛದ್ಮವೇಷ
ಸಮವಸ್ತ್ರದ ಬದಲು ಹೊಸವಸ್ತ್ರ, ಸಂತಸ
ಸಿಹಿಯನ್ನು ಕೊಡುತಿತ್ತು ಪುರಸಭೆ ಆ ದಿವಸ|೨|
ಪಾಠ ಹೇಳೋ ಗುರುವು ದೇವರಂತೆ
ಎಂದು ನಗದವರೂ ಅಂದು ನಗೆ ಬೀರುತ್ತ
ಕೋಲಿಡೀವ ಕೈಗಳೂ ಖಾಲಿ ಖಾಲಿ
ಬಣ್ಣ ಪೇಪರ ತಂದು, ಕೈಯಿಂದ ದುಡ್ಡಾಕಿ
ನಮಗೆ ನೀಡುವಷ್ಟಂದು ಜಾಲಿ ಜಾಲಿ|೩|
ಮರೆಯಲೇಗೋ ಅಂದು ನಂದೊಂದು ಭಾಷಣ
ಚಾಚಾ ನೆಹರೂ ಬಗ್ಗೆ ಹೇಳಿದ ಆ ಕ್ಷಣ
ಅವಕಾಶವಿತ್ತಂದು ಮಾತಾಡಲೆಲ್ಲರಿಗೆ
ಮೊದಲ ಮಾತಿಗೆ ಸಿಕ್ಕ ಚಪ್ಪಾಳೆ, ನಗುಗಳೇ
ಇಂದಿಗೂ ನೆನೆದರೆ ಗೆಲುವು ಗೆಳೆಯ
ಆ ಭಾವ ಸತ್ತಿಲ್ಲ ಸಂತುಷಿಸು ಗೆಳೆಯ|೪|
No comments:
Post a Comment