ನೆನಪುಗಳು ನೆನಪಾಗದವರಿಗಿಂತ
ನೆನಪೇ ನೆಪವಾಗಿ ನೇಪಥ್ಯಕೆ ಸರಿದವರಿಗಿಂತ
ನೆನಪುಗಳ ಮಳೆಯಲ್ಲಿ ನೆನೆದು ನಿರಾಕರಿಸಿದವರಿಗಿಂತ
ನಿಂತಲ್ಲೇ ನೆನಪಾಗೋ, ನಸುನಗುತಾ ಜೊತೆ ಸಾಗೋ
ಗೆಳೆಯರೇ ನೆನಪಾಗುವರಲ್ಲೋ ಮತ್ತೆ ಮತ್ತೆ|೧|
ಇದ್ದರೂ ಸಾವಿರ ಅವರು
ಬರರೊಲ್ಲರು ನೆನೆದಾಗ
ಗೇಲಿಗೊಳಗಾದಾಗ ದುತ್ತೆಂದು
ಎಲ್ಲಿಂದಲೋ ಅವತರಿಸಿ ನಗುವರು
ಸೇರಿ ಗೇಲಿಸುವವರ ಗುಂಪ ಮತ್ತೆ|೨|
ಗೋವಂತೆ ಮುಖ ಹಾಕಿ
ಹಾವಂತೆ ಕಚ್ಚುವರು
ಕಾಯ್ವ ದನ ಹುಲಿ ತಿಂದು
ಹಾಳಾದರೂ ಮರುಗದಿಹ ಗೊಲ್ಲರಿವರು
ಇದ್ದು ಉಪಯೋಗಿಲ್ಲ ಅಂಥ ಜನರು|೩|
No comments:
Post a Comment