Monday, November 14, 2011

ಹಾಯ್ಕ

ನೆನಪಾಯ್ತು ಮತ್ತೇಕೊ ಹಳೆಯಾಕ್ಕೆ ಹಾಯ್ಕ
ಬಚ್ಚಿಟ್ಟ ಭಾವಗಳ ಬಿಚ್ಚಿಡೋ ತವಕ
ದ್ವಂದ್ವದೆಳೆಗಳದೊಂದು ಅಂಗಿ ನೇಯಲು ಚರಕ
ಅಥವ ಕಟುಭಾವಗಳ ಹೊಯ್ಯಲೊಂದೆರಕ||

ಅಪ್ಪ ಬ್ಯಾಂಕುದ್ಯೋಗಿ,ನೋಟೆಣಿಸೊ ಕೆಲಸ
ಖುಷಿ ಪಟ್ಟ ಮಗನಿಗೂ ಅದೇ ಹವ್ಯಾಸ
ಮನೆ ನೋಟು ಅಲ್ಲವದು ಕನ್ನ ಹಾಕಿದ್ದು
ತಪ್ಪಾದ ಕಾರಣದಿಂದ ಕಂಬಿಯೆಣಿಸುತ್ತಿದ್ದಾನೆ
|೨|

ಆತ ಜನನಾಯಕ, ಪಾರದರ್ಶಕ
-ತೆಯೆಂದು ಕಥೆ ಹೇಳಿ ವೋಟು ಕಿತ್ತಾತ
ಇಂದೂ ಆ ಮಾತು ಮುರಿದಿಲ್ಲ
ಜನರೆದುರೇ ನೋಟೆಣಿಸುತ್ತಿದ್ದಾನೆ|೩|

ದುಡ್ಡು ಹೆಚ್ಚಾಯ್ತೆಂದು ಶೋಕಿ ಬಾರು
ಮಬ್ಬುಗಣ್ಣಿಗೆ ವಿಶ್ವಸುಂದರಿ ಪಾರು
ದೇವಿಯೊಡನೆ ದೆವ್ವವೂ ತೊಲಗಿತು
ಈಗವನೇ ಸೇವಕ,ಕಂಡರಸಹ್ಯ ಬೀರು|೪|

ಊರಿಗೇ ನೀರಿತ್ತ ನೀರಗಂಟಿಯು ಆತ
ಬೆಳೆಗಳಿಗೆ ಕಳೆಯಿತ್ತ ಬುದ್ದಿವಂತ
ಇಂದು ವಯಸಾಗಿದೆ ನಡೆಯಲೂ ಆಗದ
ಕಣ್ಣೀರೊರೆಸಲೂ ಗತಿಯಿಲ್ಲವೇ ಭಗವಂತ! |೫|

ಅವನೊಳ್ಳೆ ಪೂಜಾರಿ, ಹಲಶಾಸ್ತ್ರ ಪ್ರವೀಣ
ಜನರಿಗೆಲ್ಲುಪದೇಶ ಸ್ಥಳದಲ್ಲೆ ಕೊಡುವಾತ
ಮನೆಯಲಿ ಮಾತ್ರ ದಿನಾ ಅದೇ ಗೋಳು
ಮಕ್ಕಳಿಗೆ ಬೈತ, ಹೆಂಡ್ತಿಗೆ ಹೊಡಿತ |೬|

ತನ್ನಳೆಯ ಚಾಳಿಗೆ ಹೊದ್ದೊಂದು ಮುಖವಾಡ
ದಿನವೂ ಹೊರಟಿದ್ದನು ಆಕೆ ಮನೆಗೆ
ಇಲ್ಲದಿದ್ದಕೂ ಹಲವು ಅನುಮಾನ ಜನರಿಗೆ
ಬಾಗಿಲೊಡೆದೊಂದು ದಿನ ಮೂಳೆ ಮುರಿಯಿತು|೭|

ಮನಶ್ಯಾಸ್ತ್ರವರಿತಾತ ಬಲು ಬುದ್ದಿವಂತ
ಜನರೆಲ್ಲ ಪೂಜಿಸಿಹರು ದೇವರಂತ
ಅರಿಯದಿಹ ನೆರೆಯ ಔಷಧಿಯವನ ನೋವನ್ನ
ಎತ್ತಂಗಡಿ ಮಾಡಿಸಿ ಬುದ್ದಿವಂತಿಕೆ ಮೆರೆದಿದ್ದಾನೆ|೮|

No comments:

Post a Comment