Friday, November 11, 2011

ಬರೆದ ಸಾಲುಗಳೆಲ್ಲ

ಬರೆದ ಸಾಲುಗಳೆಲ್ಲ ಕವನವಲ್ಲವೊ ಗೆಳೆಯ
ಅಕ್ಷರಗಳಾಟವದು ಮರೆಯಬೇಡ
ಉಕ್ಕೊ ಭಾವಕ್ಕಡ್ಡ ಹಿಡಿದ ಬಿಂದಿಗೆಯದು
ಹೆಚ್ಚು ಸಿಕ್ಕಿದರದೇ ಗೆಲುವು ನೋಡ
ಅವನು ಮೆಚ್ಚುವನೆಂಬ ಭ್ರಮೆಯು ಬೇಡ|1|


 ಜ್ಞಾನಸಾಗರದಲ್ಲಿ ಚಿಪ್ಪ ಹುಡುಕುವ ನಾವು
ಸಿಕ್ಕಿಹುದು ಕೆಲವರಿಗೆ ಒಳ್ಳೆ ಮುತ್ತು
ಕವಡೆಗಳು ಕೆಲವರಿಗೆ ಕೆಲಕಾಲದೊರೆಗೆ
ದಡದಲ್ಲೇ ನಿಂತವಗೆ ಉಸುಕಿನಲೆ ಮಸುಕಾದ
ಆಕಾರ ಕಂಡಿಹುದು ಸೃಷ್ಟಿಯಂತೆ|2|

 ಬರೆಯುವುದು ಸಹಜ,

ಮೆಚ್ಚುವಿಕೆಗಿಲ್ಲ ಸಜ
ಬರೆದು ಬೆಳೆದಾನೆಂಬ ಮಾತ್ಸರ್ಯವೇಕೆ
?

ನಾನೆ ಬರೆಯುವೆನೆಂದು ಬೀಗ ಬೇಕೆ?||

2 comments:

  1. ಚೆನ್ನಾಗಿದ್ದು.. ಇಷ್ಟ ಆತು.. ಒಂದು ಕಡೆ ಕೂತು ಕವನ ಬರ್ಯಕ್ಕು ಅಂದ್ರೆ ಬರ್ತಿಲ್ಲೆ.. ಅದು ಬಂದಾಗೇ ಬರ್ಕಬಿಡಕ್ಕು :-)

    ReplyDelete
  2. ಹ ಹ :-) ಹೌದೋ :-)ದವಾ :-)

    ReplyDelete