ಬಂದಿದೆ ನೋಡ ಚಳಿಗಾಲ
ಮಫ್ಲರು ಸುತ್ತಲು ಸತ್ಕಾಲ
ಏಳು ಘಂಟೆಗೂ ಏಳಲಾಗದು
ಹೊದ್ದು ಮಲಗಲು ಹಣವಣಿಕೆ|೧|
ದಾರಿ ಕಾಣದು ದೂರದವರೆಗೆ
ಮುಂಜಾನೆಯ ಮಂಜಿನ ಹೊದಿಕೆ
ಹೆಪ್ಪುಗಟ್ಟುತಿದೆ ಕೊಬ್ಬರಿಯೆಣ್ಣೆಯು
ಸೂರಿಲ್ಲದವರದೇನು ಕಥೆ?|೨|
ಬೆಳಬೆಳಗ್ಗೆಯೇ ಸೈಕಲ್ತುಳಿಯಲು
ಸೆಟೆದು ನಿಲ್ಲುವುದು ಕೈ ರೋಮ
ಕಾಲೇಜನ್ನು ನಾ ತಲುಪುವವರೆಗೆ
ಚಳಿಯನು ತಡೆಯೋ ಹೇ ರಾಮ|೩|
ಬೈಕೋಡಿಸಲು ಹೋದರೆಂತೂ
ಮರಗಟ್ಟಿ ಬಿಡುವುದೇನೋ ಕೈ
ಜೀವನವಿದುವೇ ಹಾಲ್ಪೇಪರವಗೆ
ಆದ್ದರಿಂದ ಅವರೆಲ್ಲಕೂ ಸೈ|೪|
ನಂಬದಿಗೆರಡು ಕಂಬಳಿ ಚಳಿಯೋ
ನಿಂಬದಿಗೆಷ್ಟು ಮಹರಾಯ?
ಶೀತ, ಥಂಡಿಗಳದೆಲ್ಲೆಡೆ ಹಾವಳಿ
ಅದಕ್ಕೆ ಬೋಳ್ಕಾಳ್ಕಷಾಯ|೫|
ಸ್ನಾನ ದ್ವೇಷಿಗಳಿಗಿನ್ನೊಂದು ನೆವ
ನೀರು ಕಾದಿಲ್ಲ, ಬಹಳ ಚಳಿ
ಪೈಪು ಹೆಪ್ಪುಗಟ್ಟುವುದುತ್ತರಲಿ
ಬಹಳ ಕಾಲ ನೀರೇ ಇಲ್ಲ|೬|
ಒಡೆವ ಮೈ, ತುಟಿ ತಡೆಯುವುದೆಂದು
ಸವರೋ ಕ್ರೀಮ್ಗಳು ಹಲವಾರು
ಕೊಬ್ಬರಿಯೆಣ್ಣೆಯ ಮುಂದಿನ್ನಿಲ್ಲ
ಮರಳಾರೋಗ್ಯದ ಬಳಿ ಸೇರು|೭|
No comments:
Post a Comment