ಕತ್ತು ಹಿಸುಕುವೆಯಾಕೆ
ಮೂಕನರಗಿಣಿ ನಾನು
ಅವನ ಮಾತನು ಕಿತ್ತೆ
ನನ್ನೂ ಬಿಡೆಯಾ?
ನನ್ನ ಪಾಡಿಗೆ ಗೀತೆ
ಹಾಡಬಿಡೆಯಾ?|೧|
ಸಾಧಕನು ನೀನು, ಉದ್ದನೆಯ ಬಾಲಕ್ಕೆ
ಕೊಚ್ಚಿರುವ ಬಳಗಕ್ಕೆ, ಸಮಮನಸ ಸರಸಕ್ಕೆ
ಪ್ರಿಯ ಪ್ರಿಯೆಯ ಬಣಿಸೋಕೆ, ಎಳೆಬಾಲರೊಲಿಸೋಕೆ
ನಿನ್ನ ರಾಗವ ಬಿಟ್ಟು ಹಾಡಿಹೆನು ನಾನೆಂದು
ಜೀವತೆಗೆಯಲು ಹಲವು ದ್ವೇಷ ಹೊಂದು
ಇಲ್ಲದಿಹ ನೂರೆಂಟು ದೋಷ ತಂದು|೨|
ಸಾಲದೆಂದೆಯಾ ಜನ್ಮ ನೀನು ಬರೆದಿದ್ದೋದೆ?
ಯಾರಿಗೂ ಬೀಳದಿಹ ಕನಸುಗಳಲಿಳಿಯೆ
ದ್ವೇಷಿಸಿಹೆ, ಕೊಲ್ಲಿಸಿಹೆ ಸುತ್ತಲಿನ ಎಳೆಮೊಳಕೆ
ಮರವಾಗಬಹುದೆಂದು ಕುದಿನೀರ ಹೊಯ್ದೆ
ಆ ಮರವು ಅಲ್ಲ ನಾ, ಹೆದರೊ ಮನುಜನು ಅಲ್ಲ
ಸಾಕೆಂದು ಹಾರುತಿಹೆ ನಿನ್ನ ಸಹವಾಸ
ಪರದೇಶಿ ಮೂಗನಿಗೆ ಮತ್ತೆ ವನವಾಸ|೩|
No comments:
Post a Comment