Tuesday, November 15, 2011

ನೂರು ತುಂಬಿತು ಬ್ಲಾಗಿಗೆ

ಇನ್ನೂರು , ಮುನ್ನೂರು , ಐನೂರು ಆದವರೆ
 ತಣ್ಣಗಿದ್ದಾರಲ್ಲೋ ಹಿಂದೆ ಎಲ್ಲೋ
ಬರಿಯ ನೂರಕೆ ನಿನಗೆ ಊರ ಸಂಭ್ರಮ ಸಲ್ಲ
ಕಲಿಯುವುದು ಬಹಳುಂಟು ತಡೆಯೊ ನಲ್ಲ||

 ತನ್ನ ಕವಿತೆಗಳನ್ನು ಮಗನಲ್ಲಿ ಕಂಡಿರುವ
ಪ್ರೋತ್ಸಾಹ ಚಿಲುಮೆ ನನ್ನೆತ್ತಮ್ಮಗೆ
ತಾಳ್ಮೆಯಿಂದೋದಿ ಬರೆದರ್ಥವಿಲ್ಲದ ಪದ
ಭರವಸೆಯ ತುಂಬಿರುವ ಗೆಳೆಯ ಶಶಿಗೆ
ಜಾಲದಲಿ ಕಳೆದೋದ ಮಾಹಿತಿಯ ಹುಡುಕಾಡಿ
ಹಲಹೊಸತ ಕಲಿಸಿರುವ ಗೆಳೆಯಾದಿಗೆ||

 ಹೀಗಲ್ಲ ಹಾಗೆಂದು ತಿದ್ದೆನ್ನ ಜೊತೆಗಿದ್ದ
ಹಲಹೊಳಹು ತೋರಿಸಿದ ರವಿ, ಕಿರಣಗೆ
ಮಾಹಿತಿಯ ಹರಿಸುತಿಹ ಹರೀಶನಿಗೆ
ಹೊಸಲೋಕ ತೋರಿಸಿದ ಟೆಕ್ಸತ್ಯಗೆ
ಹೇಳಲೋದರೆ ನಾನು, ಹಲವಾರು ಜನರಿಹರು
ಮೆಚ್ಚಿಹರು, ಚುಚ್ಚಿಹರು, ನೋಡಿ ನಕ್ಕವರು
ಕುಣಿಯೆಂದು ರಂಗದಲಿ ಬಿಟ್ಟು ನಕ್ಕವರು
ಬೆಳೆ ತಮ್ಮ ನೀನೆಂದು ನೀರೆರೆದ ಜನರು
ಎಲ್ಲರಿಗೂ ಅರ್ಪಣೆ ಈ ಕೆಲವು ಸಾಲುಗಳು
ಹೇಳಲಾಗದ ಭಾವ ತಿಳಿಸಲೆಂದು
ಮೆಚ್ಚಿದ ಮನವೊಮ್ಮ ನೆನೆಯಲೆಂದು||

 ಪಯಣದ ಆರಂಭ
ಬರೆಯಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಆದರೆ ಕವಿತೆ ಬರೆಯಲಾಗಿರಲಿಲ್ಲ. ಮೊದಲ ಕವಿತೆ ಬರೆದದ್ದು ಇದೇ ವರ್ಶದ ಫೆಬ್ರವರಿ ಏಳರಂದು..ಅದು ಕವನ ಅನ್ನುವುದಕ್ಕಿಂತ ಭಾವವನ್ನು ಸಾಲುಗಳಲ್ಲಿ ಸೆರೆ ಹಿಡಿಯಲು ನಾ ಮಾಡಿದ ಪ್ರಯತ್ನ ಎನ್ನಬಹುದೇನೋ..ಆಗ ಸ್ಪೂರ್ತಿಯಾಗಿದ್ದು ಗೆಳೆಯ ಶಶಿ, ಕವನ ಸಂಕಲನ ಪ್ರಕಟಿಸಿದ್ದ ತಂಗಿ ಸೌರಭ. ,ಒದಲು ಬರೆದದ್ದನ್ನ ಕವನ ಅನ್ನುವುದಕ್ಕಿಂತಲೂ ಮುಗಿಯುತ್ತಿದೆಯಲ್ಲಾ ಇಂಜಿನಿಯರಿಂಗ್ ಎಂಬ ವ್ಯಥೆ ಎನ್ನಬಹುದೇನೋ..ತಮಾಶೆಗೋ ಏನೋ ಗೆಳೆಯರು ಬಹಳವೇ ಏರಿಸಿದರು.ಅದಕ್ಕೆ ಕಾರಣವಾದ FaceBook ಗೂ ಧನ್ಯವಾದ ಹೇಳಲೇಬೇಕು. ಆಮೇಲೆ ಹೊತ್ತೊಯ್ಯುತ್ತಿದ್ದ ಸತ್ತ ಹೆಣವನ್ನು ಕಂಡ ನನಗೆ ಏನು ಕಂಡಿತೋ ಏನೋ ಮತ್ತೊಂದು ಬರೆದೆ. ಅದನ್ನು ಮೆಚ್ಚಿದ ನನ್ನ ಮಾವ "ಸಂಪದ", "ಕೆಂಡ ಸಂಪಿಗೆ" ಗಳ ಬಗ್ಗೆ ಹೇಳಿದರು. ಅದೇ ದಿವಸ ಗೆಳತಿಯೊಬ್ಬಳು "ಕಥೆ ಕವನ ಕಾಲಹರಣ" ಕ್ಕೆ ಹಾಕಿದಳು.. ಅಲ್ಲಿ ಸಿಕ್ಕಿದ ಪ್ರೋತ್ಸಾಹಕ್ಕೆ ನಾನು ಎಂದೂ ಋಣಿಯಾಗಿರಬೇಕು. ಅಲ್ಲಿನ ಕಿರಣಣ್ಣ,ಅನ್ಸತ್ತೆ, ಪ್ರಶಾಂತಣ್ಣ, ಮಂಜಣ್ಣ .. ಈಗ ಗಣೇಶಣ್ಣ ಎಲ್ಲರೂ ನಾ ಬರೆದ ಕವಿತೆ, ಲೇಖನಗಳನ್ನ ಮೆಚ್ಚಿ ಬೆನ್ನು ತಟ್ಟುತ್ತಾ ಬಂದರು, ತಟ್ಟುತ್ತಿದ್ದಾರೆ. ಕಿರಣಣ್ಣನನ್ನಂತೂ ನಾನು ಹಲವಕ್ಕೆ ಗುರುವೆಂದೇ ಅನ್ನಬಹುದು.

 ನಂತರ
"ಸಂಪದ" ದಲ್ಲಿ ಬರೆದ ಲೇಖನದಿಂದ ಪರಿಚಯವಾದವರು ಶಿವಮೊಗ್ಗದ ಸತ್ಯಚರಣರು. ಅವರಿಂದ ಸುಮಾರಷ್ಟು ತಂತ್ರಜ್ಞಾನ ವಿಷಯಗಳ,"ನಿಲುಮೆ"ಯ ಪರಿಚಯವಾಯಿತು.ಈಗಲೂ ಹೊಸದಕ್ಕೆ ಬೆನ್ನು ತಟ್ಟುತ್ತಲೇ ಇರುತ್ತಾರೆ. ಆಮೇಲೆ ಮಂಜಣ್ಣನಿಂದ ಪರಿಚಯವಾದದ್ದು "ಕನ್ನಡ ಬ್ಲಾಗ್". ಅಲ್ಲಿಂದಲೂ ಹಲವು ಮೆಚ್ಚೋ, ಪ್ರೋತ್ಸಾಹಿಸಿದ ಗೆಳೆಯರು ಸಿಕ್ಕಿದರು. ಪ್ರಮೋದ್ ಶೆಟ್ಟಿ, ಚೌಟರು,ಮೋಹನ್ ಮತ್ತುಳಿದ ಹಲವು ಅಡ್ಮಿನ್ಗಳು ಬರೆದ ಎಲ್ಲಾ ಕವನ, ಲೇಖನಗಳನ್ನೂ ಮೆಚ್ಚುತ್ತಾ ಬಂದಿದ್ದಾರೆ. ಹಲ ವಿಷಯ ಖಂಡಿಸಿದ, ತಿದ್ದಿದ ರವಿ ಮೂರ್ನಾಡರನ್ನಂತೂ ಮರೆಯುವಂತೆಯೇ ಇಲ್ಲ.

ಹೇಗೆ ಮರೆಯಲಿ ನಾನು ಹರೀಶಣ್ಣನ ಬಳಗವ? ಅವ ಶುರು ಮಾಡಿದ ಗ್ರೂಪು, ಅಲ್ಲಿನ ಡಾಕೂ ನೆರವಾದ ಬಗ್ಗೆ ಹೇಳಲೇ ಬೇಕು. ಅಲ್ಲಿದ್ದ ೮೦ ಬ್ಲಾಗುಗಳಲ್ಲಿ ಒಂದೂ ಬಿಡದೇ ಎಲ್ಲವನ್ನೂ ಸುತ್ತುವ ಮನಸಾಗಿತ್ತು. ಬರೋಬ್ಬರಿ ಎರಡು ದಿನಗಳ ಪಯಣವದು. ಆಗ ಓದಿದ ಅಂಶಗಳಿಂದ ಇನ್ನೂ ಬೆಳೆಯುವುದೆಷ್ಟಿದೆ ಎಂಬ ಅರಿವಾದದ್ದು.. ಅಲ್ಲಿನ ಗೆಳೆಯರಿಗೂ ಮತ್ತೊಮ್ಮೆ ವಂದನೆ.

ಬ್ಲಾಗು ಬರೆಯಲು ಪ್ರೋತ್ಸಾಹಿಸಿದ ಮೊದಲ Followers ನಿತೀಶ, ಜಿತಿನ್ರಿಗೆ.ಬ್ಲಾಗಲ್ಲಿ ಬಂದು ಪ್ರತಿಕ್ರಿಯಿಸದಿದ್ದರೂ ಕಂಡಲ್ಲೆಲ್ಲಾ ಹೇಳುವ ಆದಿತ್ಯ,ಆದಿ, ಶಿಶಿ,ಗೌತು,ವಿಶ್ವ, ಅಕ್ಷಯ, ವರುಣ,ಪ್ರಜ್ವಲ್, ಪ್ರವೀಣ, ಕೋಳಿ, ರಕ್ಷಿತ್, ಸ್ವಾತಿ,ರಂಜಿತ,ಶ್ವೇತ,ವಿನಾಯಕ,ನಂದನ್, ಪ್ರಭಾತ, ಮಾನಸ್,ವಂದನಕ್ಕ,ಹಂಸಿಕಾ, ಅಭಿ,.. ಹಿಂಗೆ ಸುಮಾರು ಜನ ಗೆಳೆಯರು, ಮುಖ್ಯವಾಗಿ ಕ್ಲಾಸಲ್ಲಿ ಬೋರಿಡಿದ ಪೀರಿಯಡ್ಗಳ ಮಧ್ಯೆ ಇಂಥದರ ಮೇಲೆ ಬರಿಯೋ ಅಂಥ ತಮಾಶೆ ಮಾಡಿ ಆಮೇಲೆ ಮೆಚ್ಚುತ್ತಿದ್ದ ನನ್ನೆಲ್ಲಾ ಕ್ಲಾಸ್ಮೇಟುಗಳಿಗೆ, ನನ್ನೆರಡು ಕವನ ಪ್ರಕಟಿಸಿದ ಬ್ರಾಂಚಿನ ಪತ್ರಿಕೆಗೆ ,ಬ್ರಾಂಚಿಗೆ, FB ನಲ್ಲಿರುವ ರಾಕಿ,ಶಿರ್ವ,ಪ್ರಕಾಶರಂಥ ಹಿರಿಯರು,ಪ್ರದೀಪಣ್ಣನಂಥ, ಗೆಳೆಯರು .. ಎಲ್ಲರಿಗೂ ಚಿರಋಣಿ..
ಶ್ರುತಿ, ರೋಶ್ನಿ,ತೇಜು, ಪವಿ,

 ಮುಗಿಸುವ ಮುನ್ನ
ಸಂಖ್ಯೆ ದಾಟಿರಬಹುದು. ಆದರೆ ಭಾವ ಅದೇ, ಪ್ರೌಡಿಮೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬರೆಯಲೆಂತೂ ಖುಶಿಯಾಗುತ್ತದೆ.. ನೂರು ತುಂಬಿದೆಯೆಂದು ಬರೆದುಕೊಳ್ಳುವುದು ಆತ್ಮಸ್ತುತಿಯಾಗುವುದೋ ಎಂಬ ಭಯವಿತ್ತು. ಆದರೆ ಇದಕ್ಕೆಲ್ಲ ಕಾರಣರಾದ ಇವರನ್ನೆಲ್ಲಾ ಹೆಸರಿಸದೇ ಇರುವುದು ಸ್ವಾರ್ಥವಲ್ಲದೇ ಬೇರಲ್ಲ ಅನ್ನಿಸಿತು.ಬರದೆ. ಹೆಚ್ಚಾದರೆ ಕ್ಷಮಿಸಿ. ಬಿಟ್ಟೋದರೂ ಕ್ಷಮಿಸಿ.. ಮೆಚ್ಚಿದ ಎಲ್ಲರಿಗೂ ಧನ್ಯವಾದ.. ಎಲ್ಲೆಲ್ಲಿ ಎಡವುತ್ತಿರುವೆ, ಎಲ್ಲಿಷ್ಟವಾದೆ ಎಂದು ಓದಿದ ತಾವು ತಿಳಿಸಿದಲ್ಲಿ ಅದಕ್ಕಿಂತ ಹೆಚ್ಚಿನ ಸಂತೋಷ ಬೇರಿಲ್ಲ.. ಮತ್ತೊಮ್ಮೆ ಹೇಳಿದ, ಹೇಳದ ಎಲ್ಲರಿಗೂ ವಂದಿಸುತ್ತಾ ಈ ಲೇಖನದಿಂದ ವಿರಮಿಸುವೆ.

17 comments:

  1. ಬಹಳ ವಿಶೇಷ ಮಾತು ... ಮತ್ತು ಕವನ.... ಅನೇಕ ಸಂಗತಿಗಳ ಸುಂದರ ಮಿಶ್ರಣ ... ಓದಲು ಉತ್ತಮ.. ರಚನೆ ಅತ್ಯುತ್ತಮ.. :)

    ReplyDelete
  2. ಧನ್ಯವಾದಗಳು ಪ್ರಶಾಂತರೇ.. ನಿಮ್ಮ ಪ್ರತಿಕ್ರಿಯೆಗೆ ಮತ್ತು ಮೆಚ್ಚುಗೆಗೆ :-)

    ReplyDelete
  3. ಅಭಿನಂದನೆ ಪ್ರಶಸ್ತಿ.. ಹೀಗೇ ಮುಂದುವರೆಯಲಿ ನಿನ್ನ ಬ್ಲಾಗ್ ಪಯಣ :-)

    ReplyDelete
  4. ಧನ್ಯವಾದಗಳು ಹರೀಶಣ್ಣ :-)

    ReplyDelete
  5. ಅಭಿನಂದನೆಗಳು ಪ್ರಶಾಂತ್ ಸರ್ ನಿಮ್ಮ ಗೆಲುವಿನ ಪಯಣ ನಿರಂತರವಾಗಿ ಮುಂದುವರೆಯಲಿ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  6. ಅಭಿನಂದನೆಗಳು ಸರ್..

    ಇನ್ನಷ್ಟು ವೈವಿದ್ಯಮಯ ಬರವಣಿಗೆಗಳು ನಿಮ್ಮಿಂದ ಬರಲಿ...

    ನಿಮ್ಮ ಸಾಧನೆಗೆ ಶುಭ ಹಾರೈಕೆಗಳು...

    ಪ್ರೀತಿಯಿಂದ..

    ReplyDelete
  7. ಇನ್ನೂ ಮುಡಿಬರಲಿ ಬರಹ
    ಒಳಗೊಂಡಿರಲಿ ಹಲವು ತರಹ
    ಆಗಲಿ ಉತ್ತಮವಾದ ಸಂಗ್ರಹ
    ಇದಾಗಿದೆ ನಮ್ಮಯ ಭಿನ್ನಹ

    ReplyDelete
  8. @ನಿಮ್ಮೊಳಗೊಬ್ಬ :
    ಬ್ಲಾಗಿಗೆ ಬಂದು ಹರಸಿದ್ದಕ್ಕೆ ಧನ್ಯವಾದಗಳು ಬಾಲು ಅವ್ರೆ..ನನ್ನೆಸ್ರು ಪ್ರಶಸ್ತಿ ಹೇಳಿ. ಪ್ರಶಾಂತ್ ಅಲ್ಲ:-)
    @ಸಿಮೆಂಟು ಮರಳುಗಳ ಮಧ್ಯೆ:
    ಧನ್ಯವಾದಗಳು ಪ್ರಕಾಶಣ್ಣ.. ಬರೆಯೋ ಪ್ರಯತ್ನ ಮಾಡ್ತಿ:-)

    @ನಿಮ್ಮೊಳಗೊಬ್ಬ,ಸಿಮೆಂಟು ಮರಳುಗಳ ಮಧ್ಯೆ:
    :-) ನಂದೊಂದು ವಿನಂತಿ.. ನಾನು ನಿಮಗಿಂತ ವಯಸ್ಸಿನಲ್ಲಿ, ಬರಹದಲ್ಲಿ ಎಲ್ಲದರಲ್ಲೂ ಚಿಕ್ಕವ..(ಮೊನ್ಮೊನ್ನೆ ಅಷ್ಟೆ ಡಿಗ್ರಿ ಮುಗಿದಿದ್ದು :-) ) ಹಂಗಾಗಿ ದಯವಿಟ್ಟು ಈ ಸರ್ ಎಲ್ಲ ಬ್ಯಾಡ. ಬೇಕಾದ್ರೆ ತಮ್ಮ ಅಂತನೋ ಅಥವಾ ಬೇರೆ ಎಂತಾದ್ರೂ ಕರೀರಿ :-) :-)

    ReplyDelete
  9. @ಚುಕ್ಕಿಚಿತ್ತಾರ, jayalakshmi : ಧನ್ಯವಾದಗಳು :-)
    @Shashi: ನೀನೇ ಸ್ಪೂರ್ತಿ ಕಣೋ.. ಮೊದಲ ಕವನದಿಂದಲೂ ಇಲ್ಲೀವರೆಗೂ ಓದ್ತಾನೆ ಬಂದಿರೋ ನಿನಗೆ ಎಷ್ಟು ಧನ್ಯವಾದ ಹೇಳಿದ್ರೂ ಕಡಿಮೇನೆ
    @All :
    ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಮುಂದುವರಿಯಲಿ.. ಅದೇ ಇನ್ನಷ್ಟು ಬರೆಯಲು ಪ್ರೇರಣೆ :-)

    ReplyDelete
  10. congrats Prashasti , keep writing :)

    ReplyDelete
  11. ಅಭಿನಂದನೆಗಳು ಪ್ರಶಸ್ತಿ. ಹೀಗೆ ಮುಂದುವರೆಸು..
    ನಿನ್ನ ಬ್ಲಾಗ್ ಒಂದು ದೊಡ್ಡ ಜಾಲತಾಣ ಆಗಲಿ ಅಂತ ಆಶಿಸ್ತಿನಿ..:-)

    ReplyDelete
  12. ಧನ್ಯವಾದಗಳು ಆದಿತ್ಯ. ನಿನ್ನ ಹಾರೈಕೆಗೆ, ಪ್ರೋತ್ಸಾಹಕ್ಕೆ :-)

    ReplyDelete
  13. ಅಭಿನಂದನೆಗಳು ಪ್ರಶಸ್ತಿ ಹೀಗೆ ಮುಂದೆ ಹೆಚ್ಚು ಹೆಚ್ಚು ಬ್ಲಾಗ್ ಮಾಡಿ ನಮಿಗೆ ಗ್ಯನೋದಯಿಸು ಎಂದು ಅಷಿಯಿಸುತೇನೆ.. :)

    ReplyDelete
  14. ಧನ್ಯವಾದಗಳು ಜಿತಿನ್ :-) ಆದರೆ ಹೊಸತೇನು ಹೇಳುತ್ತಿಲ್ಲ ನಾನು. ಎಲ್ಲಾ ಇದ್ದಿದ್ದೇ.. ಹಾಗಾಗಿ ಜ್ಞಾನ ಉದಯಿಸುವ ಪ್ರಶ್ನೆಯೇ ಇಲ್ಲ :-)

    ReplyDelete