ಮಹಿಳೆಯರ ದಿನ..
ಎಪ್ಬಿಯ ಸ್ಟೇಟಸ್ಗಳಲ್ಲಿ ನಮನ, ಗೌರವ ಅಲ್ಲಲ್ಲಿ ಕಾಣುತ್ತಿದೆ. ಶ್ರೀಕಾಂತ್ ಮಂಜುನಾಥ್ ಅವರು ಹೇಳುವಂತೆ ಹದಿನೈದನೇ ಲೋಕ ಬ್ಲಾಗ್ ಲೋಕದಲ್ಲಂತೂ ಇವತ್ತು ಅದರದ್ದೇ ಕಲರವ.
ಸುಮತಿ ದೀಪಾ ಅವರ "ಹೀಗೇ ಸುಮ್ನೆ", ಭಾಗ್ಯ ಭಟ್ಟರ "ಪೆನಾಲ್ಟಿ", ಭದ್ರಿ ಭಾಯಿಯ "ಪರದೆಯ ಹಿಂದೆ" , ಆಜಾದ್ ಭಾಯಿಯ "ನಿನ್ನಿಂದಲೇ",ಅಘನಾಶಿನಿ-ಸಮನ್ವಯ ಭಟ್ಟರ "ಅಪ್ಪ",ಕೊಳಲು- ಡಿ.ಕೆ.ಎಸ್ ಮೂರ್ತಿಗಳ "ಮಹಿಳೆ", ವೆಂಕಣ್ಣನ "ನನ್ನೊಳಗಿನ ಕನಸು",ಅಲೆದಾಡುವ ಕಾಲ ವಿನಾಯಕ ಭಟ್ರ "ಸೂರ್ಯ ಡಿಮ್ಮಾದ"... ಹೀಗೆ ಇವತ್ತು ಓದಿದ ಲೇಖನಗಳಲ್ಲೆಲ್ಲಾ ಹೆಣ್ಣಿನ ಕುರಿತಾದ್ದೇ.. ಒಂದಾದ ಮೇಲೆ ಒಂದು ಓದಿಸಿಕೊಂಡು ಹೋದವು.
ಹೆತ್ತು ಹೊತ್ತು, ತುತ್ತಿತ್ತ ತಾಯಿಗೆ, ಮುತ್ತಂತ ಮಾತುಗಳನ್ನು ಕಲಿಸಿದ ,ಎಲ್ಲರ ತಪ್ಪು ಹೊಟ್ಟೆಗೆ ಹಾಕಿಕೊಂಡು ಸದಾ ಒಳ್ಳೆಯದನ್ನೇ ಬಯಸಿದ ಸ್ತ್ರೀ ದೇವತೆಗಳಿಗೆ ಈ ಮೂಲಕ ಇನ್ನೊಂದು ನಮನ. ಹಳ್ಳಿಯ ರಂಗಮ್ಮ, ಗಂಗಮ್ಮ, ನನ್ನ ಅಜ್ಜಮ್ಮನಿಗೂ ಈ ತರದ ಒಂದು ದಿನವಿದೆ ಅಂತ ತಿಳಿದಿಲ್ಲ.ಒಂದು ದಿನ ಗೌರವಿಸಿ ಉಳಿದ ದಿನಗಳೆಲ್ಲಾ ಕಾಡಿಸೋ ಬದಲು ಒದ್ದಾಡುತ್ತಿರೋ ಆ ಜೀವಗಳಿಗೆ ಪ್ರತಿದಿನವೂ ಇದೇ ತರದ ಗೌರವ ಸಿಗಲಿ.. ಪೇಟೆಯ ಈ ಒಂದು ದಿನದ ಗುಲಾಬಿ ಸಲ್ಲಿಕೆ, ಗಿಪ್ಟ್ ಕೊಟ್ಟು ಹಾಡಿ ಹೊಗಳೋ ಆಚರಣೆ ಹಳ್ಳಿಗೆ ಮುಟ್ಟದಿದ್ದರೂ ಅವರು ಮಾಡಿದ್ದ, ಮಾಡುವ, ಮಾಡೋ ಅಸಂಖ್ಯ ಕೆಲಸಗಳಿಗೆ ಕೃತಜ್ನತಾ ಭಾವವಾದರೂ ಸಿಗಲಿ..
ಸ್ನೇಹಿತೆಯರು, ಅಕ್ಕ-ತಂಗಿಯರು, ಆಂಟಿ, ಅಜ್ಜಿಯಂದಿರಿಗೂ ಎಲ್ಲಾ ಮಹಿಳಾ ದಿನದ ಶುಭಾಶಯಗಳು :-)
Welcome to Prashantavanam
Showing posts with label ಅರ್ಪಣೆ. Show all posts
Showing posts with label ಅರ್ಪಣೆ. Show all posts
Friday, March 8, 2013
Saturday, November 26, 2011
ಹೊದ್ದು ಮಲಗಿದ್ದೆನಾ
ಹೊದ್ದು ಮಲಗಿದ್ದೆನಾ ಎಂದಿನಂತೆ?
ಭದ್ರ ನನ್ನಯ ನಾಡು ಏಕೆ ಚಿಂತೆ
ಏನೋ ಸುರಿದಂತೆ ಸಪ್ಪಳಪು ಎಚ್ಚರಿಸಿ
ಹೊರಬಂದು ನೋಡಿದರೆ ಕಣ್ಣೀರಧಾರೆ
ಬಿಕ್ಕಿಹನೆ ವರುಣನೂ ಒಮ್ಮೆ ಮಿಡಿದು
ಮೂರು ವರ್ಷದ ಹಿಂದೆ ಸಾವ ನೆನೆದು|೧|
ಇಂದಿನಾ ದಿನದಲೇ ತಾಜನ್ನ ತೊಳೆದರು
ಗಾಜಂತೆ ಶುಭ್ರದ ಮನಗಳ ಒಡೆದರು
ಎಲ್ಲಿಂದ ತರಲಿ ನಾ ಆ ವೀರ ಯೋಧರ
ಬುದ್ಧಿಹೇಡಿಗಳೆದೆದುರು ಪ್ರಾಣ ತೆತ್ತವರ
ಅಂದಾದ್ರೂ ಸುರಿದಿದ್ರೆ ನನ್ನ ರೋಷವ ತೋರಿ
ಉಳಿಯುತಿತ್ತೇ ಪ್ರಾಣ , ಆ ಜೀವ ಹರಣ ? |೨|
ನಾನೆ ತೆಪ್ಪಗೆ ಇರುವೆ ನೀನಗೇಕೆ ಅಳು ಮಳೆಯೆ
ಸಾಯೊ ಜನರಿಹರೆಂದು ಪ್ರತಿನಿತ್ಯ ಅಳು ಸರಿಯೆ?
ಅಳು ಅವರಿಗಲ್ಲವೋ ನಾಳೆ ಕಾದಿಹ ನಿನಗೆ
ಪಕ್ಕದಲೆ ಹೊಕ್ಕಿರುವ ಹೊಂಚಿರುವ ಉಗ್ರರಿಗೆ
ಕಾಳೂ ಕಾಳಜಿಯಿಲ್ಲ ದೇಶಕ್ಕೆ ಜೀವ ನೀ
ಹೋಗಿರುವ ಅಣ್ಣನೇ ಮರೆತುಬಿಡೋ ಜನ್ಮ ನೀ|೩|
ಏಕೋ ನಿನಗೀ ಜನ್ಮ ಬಾಲ, ಅದು ಸಾಲ
ಇದು ಸಾಲ ಎಂದು ದೇಶವ ದೂರು
ಇಲ್ಲಿ ಸರಿಯಿಲ್ಲೆಂದು ಬೇರೆ ಕಡೆ ಹಾರು
ನಿನಗಾಗಿ ಸತ್ತವರು, ಸಾಯುತಿರುವರು ನೋಡ
ಗಡಿಯಲ್ಲಿ , ತಾಜಲ್ಲಿ, ಗುಂಡಿಗೆದೆಯೊಡ್ಡುತ್ತ
ಹಿಂದೆ ಹಾರುವ ಗುಂಡಿಗೂ ಗುಂಡಿಗೆಯ ಒಡ್ಡಿ
ಮೇಲೆತ್ತಿ ಹಿಡಿದಿಹರು ನಿನ್ನಂಥ ಬಂಡೆಗಳ
ದೇಶಪ್ರೇಮವೂ ಇಲ್ಲ, ಹನಿಯೂ ಕನಿಕರವಿಲ್ಲ
ನೆನೆಯೋ ಮತ್ತೊಮ್ಮೆ ಆ ಸೈನಿಕ
ಮರೆಯುದಿರು ರಕ್ಷಕನ ಕೊನೆಯ ತನಕ|೪|
ಭದ್ರ ನನ್ನಯ ನಾಡು ಏಕೆ ಚಿಂತೆ
ಏನೋ ಸುರಿದಂತೆ ಸಪ್ಪಳಪು ಎಚ್ಚರಿಸಿ
ಹೊರಬಂದು ನೋಡಿದರೆ ಕಣ್ಣೀರಧಾರೆ
ಬಿಕ್ಕಿಹನೆ ವರುಣನೂ ಒಮ್ಮೆ ಮಿಡಿದು
ಮೂರು ವರ್ಷದ ಹಿಂದೆ ಸಾವ ನೆನೆದು|೧|
ಇಂದಿನಾ ದಿನದಲೇ ತಾಜನ್ನ ತೊಳೆದರು
ಗಾಜಂತೆ ಶುಭ್ರದ ಮನಗಳ ಒಡೆದರು
ಎಲ್ಲಿಂದ ತರಲಿ ನಾ ಆ ವೀರ ಯೋಧರ
ಬುದ್ಧಿಹೇಡಿಗಳೆದೆದುರು ಪ್ರಾಣ ತೆತ್ತವರ
ಅಂದಾದ್ರೂ ಸುರಿದಿದ್ರೆ ನನ್ನ ರೋಷವ ತೋರಿ
ಉಳಿಯುತಿತ್ತೇ ಪ್ರಾಣ , ಆ ಜೀವ ಹರಣ ? |೨|
ನಾನೆ ತೆಪ್ಪಗೆ ಇರುವೆ ನೀನಗೇಕೆ ಅಳು ಮಳೆಯೆ
ಸಾಯೊ ಜನರಿಹರೆಂದು ಪ್ರತಿನಿತ್ಯ ಅಳು ಸರಿಯೆ?
ಅಳು ಅವರಿಗಲ್ಲವೋ ನಾಳೆ ಕಾದಿಹ ನಿನಗೆ
ಪಕ್ಕದಲೆ ಹೊಕ್ಕಿರುವ ಹೊಂಚಿರುವ ಉಗ್ರರಿಗೆ
ಕಾಳೂ ಕಾಳಜಿಯಿಲ್ಲ ದೇಶಕ್ಕೆ ಜೀವ ನೀ
ಹೋಗಿರುವ ಅಣ್ಣನೇ ಮರೆತುಬಿಡೋ ಜನ್ಮ ನೀ|೩|
ಏಕೋ ನಿನಗೀ ಜನ್ಮ ಬಾಲ, ಅದು ಸಾಲ
ಇದು ಸಾಲ ಎಂದು ದೇಶವ ದೂರು
ಇಲ್ಲಿ ಸರಿಯಿಲ್ಲೆಂದು ಬೇರೆ ಕಡೆ ಹಾರು
ನಿನಗಾಗಿ ಸತ್ತವರು, ಸಾಯುತಿರುವರು ನೋಡ
ಗಡಿಯಲ್ಲಿ , ತಾಜಲ್ಲಿ, ಗುಂಡಿಗೆದೆಯೊಡ್ಡುತ್ತ
ಹಿಂದೆ ಹಾರುವ ಗುಂಡಿಗೂ ಗುಂಡಿಗೆಯ ಒಡ್ಡಿ
ಮೇಲೆತ್ತಿ ಹಿಡಿದಿಹರು ನಿನ್ನಂಥ ಬಂಡೆಗಳ
ದೇಶಪ್ರೇಮವೂ ಇಲ್ಲ, ಹನಿಯೂ ಕನಿಕರವಿಲ್ಲ
ನೆನೆಯೋ ಮತ್ತೊಮ್ಮೆ ಆ ಸೈನಿಕ
ಮರೆಯುದಿರು ರಕ್ಷಕನ ಕೊನೆಯ ತನಕ|೪|
ರಜೆ ಮುಗಿಸಿ ಹೊರಟೆಯಾ ಓ ಸೈನಿಕ
ರಜೆ ಮುಗಿಸಿ ಹೊರಟೆಯಾ ಓ ಸೈನಿಕ
ಬರೆದಾಯ್ತು ನೋಡಿಲ್ಲಿ ಒಂದು ಕಡತ
ಉಣ್ಣೆ ಕೋಟನು ಕೇಳಿ ಒಬ್ಬ ಅಣ್ಣ
ಮಣಿಸರವ ತಾ ಎಂದು ಒಬ್ಬ ತಂಗಿ
ಎಂದು ಬಾರದ ದೊಡ್ಡಪ್ಪನೇ ಬಂದಿಹನು
ಶಂಖ ತಾ ನನಗೊಂದು ನೇಪಾಳದಿಂದೆಂದು|೧|
ನೆರೆಬೀದಿ ಅಕ್ಕಂದಿರೆಲ್ಲಾ ಒಗ್ಗಟ್ಟು
ರಾಜಸ್ಥಾನದ ಸೀರೆ ಬೇಕಂತೆ
ಸೈನ್ಯ ಸೇರಿದ ಸಮಯ
ಆಡಿ ನಕ್ಕವರೆಲ್ಲಾ ಇಂದು ಸೇರಿಹರಲ್ಲೊ
ಮನೆ ಬಾಗಿಲಿಗೆ ಬಂದು |೨|
ಮೂಲೆಯಲಿ ಕುಳಿತಿದ್ದ ನಿನ್ನೊಬ್ಬ ಮುದುಕಮ್ಮ
ಕಣ್ಣೀರು ಒರೆಸುತಾ ಅವಳ ಬಳಿ ಸಾರಿ
ನಿನಗೇನು ಬೇಕಮ್ಮಾ ಬರೆಯಲೇ ಇಲ್ಲ
ಓ ಬರೆಯಲೇ ತಿಳಿಯೊಲ್ಲ, ಬಾಯಲೇ ಹೇಳಮ್ಮ
ಹಾದಿ ಬೀದಿಗೆ ಎಲ್ಲ ತರುವ ಕರ್ಮವು ನನಗೆ
ನಿನ್ನ ಮರೆಯಲಿ ಹೇಗೆ ನೀನೆ ಹೇಳಮ್ಮ|೩|
ಮಗನ ಬಳಿ ಕೇಳಲಿ ಹೇಗೆಂಬ ಚಿಂತೆಯೇ?
ಕೇಜಿ ಕೇಸರಿ ತರಲೆ ಕಾಶ್ಮೀರದಿಂದ?
ತಂದು ಕೊಡಲೇ ಒಂದು ಜಯಪುರದ ಸೀರೆ?
ವಾರಣಾಸಿಗೆ ಹೋಗಿ ಒಂದು ಜಪ ಮಣಿಯ
ಅದೂ ಬೇಡವೆ ಹೋಗಲಿ ನೀನೆ ಹೇಳಮ್ಮ|೪|
ಎಷ್ಟು ನಿಸ್ವಾರ್ಥಿಯೋ ನನ್ನ ಮಗನೇ
ಪರೀಕ್ಷೆ ಕಟ್ಟಿದ್ದೆ ಅಣ್ಣನಾ ನಂಬಿ
ಹಾಲ್ಟಿಕೇಟ್ ಕಳಿಸಿದ್ದು ಹಿಂದಿನಾ ದಿನವಾತ
ಹೇಗೂ ರಜೆ ಪಡೆದು ಬಂದು ಬರೆದೆಯ ಕಂದ
ಪರೀಕ್ಷೆ ಪುಸ್ತಕವ ಕಳಿಸಲೇ ಮರೆತೋಯ್ತು
ಇದ್ದೊಬ್ಬ ತಂಗಿಗೆ ಊರೆಲ್ಲ ಹರಟೆ
ಅಲ್ಲೂ ಓದುವ ನಿನ್ನ ಆಸೆಗೆ ತಣ್ಣೀರು
ಎರಚುವ ಇಂಥ ಜನಕೇಕೆ ವ್ಯಥೆ ನಿನಗೆ?|೫|
ಸದಾ ಆಡಿದ ಜನರು ಬಂದು ನಿಂತಿಹರಿಂದು
ಸಭ್ಯತೆಯ ಸೋಗಿನಲಿ ದೋಚೊ ದುರ್ಭಾವದಲಿ
ನನಗೇನೂ ಬೇಕಿಲ್ಲ ಓ ನನ್ನ ಕಂದ
ಅನುಕ್ಷಣವು ನೆನಪಾಗುವಂತೆ ಗಡಿಯಾರ
ನಿನ್ನ ನೆನಪೇ ತರುವುದೆನಗೆ ಆನಂದ
ಎಲ್ಲಿ ಹೋದರೂ ನೀನು ಚೆನ್ನಾಗಿರೋ ಕಂದ
ನಿನ್ನಂತೆ ಎಲ್ಲ ಸೈನಿಕರು ಮಕ್ಕಳೆ ನನಗೆ
ಅವರ ಮಾತಲು ನಿನ್ನೇ ಕಾಣುವೆನು ನಾನು
ತಾಯಿ ಭಾರತಿ ಕರೆಯು ಹೊರಡಿನ್ನು ಕಂದ
ಬಿಡುವಾಗೆ ಕರೆಮಾಡು, ಮರೆಯದಿರು ಮಗನೆ|೬|
(ಚಿತ್ರ ಕೃಪೆ: ವಿಕಿಪೀಡಿಯ)
ಬರೆದಾಯ್ತು ನೋಡಿಲ್ಲಿ ಒಂದು ಕಡತ
ಉಣ್ಣೆ ಕೋಟನು ಕೇಳಿ ಒಬ್ಬ ಅಣ್ಣ
ಮಣಿಸರವ ತಾ ಎಂದು ಒಬ್ಬ ತಂಗಿ
ಎಂದು ಬಾರದ ದೊಡ್ಡಪ್ಪನೇ ಬಂದಿಹನು
ಶಂಖ ತಾ ನನಗೊಂದು ನೇಪಾಳದಿಂದೆಂದು|೧|
ನೆರೆಬೀದಿ ಅಕ್ಕಂದಿರೆಲ್ಲಾ ಒಗ್ಗಟ್ಟು
ರಾಜಸ್ಥಾನದ ಸೀರೆ ಬೇಕಂತೆ
ಸೈನ್ಯ ಸೇರಿದ ಸಮಯ
ಆಡಿ ನಕ್ಕವರೆಲ್ಲಾ ಇಂದು ಸೇರಿಹರಲ್ಲೊ
ಮನೆ ಬಾಗಿಲಿಗೆ ಬಂದು |೨|
ಮೂಲೆಯಲಿ ಕುಳಿತಿದ್ದ ನಿನ್ನೊಬ್ಬ ಮುದುಕಮ್ಮ
ಕಣ್ಣೀರು ಒರೆಸುತಾ ಅವಳ ಬಳಿ ಸಾರಿ
ನಿನಗೇನು ಬೇಕಮ್ಮಾ ಬರೆಯಲೇ ಇಲ್ಲ
ಓ ಬರೆಯಲೇ ತಿಳಿಯೊಲ್ಲ, ಬಾಯಲೇ ಹೇಳಮ್ಮ
ಹಾದಿ ಬೀದಿಗೆ ಎಲ್ಲ ತರುವ ಕರ್ಮವು ನನಗೆ
ನಿನ್ನ ಮರೆಯಲಿ ಹೇಗೆ ನೀನೆ ಹೇಳಮ್ಮ|೩|
ಮಗನ ಬಳಿ ಕೇಳಲಿ ಹೇಗೆಂಬ ಚಿಂತೆಯೇ?
ಕೇಜಿ ಕೇಸರಿ ತರಲೆ ಕಾಶ್ಮೀರದಿಂದ?
ತಂದು ಕೊಡಲೇ ಒಂದು ಜಯಪುರದ ಸೀರೆ?
ವಾರಣಾಸಿಗೆ ಹೋಗಿ ಒಂದು ಜಪ ಮಣಿಯ
ಅದೂ ಬೇಡವೆ ಹೋಗಲಿ ನೀನೆ ಹೇಳಮ್ಮ|೪|
ಎಷ್ಟು ನಿಸ್ವಾರ್ಥಿಯೋ ನನ್ನ ಮಗನೇ
ಪರೀಕ್ಷೆ ಕಟ್ಟಿದ್ದೆ ಅಣ್ಣನಾ ನಂಬಿ
ಹಾಲ್ಟಿಕೇಟ್ ಕಳಿಸಿದ್ದು ಹಿಂದಿನಾ ದಿನವಾತ
ಹೇಗೂ ರಜೆ ಪಡೆದು ಬಂದು ಬರೆದೆಯ ಕಂದ
ಪರೀಕ್ಷೆ ಪುಸ್ತಕವ ಕಳಿಸಲೇ ಮರೆತೋಯ್ತು
ಇದ್ದೊಬ್ಬ ತಂಗಿಗೆ ಊರೆಲ್ಲ ಹರಟೆ
ಅಲ್ಲೂ ಓದುವ ನಿನ್ನ ಆಸೆಗೆ ತಣ್ಣೀರು
ಎರಚುವ ಇಂಥ ಜನಕೇಕೆ ವ್ಯಥೆ ನಿನಗೆ?|೫|
ಸದಾ ಆಡಿದ ಜನರು ಬಂದು ನಿಂತಿಹರಿಂದು
ಸಭ್ಯತೆಯ ಸೋಗಿನಲಿ ದೋಚೊ ದುರ್ಭಾವದಲಿ
ನನಗೇನೂ ಬೇಕಿಲ್ಲ ಓ ನನ್ನ ಕಂದ
ಅನುಕ್ಷಣವು ನೆನಪಾಗುವಂತೆ ಗಡಿಯಾರ
ನಿನ್ನ ನೆನಪೇ ತರುವುದೆನಗೆ ಆನಂದ
ಎಲ್ಲಿ ಹೋದರೂ ನೀನು ಚೆನ್ನಾಗಿರೋ ಕಂದ
ನಿನ್ನಂತೆ ಎಲ್ಲ ಸೈನಿಕರು ಮಕ್ಕಳೆ ನನಗೆ
ಅವರ ಮಾತಲು ನಿನ್ನೇ ಕಾಣುವೆನು ನಾನು
ತಾಯಿ ಭಾರತಿ ಕರೆಯು ಹೊರಡಿನ್ನು ಕಂದ
ಬಿಡುವಾಗೆ ಕರೆಮಾಡು, ಮರೆಯದಿರು ಮಗನೆ|೬|
(ಚಿತ್ರ ಕೃಪೆ: ವಿಕಿಪೀಡಿಯ)
Tuesday, November 15, 2011
ನೂರು ತುಂಬಿತು ಬ್ಲಾಗಿಗೆ
ಇನ್ನೂರು , ಮುನ್ನೂರು , ಐನೂರು ಆದವರೆ
ತಣ್ಣಗಿದ್ದಾರಲ್ಲೋ ಹಿಂದೆ ಎಲ್ಲೋ
ಬರಿಯ ನೂರಕೆ ನಿನಗೆ ಊರ ಸಂಭ್ರಮ ಸಲ್ಲ
ಕಲಿಯುವುದು ಬಹಳುಂಟು ತಡೆಯೊ ನಲ್ಲ|೧|
ತನ್ನ ಕವಿತೆಗಳನ್ನು ಮಗನಲ್ಲಿ ಕಂಡಿರುವ
ಪ್ರೋತ್ಸಾಹ ಚಿಲುಮೆ ನನ್ನೆತ್ತಮ್ಮಗೆ
ತಾಳ್ಮೆಯಿಂದೋದಿ ಬರೆದರ್ಥವಿಲ್ಲದ ಪದ
ಭರವಸೆಯ ತುಂಬಿರುವ ಗೆಳೆಯ ಶಶಿಗೆ
ಜಾಲದಲಿ ಕಳೆದೋದ ಮಾಹಿತಿಯ ಹುಡುಕಾಡಿ
ಹಲಹೊಸತ ಕಲಿಸಿರುವ ಗೆಳೆಯಾದಿಗೆ|೨|
ಹೀಗಲ್ಲ ಹಾಗೆಂದು ತಿದ್ದೆನ್ನ ಜೊತೆಗಿದ್ದ
ಹಲಹೊಳಹು ತೋರಿಸಿದ ರವಿ, ಕಿರಣಗೆ
ಮಾಹಿತಿಯ ಹರಿಸುತಿಹ ಹರೀಶನಿಗೆ
ಹೊಸಲೋಕ ತೋರಿಸಿದ ಟೆಕ್ಸತ್ಯಗೆ
ಹೇಳಲೋದರೆ ನಾನು, ಹಲವಾರು ಜನರಿಹರು
ಮೆಚ್ಚಿಹರು, ಚುಚ್ಚಿಹರು, ನೋಡಿ ನಕ್ಕವರು
ಕುಣಿಯೆಂದು ರಂಗದಲಿ ಬಿಟ್ಟು ನಕ್ಕವರು
ಬೆಳೆ ತಮ್ಮ ನೀನೆಂದು ನೀರೆರೆದ ಜನರು
ಎಲ್ಲರಿಗೂ ಅರ್ಪಣೆ ಈ ಕೆಲವು ಸಾಲುಗಳು
ಹೇಳಲಾಗದ ಭಾವ ತಿಳಿಸಲೆಂದು
ಮೆಚ್ಚಿದ ಮನವೊಮ್ಮ ನೆನೆಯಲೆಂದು|೩|
ಪಯಣದ ಆರಂಭ
ಬರೆಯಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಆದರೆ ಕವಿತೆ ಬರೆಯಲಾಗಿರಲಿಲ್ಲ. ಮೊದಲ ಕವಿತೆ ಬರೆದದ್ದು ಇದೇ ವರ್ಶದ ಫೆಬ್ರವರಿ ಏಳರಂದು..ಅದು ಕವನ ಅನ್ನುವುದಕ್ಕಿಂತ ಭಾವವನ್ನು ಸಾಲುಗಳಲ್ಲಿ ಸೆರೆ ಹಿಡಿಯಲು ನಾ ಮಾಡಿದ ಪ್ರಯತ್ನ ಎನ್ನಬಹುದೇನೋ..ಆಗ ಸ್ಪೂರ್ತಿಯಾಗಿದ್ದು ಗೆಳೆಯ ಶಶಿ, ಕವನ ಸಂಕಲನ ಪ್ರಕಟಿಸಿದ್ದ ತಂಗಿ ಸೌರಭ. ,ಒದಲು ಬರೆದದ್ದನ್ನ ಕವನ ಅನ್ನುವುದಕ್ಕಿಂತಲೂ ಮುಗಿಯುತ್ತಿದೆಯಲ್ಲಾ ಇಂಜಿನಿಯರಿಂಗ್ ಎಂಬ ವ್ಯಥೆ ಎನ್ನಬಹುದೇನೋ..ತಮಾಶೆಗೋ ಏನೋ ಗೆಳೆಯರು ಬಹಳವೇ ಏರಿಸಿದರು.ಅದಕ್ಕೆ ಕಾರಣವಾದ FaceBook ಗೂ ಧನ್ಯವಾದ ಹೇಳಲೇಬೇಕು. ಆಮೇಲೆ ಹೊತ್ತೊಯ್ಯುತ್ತಿದ್ದ ಸತ್ತ ಹೆಣವನ್ನು ಕಂಡ ನನಗೆ ಏನು ಕಂಡಿತೋ ಏನೋ ಮತ್ತೊಂದು ಬರೆದೆ. ಅದನ್ನು ಮೆಚ್ಚಿದ ನನ್ನ ಮಾವ "ಸಂಪದ", "ಕೆಂಡ ಸಂಪಿಗೆ" ಗಳ ಬಗ್ಗೆ ಹೇಳಿದರು. ಅದೇ ದಿವಸ ಗೆಳತಿಯೊಬ್ಬಳು "ಕಥೆ ಕವನ ಕಾಲಹರಣ" ಕ್ಕೆ ಹಾಕಿದಳು.. ಅಲ್ಲಿ ಸಿಕ್ಕಿದ ಪ್ರೋತ್ಸಾಹಕ್ಕೆ ನಾನು ಎಂದೂ ಋಣಿಯಾಗಿರಬೇಕು. ಅಲ್ಲಿನ ಕಿರಣಣ್ಣ,ಅನ್ಸತ್ತೆ, ಪ್ರಶಾಂತಣ್ಣ, ಮಂಜಣ್ಣ .. ಈಗ ಗಣೇಶಣ್ಣ ಎಲ್ಲರೂ ನಾ ಬರೆದ ಕವಿತೆ, ಲೇಖನಗಳನ್ನ ಮೆಚ್ಚಿ ಬೆನ್ನು ತಟ್ಟುತ್ತಾ ಬಂದರು, ತಟ್ಟುತ್ತಿದ್ದಾರೆ. ಕಿರಣಣ್ಣನನ್ನಂತೂ ನಾನು ಹಲವಕ್ಕೆ ಗುರುವೆಂದೇ ಅನ್ನಬಹುದು.
ನಂತರ
"ಸಂಪದ" ದಲ್ಲಿ ಬರೆದ ಲೇಖನದಿಂದ ಪರಿಚಯವಾದವರು ಶಿವಮೊಗ್ಗದ ಸತ್ಯಚರಣರು. ಅವರಿಂದ ಸುಮಾರಷ್ಟು ತಂತ್ರಜ್ಞಾನ ವಿಷಯಗಳ,"ನಿಲುಮೆ"ಯ ಪರಿಚಯವಾಯಿತು.ಈಗಲೂ ಹೊಸದಕ್ಕೆ ಬೆನ್ನು ತಟ್ಟುತ್ತಲೇ ಇರುತ್ತಾರೆ. ಆಮೇಲೆ ಮಂಜಣ್ಣನಿಂದ ಪರಿಚಯವಾದದ್ದು "ಕನ್ನಡ ಬ್ಲಾಗ್". ಅಲ್ಲಿಂದಲೂ ಹಲವು ಮೆಚ್ಚೋ, ಪ್ರೋತ್ಸಾಹಿಸಿದ ಗೆಳೆಯರು ಸಿಕ್ಕಿದರು. ಪ್ರಮೋದ್ ಶೆಟ್ಟಿ, ಚೌಟರು,ಮೋಹನ್ ಮತ್ತುಳಿದ ಹಲವು ಅಡ್ಮಿನ್ಗಳು ಬರೆದ ಎಲ್ಲಾ ಕವನ, ಲೇಖನಗಳನ್ನೂ ಮೆಚ್ಚುತ್ತಾ ಬಂದಿದ್ದಾರೆ. ಹಲ ವಿಷಯ ಖಂಡಿಸಿದ, ತಿದ್ದಿದ ರವಿ ಮೂರ್ನಾಡರನ್ನಂತೂ ಮರೆಯುವಂತೆಯೇ ಇಲ್ಲ.
ಹೇಗೆ ಮರೆಯಲಿ ನಾನು ಹರೀಶಣ್ಣನ ಬಳಗವ? ಅವ ಶುರು ಮಾಡಿದ ಗ್ರೂಪು, ಅಲ್ಲಿನ ಡಾಕೂ ನೆರವಾದ ಬಗ್ಗೆ ಹೇಳಲೇ ಬೇಕು. ಅಲ್ಲಿದ್ದ ೮೦ ಬ್ಲಾಗುಗಳಲ್ಲಿ ಒಂದೂ ಬಿಡದೇ ಎಲ್ಲವನ್ನೂ ಸುತ್ತುವ ಮನಸಾಗಿತ್ತು. ಬರೋಬ್ಬರಿ ಎರಡು ದಿನಗಳ ಪಯಣವದು. ಆಗ ಓದಿದ ಅಂಶಗಳಿಂದ ಇನ್ನೂ ಬೆಳೆಯುವುದೆಷ್ಟಿದೆ ಎಂಬ ಅರಿವಾದದ್ದು.. ಅಲ್ಲಿನ ಗೆಳೆಯರಿಗೂ ಮತ್ತೊಮ್ಮೆ ವಂದನೆ.
ಬ್ಲಾಗು ಬರೆಯಲು ಪ್ರೋತ್ಸಾಹಿಸಿದ ಮೊದಲ Followers ನಿತೀಶ, ಜಿತಿನ್ರಿಗೆ.ಬ್ಲಾಗಲ್ಲಿ ಬಂದು ಪ್ರತಿಕ್ರಿಯಿಸದಿದ್ದರೂ ಕಂಡಲ್ಲೆಲ್ಲಾ ಹೇಳುವ ಆದಿತ್ಯ,ಆದಿ, ಶಿಶಿ,ಗೌತು,ವಿಶ್ವ, ಅಕ್ಷಯ, ವರುಣ,ಪ್ರಜ್ವಲ್, ಪ್ರವೀಣ, ಕೋಳಿ, ರಕ್ಷಿತ್, ಸ್ವಾತಿ,ರಂಜಿತ,ಶ್ವೇತ,ವಿನಾಯಕ,ನಂದನ್, ಪ್ರಭಾತ, ಮಾನಸ್,ವಂದನಕ್ಕ,ಹಂಸಿಕಾ, ಅಭಿ,.. ಹಿಂಗೆ ಸುಮಾರು ಜನ ಗೆಳೆಯರು, ಮುಖ್ಯವಾಗಿ ಕ್ಲಾಸಲ್ಲಿ ಬೋರಿಡಿದ ಪೀರಿಯಡ್ಗಳ ಮಧ್ಯೆ ಇಂಥದರ ಮೇಲೆ ಬರಿಯೋ ಅಂಥ ತಮಾಶೆ ಮಾಡಿ ಆಮೇಲೆ ಮೆಚ್ಚುತ್ತಿದ್ದ ನನ್ನೆಲ್ಲಾ ಕ್ಲಾಸ್ಮೇಟುಗಳಿಗೆ, ನನ್ನೆರಡು ಕವನ ಪ್ರಕಟಿಸಿದ ಬ್ರಾಂಚಿನ ಪತ್ರಿಕೆಗೆ ,ಬ್ರಾಂಚಿಗೆ, FB ನಲ್ಲಿರುವ ರಾಕಿ,ಶಿರ್ವ,ಪ್ರಕಾಶರಂಥ ಹಿರಿಯರು,ಪ್ರದೀಪಣ್ಣನಂಥ, ಗೆಳೆಯರು .. ಎಲ್ಲರಿಗೂ ಚಿರಋಣಿ..
ಶ್ರುತಿ, ರೋಶ್ನಿ,ತೇಜು, ಪವಿ,
ಮುಗಿಸುವ ಮುನ್ನ
ಸಂಖ್ಯೆ ದಾಟಿರಬಹುದು. ಆದರೆ ಭಾವ ಅದೇ, ಪ್ರೌಡಿಮೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬರೆಯಲೆಂತೂ ಖುಶಿಯಾಗುತ್ತದೆ.. ನೂರು ತುಂಬಿದೆಯೆಂದು ಬರೆದುಕೊಳ್ಳುವುದು ಆತ್ಮಸ್ತುತಿಯಾಗುವುದೋ ಎಂಬ ಭಯವಿತ್ತು. ಆದರೆ ಇದಕ್ಕೆಲ್ಲ ಕಾರಣರಾದ ಇವರನ್ನೆಲ್ಲಾ ಹೆಸರಿಸದೇ ಇರುವುದು ಸ್ವಾರ್ಥವಲ್ಲದೇ ಬೇರಲ್ಲ ಅನ್ನಿಸಿತು.ಬರದೆ. ಹೆಚ್ಚಾದರೆ ಕ್ಷಮಿಸಿ. ಬಿಟ್ಟೋದರೂ ಕ್ಷಮಿಸಿ.. ಮೆಚ್ಚಿದ ಎಲ್ಲರಿಗೂ ಧನ್ಯವಾದ.. ಎಲ್ಲೆಲ್ಲಿ ಎಡವುತ್ತಿರುವೆ, ಎಲ್ಲಿಷ್ಟವಾದೆ ಎಂದು ಓದಿದ ತಾವು ತಿಳಿಸಿದಲ್ಲಿ ಅದಕ್ಕಿಂತ ಹೆಚ್ಚಿನ ಸಂತೋಷ ಬೇರಿಲ್ಲ.. ಮತ್ತೊಮ್ಮೆ ಹೇಳಿದ, ಹೇಳದ ಎಲ್ಲರಿಗೂ ವಂದಿಸುತ್ತಾ ಈ ಲೇಖನದಿಂದ ವಿರಮಿಸುವೆ.

Monday, November 14, 2011
ಡಾ|| ಕಲಾಂರೊಂದಿಗಿನ ಕ್ಷಣಗಳು
ಕಲಾಂರನ್ನು ಭೇಟಿ ಮಾಡಿದ್ದು
ಮೊದಲೇ ಹೇಳಿ ಬಿಡುತ್ತೇನೆ. ಚಿತ್ರಗಳ್ಯಾವುದೂ ನಕಲಿಯಲ್ಲ. ಅವೆಲ್ಲಾ ೬/೬/೦೬ ಅಂದರೆ ನಾನು ಕಲಾಂರನ್ನು ಭೇಟಿ ಮಾಡಿದ ದಿನ ತೆಗೆದ ಚಿತ್ರಗಳು.ಕಲಾಂರನ್ನು ಏಕೆ, ಹೇಗೆ ಭೇಟಿ ಆದೆ ಅನ್ನೋ ಕುತೂಹಲವೇ? ಹಾಗಾದರೆ ಓದಿ..
ನಾನು ಆಯ್ಕೆ ಆಗಿದ್ದು
೨೦೦೬ನೇ ಇಸವಿ ಮೇ ತಿಂಗಳ ಕೊನೆ ಆಗಿತ್ತು ಅನಿಸುತ್ತೆ. **ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿಶ್ವಪರಿಸರ ದಿನದ ಪ್ರಯುಕ್ತ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಇರುವ ಬಗ್ಗೆ ಪ್ರಕಟಣೆ ಬಂದಿತ್ತು. ನಾನಾಗ ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಗೆ ಕಾಲಿಡುವವನಿದ್ದೆ. ಹೇಗಿದ್ದರೂ ಸಮಯವಿದೆಯಲ್ಲ, ಯಾಕೆ ಬರೆಯಬಾರದು ಅನ್ನಿಸಿತು. ಅವರು "ಮರುಭೂಮಿ, ಮರುಭೂಮೀಕರಣ ಮತ್ತು ತಡೆಗಟ್ಟುವಿಕೆ" ಎಂಬ ವಿಷಯ ಕೊಟ್ಟಿದ್ದರು. ಸರಿ ಎಂದು ಆ ವಿಷಯದ ಬಗ್ಗೆ ವಿಷಯ ಸಂಗ್ರಹಿಸಿ ಬರೆದು ಕಳುಹಿಸಿದೆ. ಪ್ರಶಸ್ತಿ ಬರಲಿ ಅಂತ ಅಲ್ಲ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸೋ ಅವಕಾಶ ಸಿಕ್ಕಿದೆಯಲ್ಲ ಅಂತ. ಅಷ್ಟರೊಳಗೆ "ಪ್ರತಿಭಾ ಕಾರಂಜಿ" ಅನ್ನೋ ಸ್ಪರ್ಧೆಯಲ್ಲಿ ಎರಡು ವರ್ಷವೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿತ್ತಷ್ಟೇ :-)
ನಾನು ಕಳಿಸಿದ್ದು ಕಳಿಸಲು ನೀಡಿದ್ದ ಕೊನೆಯ ದಿನ ಬೇರೆ. ಅದೂ ಕೊನೇ ಕ್ಷಣದಲ್ಲಿ.. ಮನೆಯಿಂದ ಹೊರಡುವಾಗಲೇ ಸಂಜೆ ಐದು ಘಂಟೆ ಆಗಿತ್ತು. ಹೇಗೋ ಪೋಸ್ಟಾಫೀಸಿನ ಡಬ್ಬ ಐದೂವರೆಗೆ ಬಾಗಿಲು ಹಾಕೋದ್ರೊಳಗೆ ಹೋಗಿ ಪೋಸ್ಟ ಮಾಡಿದ್ದು !! :-). ಹೆಚ್ಚಿಗೆ ನಿರೀಕ್ಷೆಯೇನಿರಲಿಲ್ಲ. ಒಂದಿನ ಇದ್ದಕ್ಕಿಂದಂತೆ ಅಮ್ಮನಿಗೆ ಫೋನು ಬಂತು ಬೆಂಗಳೂರಿಂದ. ಪ್ರಶಸ್ತಿಯ ಮನೇನಾ ಕೇಳಿದ್ರಂತೆ. ಹೂ ಅಂತ ಅಮ್ಮ ನಂಗೇ ಕೊಟ್ರು ಫೋನು. ಪರಿಸರ ದಿನಕ್ಕೆ ಪ್ರಬಂಧ ಬರ್ದಿದ್ಯಾ ಅಂದ್ರು. ಹೂಂ ಅಂದೆ. ಅದರಲ್ಲಿ ನಿಂಗೆ ಮೊದಲನೇ ಬಹುಮಾನ ಬಂದಿದೆ. ಬೆಂಗಳೂರಿಗೆ ಬರಬೇಕು ನೀನು ೬ನೇ ತಾರೀಕಿಗೆ, ಜೊತೆಗೆ ಒಬ್ಬರು ಬರಬಹುದು ಅಂದ್ರು. ನಾನು ಅದುವರೆಗೂ ಬೆಂಗಳೂರಿಗೆ ಹೋದವನೇ ಅಲ್ಲ.ಹೇಗಪ್ಪಾ ಕಥೆ? ಬರದಿದ್ದರೆ ಮನೆಗೆ ಕಳುಹಿಸುತ್ತೀರಾ ಅಂದರು ಅನಿಸುತ್ತೆ ಅಮ್ಮ. ಹೇ , ಸನ್ಮಾನ್ಯ ರಾಷ್ರಪತಿ ಕಲಾಂ ಅವರು ಬರ್ತಿದ್ದಾರೆ ಕಣ್ರಿ ಪ್ರಶಸ್ತಿ ಕೊಡೋಕೆ, ಇಂಥಾ ಚಾನ್ಸು ಮಿಸ್ ಮಾಡ್ಕೋತೀರಾ ಅಂತ ಕೇಳಿದ್ರು!!..
ಒಂದು ಸಲ ಕಿವಿ ನೆಟ್ಟಗಾಯ್ತು. ಏನೋ ಪುಣ್ಯ ಅನ್ನಿಸುತ್ತೆ. ದೇಶದ ರಾಷ್ಟ್ರಪತಿಗಳ್ನ ಭೇಟಿ ಮಾಡೋ ಅವಕಾಶ ಕಳ್ಕೊಳಕಾಗತ್ತಾ ಅನ್ಸೋಕೆ ಶುರು ಆಯ್ತು. ಅಷ್ಟರಲ್ಲಿ ಅವರೇ ಹೇಳಿದರು(ಮೀರಾ ಕುಮಾರಿ ಅಂತ ಅವರ ಹೆಸರು ಅನಿಸುತ್ತೆ). ಅಲ್ಲಿ ಭಾರೀ ಭದ್ರತಾ ವ್ಯವಸ್ಥೆ ಇರತ್ತೆ. ಆಮಂತ್ರಣ ಪತ್ರಿಕೆ ಇಲ್ದೇ ಒಳಗೆ ಬಿಡಲ್ಲ. ಒಂದು ಪತ್ರಿಕೇಲಿ ಇಬ್ಬರು ಹೋಗಬಹುದು ಅಂತ. ಸರಿ ನಾವು ನಿಮಗೆ ಪೋಸ್ಟ ಮಾಡ್ತೀವಿ. ಎಂತಕ್ಕೂ ಈ ನಂಬರ್ ಇಟ್ಕಂಡಿರಿ ಅಂತ ಹೇಳಿದ್ರು. ಅವತ್ತು ಶುಕ್ರವಾರ(೧ನೇ ತಾರೀಕು) ಅನ್ಸತ್ತೆ..
ಶನಿವಾರ, ಸೋಮವಾರ ಆಯ್ತು.ಮಂಗಳವಾರ ಬೆಳಗಾಯ್ತು. ಪೋಸ್ಟ ಪತ್ತೇನೆ ಇಲ್ಲ. ಸಿಕ್ಕಾಪಟ್ಟೆ ಗಾಬರಿ ಶುರು ಆಯ್ತು. ಆ ಪತ್ರಿಕೆ ಸಿಗಲಿಲ್ಲ ಅಂದರೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿ ಬಿಡತ್ತಲ್ಲ ಅಂತ.. ಮೀರಾ ಮೇಡಮ್ಮಿಗೆ ಫೋನ್ ಮಾಡಾಯ್ತು. ಸಂಜೆವರೆಗೂ ನೋಡಿ, ಬರಬೋದು , ಬರ್ಲಿಲ್ಲ ಅಂದ್ರೆ ಆಮೇಲೆ ಫೋನು ಮಾಡಿ ಏನಾರೂ ಮಾಡ್ಬೋದಾ ನೋಡ್ತೀನಿ ಅಂದ್ರು. ನಮ್ಗೆ ಒಳಗೊಳಗೇ ಭಯ. ಪೋಸ್ಟ್ ಆಫೀಸಿಗೇ ಹೋಗಿ ಕಾದಿದ್ದೇ ಕಾದಿದ್ದು.. ಯಾರ್ಯಾರಿಗೋ ಕೇಳಿ ಕೇಳಿ ಅಂತೂ ಮಧ್ಯಾಹ್ನ ೩ ಘಂಟೆ ಹೊತ್ತಿಗೆ ಸಿಕ್ಕಿತು ಆ ಪತ್ರಿಕೆ.!!!
ಕಲಾಂರ ಭೇಟಿ
ಅಬ್ಬಾ. ಜೀವ ಬಂದಂಗಾಯ್ತು:-) ಕೊನೆಗೆ ಶಿವಮೊಗ್ಗಕ್ಕೆ ಹೋಗಿ, ಅಲ್ಲಿಂದ ಅಜ್ಜನ್ನ ಕರ್ಕಂಡು ಬೆಂಗಳೂರಿಗೆ ಹೋದೆ ನಾನು.ಅದರ ಮಾರನೇ ದಿನ ಕಲಾಂರನ್ನು ಭೇಟಿ ಆಗೋ ಸುವರ್ಣ ಕ್ಷಣ. ಅವರು ಬರೋದು ನಾಲ್ಕು ಘಂಟೆ ಹೊತ್ಗೆ ಅಂತ ನಿಗದಿಯಾಗಿತ್ತು.ನಮ್ಗೆಲ್ಲಾ ೨ ಘಂಟೆಗೇ ಅಲ್ಲಿರಕ್ಕೆ ಹೇಳಿದ್ರು.. ನಾವು ಉಳಿದುಕೊಂಡ ನೆಂಟರ ಮನೆಯಿಂದ ಬೆಳಗ್ಗೆನೇ ಹೊರಟು ದಾರಿಯಲ್ಲಿ ಊಟ ಮಾಡ್ಕಂಡು "ಜ್ಞಾನ ಜ್ಯೋತಿ ಸಭಾಂಗಣ" ಕ್ಕೆ ಹೋದೆವು. ಕಾರ್ಯಕ್ರಮ ಇದ್ದದ್ದು ಅಲ್ಲೇ. ಭಯಂಕರ ಭದ್ರತೆ ಅಲ್ಲಿ. ಮೊಬೈಲು ಜಾಮರಿಂದ ಹಿಡಿದು ತರಹೇವಾರಿ ತಪಾಸಣೆ. ಗೇಟಲ್ಲೇ ಸ್ವಲ್ಪ ಹೊತ್ತು ಕಾಯಿಸಿದರು. ಕೊನೆಗೆ ಎಲ್ಲಾ ತಪಾಸಣೆ ಮುಗಿಸಿ ಒಳಹೋಗಲು ಸುಮಾರು ಒಂದು ಘಂಟೆ ಹಿಡಿಯಿತು. ಅಂತೂ ಒಳಗೆ ಹೋದರೆ, ಆಗಲೇ ಸಭಾಂಗಣ ಭರ್ತಿ ಆಗತೊಡಗಿತ್ತು. ಡಾ. ಕಲಾಂರಿಗೆ ವಿದ್ಯಾರ್ಥಿಗಳ ಜೊತೆ ಸಂಭಾಷಿಸೋದು ಅಂದ್ರೆ ಬಹಳ ಇಷ್ಟ. ಹಾಗಾಗಿ ಚಿಣ್ಣರು, ಹೈಸ್ಕೂಲು ಹುಡುಗ , ಹುಡುಗಿಯರು ತುಂಬಿ ಹೋಗಿದ್ದರು.

ಅಲ್ಲಿ ಹೋಗಿ ನಮ್ಮ ಆಮಂತ್ರಣ ಪತ್ರಿಕೆ ತೋರಿಸಿ ಎಲ್ಲಾ ಮಾಹಿತಿ ನೀಡಿದ ಮೇಲೆ ನಮಗೆ ಅಂತ ನಿಗದಿಯಾದ ನಂಬರಿನ ಖುರ್ಚಿಗೆ ಕರೆದೊಯ್ದರು. ಮುಂದೆ ಮೂರು ಪತ್ರಕರ್ತರು, ವಿಐಪಿ ಗಳ ಸಾಲು ಆಗಿತ್ತು.ಅದರ ನಂತರದ ಸಾಲಲ್ಲಿ ನಮಗೆ ಕುಳ್ಳಿರಿಸಿದ್ದರು. ಅಂತೂ ಹೇಳಿದ ಸಮಯಕ್ಕೇ ಕಲಾಂ ಬಂದರು. ಅವರು ಸಮಯ ಪಾಲನೆಯಲ್ಲಿ ಎತ್ತಿದ ಕೈ. ಕಾರ್ಯಕ್ರಮ ಶುರು ಆಯಿತು. ಬಹುಮಾನ ವಿತರಣೆ, ಕೊನೆಗೆ ವಿದ್ಯಾರ್ಥಿಗಳೊಡನೆ ಸಂವಾದ ಅಂತ ನಿಗದಿಯಾಗಿತ್ತು.
ಅಂದು ಪ್ರಬಂಧ ಸ್ಪರ್ಧೆಯೊಂದೇ ಇರಲಿಲ್ಲ. ಇಂಗ್ಲೀಷ ಪ್ರಬಂಧ, ಚಿತ್ರಕಲೆ ಸ್ಪರ್ಧೇನೂ ಇತ್ತಂತೆ. ಅದರಲ್ಲಿ ವಿವಿಧ ವಿಭಾಗದ ವಿಜೇತರು ಬಂದಿದ್ದರು. ಮೊದಲ ಬಹುಮಾನ ಬಂದವರಿಗೆ ಕಲಾಂರಿಂದ ಬಹುಮಾನ ವಿತರಣೆ ಅಂತ ಘೋಷಿಸಿದ್ರು. ನನ್ನ ಹೆಸ್ರೂ ಬಂತು. ಮೈಯೆಲ್ಲಾ ರೋಮಾಂಚನ ಎದ್ದು ಹೋಗ್ಬೇಕಾದ್ರೆ. ಎಲ್ಲಾ ಕಡೆ ಚಪ್ಪಾಳೆ. (ಈಗ್ಲೂ ಅದ್ನ ನೆನಸ್ಕಂಡ್ರೆ .. ಸಿಕ್ಕಾಪಟ್ಟೆ ಖುಶಿ ಆಗುತ್ತೆ). ಪ್ರಶಸ್ತಿ ಅಂದ್ರು. ಎದ್ದುಹೋದೆ. ಇಂಗ್ಲೀಷಿನಲ್ಲಿ ಬರದ್ರೆ ನನ್ನೆಸ್ರು ಹೇಳಕ್ಕೆ ಬರದೆ ಸುಮಾರು ಜನ ತಪ್ಪು ಓದ್ತಾರೆ. ಪುಣ್ಯಕ್ಕೆ ನಿರೂಪಕಿ ಮೊದಲೇ ನನ್ನ ಕೇಳಿ ಉಚ್ಚಾರಣೆ ಕೇಳಿಕೊಂದಿದ್ರು :-) ಕಲಾಂರು ಕೈ ಕುಲುಕಿದ್ರು. ಪ್ರಶಸ್ತಿ ಪ್ರಧಾನ ಮತ್ತು ಫೋಟೋ ತೆಗೆಯುವ ಸಂದರ್ಭದಲ್ಲಿ ನಮ್ಮ ನಡುವೆ ನಡೆದ ಮಾತುಕತೆ..
Kalam: Where are you From?
Me: I am from a sagar, Shimoga District Sir
Kalam: Ok, Congratulations, What was the Topic?
Me: It Was in Kannada Sir, which means "Desert, Desertification and Its prevention"
ಅಷ್ಟು ಕೇಳಿದ ಕಲಾಂ ಶುಭ ಹಾರೈಸಿ ಬೀಳ್ಕೊಟ್ಟರು. ಆ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆಯುಕ್ತರು, ಪೋಲಿಸ್ ಆಯುಕ್ತರು, ಸಚಿವರಾದ ಚೆನ್ನಿಗಪ್ಪನವರು(ಮೂರನೇ ಚಿತ್ರ) ಇದ್ದರು. ಅವರಿಗೆಲ್ಲಾ ಅಲ್ಲಿಂದಲೇ ವಂದಿಸಿ ವೇದಿಕೆಯಿಳಿದೆ.
ಅವತ್ತು ಟೀವಿಯಲ್ಲಿ ಬಂದಿತ್ತಂತೆ ನನ್ನ ಚಿತ್ರ. ವಿಜಯಕರ್ನಾಟಕ, Deccan herald, Indian Express, Times Of India,Vijaya Times, ಕನ್ನಡ ಪ್ರಭ ಹೀಗೆ ಸುಮಾರು ಪೇಪರಲ್ಲಿ ಬಂದಿತ್ತು ನನ್ನ ಚಿತ್ರ. ವಿಜಯ ಕರ್ನಾಟಕದಲ್ಲಿ " ’ಪ್ರಶಸ್ತಿ’ಗೆ ಪ್ರಶಸ್ತಿ" ಅಂತ ಶಿರೋನಾಮೆಯಲ್ಲಿ ಕಲಾಂರಿಂದ ಪ್ರಶಸ್ತಿ ಪಡೆಯುತ್ತಿರುವ ಸಾಗರದ ಪ್ರಶಸ್ತಿ ಅಂತ ಒಳಪುಟದಲ್ಲಿ ಬರೆದಿದ್ರು. ಸುಮಾರು ದಿನದವರೆಗೆ ಆ ಖುಶಿ ಇತ್ತು. ನಮ್ಮ ಕಾಲೇಜಿಗೆ ಆ ಶೀಲ್ಡ ತಗಂಡುಬರೋಕೆ ಹೇಳಿದ್ರು. ಪ್ರಾಂಶುಪಾಲರಾದಿಯಾಗಿ ಎಲ್ಲಾ ಅಭಿನಂದಿಸಿದ್ರು. ನನ್ನ ಗೆಳೆಯರೆಲ್ಲಾ ಅವತ್ತು ರೇಗಿಸಿದ್ದೇ ರೇಗಿಸಿದ್ದು. "ಕೈ ಕೊಡೋ ಮಾರಾಯ.. ಎಂಥಕಾ? ನೀನು ಕಲಾಂಗೆ ಕೈಕೊಟ್ಟಿದೀಯ. ನಾವು ನಿಂಗೆ ಕೊಟ್ರೆ ಅವ್ರಿಗೆ ಕೊಟ್ಟಂಗಾಗತ್ತೆ.. " ಅಂತ.. ಈಗ್ಲೂ ಆ ಫೋಟೋ ನೋಡಿದ ಸ್ನೇಹಿತರು ಹಂಗೇ ತಮಾಷೆ ಮಾಡ್ತಿರ್ತಾರೆ :-) :-)
ನನ್ನ ಬಗ್ಗೆ ಕೊಚ್ಕಳಕೆ ಇದನ್ನ ಬರದೆ ಅಂತ ದಯವಿಟ್ಟು ಅಂದ್ಕೋಬೇಡಿ.ನಾನಿನ್ನೂ ಬರೆಯೋದಕ್ಕೆ ಕಲೀತಿರೋ ನಿಮ್ಮಂಗೆ ಒಬ್ಬ ಹವ್ಯಾಸಿ ಅಷ್ಟೆ.. "ಏ, ಈ ಬಗ್ಗೆ ಗೊತ್ತಿರದಿಲ್ಲ, ಬರಿ" ಅಂತ ಹೇಳ್ತಿದ್ದ ಗೆಳೆಯ ಆದಿ. .ನಿನ್ನೆ ಕಲಾಂರಿಗೆ ಅಮೇರಿಕಾದಲ್ಲಿ ಅವಮಾನ ಮಾಡಿದ ಸುದ್ದಿ ಕೇಳಿ ಬೇಜಾರಾಯ್ತು. ಅದಕ್ಕೆ ಬರೀಬೇಕು ಅನುಸ್ತು. ಬರದೆ..
ಇದ್ರಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲ. ಅನುಮಾನ ಇದ್ದರೆ ಆ ಹಳೆಯ ಪೇಪರ್ ಕಟಿಂಗನ್ನೂ ಹಾಕುತ್ತೇನೆ..
ಇಂತಿ ನಿಮ್ಮವ, ಅದೇ ಹಳೇ, ಸಾಮಾನ್ಯ ಪ್ರಶಸ್ತಿ :-)
* ಜುಲೈ ಆರಕ್ಕೆ "ವಿಶ್ವ ಪರಿಸರ ದಿನ". ಆ ಸಂಬಂಧ ಅರಣ್ಯ ಇಲಾಖೆಯಿಂದ ಹಲವು ಸ್ಪರ್ಧೆಗಳು ನಡಿಯುತ್ತಾ ಇರುತ್ತೆ. ಆ ಬಗ್ಗೆ ತಮಗೆಲ್ಲಾ ಗೊತ್ತೇ ಇರಬಹುದು. ಅದೇ ರೀತಿ ೨೦೦೬ ರಲ್ಲಿ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ರಾಜ್ಯಮಟ್ಟದ ಸ್ಪರ್ಧೆಗಳನ್ನ ಏರ್ಪಡಿಸಿದ್ದರು
ಮುಕ್ತಾಯ

Sunday, November 13, 2011
ಕಾಸರಗೋಡಿನ ಕೆ.ಪಿ. ಭಟ್ಟರು
ಮಲೆನಾಡಿನ, ಕೊಲ್ಲೂರು ಸಮೀಪದ ನಿಟ್ಟೂರಿನ ಬಳಿ ಮಾಸ್ತರಿಕೆ ಕೆಲಸ ಇದೆ ಅಂತ ತಿಳಿಯಿತು. ಸರಿ, ಅಂತ ಹೊರಟೇ ಬಿಟ್ಟರು. ಎಲ್ಲಿಯ ಕಾಸರಗೋಡು, ಎಲ್ಲಿಯ ಮಲೆನಾಡು.. ಕೈಯಲ್ಲಿ ಕಾಸಿಲ್ಲ. ಆದರೂ ಮನಸಲ್ಲಿ ಅಚಲ ಛಲ. ಮಂಗಳೂರಿನವರೆಗೆ ಹೇಗೋ ಟ್ರೈನು ಹತ್ತಿ ಬಂದರು. ಟಿ,ಸಿ ಕೇಳಿದರೆ ಕೈಯಲ್ಲಿ ಕಾಸಿಲ್ಲ. ಇದ್ದೊಂದು ಪೆನ್ನನ್ನೇ ಇತ್ತರು ಅವನಿಗೆ. ಏನನ್ನಿಸಿತೋ ಟಿ.ಸಿ. ಗೆ ಅಲ್ಲಿಯೇ ಇಳಿದು ಬಿಡು ಅಂದ. ಅಲ್ಲಿಂದ ಕುಂದಾಪುರ ಮಾರ್ಗದಲ್ಲಿ ಕಾಲ್ನಡಿಗೆಯಲ್ಲೇ ನಿಟ್ಟೂರಿಗೆ ನಡೆದು ಹೊರಟ್ರು. ೨-೩ ದಿನಗಳ ನಿರಂತರ ನಡೆದಾಟ. ಸಿಕ್ಕಿದ ಶಾಲೆ, ದೇವಸ್ಥಾನದಲ್ಲಿ ನಿದ್ರೆ.ಊಟವಿಲ್ಲ. ಕೊನೆಗೆ ಕುಂದಾಪುರದಲ್ಲಿ ಮನೆಯೊಂದರಲ್ಲಿ ಬಾವಿಯ ನೀರು ಸೇದಿ ಸ್ನಾನ ಮಾಡಿಕೊಳ್ಳಲೇ ಅಂತ ಕೇಳಿದರಂತೆ, ಅಲ್ಲಿ ಆಗ ಅವರ ಜನಿವಾರ ಕಂಡ ಆ ಬ್ರಾಹ್ಮಣದಂಪತಿ, ಒಳಕರೆದು ಊಟ ಹಾಕಿದರಂತೆ. ಅಂತೂ ನಿಟ್ಟೂರಿಗೆ ಬಂದರು. ಆದರೆ ಅಲ್ಲಿ ಕೆಲಸ ಸಿಗಲಿಲ್ಲ. ಆಗಲೇ ಭರ್ತಿ ಆಗಿದೆ ಎಂಬ ಉತ್ತರ!!!
ಅಲ್ಲಿ ಮತ್ತೆ ಒಂದು ವರ್ಷ ಹಂಗಾಮಿ ಮಾಸ್ತರರಾಗಿ ಕೆಲಸ. ಅಲ್ಲಿಂದ ಶಿವಮೊಗ್ಗದ ದೇಶೀ ವಿದ್ಯಾಶಾಲೆಗೆ ಕೆಲಸಕ್ಕೆ ಸೇರಿ ಶಿವಮೊಗ್ಗದಲ್ಲಿ ನೆಲೆನಿಂತರು.ತಂದೆ ತಾಯಿ, ತಂಗಿಯಂದ್ರಿನ್ನು ಇಲ್ಲಿಗೆ ಕರೆಯಿಸಿಕೊಂಡರು.ಶರಾವತಿ ಹಿನ್ನೀರು ಪ್ರದೇಶದಲ್ಲಿ ತಾವು ಕೆಲವೇ ವರ್ಷ ಕೆಲಸ ಮಾಡಿದರೂ ಇಲ್ಲಿಗೆ ಬಂದ ತಕ್ಷಣ ಅಲ್ಲಿನವರನ್ನು ಮರೆಯಲಿಲ್ಲ. ಆಗ ಆ ಭಾಗದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ತುಂಬಾ ಕಷ್ಟವಾಗಿತ್ತು. ಮನೆಯಲ್ಲಿ ಬಡತನ. ಮೂರೊತ್ತಿನ ಊಟ ಹೊಂದಿಸುವುದೇ ಕಷ್ಟವಾಗೋ ಅಂತ ಪರಿಸ್ಥಿತಿ. ಅಂತಹದರಲ್ಲಿ ಮಗನೋ, ಮಗಳನ್ನೋ ದುಡಿಸುವುದರ ಬದಲು ಹೊರಗೆಲ್ಲೋ ಬಿಟ್ಟು ಓದಿಸುವುದು, ಅವರ ಅಲ್ಲಿನ ಹಾಸ್ಟೆಲ್ಲು, ಊಟ, ಓಡಾಟ, ಬಟ್ಟೆ ಬರೆ, ಪುಸ್ತಕ, ಕಾಲೇಜಿನ ಫೀಸು ಇತ್ಯಾದಿ ಕಟ್ಟುವುದು ಕನಸಿನ ಮಾತೇ ಆಗಿತ್ತು. ಅಂತಹ ಸಂದರ್ಭದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ನೆರವಿಗೆ ಬಂದವರು ಪುರುಷೋತ್ತಮ ಭಟ್ಟರು. ಅನೇಕರಿಗೆ ಮನೆಯಲ್ಲೇ ಆಶ್ರಯ ಇತ್ತರು. ತಮ್ಮ ಪರಿಚಯದವ್ರ ಮೂಲಕ ಅನೇಕರಿಗೆ ವಾರಾನ್ನದ ಅವಕಾಶ ಮಾಡಿಕೊಟ್ಟರು, ಕೆಲವರಿಗೆ ಶಿವಮೊಗ್ಗೆಯ ಬ್ರಾಹ್ಮಣ ವಸತಿ ನಿಲಯದಲ್ಲಿ ಅವಕಾಶ ಮಾಡಿಕೊಟ್ಟರು.ಉಚಿತವಾಗಿ ತಮ್ಮ ವಿದ್ಯೆಯನ್ನೂ ಧಾರೆಯೆರೆದು, ಕೆಲವೊಮ್ಮೆ ಅವರ ಫೀಸನ್ನೂ ತಾವೇ ತುಂಬಿ ಅವರ ವಿದ್ಯಾಭ್ಯಾಸಕ್ಕೆ ಬೇಕಾದಂತಹ ಎಲ್ಲಾ ಅನುಕೂಲತೆಗಳನ್ನೂ ಮಾಡಿಕೊಟ್ಟರು. ಇಂದು ಅವರ ಮನೆಯಲ್ಲಿ ಓದಿದಂತಹವರು ಸಾಫ್ಟವೇರ್ ಇಂಜಿನಿಯರ್ ಗಳು , ಚಾರ್ಟೆಡ್ ಅಕೌಂಟೆಂಟಗಳು, ಬ್ಯಾಂಕ್ ಮ್ಯಾನೇಜರ್ಗಳು, ಪೋಸ್ಟ್ ಆಫೀಸು ಹೀಗೆ ಹಲವು ಇಲಾಖೆಗಳಲ್ಲಿ ಉನ್ನತ ಉದ್ಯೋಗಳಲ್ಲಿದ್ದಾರೆ.ಪಾಠ ಹೇಳುತ್ತಲ್ಲೇ ಬಿ.ಎ ಬಿ.ಎಡ್ ಮಾಡಿದ್ದ ಇವರು ಹಲವಾರು ವರ್ಷಗಳ ಕಾಲ NCC ಯಲ್ಲಿ ಕಮಾಂಡಿಂಗ್ ಆಫಿಸರ್ ಆಗಿದ್ದರು. ಇವರ ವಿದ್ಯಾರ್ಹತೆಗೆ, ಪಾಂಡಿತ್ಯಕ್ಕೆ ಗೌರವಿಸುತ್ತಿದ್ದ ಸಹ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಇವರು ಕೆ.ಪಿ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು.ಸಂಸ್ಕೃತ, ಹಿಂದಿ ಪಂಡಿತರೆಂದೂ ಇವರನ್ನು ಗೌರವಿಸುತಿದ್ದರು. MA ವಿದ್ಯಾರ್ಥಿಗಳೂ ಇವರ ಬಳಿ ಕನ್ನಡ, ಹಿಂದಿ ಪಾಠಕ್ಕೆ ಬರುತ್ತಿದ್ದುದು ಇವರ ಪಾಂಡಿತ್ಯಕ್ಕೆ ಸಾಕ್ಷಿ. SSLC ಇಂದ ಹಿಡಿದು , ಹಲವು ಬೇರೆ ಬೇರೆ ಸ್ಥರದ ವಿದ್ಯಾರ್ಥಿಗಳು ಇವರ ಮನೆಗೆ ಪಾಠಕ್ಕೆಂದು ಬರುತ್ತಿದ್ದರು. ಯಾರು ಕೇಳಿದರೂ ಇಲ್ಲಾ ಅನ್ನದೇ, ನಯಾ ಪೈಸೆ ತೆಗೆದುಕೊಳ್ಳದೆ ಅಕ್ಷರಶ ಉಚಿತವಾಗಿ ವಿದ್ಯೆಯನ್ನು ದಾನ ಮಾಡುತ್ತಿದ್ದರು ಕೆ.ಪಿ. ಸರ್.
ದೇಶೀಯ ವೀದ್ಯಾಶಾಲೆಯಲ್ಲಿ ಮಾಸ್ತರರಿಂದ ಪ್ರಾಂಶುಪಾಲರಾದರು. ಶಿವಮೊಗ್ಗದಲ್ಲಿ ಪದವೀಧರರ ಸಹಕಾರ ಸಂಘ ಸ್ಥಾಪಿಸಬೇಕೆಂಬ ಚರ್ಚೆ ನಡೆಯುತ್ತಿತ್ತು ಆಗ. ಅದರ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದರು. ಸಣ್ಣದಾದ ಬಾಡಿಗೆ ರೂಮಿನಲ್ಲಿ ಪ್ರಾರಂಭವಾದ ಆ ಸಂಘ ಈಗ ಮೂರು ಮಹಡಿಗಳ ಸ್ವಂತದ ಬೃಹತ್ ಕಟ್ಟಡ ಹೊಂದುವಷ್ಟರ ಮಟ್ಟಿಗೆ ಬೆಳೆದಿದೆ. ಶಿವಮೊಗ್ಗದ ಪಾಲಿಗೆ Graduate Co-operative Society ಹೆಸರು ಕೇಳಿರದ ಪದವೀಧರರೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಹಾಗೆಯೇ ಶಿವಮೊಗ್ಗದ ಹವ್ಯಕ ಸಂಘ ಸಂಸ್ಥಾಪಕರಲ್ಲಿ, ಸಿರಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸಂಸ್ಥಾಪಕರಲ್ಲಿ ಒಬ್ಬರು.
ನಿವೃತ್ತಿಯಾದ ಮೇಲೆ ಆದಿಚುಂಚನಗಿರಿಯ ಶಿವಮೊಗ್ಗ ಶಾಖೆಯ ಪ್ರಸನ್ನನಾಥ ಸ್ವಾಮೀಜಿಗಳ ಆಹ್ವಾನದ ಮೇರೆಗೆ ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯಲ್ಲಿಯೂ ಸಂಸ್ಕೃತ, ಹಿಂದಿ, ಕನ್ನಡ ಮೂರೂ ಭಾಷೆಗಳ ಮಾಸ್ತರರಾಗಿ ಕೆಲವರ್ಷ ಸೇವೆ ಸಲ್ಲಿಸಿದರು.ಗುರುಗಳಿಗೆ ಸಂಸ್ಕೃತದ ಸಂಬಂಧದ ವಿಷಯಗಳಲ್ಲಿಯೂ ನೆರವಾಗುತ್ತಿದ್ದರು. ಕೊನೆಗೆ ತಮ್ಮ ಮಕ್ಕಳೆಲ್ಲ ಬೆಳೆದು ದೊಡ್ಡವರಾದ ಮೇಲೆ ಅದರಿಂದ ನಿವೃತ್ತಿಯಾದರು.ಎಂದೂ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಂದ ದೂರ ಉಳಿಯಬಯಸುವ ಅವರು ಯಾವ ಪುರಸ್ಕಾರಕ್ಕೂ ಅರ್ಜಿ ಹಾಕಲಿಲ್ಲ. ಹಾಕೆಂಬ ಸ್ನೇಹಿತರ ಒತ್ತಾಯಕ್ಕೂ ಮಣಿಯಲಿಲ್ಲ. ಅಂತಹದರಲ್ಲೂ ಆವರಿಗೆ ಕನ್ನಡ ಸಂಘದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಂತವು ಹುಡುಕಿಕೊಂಡು ಬಂದಿವೆ. ತಮ್ಮಲ್ಲಿ ಕಲಿತ ವಿದ್ಯಾರ್ಥಿಗಳು ಇಂದಿಗೂ ತಮ್ಮನ್ನು ನೆನೆಸಿಕೊಳ್ಳುವುದು, ಪೇಟೆಯಲ್ಲಿ ಸಿಕ್ಕಾಗಲೆಲ್ಲಾ ನಮಸ್ಕರಿಸುವುದು, ಕೆಲವರು ಪ್ರತೀ ವಿಜಯದಶಮಿಗೆ ಮನೆಗೆ ಬಂದು ಬನ್ನಿ ಕೊಟ್ಟು ನಮಸ್ಕಾರ ಮಾಡಿ ಹೋಗೋದು.. ಇದಕ್ಕಿಂತಾ ಬೇರೆ ಸನ್ಮಾನ ಬೇಕಾ?
ಅಂದು ಅವರಿಂದ ಪಾಠ ಕಲಿತವರು ಇಂದು ರಾಜಕಾರಣಿಗಳು, ಶಿವಮೊಗ್ಗದ ವಿವಿಧ ಅಂಗಡಿಗಳಲ್ಲಿ, ಉದ್ದಿಮೆಗಳಲ್ಲೂ ಇದ್ದಾರೆ. ಹಾಗಾಗಿ ಇಂದು ಅವರೊಂದಿಗೆ ಎಲ್ಲೇ ಹೋದರೂ ಕನಿಷ್ಟ ಒಬ್ಬನಾದರೂ ಅವರ ಹಳೆಯ ವಿದ್ಯಾರ್ಥಿ ಸಿಗುತ್ತಾನೆ.ಕೆ.ಪಿ. ಮೇಷ್ಟ್ರೇ ಅಂತ ಫ್ಲಾಷ್ ಬ್ಯಾಕ್ ನೆನಪಿಸಿಕೊಳ್ಳುತ್ತಾರೆ. ಈಗಲೂ ಸಂಸ್ಕೃತದಿಂದ ಅನುವಾದಿಸಿದ ಪುಸ್ತಕಗಳನ್ನು ಪರಾಮರ್ಶೆಗೆ ತರುವ ಹಿರಿಯರು, ಸಂಸ್ಕೃತ ಭಾಷಣ, ಸಂದೇಹಗಳಿಗೆ ಎಡತಾಕುವ ಹುಡುಗರು ಅಪರೂಪಕ್ಕೊಮ್ಮೆಯಾದರೂ ಭೇಟಿಯಾಗುತ್ತಾರೆ. ಯಾರೇ ಬಂದರೂ ನಗುನಗುತ್ತಾ ಸ್ವಾಗತಿಸುವರು ಕೆ,ಪಿಯವರ ಧರ್ಮ ಪತ್ನಿ ಶ್ರೀಮತಿ ಗೌರಮ್ಮ. ಈ ದಂಪತಿಗಳಿಗೆ ಒಬ್ಬ ಮಗಳು, ಇಬ್ಬರು ಗಂಡು ಮಕ್ಕಳು. ಎಲ್ಲರಿಗೂ ಮದುವೆಯಾಗಿ, ಮಕ್ಕಳು. ಕಿರಿಯ ಮಗ ಈಗ ಭೂಸೇನೆಯಲ್ಲಿ ಕರ್ನಲ್, ಕಮಾಂಡಿಗ್ ಆಫೀಸರ್ . ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ, ಗುಜರಾತ್ , ರಾಜಸ್ಥಾನ ಗಡಿಯಲ್ಲಿ ಮಗ ಅಲ್ಲಿದ್ದಾಗ, ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಆಯ್ಕೆಯಾಗಿ ದಕ್ಷಿಣ ಆಫ್ರಿಕಾದ ಗೋಮಾದಂತಹ ಕಗ್ಗಾಡಿನಲ್ಲಿ ಒಂದೂವರೆ ವರ್ಷ ಕಳೆದಾಗಲೂ ಎದೆಗುಂದದೇ ಎಲ್ಲರನ್ನೂ ಸಮಾಧಾನಿಸುತ್ತಿದ್ದರು. ಪರರ ಕಷ್ಟಕ್ಕೆ ಯಾವಾಗಲೂ ದನಿಯಾಗುತ್ತಿದ್ದ ಅಜ್ಜ ತಮ್ಮ ಕಷ್ಟವನ್ನು ಯಾರೊಂದಿಗೂ, ಅಜ್ಜಿಯೊಂದಿಗೂ ತೋರ್ಪಡಿಸಿದವರಲ್ಲ.. ಅಷ್ಟೊಂದು ಸಹಿಷ್ಣೆತೆಯ, ವಿದ್ಯಾಮಯಿ, ಶಾಂತಮೂರ್ತಿ, ಕಿಂಚಿತ್ತೂ ಅಹಂಕಾರವಿಲ್ಲದ, ಸರಳ ಸಜ್ಜನ ಕೆ.ಪುರುಷೋತ್ತಮ ಭಟ್ಟರ ಬಗ್ಗೆ ಬರೆಯುತ್ತಿರುವುದು ನನಗಿಂದು ಹೆಮ್ಮೆಯಾಗುತ್ತಿದೆ. ಅವರು ಪತ್ನಿ ಸಮೇತರಾಗಿ ಹೀಗೆಯೇ ನೂರ್ಕಾಲ ಬಾಳಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ವಿರಮಿಸುತ್ತಿರುವ ಪ್ರೀತಿಯ ಮೊಮ್ಮಗ..Edit: 22nd October 2023: Ajja is no more. ನಮ್ಮೆಲ್ಲರ ಪ್ರೀತಿಯ ಅಜ್ಜ ಇಂದು ನಮ್ಮನ್ನಗಲಿದ್ದಾರೆ. 😢😢
Thursday, October 6, 2011
ಅಗಲಿದ ಚೇತನಗಳಿಗೆ ನಮನ
ಬೆಳಗ್ಗೆ ಎಂದಿನಂತೆ fb ಗೆ ಬರ್ತಿದ್ದಂತೆಯೇ ಕಂಡ ಮೊದಲ ಪೋಸ್ಟು.. "ಮತ್ತೂರು ಕೃಷ್ಣಮೂರ್ತಿಗಳು,ಸ್ಟೀಪ್ ಜಾಬ್ಸ್ ಆತ್ಮಕ್ಕೆ ಶಾಂತಿ ಸಿಗಲಿ.." ವಿಜಯದಶಮಿಯ ದಿನವೆಂದರೆ ಕೆಟ್ಟದ್ದರ ಒಳ್ಳೆಯದರ ವಿಜಯದ ಸಂಕೇತವೆಂಸು ಪ್ರತೀತಿ.ಆದರೆ ಅಂದೇ ಇಬ್ಬರು ಅಪ್ರತಿಮ ಸಾಧಕರ ಸಾವಿನ ಸುದ್ದಿ ಕೇಳುವಂತಾಯಿತಲ್ಲ ವಿಧಿಯೇ ಅನಿಸ್ತು.. ಸುದ್ದಿ ಸುಳ್ಳಾಗಿರಬಹುದೇ ಅನ್ನೋ ಮನದ ಮೂಲೆಯ ಆಸೆಯಿಂದ ಒಮ್ಮೇ ನೆಟ್ಟಲ್ಲಿ ಹುಡುಕಿದೆ.. ಅದರ ತುಂಬೆಲ್ಲಾ ಸ್ಟೀವ್ ಜಾಬ್ಸನದೇ ಸುದ್ದಿ.. ಮತ್ತೂರು ಕೃಷ್ಣಮೂರ್ತಿಗಳ ಸುದ್ದಿ ತಿಳಿಯಲು ಮತ್ತೂರು ಗೆಳೆಯನಿಗೆ ಸಂದೇಶ ಕಳಿಸಾಯಿತು..ಎಲ್ಲೆಲ್ಲೂ ಬರೀ ಬೇಸರದ ಪೋಸ್ಟುಗಳು.. ಯಾಹೂ, ibn, times news ಹೀಗೆ ಎಲ್ಲೆಲ್ಲೂ ಸ್ಟೀವ್ ಜಾಬ್ಸ್ ಮರಣದ ವಾರ್ತೆ, fb, google + ಹೀಗೆ ಸಾಮಾಜಿಕ ತಾಣಗಳಲ್ಲೂ ಅವರಿಗೆ ನೆನಪಿನ ಕಂಬನಿ, ಫೋಟೋಗಳು, ವೀಡಿಯೋಗಳು,ಕೊಂಡಿಗಳು, ಅವರ ppt ಗಳು, ನುಡಿಮುತ್ತುಗಳು.. ಹೀಗೆ ಏನುಂಟು.. ಏನಿಲ್ಲ.. ಆ ಎರಡೂ ಮಹಾಚೇತನಗಳಿಗೆ ನನ್ನದೂ ಒಂದು ಈ ಮೂಲಕ ಪದಾಂಜಲಿ
ನೆನಪುಗಳು ಹಿಂದೆ ಜೀಕ್ತಾ ಜೀಕ್ತಾ ಸುಮಾರು ಎರಡೂವರೆ ವರ್ಷದಷ್ಟು ಹಿಂದಕ್ಕೆ ಹೋಗಿವೆ. ವರ್ಷ ppt ಮಾಡೋದು ಹೇಗೆ ಅಂತ ಸ್ಟೀವ್ ಜಾಬ್ಸನ ನೋಡಿ ಕಲೀರಿ ಅಂತ ನಮ್ಮ ಕಾಲೇಜಿನ ಪ್ರೊಫೆಸರ್ ಹೇಳಿದ್ರು . ದೊಡ್ಡ ಪರದೆ, ಅದರ ಮುಂದೆ ಕಿರಿದಾದ ಮನುಷ್ಯ. ಪರದೆಗೆ ಹೊಂದೋ ಕಪ್ಪು ಬಣ್ಣದ ಬಟ್ಟೆ.. ಪರದೆಯ ಮೇಲೆ ಜಾಬ್ಸ್ ಹೇಳುತ್ತಿದ್ದಂತೆಯೇ ಮೂಡುತ್ತಿದ್ದ ದೃಶ್ಯಗಳು.. ವಾಕ್ಯಗಳು.. ಅದೂ ತೀರಾ ಬೇಕಾಗುವಂತದ್ದು ಮಾತ್ರ.. ಆಪಲ್ ಅಂತ ಜಾಬ್ಸ್ ಪರದೆಯ ಮುಂದೆ ಕೈನೀಡಿದರೆ ಅವನ ಕೈಮೇಲೆ ನಿಖರವಾಗಿ ಬಂದು ಕೂರುತ್ತಿದ್ದ ಸೇಬಿನ ಚಿತ್ರ.. ಎಂತಾ ನಿಖರತೆ, ಪ್ರತೀ ಸಲವೂ ಎಷ್ಟೊಂದು ಪೂರ್ವತಯಾರಿ.. ಎಲ್ಲವೂ ಮೇಳೈಸಿ ಅವನ ಪ್ರಸ್ತುತಿಯನ್ನು ನೋಡೋದು ಒಂದು ರಸಕಾವ್ಯದಂತೆ ಭಾಸವಾಗುತ್ತಿತ್ತು.. ಹಾಗೆ ನೋಡನೋಡುತ್ತಲೆ ನನ್ನ ಪಾಲಿಗೊಬ್ಬ ನಾಯಕನಾಗಿದ್ದ ಸ್ಟೀವ್ ಜಾಬ್ಸ್.
೧೯೫೫ ರಲ್ಲಿ ಜನಿಸಿದ ಸ್ಟೀವ್ ಜಾಬ್ಸ್ ಪ್ರಖ್ಯಾತರಾಗಿದ್ದು ಅವರ ವಿಶಿಷ್ಟ ಪ್ರಸ್ತುತಪಡಿಸುವ ಶೈಲಿಗೆ, ಅವರು ಸ್ಥಾಪಿಸಿದ ಆಪಲ್ ಗೆ. ಐಪೋಡ್, ಐಪ್ಯಾಡ್,, ಐಟ್ಯೂನ್, ಆಪಲ್ ಆಪರೇಟಿಂಗ್ ಸಿಸ್ಟಮ್, ಆಪಲ್ ಮಾಕ್ ಕಂಪ್ಯೂಟರಗಳು, ನೋಟ್ ಬುಕ್.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಉಳ್ಳವರ ಆಸ್ತಿ, ಸಂಶೋಧಕರ ಸಹಾಯಕ ಅಷ್ಟೇ ಆಗಿದ್ದ ಕಂಪ್ಯೂಟರ್ ತಂತ್ರಜ್ನಾನವನ್ನು ಜನಸಾಮಾನ್ಯರ ಬಳಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಆಪಲ್ ಹೆಸರು ಕೇಳಿರದ (ಯುವ)ಕಂಪ್ಯೂಟರ್ ಬಳಕೆದಾರರೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದೇನೊ ಅನ್ನುವಷ್ಟರ ಮಟ್ಟಿಗೆ ನಮಗೆಲ್ಲಾ ಆಪಲ್ ಹವಾ ಹಬ್ಬಿಸಿದ ಮಹಾಶಯ ಈ ಸ್ಟೀವ್ ಜಾಬ್ಸ್. ಇನ್ನು ಈತನ ಪ್ರಸ್ತುತಪಡಿಸುವ ಶೈಲಿ(presentation style) ಗೆ ನಾನಂತೂ ಮರುಳಾಗಿ ಹೋಗಿದ್ದೆ.ಅವನ ಬಗ್ಗೆ ಹಲವಾರು ದಂತಕಥೆಗಳಿವೆ.ಜೀವನದ ರೀತಿಯೂ ಸ್ಪೂರ್ತಿದಾಯಕ. ಪ್ರಸ್ತುತಿ ಅಂದ ಹಾಗೆ ಅವರ ೧೯೭೪ರ ಆಪಲನ್ನು ಗ್ರಾಹಕರಿಗೆ ಪರಿಚಯಿಸಿದ ರೀತಿಯ ಬಗ್ಗೆ ಓದಿದ್ದು ನೆನಪಾಗುತ್ತಿದೆ.. ಜನವರಿ ೨೪, ೧೯೭೪.. ದೊಡ್ಡ ವೇದಿಕೆ. ಮಧ್ಯೆ ನಿಂತ ಸ್ಟೀವ್ ಜಾಬ್ಸ್. ತನ್ನ ಆಪಲ್ ಕಂಪ್ಯೂಟರ್ ಇಂಕ್ ಅನ್ನು ಅವರಿಗೆ ಪರಿಚಯಿಸೋದು ಅವನ ಉದ್ದೇಶ. ಅವನು ತಂದಿದ್ದು ಒಂದು ಸಣ್ಣ ಚೀಲ.. ನೀವು ನೋಡಿದ್ದನ್ನು ನಂಬಲೇಬೇಕು ಇಂದು ಎಂದ ಜಾಬ್ಸ್..ಅಲ್ಲದೇ ಇದರ(ಕಂಪ್ಯೂಟರ್ ನ) ಶಕ್ತಿಯೆಲ್ಲವೂ ಈಗಿನ ibm ಕಂಪ್ಯೂಟರ್ ಡಬ್ಬಿಯ ೧/೩ ರಷ್ಟು ಸಣ್ಣ ಸ್ಥಳದಲ್ಲಿ. ಹೇಳಿದ್ದು ಸಾಕು ನೀವೆ ನೋಡುವಿರಂತೆ.. ಮುಂದೆ ಪರದೆಯ ಮೇಲೆ ಮೂಡೋ ಚಿತ್ರಗಳೆಲ್ಲಾ ಚೀಲದೊಳಗೆ ಇರೋದ್ರಿಂದ ಆಗುತ್ತೆ ಅಂದ..ಸರಿ, ಅಲ್ಲೇ ಪಕ್ಕದಲ್ಲಿಟ್ಟಿದ್ದ ಚೀಲದಿಂದ ತಾನು ಪ್ರಸ್ತುತ ಪಡಿಸಬೇಕಾಗಿದ್ದ ಪೆಟ್ಟಿಗೆ ತೆರೀತಾನೆ. ಅದಕ್ಕೊಂದು ಡಿಸ್ಕ್ ಹಾಕಿ(ಆಗೆಲ್ಲಾ ಈಗಿನಂತೆ ಪೆನ್ ಡ್ರೈವು, ಪ್ಲಾಷ್ ಡ್ರೈವುಗಳು ಇರಲಿಲ್ಲವಲ್ಲ..)ಅದನ್ನು ಚಾಲು ಮಾಡಿದ. "chariots of fire" ಚಿತ್ರದ ದೃಶ್ಯಗಳು ಮೂಡಲಾರಂಭಿಸಿತು.. spread sheet ನಲ್ಲಿ ಕಟ್ಟಡಗಳ ದೃಶ್ಯಗಳು, ಚೆದುರಂಗದ ಆಟ, ಮಾಕ್ ಬಗ್ಗೆ ಕನಸು ಕಾಣ್ತಿರೋ ಸ್ಟೀವ್ ಜಾಬ್ಸನದೇ ಚಿತ್ರಗಳು ಮೂಡಲಾರಂಭಿಸಿತು.. ಆ ಕಾಲಕ್ಕೆ ಆ ಸಣ್ಣ ಯಂತ್ರದ ಅಷ್ಟೆಲ್ಲಾ ಕೆಲಸಗಳು ಪವಾಡದಂತೆಯೇ ಕಂಡಿರಲು ಸಾಕು.. ಅದು ಇಲ್ಲಿಗೇ ಮುಗಿಯಲಿಲ್ಲ. ಆ ಕಂಪ್ಯೂಟರ್ ಮಾತನಾಡಲಾರಂಭಿಸಿತು.. "ಹಲೋ, ನಾನು ಮಾಸಿಂಟೋಶ್.. (ಮ್ಯಾಕ್). ಆ ಚೀಲದಿಂದ ಹೊರಬರೋಕೆ ಖುಶಿ ಆಗ್ತಾ ಇದೆ. ನನ್ನ ತಂದೆಗೆ ಸಮಾನನಾದ ಈ ವ್ಯಕ್ತಿ, ಸ್ಟೀವ್ ಜಾಬ್ಸ್ ನನ್ನ ನಿಮಗೆ ಪರಿಚಯಿಸಲು ಹೆಮ್ಮೆ ಆಗ್ತಾ ಇದೆ..".. ಪ್ರಚಂಡ ಕರತಾಡನ.. ಹಲ್ಲುಬಿಟ್ಟು ನಗದೇ ಇರಲು ಅವನು ಎಷ್ಟು ಪ್ರಯತ್ನ ಪಟ್ಟರೂ ವಿಜಯದ ಆ ಮಂದಹಾಸ ತುಟಿ ದಾಟಿಯೇ ಬಿಟ್ಟಿತು.. ಭವಿಷ್ಯಕ್ಕೆ ಹೊಸ ರೂಪ ಕೊಡೋ ನಾಯಕನ ಆಗಮನದ ಸಂತಸದಲ್ಲಿ..
ಕಂಪೆನಿಯಂದರೆ ಅದು ಒಬ್ಬ ಸೂಪರಮ್ಯಾನ್ ಕಟ್ಟಿ ಬೆಳೆಸಿ, ಎಲ್ಲ ಕೆಲಸ ಪೂರೈಸೋ ಮ್ಯಾಜಿಕ್ ಅಲ್ಲ. ಅಲ್ಲಿ ಸಾವಿರಾರು ಜನರ ಶ್ರಮ ಇದೆ. ಆದರೆ ibm, microsoft ಗಳ ಮಧ್ಯೆ ತನ್ನದೇ ಒಂದು ಕಂಪೆನಿ ಕಟ್ಟಿ. ಬೆಳೆಸಿ ಮೊದಲ ಸ್ಥಾನಕ್ಕೆ ಏರಿಸುವುದು ಹುಡುಗಾಟವಲ್ಲ. ನಮಗೇನು ಬೇಕೆಂಬುದನ್ನು ನಮಗಿಂತ ಮೊದಲೇ ಅರಿತ ಮಹಾನುಭಾವ ಜಾಬ್ಸ್.. ಕಿವಿಯಿಂದ ವೈರು ಹರಿದುಬರೋದು ಒಂದು ಫ್ಯಾಷನ್ ಆಗತ್ತೆ ಅಂತ ಈಗ ೨೦ ವರ್ಷದ ಹಿಂದೆ ಊಹಿಸೊಕ್ಕೆ ಸಾಧ್ಯನಾ? ಒಮ್ಮೆ ಆಪಲನಿಂದ ಹೊರಬಂದಿದ್ದ ಜಾಬ್ಸ ಬರುವಾಗ ಹೊಸ ಕನಸು ತಂದರು. ಕೇವಲ ತಂತ್ರಜ್ನಾನಕ್ಕೆ ಸೀಮಿತವಾಗಿದ್ದ ಅದನ್ನು media ಕ್ಕೂ ವಿಸ್ತರಿಸಿದರು. ಮೊದಲು ಕಂಪೆನಿ , ಆಮೇಲೆ ನಾನು ಅನ್ನೋ ಅವರ ಮನೋಭಾವ ಆದರ್ಶಪ್ರಾಯ. ಅದಕ್ಕೇ ಅವರ ppt ದೊಡ್ಡದಾಗಿ ಪರದೆಯ ಮುಂದೆ ಇರುತ್ತೆ, ಮುಂದಿರೋ ಜಾಬ್ಸ್ ವಾಮನಮೂರ್ತಿಯಂತೆ.. ಕಿತ್ತು ತಿನ್ನೋ ಕ್ಯಾನ್ಸರ್ ಜಾಬ್ಸನ ಜೀವನವನ್ನು ಕೆಲ ವರ್ಷಗಳ ಹಿಂದೆಯೇ ಕಿತ್ತು ತಿನ್ನೋದರಲ್ಲಿತ್ತು.. ಅದರ ವಿರುದ್ದ ಹೋರಾಡಿ ಇಷ್ಟು ವರ್ಷ ಜಯಿಸಿದ ಹೋರಾಟಗಾರ ಆತ. . ಕೊನೆಗೂ ವಿಧಿ ಬರಹವನ್ನು ಮೀರಲಾಗಲಿಲ್ಲ.. ಅದೇ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತು.. ಭಾರತದ ಮೂಲೆಯಲ್ಲಿರುವ ನಮ್ಮಂತಹ ಯುವಕರ ಬಗೆಗೆ ನಿಮಗೆ ಗೊತ್ತಿರದೇ ಇರಬಹುದು ಜಾಬ್ಸ್.. ಆದರೆ ನಿಮ್ಮ ಬಗ್ಗೆ ನಮಗೆ ಬಹಳ ಗೊತ್ತು.. ಹಲವು ಸ್ಪೂರ್ತಿ ನೀಡಿದ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಬೇಡುತ್ತೇನೆ.. ಸ್ಟೀವ್ ಜಾಬ್ಸ್ ಬಗ್ಗೆ ಶ್ರದ್ದಾಂಜಲಿ ಕಳಿಸುವವರು rememberingsteavejobs@apple.com ಗೆ ಕಳಿಸಬಹುದು ಅಂತ ಆಪಲ್ ತನ್ನ ವೆಬ್ ಸೈಟಲ್ಲಿ ಹೇಳಿದೆ..
ಮತ್ತೂರು ಕೃಷ್ಣಮೂರ್ತಿಗಳು ಜ್ನಾನವೃದ್ದರು. ವಯೋವೃದ್ದರು. ಅವರ ಬಗ್ಗೆ ಮೊದಲೇ ಬರೆದರೆ ಮುಂದಿನದು ಸ್ವಾರಸ್ಯ ಕಳೆದುಕೊಳ್ಳಬಹುದು ಅಂತ ಆಮೇಲೆ ಬರೆದಿದ್ದೇನೆ.. ತಪ್ಪಾಗಿದ್ದರೆ ಕ್ಷಮಿಸಿ. ಇವರು ಪ್ರಖ್ಯಾತ ಗಮಕ ಗಾಯನ ವಿದ್ವಾಂಸರು, ಬೆಂಗಳೂರಿನ ಭಾರತೀಯ ವಿದ್ಯಾಭವನದ ಮುಖ್ಯಸ್ಥರಾಗಿದ್ದವರು.ಪದ್ಮಶ್ರೀಯಂತಹ ಪ್ರಶಸ್ತಿ ಪುರಸ್ಕೃತರು.. ಇನ್ನು ಇನ್ನಿತರೆ ಬಿರುದು ಸನ್ಮಾನಗಳಿಗೆ ಲೆಕ್ಕವೇ ಇಲ್ಲ.. .ಅವರ ಕರ್ನಾಟಕ ಭಾಗವತ ಕಂಸವಧೆಯನ್ನು ಕೆಳಗಿನ ಕೊಂಡಿಯಲ್ಲಿ ತಾವು ವೀಕ್ಷಿಸಬಹುದು. www.youtube.com/watch?v=L-BqA9yp_kU.. ನಮ್ಮ ಶಿವಮೊಗ್ಗ ಜಿಲ್ಲೆಯವರೇ ಆದ ಇವರ ನಿಧನದಿಂದ ಗಮಕ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಬಗ್ಗೆಯೂ ಎಷ್ಟು ಬರೆದರೂ ಕಡಿಮೆಯೇ.. ನಿಮ್ಮ ಅಪ್ರತಿಮ ಸಾಧನೆಗೆ ಮತ್ತೊಮ್ಮೆ ನಮನಗಳು ಗುರುವರ್ಯ..
Tuesday, June 14, 2011
ಗಿರೀಶ್ ಸರ್ ಗೊಂದು ನಮನ
ನಂ ಗಣಿತದ ಸರ್ ಗಿರೀಶ್
ಪಾಠ ಕೇಳಿದವರ ಡೌಟ್ ಫಿನಿಷ್
ಮೊದಲ ಸೆಮ್ ಗಣಿತ ಕ್ಲಿಷ್ಟವೆನಿಸದೆ
ಮನಕಿಷ್ಟವಾದ ಗುರು ಗಿರೀಶ್|1|
ನಿಮ್ಮಿಂದ ಕಲಿತ vectors, jacobian
Fourier series, PDE
ಕಡಿಮೆ ಸಮಯದಲಿ ಹೆಚ್ಚು ಕಲಿಸಿದ
ಎರಡು ಸೆಮ್ಮುಗಳ ಮಧುರಾನುಭವ
ನಿಮ್ ನೆನಪಮರ ಸರ್ ಗಿರೀಶ್|2|
ನಮ್ಮೊಂದಿಗಿಂದು ನೀವಿಲ್ಲ
ಚಾಕಿ ತರುವೆನೆಂದವಳಿ ಪುತ್ರಿಯರಿ-
-ಗೇಳಿ ಹೊರಟ ತಂದೆ ಬರಲಿಲ್ಲ
ಜೆ.ಎನ್.ಎನ್ ಜೊತೆ ಸಹ್ಯಾದ್ರೀಲೂ
ಗಣಿತ ಜ್ನಾನವಿತ್ತ ಗುರುವಿಂದಿಲ್ಲ|3|
38 ರ ವಯಸಿನಲೇ
ಇಹಲೋಕ ತ್ಯಜಿಸಿದ ಗುರುವೇ
ನಿಮ್ ದೇಹ ಜೊತೆಗಿಂದು ಇಲ್ಲದಿದ್ದರೂ
ನೀ ನಮ್ಮ ಮನಸಿನಲೇ ಇರುವೆ.
ನೀವಗಲಿದಪಾರ ನೋವ ಭರಿಸೊ ಶಕ್ತಿ
ನಿಂ ಮನೆಗೆ ಸಿಗಲೆಂದು ಬೇಡುವೆವು..
ಅನಂತ ವಂದನೆ ನಿಮಗೆ ಸಲ್ಲಿಸುತಾ
ನಿಮ್ಮಾತ್ಮಕೆ ಶಾಂತಿಯ ಕೋರುವೆವು.|4|
ಪಾಠ ಕೇಳಿದವರ ಡೌಟ್ ಫಿನಿಷ್
ಮೊದಲ ಸೆಮ್ ಗಣಿತ ಕ್ಲಿಷ್ಟವೆನಿಸದೆ
ಮನಕಿಷ್ಟವಾದ ಗುರು ಗಿರೀಶ್|1|
ನಿಮ್ಮಿಂದ ಕಲಿತ vectors, jacobian
Fourier series, PDE
ಕಡಿಮೆ ಸಮಯದಲಿ ಹೆಚ್ಚು ಕಲಿಸಿದ
ಎರಡು ಸೆಮ್ಮುಗಳ ಮಧುರಾನುಭವ
ನಿಮ್ ನೆನಪಮರ ಸರ್ ಗಿರೀಶ್|2|
ನಮ್ಮೊಂದಿಗಿಂದು ನೀವಿಲ್ಲ
ಚಾಕಿ ತರುವೆನೆಂದವಳಿ ಪುತ್ರಿಯರಿ-
-ಗೇಳಿ ಹೊರಟ ತಂದೆ ಬರಲಿಲ್ಲ
ಜೆ.ಎನ್.ಎನ್ ಜೊತೆ ಸಹ್ಯಾದ್ರೀಲೂ
ಗಣಿತ ಜ್ನಾನವಿತ್ತ ಗುರುವಿಂದಿಲ್ಲ|3|
38 ರ ವಯಸಿನಲೇ
ಇಹಲೋಕ ತ್ಯಜಿಸಿದ ಗುರುವೇ
ನಿಮ್ ದೇಹ ಜೊತೆಗಿಂದು ಇಲ್ಲದಿದ್ದರೂ
ನೀ ನಮ್ಮ ಮನಸಿನಲೇ ಇರುವೆ.
ನೀವಗಲಿದಪಾರ ನೋವ ಭರಿಸೊ ಶಕ್ತಿ
ನಿಂ ಮನೆಗೆ ಸಿಗಲೆಂದು ಬೇಡುವೆವು..
ಅನಂತ ವಂದನೆ ನಿಮಗೆ ಸಲ್ಲಿಸುತಾ
ನಿಮ್ಮಾತ್ಮಕೆ ಶಾಂತಿಯ ಕೋರುವೆವು.|4|
Subscribe to:
Posts (Atom)