ಹಳೇಬೀಡು ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಅಲ್ಲಿನ ಹೊಯ್ಸಳೇಶ್ವರ, ಶಾಂತಲೇಶ್ವರ ದೇಗುಲಗಳು. ಅವುಗಳಿಗಿಂತ ಕೊಂಚ ಹಿಂದಿರುವ ಕೇದಾರೇಶ್ವರ ದೇಗುಲ ಸಾಮಾನ್ಯವಾಗಿ ಮಿಸ್ಸಾಗಿಬಿಡುತ್ತೆ ಹಳೇಬೀಡಿಗೆ ಹೋದೋರಿಗೆ. ಎರಡು ಸಲ ಹಳೇಬೀಡಿಗೆ (ಹೈಸ್ಕೂಲಲ್ಲಿದ್ದಾಗ ಮತ್ತು ಇನ್ನೊಮ್ಮೆ ಇತ್ತೀಚಿಗೆ) ಹಳೇಬೀಡಿಗೆ ಹೋದಾಗಲೂ ಹೋಗಲಾಗದ ಕೇದಾರೇಶ್ವರನ ನೋಡಲೆಂದೇ ಮತ್ತೊಮ್ಮೆ ಹಳೇಬೀಡಿಗೆ ಹೋಗೋ ಮನಸ್ಸಾಗಿತ್ತು. ಹಳೇಬೀಡಿನ ದೇಗುಲಕ್ಕೆ ಒಂದು model ತರಹ ಇದನ್ನು ಕಟ್ಟಿ ಆಮೇಲೆ ಅದನ್ನ ಕಟ್ಟಿದರು ಅನ್ನುತ್ತಾರೆ ಕೆಲವರು. ಅದು ಹಾಗಲ್ಲ, ಹಳೇಬೀಡಿನಲ್ಲೇ ಇರುವ ಹಳೆಯ ವಿಷ್ಣು ದೇಗುಲ ಅದರ ಮಾಡೆಲ್ಲು ಅಂತ ಇನ್ನು ಕೆಲವರು.. ಇತಿಹಾಸ ಏನೇ ಇರಲಿ ಇಲ್ಲಿನ ಪಾತಾಳಭೈರವಿ ಶಿಲ್ಪಗಳ ನೋಡುತ್ತಿದ್ದರೆ ಗಮನಿಸೋ ಯಾರ ಮನವಾದ್ರೂ ಧಗ್ಗೆನ್ನದೇ ಇರಲಾರದೇನೋ.. ಬನ್ನಿ. ನನಗೆ ಸಿಕ್ಕ ದೃಶ್ಯಗಳಲ್ಲಿ ಕೆಲವನ್ನಾದರೂ ತಮ್ಮ ಮುಂದಿಡುವ ಪ್ರಯತ್ನದಲ್ಲಿ..
|
Side view of Kedareshwara temple, Halebidu |
ಹೋಗ್ಬರೋದು ಹೇಗೆ : ಹಾಸನದಿಂದ ಹಳೇಬೀಡಿಗೆ ನೇರೆ ಷಟಲ್ಗಳಿವೆ. ೨೮ ರೂಗಳ ಚಾರ್ಜ್ ಕೊಟ್ಟು ೨:೧೫ಕ್ಕೆ ಹಾಸನ ಬಿಟ್ಟ ನಾನು ಹಳೇಬೀಡು ತಲುಪಿದ್ದು ೩:೩೦ ಕ್ಕೆ. ಸಂಜೆ ವಾಪಾಸ್ಸಾಗುವ ಷಟಲ್ಲಿಗೆ ೩೪ ಕೊಟ್ಟು ೬:೩೫ ಕ್ಕೆ ಹಳೇಬೀಡು ಬಿಟ್ಟವ ಹಾಸಬ ಮುಟ್ಟೋ ಹೊತ್ತಿಗೆ ೭:೨೦ ಆಗಿತ್ತು.
|
Another view of temple |
|
Entrance to the temple |
|
ಕಾಳಿ. ಷಡ್ಭುಜಳಾದ ದೇವಿಯ ಕೈಯಲ್ಲಿ ತ್ರಿಶೂಲ, ಶಿರೋಭಾಗದಲ್ಲಿ ಸಿಂಹದ ಪ್ರಭಾವಳಿ. ಕೆಳಗೆ ಸಪ್ತಾಶ್ವಗಳ ರಥವನ್ನೂ ಕಾಣಬಹುದು. ದೇಗುಲಕ್ಕೆ ಪ್ರವೇಶಿಸುವಾಗ ಸಿಗುವ ಶಿಲ್ಪ |
|
ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಕಳಶಗಳನ್ನಿಟ್ಟಿರುವ ವಿಶಿಷ್ಟರಚನೆ. ಪೂರ್ಣಕುಂಭ ಸ್ವಾಗತ ಅನ್ನೋ ಪರಿಕಲ್ಪನೆಯಿರಬಹುದೇ ? |
|
Back view of Kedareshwara |
|
ಬ್ರಹ್ಮ, ವಿಷ್ಣು ಮತ್ತು ಇತರ ಮದನಿಕೆಯರು |
|
ನಂದಿವಾಹನ ಶಿವ ಪಾರ್ವತಿಯರು .ನಂದಿಯ ಆಭರಣಗಳನ್ನು ಗಮನಿಸಿ |
|
ಕೈಯಲ್ಲಿರೋ ಢಮರುಗ ನೋಡಿದರೆ ಶಿವನಾ ಅನಿಸುತ್ತೆ. ಆದ್ರೆ ಮತ್ತೊಂದು ಕೈಯಲ್ಲಿ ರುಂಡ ದಂಡ. ಇಕ್ಕೆಲಗಳಲ್ಲಿ ನರ್ತಿಸುತ್ತಿರುವ ಸಖಿಯರು . ಹಾಗಾಗಿ ಇದು ದೇವಿಯ ವಿಗ್ರಹ. ಷಡ್ಭುಜಗಳಿರುವ ಕಾರಣ ಇವಳು ಮೋಹಿನಿಯಲ್ಲ. ಇಲ್ಲಿಂದ ಪಾರ್ವತಿಯ ಹಲವು ರೂಪಗಳ ದರ್ಶನ ಶುರುವಾಗುತ್ತೆ.. ತಾಯಿಯ ಭಯಾನಕ ರೂಪಗಳ ದರ್ಶಿಸಿ ಸೌಮ್ಯ ರೂಪ ಕಂಡ ಕೂಡಲೇ ಕಾಲಿಗೆರಗುವ ಭಾವ ಮೂಡಲಿ ಎಂಬ ಭಾವನೆಯಿದ್ದಿರಬಹುದಾ ಅಂತ |
|
ಭೂದೇವಿಯ ರಕ್ಷಿಸುತ್ತಿರುವ ವರಾಹ |
|
ಜೀರ್ಣೋದ್ದಾರದ ಸಮಯದಲ್ಲಿ ಕೆಲವು ಕಲ್ಲುಗಳು ಮಿಸ್ಸಾಗಿರುವುದನ್ನು ಕಾಣಬಹುದು.. ಉಳಿದವುಗಳು ಕಮ್ಮಿ ಅಂತಲ್ಲ.. |
|
ದೇಗುಲದ ಒಳಾಂಗಣ |
|
ದಿಕ್ಪಾಲಕರು, ಪುರಾಣಗಳನ್ನೊಳಗೊಂಡ ಮೇಲ್ಛಾವಣಿ |
|
ಏಳು ಪ್ರಾಣಿಗಳ ಲಕ್ಷಣಗಳುಳ್ಳ "ಮಕರ" ಎಂಬ ಕಾಲ್ಪನಿಕ ಪ್ರಾಣಿ |
|
ಜೀರ್ಣೋದ್ದಾರದ ಸಮಯದಲ್ಲಿ ಲೆಕ್ಕ ತಪ್ಪಾಯ್ತಾ ಅಂತ !! |
|
ನೃತ್ಯ ಗಣಪತಿ |
|
ಶ್ರೀರಾಮ ಲಕ್ಷ್ಮಣ |
|
ನರ್ತಿಸುತ್ತಿರುವ ಪಾರ್ವತಿಯ ಮತ್ತೊಂದು ವಿಗ್ರಹ |
|
ಚಾಮುಂಡೇಶ್ವರಿ ದೇವಿ |
|
ಮೂರು ತಲೆಯ ಯಕ್ಷ. ಒಮ್ಮೆಗೆ ನೋಡಿದರೆ ಮಹಾವಿಷ್ಣುವನ್ನು ಹೊತ್ತ ಗರುಡನ ಹೋಲಿಕೆಯಿದೆ. ಆದ್ರೆ ರೆಕ್ಕೆಯಿಲ್ಲದೆ ಗರುಡನಿಲ್ಲ! |
|
ಪಾರ್ಶ್ವ ಮೂರ್ತಿಗಳು. ಈ ತರಹದ ಶಿಲ್ಪಗಳನ್ನು ಬೇಲೂರು ಮತ್ತು ಮೊಸಳೆ(ಮುಂದೆ ಬರುವ ಲೇಖನಗಳಲ್ಲಿ ನೋಡೋಣ)ಯಲ್ಲೂ ಕಾಣಬಹುದು. ಇಲ್ಲಿನ symmetry ಸಖತ್ತಾಗಿದೆ ! |
|
ವಿಷ್ಣು, ಮತ್ಸ್ಯಯಂತ್ರವ ಬೇಧಿಸುತ್ತಿರುವ ಅರ್ಜುನ |
|
ಸ್ಮಶಾನ ಭೈರವಿ. ಆಕೆಯ ಕೈಯಲ್ಲಿರೋ ಮುಂಡದ ರಕ್ತಕ್ಕಾಗಿ ಬಾಯಿ ಹಾಕುತ್ತಿರುವ ನಾಯಿ ! ಮುಂದಿನ ಶಿಲ್ಪಗಳಲ್ಲಿ ಪಿಶಾಚಿಗಳನ್ನು, ಅವುಗಳ ಕೈಯಲ್ಲಿರುವ ಮಕ್ಕಳನ್ನೂ ಕಾಣಬಹುದು. |
|
ಗೋವರ್ಧನ ಗಿರಿಧಾರಿ |
|
ಪಾರ್ಶ್ವ ಶಿಲ್ಪಗಳು |
|
ಸ್ಮಶಾನ ಭೈರವಿ, ಆಕೆಯ ಕೈಯಲ್ಲಿರುವ ರುಂಡ, ಅದಕ್ಕೆ ಬಾಯಿ ಹಾಕುತ್ತಿರುವ ನಾಯಿ, ಪಕ್ಕದಲ್ಲಿ ರಕ್ತಕ್ಕಾಗಿ ಹಾತೊರೆಯುತ್ತಿರುವ ಪಿಶಾಚಿ, ಆಕೆಯ ಎದೆಹಾಲಿಗಾಗಿ ಬಾಯಿ ಹಾಕುತ್ತಿರುವ ಮಗುವನ್ನು ಕಾಣಬಹುದು ! |
|
Naga |
|
ಶಿಲ್ಪಗಳ ಸಾಲ ನೋಡಿ |
|
ಶಿವನ ತಾಂಡವ ನೃತ್ಯ |
|
ಪಾರ್ವತಿಯ ಮತ್ತೊಂದು ರೂಪವ ಕಾಣಿ |
|
ಸ್ಮಶಾನ ಭೈರವಿಯ ಮತ್ತೊಂದು ಭಯಾನಕ ರೂಪ |
|
ಇನ್ನೊಂದು |
|
Kalinga Mardhana |
|
ಗೋವರ್ಧನ ಗಿರಿಧಾರಿ |
|
ಪಾರ್ಶ್ವ ಶಿಲ್ಪಗಳು |
|
ಗಜಾಸುರ ಸಂಹಾರ |
|
ಮಹಿಷಾಸುರ ಮರ್ಧಿನಿ |
|
ಷಡ್ಭುಜ ಸರಸ್ವತಿ |
|
ದಾನವೀಯುತ್ತಿರುವ ಬಲಿ ಮತ್ತು ಬ್ರಾಹ್ಮಣ ವಟುವಾಗಿ ಬಂದ ವಾಮನ |
|
ಬಿಲ್ವಿದ್ಯೆ. ಬೇಲೂರಿನ ಮದನಿಕೆಯರಲ್ಲೊಬ್ಬಳು |
|
ಮತ್ತೊಮ್ಮೆ ಪಾರ್ವತಿ |
|
ತ್ರಿವಿಕ್ರಮ |
|
ಕೈಲಾಸ ಪರ್ವತವನ್ನೆತ್ತುತ್ತಿರುವ ದಶಾನನ ರಾವಣ ? ! |
ಇಲ್ಲಿನ ಶಿಲ್ಪಗಳ ನೋಡಿ ದೇವಿಯ ಸೌಮ್ಯ ವಿಗ್ರಹ ನೋಡಿದ ಕೂಡಲೇ ಸಾಷ್ಟಾಂಗವೆರಗೋ ಮನಸ್ಸಾಗಿತ್ತು. ಇಲ್ಲಿನ ದರ್ಶನ ಮುಗಿಸಿ ನಂತರ ಲೇಟಾಗಿ ಬಿಡುವ ಭಯದಲ್ಲಿ ಓಡುತ್ತೋಡುತ್ತಲೇ ಹಳೇಬೀಡಿನ ಹೊಯ್ಸಳೇಶ್ವರನ ದೇಗುಲ ತಲುಪಿದಾಗ ನಾಲ್ಕೂ ನಲ್ವತ್ತು.
ಮುಂದಿನ ಭಾಗದಲ್ಲಿ: ಹಳೇಬೀಡಿನ ಹೊಯ್ಸಳೇಶ್ವರ, ಶಾಂತಲೇಶ್ವರ ದೇಗುಲಗಳು.
Nagareshwara nODlilva?
ReplyDeleteಎಲ್ಲಿಯ ನಗರೇಶ್ವರ ವಿಕಾಸಣ್ಣ.. ? ಬೇಲೂರಲ್ಲಾ ? ನೋಡಲ್ಲೆ
Deleteಪ್ರವಾಸ ಕಥನ ಆಸಕ್ತಿಯಿಂದ ಓದಬಹುದಾಗಿದ್ದು , ವಿಸ್ತಾರವಾಗಿ ಬರೆದಿರುವುದು ಗಮನಾರ್ಹಾ ಕಡಿಮೆ ಖರ್ಚಿನಲ್ಲಿ ನೋಡಬಹುದಾದ, ಅಂತಹ ಸ್ಥಳದಲ್ಲಿಯೇ ಇರಬಹುದಾದ ಮಾರ್ಗಗಳನ್ನು ತಿಳಿಹೇಳಿರುವುದು ಸಮಂಜಸ
ReplyDelete