ಅರಳಗುಪ್ಪೆಯ ದೇವಸ್ಥಾನಗಳನ್ನು ನೋಡಿದ ನಂತರ ಅಲ್ಲಿಂದ ತಿಪಟೂರಿಗೆ ಬಂದು ಊಟ ಮಾಡಿ ಅಲ್ಲಿಂದ ತುರುವೇಕೆರೆಗೆ ತೆರಳಿದೆವು. ಅರಳಗುಪ್ಪೆಯಿಂದ ತುರುವೇಕೆರೆಗೆ ೧೧:೩೦, ೧೨:೪೫ ಹೀಗೆ ಪ್ರತೀ ಘಂಟೆಗೊಮ್ಮೆಯಂತೆ ಬಸ್ಸುಗಳಿವೆ. ಬಸ್ ದರ ತಲಾ ೨೨. ಸ್ವಂತ ಗಾಡಿಯಲ್ಲಿ ಹೋಗುವುದಾದರೆ ಅರಲಗುಪ್ಪೆಯಿಂದ ತಿಪಟೂರಿಗೆ ಬರುವ ದಾರಿಯಲ್ಲಿ ಗೊಲ್ಲರಹಟ್ಟಿಯ ನಂತರ ಸಿಗುವ ತುರುವೇಕೆರೆ ಕ್ರಾಸಿನಲ್ಲೇ ಎಡಕ್ಕೆ ತಿರುಗಬಹುದು(ತಿಪಟೂರಿನ ತನಕ ಬರೋ ಅವಶ್ಯಕತೆಯಿಲ್ಲ) . ಗೊಲ್ಲರಹಟ್ಟಿ ಮತ್ತು ಈ ಕ್ರಾಸಿನ ನಂತರ ಸಿಗುವುದು ಕೊಟ್ಟಿಗೆಹಳ್ಳಿ. ಅಂದ್ರೆ ಕೊಟ್ಟಿಗೆಹಳ್ಳಿ ಸಿಕ್ತು ಅಂದ್ರೆ ಕ್ರಾಸಿಗಂತ ಮುಂದೆ ಬಂದಿದ್ದೀರ. ಹಿಂದೆ ಹೋಗಿ ತುರುವೇಕೆರೆಗೆ ಹೋಗಲು ಅಂತ ಅರ್ಥ :-) ಎಡಕ್ಕೆ ಹೋಗದೇ ಬಲಕ್ಕೆ ಹೋದರೆ ಸೀದಾ ತಿಪಟೂರಿಗೆ ಹೋಗುತ್ತಿರ.
|
Infront of the Chennakeshava Temple, Turuvekere |
ಈ ದೇವಸ್ಥಾನವನ್ನು ಹೊಯ್ಸಳರಸ ಮುಮ್ಮುಡಿ ನರಸಿಂಹ ೧೨೬೩ರಲ್ಲಿ ಕಟ್ಟಿದನಂತೆ. ಸದ್ಯ ಪುರಾತತ್ವ ಇಲಾಖೆಯ ಸುಪರ್ದಿನಲ್ಲಿರುವ ಈ ದೇಗುಲ ಇಡೀ ದಿನ ತೆಗೆದಿರುವುದಿಲ್ಲ. ಮುಂಜಾನೆ ಇದು ತೆಗೆದಿದ್ದಾಗ ಹೋದರೆ ಚೆಂದ. ಇಲ್ಲದಿದ್ದರೆ ಇದರ ಬಾಗಿಲಲ್ಲಿ ಬರೆದಿರುವ ಅರ್ಚಕರ ನಂಬರಿಗೆ ಫೋನ್ ಮಾಡಿ ಅವರನ್ನು ಕರೆಯಲೂ ಬಹುದು
|
Sideview of the Chennakeshava temple |
|
Back view of Chennakeshava temple |
ಅರಲಗುಪ್ಪೆಯ ಶಿಲ್ಪಗಳಿಗೆ ಹೋಲಿಸಿದರೆ ಇಲ್ಲಿ ಅಷ್ಟೇನೂ ಹೆಚ್ಚು ಶಿಲ್ಪಗಳು ಕಾಣುವುದಿಲ್ಲ. ಆದ್ರೆ ಇಲ್ಲಿನ ಕಂಬಗಳಲ್ಲಿ ಸೂಕ್ಷ್ಮ ಕುಸುರಿ ಕಲೆಯನ್ನು ,ಪ್ರವೇಶದ್ವಾರದಲ್ಲಿ ಹಳಗನ್ನಡ ಶಾಸನಗಳನ್ನು ಕಾಣಬಹುದು. ಇವೇ ಇಲ್ಲಿನ ವೈಶಿಷ್ಟ್ಯ. ಮುಂಚೆಯೆಲ್ಲಾ ತುಂಬಾ ಚೆನ್ನಾಗಿತ್ತಂತೆ ಈ ದೇವಸ್ಥಾನದ ಪ್ರಾಂಗಣ(ಗ್ರಾಮಸ್ಥರಲ್ಲಿ ಕೇಳಿದಂತೆ). ಸದ್ಯಕ್ಕೆ ನಿರ್ವಹಣೆಯಿಲ್ಲದೇ ಸುತ್ತ ಕಳೆ ಬೆಳೆದಿರುವುದನ್ನು ಕಾಣಬಹುದು :-(
ಇಲ್ಲಿಯವರೆಗೆ ನೋಡಿದ ಹೊಯ್ಸಳ ದೇವಸ್ಥಾನಗಳಂತೆ ಇಲ್ಲಿ ದೇಗುಲಕ್ಕೆ ಕಿಟಕಿಗಳಿಲ್ಲದಿರುವುದೂ ಒಂದು ವೈಶಿಷ್ಟ್ಯ !
|
Left side view of the Temple |
|
at the entrance of the temple |
|
ದೇಗುಲದ ಬಾಗಿಲಲ್ಲಿರುವ ಶಿಲಾಶಾಸನ |
|
Near a temple at the entrance. You can see carvings getting spoilt with time and with mischievous visitors :-( |
|
ದೇಗುಲಕ್ಕೆ ಪ್ರವೇಶಿಸಲಿರುವ ತೊಲೆಗಳ ಮೇಲೂ ಶಿಲಾಶಾಸನ. ಇಲ್ಲಿನ ಕಂಬಗಳ ಮೇಲೆ ಉಲ್ಟಾ ಬರೆದಿರುವ ಶಾಸನವೂ ಇದೆ. ಕನ್ನಡಿಯನ್ನು ಹಿಡಿದು ಅದನ್ನೋದಬೇಕು ಅಂತಾರೆ. ಆದ್ರೆ ಇಲ್ಲಿ ಸ್ವಲ್ಪ ಕತ್ತಲೆಯಿರುವುದರಿಂದ ಬ್ಯಾಟ್ರಿ ಮತ್ತು ಕನ್ನಡಿ ತಗೊಂಡು ಹೋದ್ರೆ ಓದಲು ಪ್ರಯತ್ನಿಸಬಹುದು
ಮುಂದಿನ ಭಾಗ: ಗಂಗಾಧರೇಶ್ವರ ದೇವಸ್ಥಾನ, ತುರುವೇಕೆರೆ
|
ಕೂತಲ್ಲೆ ಹೊಯ್ಸಳ ದರ್ಶನ ಮಾಡ್ಸ್ತಇದ್ದೀಯ.. haha.. thanks!
ReplyDelete