Welcome to Prashantavanam
ಬೇಡೋ ಆತ್ಮವು
ಬೇಡೋ ಆತ್ಮವು ಭಿಕ್ಷುಕನಲ್ಲ,
ದೊಣ್ಣೆ ನಾಯಕನೆ ಗುಡುಗದಿರು
ಸಹಾಯವೆಂಬುದು ಬಿದಿಗಾಸಲ್ಲ,
ತಿರುಪೆಗೆಸೆವೆ ಎಂದೆನ್ನದಿರು |1
ಸುಡುವ ಸೂರ್ಯನೂ ಬಂಧಿಯಾಗುವ
ಚಿಂದಿ ಬಾಲೆಯ ಬರಿಗೈಲಿ
ಹೊಳೆವ ಚಂದ್ರನೂ ಮಪ್ಪಾದಂತೆ
ದುಡಿವ ಬಾಲನ ಚಲದೆದುರು |2
ಸಲಾಮೆನ್ನುತ ಸಹಾಯಕೆ
ನಿನ್ನ ಕೇಳಿದ ಪ್ರಮಾದಕೆ,
ಇರುವೆ ನಾ, ಮನ ಮಿಡಿದಂತೆ
ಚಿಂದಿ ಬಟ್ಟೆಯಲೇ ಹೊಳೆವಂತೆ
ಭಾವತುಂಬಿದ ಕವಿತೆ
ReplyDeleteವಾಹ್ ವಾಹ್ ಸಕತ್ತಾಗಿದೆ.. ಇದೇ ರೀತಿಯ ಭಾವನೆಯ ಕೆಲವು ಸಾಲುಗಳನ್ನು ನಾವು ಕೂಡ ಬರೆಯಬೇಕೆಂದು ಚಿಂತಿಸುತ್ತಿದ್ದೆವು.. ನಿಮ್ಮಿಂದ ಸಿಕ್ಕಿದ್ದು ತುಂಬಾ ಖುಷಿ ಆಗಿದೆ.. ಬಲು ಅರ್ಥಪೂರ್ಣ ಕವಿತೆ.. ವಿಚಾರವನ್ನು ನಿಮ್ಮ ವಿಶಿಷ್ಟ ರಚನೆಯಲ್ಲಿ ಸೊಗಸಾಗಿ ಪದಗಳ ಜೋಡಿಸಿ ಮನಮುಟ್ಟುವಂತೆ ಮಾಡಿದ್ದೀರಾ .. ಇಷ್ಟ ಆಯಿತು.. ನಿಮ್ಮ ಈ ಕವನ .. :)
ReplyDeleteDhanyavadagalu :-)
ReplyDeleteಮನ ಮುಟ್ಟುವ ಸಾಲುಗಳು
ReplyDeleteಚೆನ್ನಾಗಿದೆ
ಸ್ವರ್ಣಾ