ಹೆಚ್ಚೊ ಹರುಷದ ದ್ಯೋತಕವು
ಹಚ್ಚೊ ಹಲದೀಪ
ಬತ್ತಿಯಲಿ ಸುಡಲಿ
ದ್ವೇಷ, ಕೋಪ
ಸುಖ,ಶಾಂತಿ ಪಸರಿಸಲಿ
ಹೂ ಕುಂಡ, ಚಕ್ರಗಳು
ಪಟಾಕಿಗಳು ಮರೆಸಿ
ನೋವು, ಮರುಕ
ಕಟ್ಟ ಬನ್ನಿರಣ್ಣ,
ಆಗಸ ಹೂವ ಬುಟ್ಟಿಯನ್ನ
ಹಬ್ಬ ಬಂದಿಹುದು, ಸದ್ದೆ ಇಲ್ಲದೆ
ಎದ್ದು ಬನ್ನಿರಣ್ಣ,
ದೀಪವ ಹಚ್ಚ ಬನ್ನಿರಣ್ಣ
ತೋರಣ ಕಟ್ಟ ಬನ್ನಿರಣ್ಣ |೧|
ಗೋಗಳು ಕಾದಿವೆ ಪೂಜೆಯ ದಿನಕೆ
ಬಲೀಂದ್ರ ಬರಲೇ ಎಂದಿಹನು
ನರಕಾಸುರನನು ರಾಮ ಕೊಂದಿಹ
ಹಬ್ಬ ಬಂದಿಹುದು ಬಾಗಿಲಿಗೆ
ಎದ್ದು ಬನ್ನಿರಣ್ಣ, ತೋರಣ ಕಟ್ಟ ಬನ್ನಿರಣ್ಣ|೨|
ಏರಿದರೆಷ್ಟು ರೇಟು ಪಟಾಕಿ
ಕೊಂಡೇ ಕೊಳ್ಳುವ ಬಿಡದೆ ಗಿರಾಕಿ
ವಿಷ್ಣು ಚಕ್ರವೋ, ಹನುಮ ಬಾಲವೋ
ಸುರುಸುರು ಬತ್ತಿಯ ಸರಮಾಲೆ,
ಹೊಸ ಬಟ್ಟೆಯ ಗರಿ ಆರುವ ಮೊದಲೇ
ಆನಂದಿಸು ಬೆಳಕಿನ ಲೀಲೆ
ಆಗಸದಲ್ಲೇ ರಂಗವಲ್ಲಿಯ
ಬಿಡಿಸೋ ರಾಕೆಟ್ ಸುಡು ಮೊದಲೇ |೩
ಎದ್ದು ಬನ್ನಿರಣ್ಣ, ತೋರಣ ಕಟ್ಟ ಬನ್ನಿರಣ್ಣ|೨|
ಏರಿದರೆಷ್ಟು ರೇಟು ಪಟಾಕಿ
ಕೊಂಡೇ ಕೊಳ್ಳುವ ಬಿಡದೆ ಗಿರಾಕಿ
ವಿಷ್ಣು ಚಕ್ರವೋ, ಹನುಮ ಬಾಲವೋ
ಸುರುಸುರು ಬತ್ತಿಯ ಸರಮಾಲೆ,
ಹೊಸ ಬಟ್ಟೆಯ ಗರಿ ಆರುವ ಮೊದಲೇ
ಆನಂದಿಸು ಬೆಳಕಿನ ಲೀಲೆ
ಆಗಸದಲ್ಲೇ ರಂಗವಲ್ಲಿಯ
ಬಿಡಿಸೋ ರಾಕೆಟ್ ಸುಡು ಮೊದಲೇ |೩
ಹಚ್ಚೋ ಪ್ರತೀದೀಪವೂ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆಲ್ಲಾ, ಹರ್ಷೋಲ್ಲಾಸ, ಆಯುಷ್ಯ, ಆರೋಗ್ಯವನ್ನು ತರಲಿ.
ಈ ದೀಪಾವಳಿಯು ಎಲ್ಲರ ನೋವು, ದುಃಖಗಳನ್ನು ಮರೆಸಿ ಹೊಸ ಜೀವನೋಲ್ಲಾಸವನ್ನು ತರಲೆಂಬ ಹಾರೈಕೆ
ನಿಮಗೂ ನಿಮ್ಮ ಪರಿವಾರಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.
ReplyDeleteಪಟಾಕಿ ಪದ್ಯ ನನಗೆ ಇಷ್ಟವಾಯಿತು.
ಧನ್ಯವಾದಗಳು ಬದ್ರಿ ಸರ್.. ನಿಮಗೂ, ನಿಮ್ಮ ಮನೆ ಮಂದಿಗೂ ಮತ್ತೊಮ್ಮೆ ಶುಭಾಶಯಗಳು :-)
Deleteದೀಪಾವಳಿ ಹಬ್ಬದ ಶುಭಾಶಯಗಳು.
ReplyDeleteಧನ್ಯವಾದಗಳು ವಿಜಯಕ್ಕ.. ನಿಂಗಕ್ಕೂ ಮತ್ತೊಮ್ಮೆ ಶುಭಾಶಯಗಳು :-)
Deleteದೀಪಾವಳಿ ಹಬ್ಬದ ಶುಭಾಶಯಗಳು.
ReplyDeleteನನ್ನ ಬ್ಲಾಗಗೂ ಒಮ್ಮೆ ಭೇಟಿ ಕೊಡಿ. ಈಗಷ್ಟೆ ಹೆಜ್ಜೆಯನ್ನಿಡುತ್ತಿದ್ದೇನೆ, ತಿದ್ದಿ ಬೆಳೆಸಿ.
ಧನ್ಯವಾದಗಳು :-) ನಿಮಗೂ ದೀಪಾವಳಿಯ ಶುಭಾಶಯಗಳು :-)
Deleteನಿಮ್ಮ ಬ್ಲಾಗಿಗೆ ಹೋಗಿ ಈ ಕಿರಿಯನ ಅಭಿಪ್ರಾಯ ಸಲ್ಲಿಸಿ ಬಂದಿದ್ದೇನೆ ನೋಡಿ ಮೇಡಂ :-)
ಪ್ರಶ್, ತಡವಾಗಿ ಶುಭಾಶಯ ಕೋರ್ತಿದ್ದೇನೆ...ದೀಪಾವಳಿ ಶುಭಾಶಯಗಳು...
ReplyDeleteಧನ್ಯವಾದಗಳು ಆಜಾದ್ ಭಾಯ್ :-)
Deleteತಡವಾದರೂ, ಬಂದಿರಲ್ಲ.. ಧನ್ಯವಾದಗಳು :-)
chandada baraha
ReplyDelete