ಜಾತ್ರೆ ಮಧ್ಯೆ ಒಂಟಿ ಭಾವ
ನಿನ್ನ ನೆನದೇ ಕಾಡತಾವ
ಭಾರವಾಗಿ ನೀರ ಕಣ್ಣು
ನಡೆದು ಹಿಂದಿಂದೆ
ತೆನೆದೂಗೋ ಹೊಲದಲ್ಲಿ
ನಳನಳಿಸೋ ಸಸಿ ನಾನು
ಅಳಿಸಿಹೆಯಾ ಮರೆಯಾಗಿ
ಹೊಲವ ತಂದೆ
ಮಾತ ಕಾದೇ ಮೂಕನಾದೆ
ನೀನು ಲೋಕ ದಾಟಿ ಹೋಗೆ
ಬಯ್ಯಲಿದ್ದ ಎಲ್ಲಾ ಒಬ್ಬ
ವಿಧಿಗೆ ಬಲಿಯಾಗೆ
ಏನ ಅರ್ಪಿಸಲೋ ತಂದೆ
ಬಹಳ ಕಾಡುತಿವೆ, ನೆನಪು
ಅನು ದಿನ ನಿಂದೆ..,ಪ್ರತಿ
ಕಂಪನಾ ನಿಂದೆ
ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡ ನನ್ನಂತಹವನಿಗೆ ಅಪ್ಪನು ಇರದ ಬದುಕು ತುಂಬಾ ಚೆನ್ನಾಗಿ ಗೊತ್ತು. ತುಂಬಾ ಭಾವ ತೀವ್ರ ಕವನ.
ReplyDeleteಅಪ್ಪನನ್ನೂ ನೆನೆದು, ನಿಮ್ಮ ಕವನದೇ ಸಾಲು::
ಭಾರವಾಗಿ ನೀರ ಕಣ್ಣು
ನಡೆದು ಹಿಂದಿಂದೆ"
ಮೆಚ್ಚುಗೆಗೆ ಧನ್ಯವಾದಗಳು ಬದ್ರಿ ಸರ್ :-)
ReplyDeleteನಾನೂ ಅದೇ ಭಾವದಿಂದ ಬರೆದದ್ದು :-(
ಅಪ್ಪ, ಆಲದ ಮರ ಬೀಳು ಬಿಟ್ಟು ಆಳಕ್ಕೆ ತನ್ನ ಇರುವನ್ನು ಪಸರಿಸಿದ ಹಾಗೆ. ಆವರ ನೆನಪು, ನಮ್ಮ ಜೀವನದ ಮೇಲಿನ ಅವರ ಛಾಪು ಮರೆಯುವಂತದ್ದಲ್ಲ. ಚೆನ್ನಾಗಿ ವಿವರಿಸಿದ್ದೀರ ನಿಮ್ಮ ಮನದ ಭಾವನೆಗಳನ್ನ
ReplyDeleteಹೌದು ಶ್ರೀಕಾಂತ್ ಜೀ. ನಮ್ಮ ಇಂದಿಗೆ ಅವರ ನಿನ್ನೆಗಳೇ ಕಾರಣ.
Deleteಧನ್ಯವಾದಗಳು :-)