Monday, June 23, 2014

A Night Trek to Skandagiri hills



Majestic view from Skandagiri
From the time i had been to Nandi hills last time, i was dreaming of Skandagiri which was only 16kms from Nandi hills and around 70kms from Bangalore.Skandagiri hills which stays at an height of about 1350 feet from ground level had been very famous then for its night trekking in perticular and day trekking also in general. But by the time we could plan, got the news that all kinds of trekking in Skandagiri is banned by chikkaballapur police since 2011. Sorry, could not take the risk of going to trekking and ending up in jail along with our vehicle. Later we got good news in 2013 when we heard the news that police have finally allowed day trekking in skandagiri. But the somehow we could not make it up until yesterday i.e 22-June-2014. When our director Devu called on Thursday and asked for any plans for 1 day trip, first name which came to my mind was Skandagiri.But I was not sure whether the legendary night trecking in Skandagiri has been allowed or still facing the ban. Friday had one more got one more call from devu that Skandagiri trip is about to be confirmed and we can leave on Saturday night to start early morning trekking @Skandagiri by Sunday morning. But i was still skeptical about the plan as i did not hear fromany of my friends regarding night trekking in the recent past. I just said, I am ok with all your plans and just call me when i have to leave from my PG :-) Thereafter i did not get any calls from Devu till saturday morning. When i switched on my net in mobile to check watsapp, surprised to see a watsapp group "Skandagiri trekking" where i was added and shocked to see 100+ messages overnight.A group of 17 were ready for it :-). We have booked 21 seater mini bus in which 3 seats were still vacant. I was wondering how can we go with 3 empty seats in a bus, which rarely happend in our recent past :-)


Our Gang
When the time to start came near, number of people who wanted to come to the trip oscillated like the pendulum in an old clock. went to 16, then 19 , 21, 22 and finally fixed at 21. My sixth sence, common sence or whatever you may name it had worked ! ;-) Just kidding. Our Atul baba was not sure of whether he is coming or not until the last minute :-) co-indidently one of devu's friends had been to night trecking to Skandagiri friday night and one of my other collegue Arjun got confirmation from a treckking club that finally they are allowing night trecking(Going with any trekking club might cost you around 900 Rs). So, there were no worries and all were saying only one thing.. get , set, go

How to Go:
There are two ways to go to Skandagiri from Bangalore(might be many more depending on the fact that from which place of bangalore you start from)
1. Using the devanahalli Airport road, via Nandi hills
2.  Using Muddenahalli --> we went by the second one as we had to pick a colleague from Vidyaranyapura

View Larger Map

What to carry and what to wear? :
a. For day trekking: It will be hot and sweaty  the time you reach the top. So, shorts/light clothes are preferred. Carrying water bottle is must. You can get butter nilk, tea/coffe, cold drink on the way. You can also get omlates,maggy prepared by locals on somedays--> but don't reply on it. Better to carry your own food.

b.Night trekking: Carry Torch,Jackets/sweater, Water bottle, light food as you will not get anything in night, Pair of trekking,canvas shoes are preferred.Sands are also ok as it does not have any big rocks to climb the whole way.
Caution: Enquire the local of any rains, ban on night trekking before you leave from bangalore. Its better to postpone your trip on a rainy day to avoid any risks due to slipping rocks. Also carrying sparys like volini,cotton(for any first aids or to cover eyes from winds), band aids is advaisable. If you are planning for night fire camp, you can get wooden sticks you get on the way.



From Muddenalli cross(taking left turn) ,it is around 6km to Kalarava village from where the Skandagiri trekking begins. There are 2 ways to treck from there, namely 5km one and 8km one.  We were stopped by locals of Kalarava village on around 500m from village entrance and were told to start our skandagiri trekking from there. We had to pay 100Rs for the bus parking and they were forcing us to take a guide which could cast 1000K.They also warned that if we get lost in the hill, anyone who is offering to show us the correct path might ask 2k to 3K!  As we had ample information collected from friends and had 200% faith on google maps(later realized how costly it could have been) we clearly refused their offerings. 5km one as the name suggests has steps in many places to climb the Skandagiri hills( which is also known as Kalarava betta) and comparatively easier to 8km one. But what is the fun of trecking if we climb the steps ? !! . So, we decided to take the 8km one. We have reached Kalarava vilalge around 1 AM.So, we had plenty of time also.Although villagers insisted to go via 5km one as we had couple of girls in our group(whom villagers thought as not energetic enough to climb 8km !!). Finally the villagers pointed towards the 8km route. We were pointed  to take right from there and go toward Papagni Mutt and take left from there. They also told us not to give more than 100 to any one who is offering to show us the way and we can ask them to show the way only till the first mark from where we can start the journey by our own.

Papagni Mutt:
One of the ancient mutt of its kind and is knows for its special Poojas during saturday. It houses Omkara Jyoti Ashrama and a temple. As we had been there by night, could not visit the mutt. For the day trekkers, it might be helpful to note that Mutt has daily "dasoha" and food is offered in its Annapoorneshwari Bhavana(Opposite to the Mutt) daily between 1PM-3:00 PM in afternoon and 7:30-9:00 PM in night.You can also visit the temple known as Dakshina Kashi Kshetra temple right after your climb down if you are a night treker.
Our Gang near Papagni Mutt




Coming back to the treck, we went in the way showed by villagers. Took left after Papagni mutt and went in the road until we got a dead end in it. It was the 3rd left cross in that road. When we went in that road for some distance, we realised google map is showing some deviation to the left. One villager who was following us, advised to take the left into a paddy field. Field was recently plown and being prepared for harvest following recent showers in bangalore. As it was plown, there were no clues about any roads to Skandagiri !! we could see some small pathways seems to lead to the top . We took one of it and ended up in a kind of deadend in bushes from where we could not find any path ahead to the top. By that time, some villager saw us wandering in the hill top and offered us to show us the way to Skandagiri top. We were bit relunctant initially considering the warnings by the villagers at parking place. Finally we could bargain that strange guy to show us way till the first marking for 250 Rs. He took us and showed us to one more group of 3 guys who were coming with a guide and told that guide can show us the way till top also and we can pay anything from our interest for that ! We just thought to cross the bridge when it comes rather than thinking a lot and wasting time before hand. So, went on. Although everyone was planned to bring the torch, some could not make it and planned to use the mobile lights. But we realised the importance of torch starting from the step 1 after papagni mutt as it was Pitch dark due to 10th day after Poornima which was leading us to the Amavasya darkness. Luckily we had around 2 tourches per person and went on..



The guys in other group seemed to have drunken a lot and were walking slowly. They were finding it difficult to climb some small steps /rocks also. So, our group wanted to get rid of them. After covering some distance after first mark, we asked the guide whether there are too many diversions or can we go ahead of our own. He said you will get one left mark if you go straight now. From there , there are no diversions and you need to follow the only path thereon.
You find signmarks showing the way here and there

First Arrow since we started treckking
We were quite happy because of 2 things. one is we did not want the drunken guys to follow us or lead us. Secondly we need to have to pay the guide in thousands and follow  a guided way missing all the exploring thrills. But believe me. Even though you have markings here and there , in the places where you have diversions, you can still miss it if you don't observe the path carefully.



Night Trek as it went on..


One of the Pit Stop
We went on taking rest here and their not missing the path anywhere thanks to the markings. Were confused in 2 places when the path seems to descend instead of ascending. We were confused whether the path is taking us downhill or what. After covering around 100 mt in that path, we were happy to see that path finally asceding to the top.





Near the shelter

We saw a kind of 2 shelters made of Stone opposite to each other where the 5km strech joins the 8km one. Finally happy to see a guide descending down there who told us in 10 minutes you will get temple !!. Though he did not mention which temple, guys were happy after hours of journey!(who cares to see his watch to observe what time it is in that pitch darkness and miss the cloudy, misty environment and the joy of night trekking !;-) )



We chatted, pulled the legs,shouted, climbed, rested on the way.. all powered by the enthu of the teammates.Some faced pains in their towards the end of the trek, there were no major worries. Finally we saw a pole at the Skandagiri peak. I guessed it to be the peak of Skandagiri. Yes, it was. But was not the place where treckers rest and wait till the much anticipated sunriese for which they come far.Had to take some more steps to find a temple kind of strcucture. It was around 4 AM in morning and we have accomplished the task of Skandagiri trekking(one way though) in an average time of 2.5 hours eventhough being lost in the first place itself :-) .Inspite of having powerfull torches, light would not go farther than 10 metres due to heavy mist which has started by that time. We did not realize it is a ganesha temple until we reached there and saw 1 group resting inside it. They were sitting inside it as it was good choice to avoid winds and also bit warmer compared to outside. We went behind that temple in search of a place where our group of 21 people could sit together and pass time for next 1 hour probably(expecting sunrise by 5:30 !). Behind the ganesha temple, there is one more temple kind of structure which is running into ruins now :-(. Although none of us were feeling sleepy, almost all sat down in the huge open space between temples to take rest and few lied down. I lied down covering my face with the bag against the direction of winds. This technique , though i copied from Nandish there, provided better protection against blowing winds and cold aprt from providing huge relief for my back. It was not few minutes since i lied there, 2 dogs came from nowhere seeing the snacks my colleagues were opening !. Seeing the bags of chips, Sweets, biscuits being opened by guys n gals, who will sleep ? Along with chips, b'day bumps started for the guys who had recent b'days , having in near future and also to the randomly selected lucky ones ;-)

Some localite has offered the option of fire camp while we were coming behind the temple, we initially resisted not knowing how costly affair it could be. But, not withstanding the cold and winds Hakeem, Ashish, Adarsh made a deal with one localite in meanwhile and arranged for a fire camp. Its not a big fire camp, but a fire of small dry twigs. But that that collection of sticks was hot enough to keep us warm for around 30 minutes in a price of 200 Rs. By the time , we realized that we could have carried our own sticks during journey and made our own fire camp, it was very late and we could not get any dry sticks in that damp weather(prabably one of the good advise for anyone who is reading it and planning to go there next time). There were several rounds of goodies being passed on by Akshay, Devu,Adarsh,  Arjun, Hakeem , Ashish, Sumit, Vikas, Aritra, Aparna, Bhagya, Medhu, Gayi, Naveen , newbies lile Pravallika, Drushya, Dileep, Nandeesh, Narain, Kiran during firecamp.
even after fire died, Nandeesh was good enough to keep us warm by his Blacksmit skills of best use of the fire ember(Just kidding Nadish ;-)). People might have waited there to make best use of it, until all ember turned into ashes.

But by the time, it was 5:50 and we were eager to see the sun. But, I guess sun had taken sick leave due to the cold caused by the misty weather :-) He was not willing to show his face. As Soon everyone left the place of firecamp, we saw one group coming and occupying our place ! Mist which starting covering our jackets with white, we realized we should not have deserted the place. So, Amidst the chilly weather, heavy winds, cameras getting clogged with mist, our photo session started which lasted for next 20 minutes. When , sun was not willing to come up at all, we realized that sunrise time is already over and we were probably unlucky to miss him that day. Nevertheless treck and the misty weather was not at all disappointing our efforts. Visited the Ganesha temple and bowed the mighty lord to seek his blessings for the safe and happy return. There we got info from the localites that sometimes one has to wait till 8:00 or 9:00AM also there to see the face of sun!!
It was 6:40 and we decided to start our way back so that we could have breakfast in time. But within few steps, we found one more small fire and all sat there itself not willing to move a single step ahead :-)


Ganesha Temple
This time, we made full use of that fire till fire amber turned into ashes and ashes started staining our clothes with white due to the blowing wind.  Once we started climbing down, we got glimpses of white sun here and there and temparature started increasing. Eventhough temparature increased, there were lots of places which were moist and slippery. Luckily it not rain. But it was due to the huge tree cover there which accumalted the previous night's fog  which gives a feeling of rain when wind blows . To word of caution to the next trekkers not to be careless while climbing down.2 of our collegues fell there as wel(not to metion the names ;-) ).Some photosessions went on here and there and in plenty of places i felt the need of a good DSLR. Have spooted4 species of butterflies, 2 of centipeds, 2 of caterpillers , a donzen of flowers.
One of the catepiller and need for DSLR !

But was struggling to capture them due to heavy winds which made butterflies, flower shake like anything. Apart from that exposure time of my cam(Nikon 2700)+its macro(5cm) were not so great for macro photography. I had to give around 4-5 tries amidst due to the fact that focus was not sticking to a perticular object. It was moving in and out with pace which was not allowing me to capture any marcos. Still i was lucky to get some. So, one serious advise is to take any DSLR or any cam suitable for macro photography and preserve its battery till the morning. Skandagiri will not disappoint you :-)

We reached down around 9 AM thanks to all the photoshoots although there were no pitstops as in night due to tiredness. Saw the Papagni mutt and temple from outside and came to the stop from where we started. There were lots of village scenes which welcomed us and could have been nice photos . But as all of us wanted to hurry back due to the wish of breakfast and nature calls urging us to hurry home :-) It was a good and economical trip indeed including transportation and all other costs (costing around 405 per head). Due to eatables like bread jam,cheese and one more round of biscuits , we never stopped for breakfast anywhere and fell asleep soon. Came to my stop of Kundalahalli via Yelahanka -Tin factory - Marathalli and bus has to travel to Banashankari before saying sayonara to the trip. Inspite of reaching PG by 12PM with the paining legs and sleepy eyes, strong desire to write this up was on. After a good afternoon sleep ,i could make it up finally to relish the joy of trecking... Before concluding i should really say, it was a sooperb experiance thanks to all guys n gals who put their resting sunday morning and saturday night their  and not taking any credits  away from the neatly organised  plan which could ensure no untoward incidents happen during night trek and ensured safe and happy return. A big thanks to all of you who inspired me to write this up.



Monday, June 9, 2014

ದಾಂಡೇಲಿ ದೋಣಿಯಾನ

ಗೆಳೆಯನ ಮದುವೆಗೆ ಬೆಳಗಾವಿಯ ಚಿಕ್ಕೋಡಿಗೆ ಹೋಗಬೇಕೆಂದಾಗ ಪ್ರವಾಸ ಪ್ರಿಯನಾದ ನಾನು ಸಹಜವಾಗೇ ಜೈಯೆಂದಿದ್ದೆ.  ಮದುವೆಯ ಮುಂಚಿನ ದಿನ ದಾಂಡೇಲಿಗೆ ಹೋಗಿ ಅಲ್ಲಿನ ಕಾಳೀ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡೋಣ ಅಂದಾಗೆಂತೂ ತಗೋ, ಸ್ವರ್ಗಕ್ಕೆ ಮೂರೇ ಗೇಣು. ಗೆಳೆಯರ ಬಾಯಲ್ಲಿ ಈ ರಿವರ್ ರಾಫ್ಟಿಂಗ್ ಬಗ್ಗೆ ಹಲವು ಸಲ ಕೇಳಿದ್ದವನಿಗೆ ಅದನ್ನೊಮ್ಮೆ ನೋಡಬೇಕೆಂಬ ಬಯಕೆ ಮುಂಚಿಂದಲೂ ಇತ್ತೆಂದು ಬೇರೆ ಹೇಳಬೇಕಿಲ್ಲವೆಂದುಕೊಂಡು ಮುಂದುವರೆಯುತ್ತೇನೆ. .ಶುಕ್ರವಾರ ಸಂಜೆ ಐದುಮುಕ್ಕಾಲಕ್ಕೆ ಮೆಜೆಸ್ಟಿಕ್ಕಿಂದ ಹುಬ್ಬಳ್ಳಿಯ ಟ್ರೈನು. ಆಫೀಸಿಂದ ನಾಲ್ಕಕ್ಕೇ ಹೊರಟರೂ ಬೆಂದಕಾಳೂರಿನ ಟ್ರಾಫಿಕ್ಕಿಗೆ ಸಿಲುಕಿ ಆರೂವರೆ ಆಗ್ತಾ ಬಂದ್ರೂ ಇನ್ನೂ ಕಾರ್ಪೋರೇಷನ್ ಸರ್ಕಲ್ ದಾಟಿರ್ಲಿಲ್ಲ.ನಾನೊಬ್ನೇ ಆಗಿದ್ರೆ ಅಯ್ಯೋ ಶಿವನೇ, ರೈಲು ಮಿಸ್ಸೇ ಇವತ್ತು ಅಂದ್ಕೊಂತಿದ್ನೇನೋ. ಆದ್ರೆ ನನ್ನ ಬಸ್ಸಿನಲ್ಲೇ ಇನ್ನೂ ಇಬ್ರಿದ್ರು ನನ್ನ ಜೊತೆ ಮದುವೆಗೆ ಬರೋರು. ಆದ್ರೆ ಅವರಿಬ್ಬರಿಂದ ಟೆನ್ಷನ್ನು ಕಮ್ಮಿಯಾಗೋ ಬದ್ಲು ಜಾಸ್ತಿಯಾಗುತ್ತಿತ್ತು. ನಾನು ಈ ಟ್ರೈನು ಹೋದ್ರೆ ಏನ್ಮಾಡಕ್ಕಾಗುತ್ತೆ , ಹೆಂಗಿದ್ರೂ ಬಟ್ಟೆ ತಂದಿದೀನಿ ಸೀದಾ ಶಿವಮೊಗ್ಗೆಯ ಊರ ಬಸ್ಸು ಹತ್ತಿ ಬಿಡೋದು ಅಂತ ತಮಾಷೆ ಮಾಡ್ತಾ ಇದ್ದೆ. ಆದ್ರೆ ಅವ್ರ ಮುಖಭಾವಗಳು ಊಹೂಂ.. ಹೇ, ಇದು ಮಿಸ್ಸಾದ್ರೆ ಯಶವಂತಪುರಕ್ಕೆ , ಅಲ್ಲೂ ಸಿಗ್ಲಿಲ್ಲ ಅಂದ್ರೆ ತುಮಕೂರವರೆಗೆ, ಅಲ್ಲೂ ಸಿಗ್ಲಿಲ್ಲ ಅಂದ್ರೆ ಟ್ರೈನು ಸಿಕ್ಕೋವರೆಗೆ ಟ್ಯಾಕ್ಸಿ ಮಾಡಿಸ್ಕೊಂಡು ಹೋಗಾದ್ರೂ ಈ ಟ್ರೈನು ಹಿಡಿಲೇಬೇಕು ಕಣೋ ಅಂತಿದ್ದ ಸಹೋದ್ಯೋಗಿ ಉಮಾಕಾಂತ. ನಂದಿನಿಯ ಮುಖದ ಚಿಂತೆಯೇನೂ ಕಮ್ಮಿಯಿರ್ಲಿಲ್ಲ. ಮೈಸೂರ್ ಬ್ಯಾಂಕು ಸರ್ಕಲ್ಲೊಂದು ದಾಟಿ ಬಿಡ್ಲಿ. ಆಮೇಲೆ ಅಲ್ಲಿ ಬಸ್ಸು ಟ್ರಾಫಿಕ್ಕಲ್ಲಿ ಸಿಕ್ಕಾಕಿಕೊಂಡ್ರೂ ಅದನ್ನಿಳಿದು ಓಡೇ ಬಿಡೋಣ ಅಂತ ಸಮಾಧಾನ ಮಾಡಿದ್ರೂ .ಹೌದಾ ? ಅಲ್ವಾ ಅನ್ನೋದು ಬಿಟ್ರೆ ಬೇರೆ ಮಾತಿರಲಿಲ್ಲ ಅವಳ ಬಾಯಲ್ಲಿ. ಅದ್ರ ಮಧ್ಯೆ ಆಗಲೇ ಮೆಜೆಸ್ಟಿಕ್ಕಿನ ರೈಲ್ವೇ ಸ್ಟೇಷನ್ ತಲುಪಿದ್ದ ದಿಲೀಪನಿಂದ ಐದಾರು ಕಾಲುಗಳು. ಎಲ್ಲಿದ್ದೀರ , ಎಲ್ಲಿದ್ದೀರ ಅಂತ. ಬಸ್ಸು ಮುಂದೆ ಹೋದ್ರೆ ತಾನೇ ಏನಾದ್ರೂ ಹೇಳೋದು ? ಕಾಲುಘಂಟೆಯಿಂದ ಬಸ್ಸು ಒಂದೆರಡು ಸ್ಟಾಪು ದಾಟಿತ್ತೇನೋ ಅಷ್ಟೇ. ಈ ಸಿಗ್ನಲ್ಲುಗಳು, ಈ ಜ್ಯಾಮು.. ಅಬ್ಬಬ್ಬಾ ? ನೋಡುನೋಡುತ್ತಿದ್ದಂಗೇ ಐದೂ ನಲವತ್ತು ಆಗೇಹೋಗ್ತು. ಇನ್ನು ಐದು ನಿಮಿಷದಲ್ಲಿ ಕಾರ್ಪೋರೇಷನ್ನಿನಿಂದ ಮೆಜೆಸ್ಟಿಕ್ಕಿಗೆ ಯಾವ ಮಾಯದಲ್ಲೂ ಹೋಗೋಕೆ ಸಾಧ್ಯವಿಲ್ಲ. ಟ್ರೈನು ಹೋಗಿ ಬಿಡುತ್ತಲ್ಲ ಅನ್ನೋ ಬೇಸರ. ಅಷ್ಟರಲ್ಲಿ ಮತ್ತೆ ದಿಲೀಪನ ಕಾಲು. ಟ್ರೈನು ಐದು ಐವತ್ತಕ್ಕಂತೆ ಅಂತ. ಇದೊಂತರ ಪ್ರವಾಹದಲ್ಲಿ ಕೊಚ್ಚಿಹೋಗ್ತಿದ್ದವನಿಗೆ ಕೋಲು ಸಿಕ್ಕಂತ ಖುಷಿ. ಹತ್ತು ನಿಮಿಷದಲ್ಲಿ ಮೆಜೆಸ್ಟಿಕ್ ತಲುಪೋದು ಡೌಟು ಅನಿಸಿದ್ರೂ ಮನದ ಮೂಲೆಯಲ್ಲೊಂದು ಆಸೆ. ಕಾರ್ಪೋರೇಷನ್ ದಾಟೋಕೆ ಮತ್ತೆ ಮೂರು ನಿಮಿಷ ಬೇಕಾದಾಗ ಮತ್ತೆ ಆತಂಕ. ಪುಣ್ಯಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ಲಲ್ಲಿ ಹೆಚ್ಚೊತ್ತು ನಿಲ್ಲದೇ ಮುಂದೆ ಬಂದು ಬಿಟ್ಟೆವು. ಆದ್ರೂ ಆಮೆಗತಿಯಲ್ಲಿ ನರ್ತಕಿ ಥಿಯೇಟರ್ ಹತ್ರ ಬರೋ ಹೊತ್ತಿಗಾಗ್ಲೇ ಐದೂ ಮುಕ್ಕಾಲು. ಅಷ್ಟರಲ್ಲಿ ಮತ್ತೆ ಫೋನು. ಟ್ರೈನು ಆರುಘಂಟೆಗಂತೆ ಅಂತ. ಅಂತೂ ಒಂದು ಉಸಿರು ತಗೊಂಡು ಎದುರಿಗೆ ಕಂಡ ಗಣೇಶನಿಗೊಂದು ಅಡ್ಡಬೀಳುವಂತ ಕೃತಜ್ನತಾ ಭಾವ. ಐದು ಐವತ್ತಕ್ಕೆ ಮೆಜೆಸ್ಟಿಕ್ಕು. ಇನ್ನು ಯಾವುದೇ ಕಾರಣಕ್ಕೂ ರೈಲು ತಪ್ಪಿಸಿಕೊಳ್ಲೇಬಾರ್ದು . ನಡಿರಿ ಓಡೋಣ ಅಂದೆ.
ರೈಲು ಆರೂಹತ್ತಕ್ಕೆ ಅನ್ನೋ ಸುದ್ದಿ ಗೊತ್ತಾದ್ರೂ ತಡಮಾಡಬಾರ್ದು ಅಂತ ಓಡೋಕೆ ಶುರು ಮಾಡಿದ್ವಿ. ಸ್ವಲ್ಪ ಹೆಜ್ಜೆ ಹಾಕೋ ಹೊತ್ತಿಗೆ ನನ್ನ ಪಕ್ಕ ಇಲ್ಲ ಓಡ್ತಿದ್ದೋರು. ನೋಡಿದ್ರೆ ಮಾರು ಹಿಂದಿದ್ದ ಉಸ್ಸಪ್ಪಾ ಅಂತಿದ್ದ ಉಮಾಪತಿ. ಅವ್ನಿಗಿಂತ ಸ್ವಲ್ಪ ಮುಂದಿದ್ಲಷ್ಟೇ ಪುಟು ಪುಟು ಹೆಜ್ಜೆ ಹಾಕ್ತಾ ತಂಗಿಂತಾ ದೊಡ್ಡ ಬ್ಯಾಗು ತಂದಿದ್ದ ನಂದು. ಒಳ್ಳೇ ಹಿಂದಿಯ "ಜಬ್ ವಿ ಮೆಟ್" ಸಿನಿಮಾದ ಕತೆಯಾಯ್ತಲ್ಲ ನಂದು ಅಂದುಕೊಳ್ಳುತ್ತಾ , ಟ್ರೈನು ತಪ್ಪೋಗೋದನ್ನ ತಪ್ಪಿಸಿಕೊಳ್ಳೋಕೆಂತ ಯದ್ವಾ ತದ್ವಾ ಓಡಿದ್ದು. ಅವತ್ತು ಓಡಿದ ಹಾಗೇ 10k ಲೇನಾದ್ರೂ ಓಡಿದ್ರೆ ಇನ್ನೊಂದು ಸ್ವಲ್ಪ ನಿಮಿಷ ಬೇಗ ಮುಗಿಸ್ತಿದ್ನೋನೋ ಅನಿಸಿ ಆ ಗಾಬರಿಯ ಸಂದರ್ಭದಲ್ಲೂ ನಗು ಬಂತು. ರೈಲ್ವೇ ಸ್ಟೇಷನ್ನು ತಲುಪಿ ಪ್ಲಾಟ್ ಫಾರಂಗೆ ಹೋಗೋ ಬ್ರಿಡ್ಜ್ ಹತ್ತಿದ್ವಿ. ಹೇ. ನಮ್ಮ ರೈಲು ಆರೂಹತ್ತಕ್ಕೆ ಕಣೋ. ಹತ್ತನೇ ಪ್ಲಾಟ್ ಫಾರಂ ಅಂದ ಉಮಾ. ಸರಿಯಪ್ಪ ಅಂತ ಮತ್ತೆ ಓಟ. ಆರನೇ ಪ್ಲಾಟ ಫಾರಂ ತಲುಪೋ ಹೊತ್ತಿಗೆ ತಡಿರಿ ತಡಿರಿ, ಎಲ್ಲಿಗೆ ಓಡ್ತಿದೀರ ಅಂತ ಅಡ್ಡಬಂದ್ರು ನಾಲ್ಕೈದು ಜನ. ಅಡ್ಡಬಂದೋರು ಇನ್ಯಾರು ಅಲ್ಲ. ಅಕ್ಷಯ್, ದಿಲೀಪ್, ಮುನೇಗೌಡ್ರು, ಆದರ್ಶ, ಪಲ್ಲವಿ ಅಕ್ಕ, ದೇವು, ದಾನಿ. ಏನೋ ಈ ರೇಂಜಿಗೆ ಓಡ್ತಾ ಇದೀರ ಅಂದ್ರೆ ಟ್ರೈನು ಹತ್ತನೇ ಪ್ಲಾಟ್ ಫಾರಂ ಅಂತಲ, ಇನ್ನು ಐದು ನಿಮಿಷಕ್ಕೆ ಅಂದೆ. ಅವರೆಲ್ಲರ ಮುಖದಲ್ಲೂ ಮುಸಿ ಮುಸಿ ನಗು. ಇನ್ನು ಪ್ಲಾಟ್ ಫಾರಮ್ಮೇ ಹಾಕಿಲ್ಲ.ಟ್ರೈನನ್ನ ಏಳುಘಂಟೆಗೆ ಮುಂದಾಕಿದಾರೆ ಅಂದ್ರು ಅಕ್ಷಯ್. ಥತ್ ಥರೇಕಿ. ಎದ್ನೋಬಿದ್ನೋ ಅಂತ ಓಡಿದ್ದು ಪುಕ್ಸಾಟೆ ಓಟವಾಗೋಯ್ತಲ್ಲ ಅನಿಸ್ತು.  ಟ್ರಾಫಿಕ್ಕಲ್ಲಿ ಸಿಕ್ಕಾಕಿಕೊಂಡಿದ್ದು, ಓಡಿದ್ದನ್ನ ಕೇಳಿ ಎಲ್ಲರಿಗೂ ನಗು.
ಆ ಟ್ರೈನಿಂದ್ಲೇ ಶುರುವಾಗಿದ್ದು ನೋಡಿ ನಮಗೆ ಲೇಟ್ ಯೋಗ. ಟ್ರೈನು ಹೋಗ್ತನೇ ಇದೆ ಹೋಗ್ತನೇ ಇದೆ. ಆದ್ರೆ ಬರಬೇಕಾದ ಸ್ಟೇಷನ್ನುಗಳು ಮಾತ್ರ ಬರ್ತಿಲ್ಲ ಬೇಗ. ಮಾತಲ್ಲಿ ಮುಳುಗೋಗಿದ್ದ ನಮಗೆ ಟ್ರೈನು ನಿಧಾನವಾಗಿ ಹೋಗ್ತಿರೋದೂ ಗಮನಕ್ಕೆ ಬಂದಿರಲಿಲ್ಲ! ಏಳೂವರೆ ಏಳೂಮುಕ್ಕಾಲರವರೆಗೆ ಬಂದಿದ್ದ ಊಟ ಆಮೇಲೆ ಬರ್ಲೇ ಇಲ್ಲ. ತುಮಕೂರಲ್ಲಿ ತಗೋಳೋಣ, ಇನ್ನೊಂದ್ಕಡೆ ತಗೋಳೋಣ ಅಂದ್ಕೋತಿದ್ದ ನಮಗೆ ಆ ಸ್ಟೇಷನ್ನುಗಳು ಬಂದ್ರೆ ತಾನೆ ? ! ಹಸಿಯುತ್ತಿದ್ದ ಹೊಟ್ಟೆಗಳ ಮೊರೆ ಆ ದೇವ್ರಿಗೆ ಕೊನೆಗೂ ಕೇಳಿಸ್ತೋ ಏನೋ, ಎಂಟೂವರೆ ಹೊತ್ತಿಗೊಬ್ಬ ಬಂದ ಬಿರ್ಯಾನಿ ಬಿರ್ಯಾನಿ ಅಂತ. ಏನಪ್ಪಾ ? ಊಟ ಇದ್ಯಾ ? ಇದ್ರೆ ಹತ್ತು ಊಟ ತಾ ಅಂದ್ವಿ. ಕೆಲ ನಿಮಿಷಗಳಲ್ಲೇ ಹತ್ತು ಊಟ ತಂದ. ಊಟ ಮಾಡುವಾಗ್ಲೇ ನೆನಪಾಗಿದ್ದು. ಎಲ್ಲರೂ ನೀರು ತಂದಿಲ್ಲ. ಇದ್ದ ನೀರು ಜಬ್ ವಿ ಮೆಟ್ ಓಟದಿಂದ ಖಾಲಿಯಾಗಿತ್ತು ಅಂತ, ನೀರನ್ನೂ ಅವ್ನಿಗೆ ಹೇಳಿದ್ವಿ. ಹೂಂ ತರ್ತೀನಿ ಅಂದವ ಐದಾರು ನಿಮಿಷವಾದ್ರೂ ಪತ್ತೆಯಿಲ್ಲ. ಹಸಿಯುತ್ತಿದ್ದ ಹೊಟ್ಟೆಗೆ ಇನ್ನೂ ಹೆಚ್ಚು ಕಾಯಿಸಲಾರದೇ ಊಟಕ್ಕೆ ಕೈಹಾಕಿದ್ವಿ. ಸಖತ್ತಾಗಿ ಹಸಿದ ಹೊಟ್ಟೆಗೆ ಊಟ ಚೆನ್ನಾಗೇ ರುಚಿಸ್ತು. 
ಊಟವಾಯ್ತು. ಮತ್ತೈದು ನಿಮಿಷ ಕಾದರೂ ನೀರಿಲ್ಲ. ನೀರ ಹುಡುಕಿ  ಎಂಟನೇ ಭೋಗಿಯಿಂದ ಮೊದಲನೇ ಭೋಗಿವರೆಗೆ ಹೋದ್ರೂ ನೀರಿಲ್ಲ. ಅಲ್ಲೇ ಸಿಕ್ಕ ಟೀಟಿಗೆ ನೀರು ಕಂಡ್ರೆ ಈ ಕಡೆ ಕಳ್ಸಿ ಸಾರ್ ಅಂತ ವಿನಂತಿಸಿ ಮರಳಿದ್ವಿ. ಒಂಭತ್ತೂವರೆಯಾದ್ರೂ ನೀರಿಲ್ಲ. ಬಾಯಾರಿದ ಗಂಟಲುಗಳಿರಬೇಕಾದ್ರೆ ನಿದ್ರೆ ಬರೋದಾದ್ರೂ ಹೇಗೆ ? ಆದ್ರೂ ಬೇರೆ ವಿಧಿಯಿಲ್ಲದ ಕಾರಣ ಹಾಗೇ ಮಲಗೋಕೆ ಶುರು ಮಾಡಿದ್ವಿ. ಬೆಳಗ್ಗೆ ನಾಲ್ಕಕ್ಕೇ ಹುಬ್ಬಳ್ಳಿಯಲ್ಲಿ ಏಳಬೇಕಿತ್ತಲ್ಲ. ಅಷ್ಟೊತ್ತಿಗೆ ನಮ್ಮ ಎದುರಿಗೆ ದಯಾಮಯಿ ದೇವರಂತೇ ಕಂಡ ಪ್ರಯಾಣಿಕನೊಬ್ಬ ನನ್ನ ಬಾಟ್ಲಿಯಲ್ಲಿ ಸ್ವಲ್ಪ ನೀರಿದೆ. ಕುಡಿಬೋದು ನೀವು ಬೇಕಾರೆ ಅಂದ ನಮ್ಮ ನೀರಪುರಾಣ ಕೇಳಿಸಿಕೊಂಡು. ನೋಡಿದ್ರೆ ಇದ್ದಿದ್ದು ಕಾಲು ಬಾಟ್ಲು ನೀರು. ಈ ಕಡೆ ಮಲಗೋಕೆ ಬಂದ ನಾವಿದ್ದುದ್ದು ನಾಲ್ಕು ಜನ. ಆ ಕಾಲು ಬಾಟ್ಲಿಯಲ್ಲೇ ಕೆಲವು ಹನಿ ಗುಟುಕರಿಸಿ ಇನ್ನೂ ಸ್ವಲ್ಪ ನೀರು ಉಳಿಸಿದ್ವಿ! ಇನ್ನೆಲ್ಲೂ ನೀರು ಸಿಗದೇ ಹೋದ್ರೆ ರಾತ್ರೆಗೆಲ್ಲಾರೂ ಬೇಕಾದೀತು ಅಂತ !! ಹಂಗೇ ಮಲಗಿದ ನಮಗೆ ಬೀಸುತ್ತಿದ್ದ ತಣ್ಣಗಿನ ಗಾಳಿಯ ಮಧ್ಯೆ ಜೋಂಪು ಹತ್ತಿತ್ತು. ಹನ್ನೊಂದಾಗಿರಬಹುದೇನೋ ಸಮಯ. ಹೇ. ಎಲ್ಲೋ ನಿಲ್ಸಿದಾರೆ ನೋಡೋ ಅಂತ ಎಬ್ಸಿದ್ರು ಗೌಡ್ರು. ಹೌದು. ಕತ್ತಲಲ್ಲಿ ಯಾವ ಸ್ಟಾಪು ಗೊತ್ತಾಗುತ್ತಿಲ್ಲ. ಅಲ್ಲಿ ಎಷ್ಟೊತ್ತು ನಿಲ್ಲಿಸ್ತಾರೋ ಅದೂ ಗೊತ್ತಿಲ್ಲ. ಒಂದು ಬದಿಯ ಕಿಟಕಿಯಿಂದ ಹಣಿಕಿದೆ. ಒಂದಿಷ್ಟು ಜನ ನೀರು ತುಂಬಿಕೊಳ್ಳಲು ಟ್ರೈನಿಂದ, ತುಂಬಿಕೊಂಡೋರು ಟ್ರೈನಿನತ್ತ ಓಡ್ತಿದ್ರು. ನಾನೂ ಒಂದು ಬಾಟ್ಲು ತಗೊಂಡು ಹೋಗಿಬಿಡ್ಲಾ ಅಂದ್ಕೊಂಡೆ. ಆದ್ರೆ ಮತ್ತೆ ಟ್ರೈನು ಹೊರಟು ಬಿಟ್ರೆ ಅನ್ನೋ ಭಯ. ಸಾಲದೆಂಬಂತೆ ನಾವಿದ್ದ ಕಡೆಯ ಬಾಗಿಲನ್ನು ಟಿ.ಟಿ ಬೈದು ಹಾಕಿಸಿದ್ದ. ಇಳಿಯೋದಾದ್ರೆ ಭೋಗಿಯ ಮತ್ತೊಂದು ಕಡೆಯ ಬಾಗಿಲಿಂದ ಮಾತ್ರ ಇಳಿಬೇಕು ಅಂದಿದ್ದ. ಇಳಿಯೋಕೆ ಪ್ರಯತ್ನಿಸಿದೋರಿಗೆಲ್ಲಾ ಬಯ್ತಿದ್ದ. ಒಂದು ಸಲ ಕಳ್ಳತನ ಆದ್ರೆ ನಿಮಗೆಲ್ಲಾ ಗೊತ್ತಾಗೋದು. ಇಳಿಬೇಡ್ರಿ ಅಂದ್ರೆ ಗೊತ್ತಾಗಲ್ವಾ ಅಂತ. ಇಳಿಲೋ ಬೇಡ್ವೋ ಅನ್ನೋ ಸಂದಿಗ್ದದಲ್ಲೇ ಎರಡು ನಿಮಿಷ ಕಳೆಯಿತು. ಓಡುತ್ತಿದ್ದೋರಿಗೆ ಯಾರಿಗಾದ್ರೂ ಬಾಟ್ಲಿ ಕೊಟ್ಟು ತುಂಬಿಸಿಕೊಡೋಕೆ ಹೇಳೋಣ ಅಂತ ನಮ್ಮ ಎದುರಿಗಿದ್ದ ರಾತ್ರೆ ನೀರು ಕೊಟ್ಟ ಪುಣ್ಯಾತ್ಮರು ಪ್ರಯತ್ನಿಸಿದ್ರೂ ಅದು ಫಲ ಕೊಡಲಿಲ್ಲ. ಅಯ್ಯೋ ಶಿವನೇ ಅಂದುಕೊಳ್ಳುತ್ತಿದ್ದಾಗ ಎಲ್ಲಿಂದಲೋ ಒಬ್ಬ ನೀರು ಮಾರುವವ ತನ್ನ ನೀರಿನ ಗಾಡಿ ತಳ್ಳಿಕೊಂಡು ಬರುತ್ತಿದ್ದುದು ಕಾಣಿಸ್ತು. ರೈಲು ಹೊರಡೋ ಮೊದ್ಲು ನಮ್ಮ ಭೋಗಿಗೆ ಬಾರಪ್ಪ ಅಂತ ಕೂಗಬೇಕನಿಸಿತು. ರಾಮಾಯಣದ ಕಬಂಧನಂತಹ ಉದ್ದುದ್ದದ ಬಾಹುಗಳೇನಾದ್ರೂ ಇದ್ದಿದ್ರೆ ಇಲ್ಲಿಂದ್ಲೇ ಕೈಚಾಚಿ ಒಂದೆರಡು ಬಾಟ್ಲಿ ತಗೋಬೋದಿತ್ತಲ್ಲ. ಎಷ್ಟು ಒಳ್ಳೇದಿತ್ತು ಅಂತೂ ಅನಿಸಿಬಿಟ್ತು. ಆದ್ರೆ ಏನ್ಮಾಡೋದು. ಆಗೋಲ್ವೆ. ನಮ್ಮ ಮೊರೆ ಕೇಳಿತೋ, ಕಿಟಕಿಯಿಂದ ಚಾಚ್ತಿದ್ದ ಕೈಗಳು ಕಾಣಿಸ್ತೋ ಗೊತ್ತಿಲ್ಲ. ಅವ ನಾವಿದ್ದತ್ತ ಬಂದ. ಲೀಟರಿನ ಎರಡು ಬಾಟ್ಲು ತಗೊಂಡೆ ನಾನು. ನಾನು ಕುಡಿಯೋ ಮೊದ್ಲು ನಮಗೆ ನೀರು ಕೊಟ್ಟೋರ ಮುಖ ನೋಡಿದೆ. ಅವರ ನೀರಿನ ಋಣಕ್ಕೆ ಎಷ್ಟು ಧನ್ಯವಾದ ಹೇಳಿದ್ರೂ ಕಮ್ಮೀನೆ ಅನಿಸಿ, ನೀರು ಬೇಕಾ ಸಾರ್ ಅಂದೆ. ಹೇ, ಬೇಡಪ್ಪಾ ಅಂದ್ರು ಅವ್ರು ನಸುನಗುತ್ತಾ. ಪ್ರಾಯಶಃ ಅವರ ಬಳಿ ಮತ್ತೊಂದು ಬಾಟ್ಲಿ ಇತ್ತೇನೋ ಒಳಗೆಲ್ಲೋ. ನೀರು ಒಳಸೇರಿದ ಮೇಲೆ ಸುಖನಿದ್ರೆ.
ಮೂರುಮುಕ್ಕಾಲಿಗೆ ಹುಬ್ಳಿ ಬಂತು ಹುಬ್ಳಿ ಬಂತು ಅಂತ ಆದರ್ಶ ಬಂದು ಎರ್ಲನ್ನೂ ಎಬ್ಸಿದ್ರು. ಗಡಿಬಡಿಸಿ ಎದ್ದು ನೋಡಿದ್ರೆ ಹುಬ್ಳಿಯೂ ಇಲ್ಲ. ಎಂತದೂ ಇಲ್ಲ. ಮೊದಲೇ ಲೇಟಾಗಿದ್ದ ರೈಲು ಹುಬ್ಳಿ ತಲುಪೋದು ನಾಲ್ಕೂವರೆಯಾದ್ರೂ ಆಗತ್ತೆ ಅಂತ ಹುಬ್ಳಿಗೆ ಇನ್ನೂ ಮೂವತ್ತೈದು ಕಿ.ಮೀ ದೂರ ತೋರಿಸ್ತಿದ್ದ ಅಕ್ಷಯ್ ಜಿ.ಪಿ,ಎಸ್ ಹೇಳ್ತಾ ಇತ್ತು. ಬೆಳೆಬೆಳಗ್ಗೆ ಈ ಪರಿ  ತಮಾಷೆ ಆದರ್ಶಂದು !  ಅಂತೂ ನಾಲ್ಕೂವರೆಗೆ ಹುಬ್ಳಿ ತಲುಪಿದ ನಮಗೆ ಅಲ್ಲಿನ ರೈಲ್ವೇ ನಿಲ್ದಾಣ ನೋಡಿ ಬೆಂಗಳೂರಿನ ನಿಲ್ದಾಣವೂ ನಾಚಿಕೊಳ್ಳಬೇಕು ಅನಿಸಿದ್ದು ಸುಳ್ಳಲ್ಲ. ಅಲ್ಲಿಂದ ಮುಂದೆ ನಮಗೆ ದಾನಿಯೇ ದಾರಿ ದೀಪ. ಬಸ್ಟಾಂಡು ತಲುಪೋ ಹೊತ್ತಿಗೆ ಇಲ್ಲಿಂದ ದಾಂಡೇಲಿಗೆ ಬಸ್ಸು ಕಡಿಮೆ. ಧಾರವಾಡಕ್ಕೆ ಹೋಗೋಣ ಅಂದ್ರು ಅಲ್ಲೇ ಓದಿದ್ದ ಪಲ್ಲವಿ ಅಕ್ಕ. ಸರಿಯೆಂದು ಧಾರವಾಡದ ಬಸ್ಸು ಹತ್ತಿದ್ವಿ. ನಮ್ಕಡೆಯೆಲ್ಲಾ ಸ್ಟಾಪುಗಳೆಂದ್ರೆ ಒಂದೂವರೆ , ಎರಡು ಕಿ.ಮೀ ದೂರವಾದ್ರೂ ಇರೋ ಕಲ್ಪನೆಯಿದ್ದ ನಾವು ಹುಬ್ಳಿ, ಧಾರವಾಡಗಳ ನಡುವೆ ಇದ್ದ ಸ್ಟಾಪುಗಳ ಸಂಖ್ಯೆ ನೋಡಿ ದಂಗಾಗಿಬಿಟ್ವಿ. ನಿಮಿಷಕ್ಕೆರಡು ಸಲದಂತೆ ಮುಂದಿನ ನಿಲ್ದಾಣ ಅಂತಿದ್ದ ಬಸ್ಸಿನ ಧ್ವನಿವಾಹಿನಿಯನ್ನು ನೋಡಿ ಗೌಡ್ರು ಇದೊಳ್ಳೆ ಮೊಬೈಲ್ ರಿಂಗ್ ಟೋನಿನಂಗೆ ಆಗ್ಬಿಟ್ಟಿದೆಯಲ್ಲಾ ಅಂತಿದ್ರು ! ಅಂತೂ ಐದೂವರೆ, ಐದೂಮುಕ್ಕಾಲರ ಹೊತ್ತಿಗೆ ಧಾರವಾಡ. ಅಲ್ಲಿಂದ ಮತ್ತೆ ದಾಂಡೇಲಿಯ ಬಸ್ಸಿನ ಹುಡುಕಾಟ. ದಾಂಡೇಲಿ ಅಂತೊಂದು ಬಸ್ಸು ಬಂದ್ರೂ ಅದು ಹಳಿಯಾಲದವೆರೆಗೆ ಮಾತ್ರ ಹೋಗೋದು ಅಂದು ಬಿಟ್ಟ ಅವ. ಹೇಗಿದ್ರೂ ಹಳಿಯಾಲದ ಮೇಲೇ ಹೋಗಬೇಕು. ಹೋಗಿಬಿಡೋಣ್ವಾ ಅನಿಸಿದ್ರೂ ಹೋಗೋದೋ, ಮತ್ತೊಂದು ಬಸ್ಸಿಗೆ ಕಾಯೋದೋ ಅನ್ನೋ ಅನುಮಾನ. ಅಷ್ಟರಲ್ಲೇ ಆ ಬಸ್ಸು ಹೋಯ್ತು. ನಮ್ಮ ಅನುಮಾನಗಳಿಗೆಲ್ಲಾ ತಾಳ್ಮೆಯಿಂದ ಪರಿಹಾರ ಕೊಡೋಕೆ ಡ್ರೈವರು , ಕಂಡಕ್ಟರುಗಳೇನು ನಮ್ಮ ನೆಂಟರಾ ? !
ಅದು ಹೋಗಿದ್ದೇ ಹೋಗಿದ್ದು. ಆಮೇಲೆ ಬಸ್ಸೇ ಇಲ್ಲ. ಮುಂದಿನ ಬಸ್ಸು ಏಳು ಘಂಟೆಗೆ ಅಂದ್ರು ಯಾರೋ ಅಲ್ಲಿ. ಬಸ್ಟಾಂಡೆಲ್ಲಾ ಸುತ್ತಿದ್ರೂ ಒಂದು ಘಂಟೆ ಕಳೆಯೋದು ಕಷ್ಟವೇ . ಆದರ್ಶ ದಾಂಡೇಲಿ ಅನ್ನೋ ಬೋರ್ಡು ನೋಡಿ ಮಲಗಿದ್ದ ಯಾರೋ ಒಬ್ಬ ಡ್ರೈವರನನ್ನು ಎಬ್ಸಿದ. ಅವ ಆರೂಮುಕ್ಕಾಲಕ್ಕೆ ಹೊರಡ್ತೀನಿ ಅಂದಾಗ ನಮ್ಮಲ್ಲೆಲ್ಲಾ ಮತ್ತೆ ಖುಷಿ. ನಾವಿದ್ದೀವಿ ಅಂತ ಒಂದೈದು ನಿಮಿಷ ಬೇಗ ಹೊರಡಬಹುದಾದ್ರೂ ಹೊತ್ತು ಗೊತ್ತು ಎಲ್ಲಾ ಮೀರಿ ತಕ್ಷಣ ಹೊರಡೋದು ಅವರಲ್ಲ, ಅವರ ಜಾಗದಲ್ಲಿ ಯಾರಿದ್ರೂ ಸಾಧ್ಯವಾಗುತ್ತಿರಲಿಲ್ಲವೇನೋ. ಆ ಖುಷಿಯ ಮಧ್ಯೆಯೂ ಇನ್ನುಳಿದ ನಲವತ್ತು ನಿಮಿಷ ಏನು ಮಾಡೋದೆನ್ನೋ ಪ್ರಶ್ನೆ.  ಧಾರವಾಡದ ಮಿಶ್ರಾ ಪೇಡ, ಎ.ಟಿ.ಎಂ ನೋಡಿ, ಚಾ ಹೀರಿ ಬಂದ್ವಿ. ಅಲ್ಲೊಂದು ಕಡೆ ದ್ವಿಚಕ್ರ ವಾಹನಗಳ ರಿಪೇರಿ ತಾಣ ಅನ್ನೋ ಫಲಕ ನೋಡಿ ನನ್ನಲ್ಲಿನ ಕನ್ನಡ ಪ್ರೇಮಿಗೆ ಆನಂದ ಭಾಷ್ಪ. ಎಲ್ಲೆಡೆ ಗ್ಯಾರೇಜು, ಟಿನ್ನು, ಪೇಪರ್ರು, ಟಯರ್ರು.. ಹೀಗೆ ಇರಬರೋ ಪದಗಳನ್ನೆಲ್ಲಾ ಕನ್ನಡ ಲಿಪಿಯಲ್ಲಿ ಬರೆದ ಮಾತ್ರಕ್ಕೆ ಕನ್ನಡವೆಂದುಕೊಳ್ಳೋ ಪರಿಸ್ಥಿತಿ ಬಂದಿರುವಾಗ ಈ ಅಚ್ಚಗನ್ನಡ ಭಾಷಾಪ್ರಯೋಗ ಖುಷಿಕೊಟ್ಟಿತು.  ಕರ್ನಾಟಕದಲ್ಲಿ ಹೆಚ್ಚು ಕನ್ನಡ ಬಳಸಲ್ಪಡೋದೆ ಹುಬ್ಬಳಿ-ಧಾರವಾಡದಲ್ಲಿ ಅನ್ನೋ ಹಳೆಯ ರಸಪ್ರಶ್ನೆಯ ಉತ್ತರ ಆಮೇಲೆ ನೆನಪಾಯ್ತು. ಗಾಡಿ ಹೊರಡುತ್ತಿದ್ದಂತೆಗೇ ಬೆಳಗು ಮೂಡುತ್ತಿತ್ತು. ಸ್ವಾಗತ ಕೋರುತ್ತಿದ್ದ ರವಿಯ ಬೆಳಕಲ್ಲಿ ಎತ್ತ ಕಣ್ಣು ಹಾಯಿಸಿದ್ರೂ ಹಸಿರೇ ಹಸಿರು. ದಾರಿ ತಪ್ಪಿ ಮಲೆನಾಡಿನ ನಮ್ಮೂರತ್ರ ಎಲ್ಲಾದ್ರೂ ಬಂದೆನಾ ಅಂತೊಮ್ಮೆ ದಿಗ್ಭ್ಹ್ರಮೆ. ಆಮೇಲೆ ನೆನಪಾಯ್ತು. ನಾವು ಹೋಗುತ್ತಿರೋ ದಾಂಡೇಲಿ ಇರೋದು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತ. ಬೆಂದಕಾಳೂರೆಂಬ ತಮಿಳುನಾಡು ಗಡಿ, ಪಣಜಿಗೆ ಮೂವತ್ತೇ ಕಿ.ಮೀ ಎಂಬ ಬೋರ್ಡಿರೋ ಗೋವಾ ಗಡಿ ಬಳಸಿ ಬೆಳಗಾವೆಂಬ ಮಹಾರಾಷ್ಟ್ರ ಗಡಿಯತ್ತ ತಿರುಗೋದಿತ್ತು ನಮ್ಮ ಪಯಣದ ಬಂಡಿ. ಆದ್ರೆ ಸದ್ಯಕ್ಕೆಂತೂ ಮುಖ ಮಾಡಿದ್ದು ದಾಂಡೇಲಿಯ ಕಾಳಿ ನದಿ ಕಣಿವೆಯೆಡೆಗೆ.
ದಾಂಡೇಲಿ: 
ದಾಂಡೇಲಿಗೆ  ಗೋವಾದಿಂದ ಬರೀ ೧೨೫ ಕಿ.ಮೀ.ಆದ್ರೆ ಬೆಂಗಳೂರಿನಿಂದ 460 ಕಿ.ಮೀ ! ಇಲ್ಲೇ ಎಲ್ಲೋ ಹತ್ರ ಅಂದುಕೊಂಡಿದ್ದವರಿಗೆ  ಹೊರಟಮೇಲೇ ಗೊತ್ತಾದ್ದು ಬೆಂಗಳೂರಿಂದ ಅದೆಷ್ಟು ದೂರವೆಂದು. ಈ ಪಟ್ಟಣಕ್ಕೆ ಹೆಸರು ಬಂದ ಬಗ್ಗೆ ವಿಚಾರಿಸಿದ್ರೆ ಹಲತರದ ಆಸಕ್ತಿದಾಯಕ ಕತೆಗಳು ಸಿಕ್ಕುತ್ವೆ. ದಾಂಡೇಲಪ್ಪ ಅನ್ನೋ ಸ್ಥಳೀಯನು ಮಿರಾಶಿಗಳೆಂಬ ಭೂಮಾಲಿಕರಿಗೆ ವಿದೇಯನಾಗಿ ತನ್ನ ಪ್ರಾಣವನ್ನೇ ತೆತ್ತನೆಂದೂ, ಅವನ ನೆನಪಲ್ಲಿ ಪಟ್ಟಣಕ್ಕೆ ಈ ಹೆಸರೆನ್ನುತ್ತಾರೆ ಕೆಲವರು. ದಂಡಕನಾಯಕನೆಂಬ ರಾಜ ಈ ಕಾಡಿನ ಮೂಲಕ ಪಯಣಿಸುತ್ತಿದ್ದಾಗ ಈ ಇಡೀ ಪ್ರದೇಶಕ್ಕೆ ದಾಂಡೇಲಿಯೆಂಬ ಹೆಸರಿಟ್ಟನೆನ್ನುತ್ತಾರೆ ಇನ್ನು ಕೆಲೋರು. ಇನ್ನು ರಾಮಾಯಣದ ದಂಡಕಾರಣ್ಯವೆಂಬ ಪ್ರದೇಶವೇ ಈ ಕಾಡು ಎಂದೂ ಹೇಳುತ್ತಾರೆ ಕೆಲವರು ! ಅಲ್ಲಿ ಬಂದಿದ್ದು ನೀರಲ್ಲಾಡೋಕಂತಾದ್ರೂ ನಿತ್ಯ ಕರ್ಮಗಳನ್ನು ಪೂರೈಸ್ಲೇಬೇಕಲ್ವೇ ? ಅದಕ್ಕೆಂದೇ ಬುಕ್ಕಾಗಿದ್ದ ಲಾಡ್ಜೊಂದಕ್ಕೆ ತೆರಳಿದ್ವಿ. ಇಲ್ಲಿನ ಲಾಡ್ಜುಗಳಾಗ್ಲಿ, ರಿವರ್ ರಾಫ್ಟಿಂಗ್ ಆಗ್ಲಿ ಮುಂಚೇನೆ ಬುಕ್ ಮಾಡ್ಬೇಕು. ಬುಕ್ ಮಾಡದೇನೋ, ಸಡನ್ನಾಗಿ ಬಂದು ನುಗ್ತೀನಿ ಅಂದ್ರು.. ಊಹೂಂ.. ಯಾರಿದಂಲೂ ಆಗಲ್ಲ. ಅಂದಂಗೆ ಇಲ್ಲಿ ಯಾರಾದ್ರೂ ಮುಂಚೆ ತೆರಳಿದ್ರೆ ಅವರ ಪರಿಚಯದ ಏಜೆಂಟರ ಮೂಲಕ ಬುಕ್ ಮಾಡಬಹುದು. ಇಲ್ಲಾ ಅಂತರ್ಜಾಲದ ಕೆಲವು ತಾಣಗಳ ಮೂಲಕ(ಕೊನೆಯಲ್ಲಿ ಕೊಟ್ಟಿದೆ) ಬುಕ್ ಮಾಡಬಹುದು. ಅರ್ಧ ಘಂಟೆಯಲ್ಲಿ ರೆಡಿಯಾದ ಹತ್ತು ಜನ ನೀರತ್ತ ತೆರಳಿದ್ವಿ. ಎಂಟೂವರೆಗೇ ಶುರುವಾಗತ್ತೆ ರಾಫ್ಟಿಂಗ್ ಅಂದಿದ್ದ ಏಜಂಟ್. ಅವನ ಮಾತು ನಂಬಿ ತಿಂಡಿಯನ್ನೂ ತಿನ್ನದೇ ಓಡಿದ್ದ ನಮಗೆ ಆಮೇಲೆ ಎಂತಾ ಬರ್ಕಾ ಆದ್ವಿ ಅನಿಸ್ತು. ಘಂಟೆ ಹತ್ತಾದ್ರೂ ಇನ್ನೂ ಬರೋ ಜನರಿಗೆ ಕಾಯ್ತಾನೆ ಇದ್ರು ಅಲ್ಲಿ.
ನಮ್ಮ ಜೀವಕ್ಕೆ ನಾವೇ ಜವಾಬ್ದಾರರು ಅನ್ನೋ ಪತ್ರಕ್ಕೆ ಸೈನ್ ಮಾಡ್ಬೇಕು ಅಂದಾಗೊಮ್ಮೆ ಎಲ್ಲೋ ಅಡಗಿದ್ದ ಭಯ ತನ್ನ ಅಸ್ತಿತ್ವ ತೋರಿಸಿಬಿಟ್ಟಿತು. ಕೊನೆಗೆ ಇಲ್ಲಿ ಪ್ರತೀ ದಿನ ಎಷ್ಟೆಲ್ಲಾ ಜನ ಬರ್ತಾರೆ. ಬಂದೋರಲ್ಲಿ ಯಾರಾದ್ರೂ ಸತ್ತದಿದ್ಯಾ ? ಇಷ್ಟೆಲ್ಲಾ ಗೈಡುಗಳಿರಲ್ವಾ ? ಲೈಫ್ ಜಾಕೆಟ್ ಕೊಡಲ್ವಾ ಅನ್ನೋ ಧೈರ್ಯ ಬಂತು. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಲೈಫ್ ಜಾಕೇಟ್ನ ಹೇಗೆ ಹಾಕ್ಕೊಳ್ಳಬೇಕು. ಅದನ್ನ ಎರಡು ಸಲ ರಕ್ಷಣೆಯಿರೋ ತರದಲ್ಲಿ, ಹಾಕಿ ಎತ್ತಿದ್ರೆ ಉದುರಿಹೋಗದಷ್ಟು ಗಟ್ಟಿಯಾಗಿ ಕಟ್ಕೊಳ್ಳೋದು ಹೇಗೆ ಅನ್ನೋ ಪ್ರಾತ್ಯಕ್ಷಿಕೆ ತೋರಿಸಿದ್ರು . ಆಮೇಲೆ ಹೆಲ್ಮೆಟ್ಟು ಹಾಕ್ಕೊಳ್ಳೋದು, ಹುಟ್ಟು ಬಳಸೋದ್ರ ಬಗ್ಗೆಯೂ ಪ್ರಾತ್ಯಕ್ಷಿಕೆ. ಅದಾದ ಮೇಲೆ ಜನರನ್ನ ಆರೇಳು ಜನರ ಒಂದೊಂದು ತಂಡಗಳಾಗಿ ವಿಭಜಿಸಿ ಒಂದೊಂದು ದೋಣಿಗೆ ಹಾಕಿದ್ರು. ನಾವಿದ್ದಿದ್ದು ಹತ್ತು ಜನ. ಐದೈದು ಜನ, ಅಥವಾ ಆರು-ನಾಲ್ಕು ಜನ ಒಂದೊಂದು ದೋಣಿಯಲ್ಲಿ ಬನ್ನಿ ಅಂದ್ರು ಅಲ್ಲಿ. ಏನು ಮಾಡೋದು. ಸರಿ, ಐದೈದಾಗಿ ಭಾಗವಾಗಿ ಒಂದೊಂದು ದೋಣಿ ಹತ್ತಿದ್ವಿ. ನಮ್ಮ ದೋಣಿಗೆ ಅಲ್ಲೇ ಪರಿಚಯವಾದ ಕನ್ನಡದವನಾದ ಸುನೀಲ್ ಅನ್ನೋನು ಬಂದಿದ್ರೆ ಪಕ್ಕದ ದೋಣಿಗೆ ನೇಪಾಳದ ಮೀನ್ ಅನ್ನೋನು ಬಂದಿದ್ದ ಗೈಡಾಗಿ. ಈ ಗೈಡ್ಗಳ ಬಗ್ಗೆ ಹೇಳ್ಲೇಬೇಕು. ಒಂಭತ್ತು ಕಿ.ಮೀ ದೂರದ ರಾಫ್ಟಿಂಗಿನಲ್ಲಿ ಹುಟ್ಟು ಹಾಕಿ ಹಾಕೇ ನಮಗೆ ಸುಸ್ತೆದ್ದು ಹೋಗುತ್ತೆ. ಇನ್ನು ನಮ್ಮಿಡೀ ದೋಣಿ ನಿಯಂತ್ರಿಸುವ, ಮಧ್ಯೆ ಮಧ್ಯೆ ರಾಫ್ಟಿಂಗುಗಳಲ್ಲಿ ಸರ್ಫಿಂಗೆಂದು ನೀರೋಳಗೆ ನಮ್ಮ ನುಗ್ಗಿಸಿ, ಹೊರ ತರುವ ಆ ಗೈಡುಗಳಿಗೆ ಅದೆಷ್ಟು ಶಕ್ತಿ ಅದೆಲ್ಲಿಂದ ಬರುತ್ತಪ್ಪ ಅಂದುಕೊಳ್ಳುತ್ತೇನೆ. ಅವರಲ್ಲಿ ಕೆಲವರ ಕೈಗಳನ್ನು ನೊಡಿದ್ರೆ ನಮ್ಮ ಮಧ್ಯದ ಜಿಂ ಬಾಲಗಳು ಏನೂ ಅಲ್ಲ!. ನೀರಲ್ಲಿ ಸ್ವಲ್ಪ ಮುಂದೆ ಬರುತ್ತಿದ್ದಂತೆಯೇ ಹುಟ್ಟುಹಾಕೋದೇಗೆ, ಯಾವ ತರ ಕರೆ ಕೊಟ್ರೆ ಏನು ಮಾಡ್ಬೇಕು ಅಂತೆಲ್ಲಾ ಮತ್ತೆ ಹೇಳಿಕೊಡ್ತಾರೆ ಈ ಗೈಡುಗಳು. ಹೂಂ ಅನ್ನುತ್ತಿದ್ದಂತೆಯೇ ದೋಣಿಯಲ್ಲಿದ್ದ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ನೀರಿಗೆ ತಳ್ಳುತ್ತಾರೆ ಈ ಗೈಡುಗಳು.
ಆಗ ಶುರುವಾಗುತ್ತೆ ನೋಡಿ ನಿಜವಾದ ಮಜ. ನೀರಲ್ಲಿ ಬಿದ್ದರೆ ತೇಲೋದು ಹೇಗೆ ಅನ್ನೋದ್ರ ಪ್ರಾತ್ಯಕ್ಷಿಕೆ. ಬೋರಲು ಬಿದ್ರೆ ಎಷ್ಟು ಸಲೀಸಾಗಿ ಮೇಲೆ ಬರ್ತೀವಿ. ಕೆಳಗೆ ಬಿದ್ದೋರನ್ನ ದೋಣಿಗೆ ಎತ್ತಿಕೊಳ್ಳೋದು ಹೇಗೆ ಅನ್ನೋ ಎಲ್ಲ ಕ್ರಮಗಳನ್ನೂ ನಾವೇ ಪಾತ್ರಧಾರಿಗಳಾಗಿ ಅನುಭವಿಸಿ ಕಲಿಯೋದಿದ್ಯಲ್ಲಾ ? ವಾವ್.. ಈಜು ಬರದಿದ್ರೂ ಒಂದು ಸಲ ಈ ಲೈಫ್ ಜಾಕೇಟಿನ ಸಹಾಯದಿಂದ ತೇಲೋಕೆ ಶುರುವಾದಾಗ ಏನೇ ಆಗ್ಲಿ , ಇಲ್ಲಿ ಮುಳುಗಿ ಸಾಯೋದಿಲ್ಲ ಅನ್ನೋ ನಂಬಿಕೆ ಬಂದುಬಿಡುತ್ತೆ. ತಿಂಡಿ ಗಿಂಡಿ ಏನೂ ಇಲ್ಲದಿದ್ದರೂ ಹುಟ್ಟು ಹಾಕಿ ಮುಂದೆ ಸಾಗೋ ಉತ್ಸಾಹವೇರಿ ಬಿಡುತ್ತೆ. ಸೌಮ್ಯವಾಗಿ ಸಾಗುತ್ತಿರೋ ಕಾಳಿಯಲ್ಲಿ ಮೊದಮೊದಲು ಮುಂದಂದರೆ ಮುಂದೆ, ಹಿಂದೆಂದರೆ ಹಿಂದೆ, ಹುಟ್ಟುಹಾಕಿದತ್ತಲೇ ಸಾಗ್ತಿರತ್ತೆ ನಮ್ಮ  ದೋಣಿ. ಫೈಬರ್ರಿನ , ಒಳಗಡೆ ನೈಟ್ರೋಜನ್ ತುಂಬಿದ ಭದ್ರ ದೋಣಿಯಲ್ಲಿನ ಪಯಣ ಇಷ್ಟು ಸುಲಭವೇ ಅನ್ನುವ ಹೊತ್ತಿಗೆ ಕಾಳಿಯ  ಉಗ್ರರೂಪ ರಾಫ್ಟುಗಳ ಮೂಲಕ ಗೊತ್ತಾಗತ್ತೆ..
ತೊರೆಯೊಂದು ಜಲಪಾತವಾಗಿ ಧುಮುಕೋದನ್ನ ಚಿತ್ರಗಳಲ್ಲಿ ನೋಡಿರುತ್ತೀರ. ಆದ್ರೆ ರಭಸವಾಗಿ ಹರಿಯುತ್ತಿದ್ದ ನದಿಯೇ  ನಾಲ್ಕೈದು ಅಡಿಗಳ ತನಕ ಧುಮುಕಿದರೆ ? ಆಗ ಸೃಷ್ಟಿಯಾಗೋದೇ ರಾಫ್ಟುಗಳು. ಮೊದಲೇ ಅಪಾರವಾಗಿರೋ ಜಲರಾಶಿಗೆ ಹೀಗೆ ಧುಮ್ಮಿಕ್ಕುವಾಗ ಅಸಾಧ್ಯ ಬಲ ಸಿಕ್ಕಿಬಿಡುತ್ತೆ. ಈ ಧುಮ್ಮಿಕ್ಕೋ ರಾಫ್ಟುಗಳ ಹಾದಿಯಲ್ಲಿ ಸಾಗೋ ಕ್ರೀಡೆಯಿದೆಯಲ್ಲ, ಅದೇರೀ ರಾಫ್ಟಿಂಗ್ ಕಾಳಿನದಿಯಲ್ಲಿ ಸಿಗೋ ಪ್ರತೀ ರಾಫ್ಟುಗಳಿಗೂ ಅದರದ್ದೇ ಆದ ಹೆಸರಿದೆ. ಮೊದಲೆರಡು ರಾಫ್ಟುಗಳು ಸಖತ್ತಾಗಿದ್ದು ಎತ್ತೆತ್ತಿ ಹಾಕುತ್ತೆ. ದೋಣಿಯಲ್ಲಿ ಭದ್ರವಾಗಿ ಕೂರೋ ಬಗೆ, ನೀರಿನ ರೌದ್ರ ರೂಪದ ದರ್ಶನ, ಮತ್ತೊಂದು ಬದಿಯಲ್ಲಿ ನಮ್ಮ ಅರಿವಿಲ್ಲದೇ ನಿಂತಿರೋ ಫೋಟೋಗ್ರಾಫರ್ಗಳಿಗೊಂದು ಪೋಸು ಎಲ್ಲಾ ಆಗೋದು ಮೊದಲೆರಡು ರಾಫ್ಟುಗಳಲ್ಲಿ. ಇಲ್ಲಿ ಸಿಗೋ ರಾಫ್ಟುಗಳ ಹೆಸರುಗಳ ಅದೇ ಅನುಕ್ರಮಣಿಕೆಯಲ್ಲಿ ಹೀಗಿದೆ.
1. Adi's/Rapid Beard
2. Stich bridge
3. Head cutter
4. Snake bite
5. leopard's hole
6. hidden garden 
7. Smugglers' Trove
8.  Stanley's Squeeze


ಫೋಟೋಗಳು : ಬಾಪೂಜಿ, ಸಂಭಾಜಿ ಪೇಟೆ
ಇವಕ್ಕೆಲ್ಲಾ ಇಂಗ್ಲಿಷು ಹೆಸರೇ ಏಕೆ, ಕನ್ನಡದ ಮೊಲದ ಗಡ್ಡ, ಗುಪ್ತ ತೋಟ, ಜೋಡಿಸಿದ ಸೇತುವೆ ಅನ್ನೋ ತರದ ಹೆಸರೇಕೆ ಇರಬಾರದು ಅಂತಿದ್ರು ಗೌಡ್ರು. ಆದ್ರೆ. ಇಲ್ಲಿಗೆ ಬರೋ ಹೆಚ್ಚಿನ ಪ್ರವಾಸಿಗ್ರೆಲ್ಲಾ ಮಹಾರಾಷ್ಟ್ರ, ಗೋವಾದವ್ರು. ಪ್ರತಿಯೊಬ್ಬನಿಗೂ ಇರೋ ೧೪೦೦ ರೂಗಳ ಶುಲ್ಕ ಕೂಡ ಸ್ಥಳೀಯರಿಗೆ ಇದು ಹುಳಿದ್ರಾಕ್ಷಿಯ ಭಾವ ಕೊಟ್ಟಿರಲಿಕ್ಕೆ ಸಾಕು. ನಮ್ಮಂತಹ ಕನ್ನಡಿಗರೇ ಇಲ್ಲಿಗೆ ಬಂದು ಪ್ರತೀ ಸ್ಥಳಕ್ಕೂ ಒಂದೊಂದು ಕನ್ನಡ ಹೆಸರಿನ ಬಾವುಟ ಹುಗಿದು ಹೋಗಬೇಕು ಗೌಡ್ರೆ. ಆಗ ಇಲ್ಲೆಲ್ಲಾ ಕನ್ನಡದ ಹೆಸ್ರು ಬರ್ಬೋದು ಅಂದೆ. ಉತ್ತರ ಕನ್ನಡದಲ್ಲಿರೋ ಈ ರಾಫ್ಟಿಂಗಿನಲ್ಲಿ ಒಂದು ರಾಫ್ಟಿಗೂ(ರಾಫ್ಟು ಅನ್ನೋದು ಒಂದು ಆಂಗ್ಲ ನಾಮವೇ !) ಕನ್ನಡ ಹೆಸರಿಲ್ಲದ ಬಗ್ಗೆ, ಅಥವಾ ಇದ್ದರೂ ನಮಗೆ ತಿಳಿಯದ ಬಗ್ಗೆ ನಮ್ಮ ಬೇಸರ ವ್ಯಕ್ತವಾಗಿದ್ದು.  ಇನ್ನು, ಇದರ ಪಕ್ಕದಲ್ಲೇ ಸರ್ಕೋಜಿ ಅಂತೊಂದು ಜಲಪಾತವಿದ್ಯಂತೆ. ದೋಣಿಯಲ್ಲಿದ್ದ ನಾವು ಅದ್ರ ಬಗ್ಗೆ ಮಾತನಾಡಿದ್ದು ಕೇಳಿದ ಸುನೀಲ್, ನೀವು ಅಲ್ಲೇನು ಹೋಗ್ತೀರಾ , ಇಲ್ಲೇ ನಿಮಗೆ ಸರ್ಫಿಂಗ್ ಮಾಡಿಸ್ತೀನಿ.ಆಮೇಲೆ ಅದಕ್ಕೆಷ್ಟಾದ್ರೂ ಕೊಡಬಹುದು. ಓಕೇನಾ ಅಂದ ? ಹೂಂ ಸರಿ ಅಂದ್ವಿ.
ಸರ್ಫಿಂಗ್ ಅಂದ್ರೆ ಈ ಧುಮುಕುತ್ತಿರೋ ರಾಫ್ಟುಗಳ ಕೆಳಗಿಳಿದ ಮೇಲೆ ಅವುಗಳ ವಿರುದ್ದ ದಿಕ್ಕಿನಿಂದ ಅವುಗಳತ್ತ ಧಾವಿಸೋದು ! ನಮ್ಮ ದೋಣಿಯೇ ನೀರೋಳಗೆ ಮುಳುಗಿ ಮೇಲೆದ್ದು ಬಂದ ಭಾವ. ಒಂದೆರಡು ಕ್ಷಣ ಕಣ್ಣು, ಮುಖ, ತಲೆ ಮುಚ್ಚಿರೋ ನೀರ ಮಧ್ಯದಲ್ಲಿ ಮೂಗೊಳಗೆಲ್ಲಾ ನೀರು ನುಗ್ಗಿ ವಾಪಾಸ್ ಬಂದ್ರೆ ಸಾಕಪ್ಪಾ ಅನಿಸೋ ಭಾವ. ಒಳ್ಳೆ ಎಣ್ಣೆಯಲ್ಲಿ ಹಪ್ಪಳ ಕರೆದಂತೆ , ಒಂದೆಡೆ ನೀರಲ್ಲಿ ಮುಳುಗಿದರೂ ಬ್ಯಾಲೆನ್ಸ್ ಮಾಡಿ ಮತ್ತೆ ಮೇಲೆ ಕರ್ಕೊಂಡು ಬರೋ ಗೈಡಿನ ಕೈಚಳಕ, ಶಕ್ತಿಯನ್ನು ಮೆಚ್ಚಲೇ ಬೇಕು. ಇಂತಹ ಒಂದು ಸರ್ಫಿಂಗಿನಲ್ಲಿ ಮುಂದೆ ಕೂರೋದಕ್ಕೆ ಎಲ್ಲರಿಗೂ ಉತ್ಸಾಹ. ಮುಂದಿದ್ದ ಮೂರು ಮಂದಿಗೆ ನೀರ ಅಭಿಷೇಕ. ಸ್ವಲ್ಪ ಹಗ್ಗ ಬಿಟ್ಟರೂ ಒಲೆಯುತ್ತಿರೋ ದೋಣಿಯಿಂದ ಹೊರಗೆ ನೀರಲ್ಲಿ ಮುಗ್ಗರಿಸೋ ಅಪಾಯ. ಹುಟ್ಟನ್ನು ಒಳಗಿಟ್ಟು, ಹಗ್ಗ ಬಿಗಿಯಾಗಿ ಹಿಡಿದು ಭೋರ್ಗರೆಯೋ ನೀರ ವೇಗಕ್ಕೆ ತಲೆಯೊಡ್ಡೋದಿದ್ಯಲ್ಲಾ ? ವಾವ್..  ಇದೇ ತರದ ರಾಫ್ಟಿಂಗೊಂದರಲ್ಲಿ ಅಕ್ಷಯ್ ಕೆಳಜಾರಿದ್ದು ನಮಗೆಲ್ಲಾ ಗೊತ್ತಾಗೋಕೆ ಎರಡು ಸೆಕೆಂಡೇ ಬೇಕಾಯ್ತು !. ನೀರು ಮೂಗಿಗೆ ಹೊಡೀತಿದೆ ಅಂತ ಒಂದು ಕೈಬಿಟ್ಟಿದ್ದ ಅಕ್ಷಯನ್ನ ನೀರಿನ ರಭಸ ಎತ್ತಿ ಹೊರಗೆಸೆದಿದೆ. ಎಲ್ಲಿ, ಎಲ್ಲಿ ಅಂತ ನೊಡ್ತಾ ಇದ್ರೂ ನೀರಿನ ನೊರೆಗಳ ಬಿಳಿ, ಅಕ್ಷಯ್ ತೊಟ್ಟ ಶರ್ಟಿನ ಬಿಳಿ ಎಲ್ಲಾ ಒಂದೇ ಆಗಿ ಎಲ್ಲೋದರು ಅಂತ ಗೊತ್ತಾಗ್ತಿಲ್ಲ. ಲೈಫ್ ಜಾಕೆಟ್ ಇದ್ಯಲ್ಲಾ. ಹಾಗಾಗಿ ನೀರು ಹೇಗಾದ್ರೂ ಎತ್ತಿ ಹೊರಗೆಸಿಯುತ್ತೆ ಅನ್ನೋ ಧೈರ್ಯ. ಮೊದಲು ಅವರ ಹೆಲ್ಮೆಟ್ ತೇಲಿ ಬಂತು, ಆಮೇಲೆ ಅವರ ಹುಟ್ಟು. ಎಲ್ಲಪ್ಪ ಅಕ್ಷಯ್ ಅಂತ ಹುಡುಕೋ ಹೊತ್ತಿಗೆ ಮಾರು ದೂರದಲ್ಲಿ ಕಂಡ್ರು ಅಕ್ಷಯ್. ಅವರು ಬೋಟಿನ ಕೆಳಗೆ ಹೋಗಿ ಬಿಟ್ಟಿದ್ರಂತೆ. ಮೇಲೆ ಬರೋಕೆ ಅಂತ ನೊಡಿದ್ರೆ ಮೇಲೇನೋ ಕೆಂಪಗೆ ಕಾಣ್ತಾ ಇದೆ. ಮೇಲೆ ಬರೋಕಾಗ್ತಾ ಇಲ್ಲ !. ಕೊನೆಗೆ ಹೆಂಗಿದ್ರೂ ಲೈಫ್ ಜಾಕೇಟಿದ್ಯಲ್ಲಾ ಅಂತ ಮೇಲೆ ಬರೋ ಪ್ರಯತ್ನ ಬಿಟ್ಟು ಬೆನ್ನು ಮೇಲೆ ಮಾಡಿ ಮಲಗಿಬಿಟ್ರಂತೆ. ಅವರು ಮಲಗಿದ್ದೇ ತಡ, ಈಚೆ ಬಂದಿದ್ದಾರೆ. ಇತ್ತ ಹೆಲ್ಮೆಟ್ಟು, ಹುಟ್ಟು ನೋಡಿ ಗಾಬರಿಯಾದ ನಮ್ಮ ಗೈಡು ಅಕ್ಷಯನ್ನ ಹುಡುಕೋಕಂತ ಬೋಟಿಂದ ಕೆಳಹಾರಲು ತಯಾರಾಗಿದ್ದ. ಅಕ್ಷಯನ್ನ ಕಂಡಿದ್ದೇ ತಡ. ಬಂದ್ವಿ ಬಂದ್ವಿ ಅಂತ ಕೂಗಿದ ನಾನೂ , ಗೌಡ್ರು ಇನ್ನಿಲ್ಲದಷ್ಟು ಶಕ್ತಿಯಿಂದ ಹುಟ್ಟು ಹಾಕಿದ್ವಿ. ಅಲ್ಲಿಯವರೆಗೆ ಮುಂದೆ ಕುಳಿತು ಹುಟ್ಟು ಹಾಕಿ ಸುಸ್ತಾಗಿ ಹೋಗಿದ್ದ ನನಗೆ ಆ ಕ್ಷಣದಲ್ಲಿ ಎಲ್ಲಾ ಸುಸ್ತು ಮರೆತುಹೋಗಿತ್ತು.
ಮುಂಚೆಯೇ ಒಮ್ಮೆ ನೀರಿಗೆಸೆದು , ನೀರಿನ ಭಯ ಕಮ್ಮಿ ಮಾಡಿದ್ದು ಯಾಕೆ ಅಂತ ಆಗ ಅರ್ಥವಾಯ್ತು ನಮಗೆಲ್ಲಾ . ಪಾಪ ಅಕ್ಷಯ್.. ಆ ನಾಲ್ಕೈದು ಕ್ಷಣಗಳಲ್ಲಿ ಸೈನು ಮಾಡಿದ ಪತ್ರವನ್ನೆಲ್ಲಾ ನೆನೆಸಿಕೊಂಡಿದ್ರಂತೆ. ಜೀವನದ ಮೌಲ್ಯ ಗೊತ್ತಾಗೋದೇ ಇಂತಾ ಕ್ಷಣಗಳಿಂದ ಅನ್ಸುತ್ತೆ. ಹುಚ್ಚು ಸಾಹಸ ಅಂತಲ್ಲ. ಎಲ್ಲಾ ತರಹದ ರಕ್ಷಣೆಗಳಿದ್ದರೂ ಈ ತರ ಅನಿಸೋ ನಮಗೆ ಯಾವ ರಕ್ಷಣೆಯೂ ಇಲ್ಲದೇ, ನೀರಿನ ಆಳವೂ ಅರಿಯದೇ ಈಜು ಬರುತ್ತೆ ಅಂತ ಧುಮುಕಿ ಸುಳಿಗಳಲ್ಲಿ ಸಿಕ್ಕು ಸಾಯೋರ್ನ ಕಂಡರೆ ಏನನ್ನಬೇಕು ಅಂತ ಗೊತ್ತಾಗೋಲ್ಲ. ಜೀವನದಲ್ಲಿ ನಮ್ಮನ್ನ ನಂಬಿಕೊಂಡೋರು ಎಷ್ಟು ಜನ ಇರ್ತಾರೆ, ಅದನ್ನೆಲ್ಲಾ ಹಿಂಗೆ ಧುಮುಕೋ ಮೊದ್ಲು ಒಂದು ಸಲವಾದ್ರೂ ಯೋಚ್ನೆ ಮಾಡ್ಬಾರ್ದಾ ಅನಿಸ್ತು. ಜೋರ್ ಲಗಾಕೆ ಐಸಾ, ಗಿಲಿಗಿಲಿ ಲಕ್ಕಾ ಐತಲಕ್ಕಾ ಹೂ ಹಾ ಹೂ ಹಾ, ಅವ್ನು ನೋಡು ಐಸಾ, ಸ್ಮೈಮು ನೋಡು ಐಸಾ.. ಹೀಗೆ ಎಲ್ಲಾ ತರದ ಕೂಗಾಟಗಳು ನಡೆದ್ವು ಮಧ್ಯೆ ಮಧ್ಯೆ. ಸುಸ್ತಾದ ನನ್ನ ಹಿಂದೆ ಕಳಿಸಿ ಹಿಂದಿದ್ದವರನ್ನು ಮುಂದೆ ಕರೆಸಿದ ಗೈಡು. ಅದಾದ ಮೇಲೆ ಮತ್ತೊಂದಿಷ್ಟು ರಾಫ್ಟುಗಳು. ತಮಾಷೆ. ಮಧ್ಯೆಯ ಪ್ರಶಾಂತ ನೀರ ಹರಿವಲ್ಲಿ ಕೆಲಹೊತ್ತು ನಿಲ್ಲಿಸಿ ಬೋಟನ್ನು ಗಿರಿಗಿಟ್ಲೆ ತಿರುಗಿಸೋದು , ಆ ಬಿಳಿಯ ಜುಳು ಜುಳು ಧಾರೆಯನ್ನ, ಹಚ್ಚಹಸಿರ ಪ್ರಕೃತಿಯನ್ನ ನೊಡೋಕೆ ಬಿಟ್ತಿದ್ದ ನಮ್ಮ ಗೈಡು ಸುನೀಲ್. ಮಧ್ಯ ಮಧ್ಯ ಹಣ್ಣಹೊತ್ತಿದ್ದ ಮಾವಿನ ಮರಗಳಿಂದ ಅರೆಬರೆ ಹಣ್ಣುಗಳು ನೀರಿಗೆ ಬೀಳುತ್ತಿದ್ದವು. ಅಯ್ಯೋ, ಆ ನೀರ ಮಧ್ಯವೂ ಅವು ಸಿಕ್ಕಾವೇ ? ಆಮೇಲೆ ತಿನ್ನೋಣ ಅಂತ ಸಂಗ್ರಹಿಸೋ ಧಾವಂತ ! ಮತ್ತೊಂದು ದೋಣಿಯವರಿಗೆ ನಾವು, ನಮಗವರು ನೀರೆರಚೋ ಆಟ.ಹಿಂಗೇ ಸಾಗುತ್ತಾ ನಮ್ಮೆಲ್ಲರ ಕೈಸೋಲೋ ಹೊತ್ತಿಗೆ ದಡಬಂದಿತ್ತು. ನಮ್ಮನ್ನು ಒಂದು ಕಡೆ ತಂದು ನಿಲ್ಲಿಸಿದ್ದ ಜೀಪುಗಳು ಮತ್ತೆ ಕರೆದೊಯ್ಯಲು ಬಂದಿದ್ವು. ಪ್ರಾಣರಕ್ಷಕ ಗೈಡುಗಳಿಗೊಮ್ಮೆ ಧನ್ಯವಾದ ಅಂದ್ವಿ. ಅಲ್ಲಿ ಮೊಬೈಲು, ಕಾಗದ ಏನೂ ತಗೊಂಡೋಗೂ ಹಾಗಿರಲಿಲ್ಲ. ಇಲ್ಲಾಂದ್ರೆ ಗ್ರೈಡುಗಳ ಜೊತೆಗೆ ಒಂದಿಷ್ಟು ಫೋಟೋಗಳನ್ನು, ಅವರ ಮೊಬೈಲ್ ನಂಬರ್, ಆಟೋಗ್ರಾಫುಗಳನ್ನ ಸಂಗ್ರಹಿಸಬಹುದಾಗಿತ್ತೇನೋ. ಆದ್ರೆ ಅವಿಲ್ಲದಿದ್ದರೂ ಮಧ್ಯೆ ಮಧ್ಯೆ ನಮಗೇ ಗೊತ್ತಿಲ್ಲದಂತೆ ದಡದಲ್ಲಿದ್ದ ಫೋಟೋಗ್ರಾಫರೊಬ್ರು ತೆಗೆದಿದ್ದ ಫೋಟೋಗಳು ಆಮೇಲೆ ಕೈ ಸಿಕ್ಕವು. ಬಸ್ಟಾಂಡಿನ ಹತ್ರ ತೆರಳಿ, ಅಲ್ಲಿ ಇವತ್ತಿನ ಫೋಟೋಗಳು ಸಿಗುತ್ವೆ ಅಂದ ಗೈಡಿಗ ವಿದಾಯ ಮತ್ತು ಕೃತಜ್ನತೆ ಹೇಳಿ ಹೊರಡುವಾಗ ಹೃದಯ ತುಂಬಿ ಬಂದಿತ್ತು.  ಸಾಹಸದಿಂದ ಮನಸ್ಸು ದೇಹಕ್ಕೇನೋ ಖುಷಿಯಾಗಿತ್ತು. ಆದ್ರೆ ಹೊಟ್ಟೆಗೆ ? ನಾವಿದ್ದ ಲಾಡ್ಜಿನತ್ರ ಯಾವುದೋ ಖಾನಾವಳಿಯಿದೆಯೆಂಬ ಸುದ್ದಿ ಕೇಳಿ ಅತ್ತ ಗಾಡಿ ತಿರುಗಿಸಿದ್ವಿ.  ದಾಂಡೇಲಿಯ ಗಡದ್ದಾದ ರೊಟ್ಟಿಯೂಟ ಮುಂದೆ ನಮಗೆ ಕಾದಿರುವ ಗಂಟೆಗಟ್ಟಲೇ ಪಯಣಕ್ಕೆ ಶಕ್ತಿ ನೀಡಲನುವಾಗಿ ಕಾಯ್ತಾ ಇತ್ತು.. ಅಂದು ಮೂರೂವರೆಗೆ ದಾಂಡೇಲಿಯಿಂದ ಬಿಟ್ಟು ರಾತ್ರೆ ಒಂಭತ್ತಕ್ಕೆ ಬೆಳಗಾವಿಯ ಚಿಕ್ಕೋಡಿ ತಲುಪಿದ್ದು, ಅಲ್ಲಿಂದ ಮಾರನೇ ದಿನ ಮದುವೆ ಮುಗಿಸಿ ಹೊರಟವರು ರೈಲ ಲೇಟಿಂದ ಮಧ್ಯಾಹ್ನ ಹನ್ನೊಂದಕ್ಕೆ ಬೆಂಗಳೂರು ತಲುಪಿದ್ದೂ ದೊಡ್ಡ ಕತೆಯೆ. ಈ ರೈಲ ಲೇಟಿನ ಬಗ್ಗೆ, ಮತ್ತೆ ಹುಬ್ಬಳ್ಳಿಯ ಬಸವೇಶ್ವರ ಖಾನಾವಳಿ ಹುಡುಕಿದ ಬಗ್ಗೆ ಬರೆಯುತ್ತಾ ಕೂತ್ರೆ ಅದೇ ಒಂದು ದೊಡ್ಡ ಕತೆಯಾದೀತು. ಅದಾಗೋ ಮುಂಚೆಯೇ ವಿರಮಿಸುತ್ತೇನೆ.. ದಾಂಡೇಲಿಯ ಮಧುರ ನೆನಪುಗಳೊಂದಿಗೆ..
ಹೇಗೆ ಬುಕ್ ಮಾಡೋದು ? 
೧. http://www.riverraftingindandeli.com/
೨. http://www.dandeli.com/

Tuesday, June 3, 2014

ಬ್ಲಾಗುಗಳ ಲೋಕದಲ್ಲಿ

ಮುಂಚೆಯೆಲ್ಲಾ ಸಾಹಿತಿಯೆಂದ್ರೆ ಅವ ಕವಿಗೋಷ್ಠಿಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ತನ್ನ ಕವಿತೆಯನ್ನೋ, ಸಾಹಿತ್ಯಪ್ರಕಾರವನ್ನೂ ಪ್ರಸ್ತುತಪಡಿಸುವವನು, ಒಂದು ಖಾದಿ ಜುಬ್ಬ, ಜೋಳಿಗೆಯೊಂದಿಗೆ ತಿರುಗಾಡುವವನು ಎಂಬೆಲ್ಲಾ ಕಲ್ಪನೆಗಳಿರುತ್ತಿದ್ದವು.ಆದರೆ ಬದಲಾಗುತ್ತಿರುವ ಕಾಲದೊಂದಿಗೆ ಈ ಪರಿಕಲ್ಪನೆಯೂ ಬದಲಾಗುತ್ತಿರುವಂತೆ ಕಾಣುತ್ತಿದೆ. ಪುಸ್ತಕಗಳ ಮೂಲಕವೇ ಜನರ ಮನಗೆಲ್ಲುತ್ತಿರುವ ಹಿಂದಿನ ಜಮಾನಾದ ಸಾಹಿತಿಗಳೊಂದಿಗೆ, ಒಂದೇ ಒಂದು ಪುಸ್ತಕವನ್ನು ಬರೆಯದಿದ್ದರೂ ತಮ್ಮ ಜಮಾನಾದ ಗೆಳೆಯರ ಬಳಗದಲ್ಲಿ ಗುರುತಿಸಿಕೊಳ್ಳುತ್ತಿರುವ ಹೊಸ ಪೀಳಿಗೆಯ ಸಾಹಿತಿಗಳ ಉಗಮವಾಗುತ್ತಿರುವಂತೆ ಕಾಣುತ್ತಿದೆ. ಕವಿ, ಸಾಹಿತ್ಯ ಸಮ್ಮೇಳನಕ್ಕಾಗಿ ತಮ್ಮ ಸಮಯ ಮೀಸಲಿಡುವಷ್ಟು ಪುರುಸೊತ್ತಿನವರಲ್ಲ ಈ ಎರಡನೇ ಪೀಳಿಗೆಯವರು. ನವ್ಯ, ನವೀನ, ದಲಿತ, ಬಂಡಾಯ ಹೀಗೆ ಯಾವ ಪ್ರಕಾರದಲ್ಲೂ ಹೆಚ್ಚು ಗುರುತಿಸಿಕೊಳ್ಳದೇ ತಮ್ಮದೇ ಹೊಸ ಪ್ರಕಾರ ಕಟ್ಟುತ್ತೀವಿ ಎಂದು ಮುಂದಾಗುವವರು, ನಾವು ನವ್ಯ, ನವೀನಗಳಿಂದ ಪ್ರಭಾವಿತರಾಗಿದ್ದೇವೆ. ಆದ್ರೆ ಅದರಲ್ಲೇ ಬರೆಯಬೇಕೆಂಬ ಒತ್ತಡದಲ್ಲೇನಿಲ್ಲ. ಸದ್ಯ ಬರೆಯುತ್ತಿರುವುದು ನಮ್ಮ ಸಂತೋಷಕ್ಕೋಸ್ಕರ ಮಾತ್ರ ಎನ್ನುವವರು ಇರುವುದು ಈ ಎರಡನೇ ಪ್ರಕಾರದಲ್ಲೇ. ಪುಸ್ತಕ ಪ್ರಕಾಶನವಿಲ್ಲ. ಸಮ್ಮೇಳನಗಳಲ್ಲಿ ಹಾಜರಾತಿ ಮೊದಲೇ ಇಲ್ಲ. ಹಾಗಿದ್ದ ಮೇಲೂ ಮುಖ್ಯ ಸಾಹಿತ್ಯವಾಹಿನಿಯಿಂದ ದೂರಾದ ಈ ಸಾಹಿತಿಗಳು ಬೆಳಕು ಕಾಣುತ್ತಿರುವುದು, ಬದುಕುತ್ತಿರುವುದು ಎಲ್ಲಿ ಅಂದರೆ ? ಅದಕ್ಕೆ ಉತ್ತರ ಬ್ಲಾಗುಗಳು.

೨೦೧೦ ರ ಕೊನೆಯ ಹಂತ.  ಆಗಿನ್ನು ನಾನು ಫೇಸ್ಬುಕ್ಕಿನ ಖಾತೆ ತೆಗೆದು ಎರಡು ಮೂರು ತಿಂಗಳಾಗಿತ್ತಷ್ಟೆ. ಎರಡು ಮೂರು ವರ್ಷಗಳಿಂದ ಇದ್ದ ಆರ್ಕುಟ್ಟಿನ ಉಚ್ಚ್ರಾಯ ಕಾಲ ಮುಗಿದು ಫೇಸ್ಬುಕ್ಕೇ ಸರ್ವಸ್ವವೂ ಆಗಿಬಿಡಬಹುದಾದ ಅಪಾಯದ ಗಾಳಿ ಸದ್ದಿಲ್ಲದೇ ಬೀಸುತ್ತಿತ್ತು. ಹಿಂಗೇ ಒಂದಿನ ಗೆಳತಿಯೊಬ್ಬಳು ಕ.ಕ.ಕಾ ಅನ್ನೋ ಫೇಸ್ಬುಕ್ಕಿನ ಗುಂಪಿಗೆ ಸೇರಿಸಿದಳು. ಪ್ರಾಯಶಃ ಅದು ನಾನು ಸೇರಲ್ಪಟ್ಟ(ಸೇರಿಸಲ್ಪಟ್ಟ) ಮೊದಲ ಮೂರು ಗುಂಪುಗಳಲ್ಲೊಂದಾಗಿದ್ದೀತು. ಅಲ್ಲಿ ಬರೆಯುತ್ತಿದ್ದವರನ್ನು ನೋಡುತ್ತಿದ್ದಾಗಲೇ ನಾನೂ ಹೀಗೆ ಬರೆಯಬಾರದೇಕೆಂಬ ಸ್ಪೂರ್ತಿ ಹುಟ್ಟಿದ್ದು. ಹೈಸ್ಕೂಲಿನ ಪ್ರಬಂಧ ಸ್ಪರ್ಧೆಗಳಲ್ಲಿ, ತಾಲ್ಲೂಕು ಮಟ್ಟದ ಭಾಷಣ ಸ್ಪರ್ಧೆಗಳಲ್ಲಿ ಭಾಷಣ ಕುಟ್ಟಿದ್ದು, ಆಮೇಲೆ ಸಾಗರದ ಜೂನಿಯರ್ ಕಾಲೇಜಿನ "ಭಾವಬಿತ್ತಿ"ಯೆಂಬ ಗೋಡೆ ಪತ್ರಿಕೆಗ ಗೀಚಿದ್ದಾದರೂ ಪದವಿ ಹಂತದ ಮೊದಲೆರಡು ವರ್ಷಗಳಲ್ಲಿ ಬರೆದಿದ್ದೆಂದರೆ ಅದು ಎಕ್ಸಾಮಿಗೆ, ಇಂಟರ್ನಲ್ಸುಗಳಿಗೆ ಮಾತ್ರ ಎಂಬತ್ತಾಗಿತ್ತು. ಕೊನೆಗೂ ಬರೆಯೋ ಸಮಯ ಬರಬೇಕಾದ್ರೆ ಕೊನೆವರ್ಷವೇ ಬರಬೇಕಾಯ್ತು. ವಿಪರ್ಯಾಸವೆಂದರೆ ಮನದಲ್ಲಿ ಮೂಡುತ್ತಿದ್ದ ತಳಮಳಗಳಿಗೆ, ಭಾವಗಳಿಗೆ ದಕ್ಕದ ಪದಗಳನ್ನು ಕವಿತೆಯಾಗಿಸಿದ್ದೊಂದು ಕೊನೆ ಸೆಮ್ಮು ಬಂತಲ್ಲಾ ಅನ್ನೋ ವ್ಯಥೆ. ನೋಡ ನೋಡ ಕೊನೆ ಸೆಮ್ಮು ಬಂದಿತಲ್ಲಾ ಅಂತ ಅನಿಸಿದ ಅನಿಸಿಕೆಗಳನ್ನೆಲ್ಲಾ ನನಗೆ ಕವಿತೆ ಅಂತ ತೋಚಿದ ತರ ಗೀಚಿದ್ದೆ. ಅಷ್ಟೇ ಅಲ್ಲದೇ ಅದನ್ನ ಧೈರ್ಯ ಮಾಡಿ ಫೇಸ್ಬುಕ್ಕಿನ ಗೋಡೆಯ ಮೇಲೂ ಹಾಕಿದ್ದೆ. ತಗೋ.ಶುರುವಾಯಿತು ಕಾಮೆಂಟುಗಳ ಮಹಾಪೂರ. ಮೊದಲಿಗೆ ನಾನು ಹೀಗೆ ಬರೆಯಬಹುದು ಅಂತಲೂ ನಿರೀಕ್ಷಿಸದ ಸ್ನೇಹಿತರೆಲ್ಲಾ ಸಖತ್ ಆಶ್ಚರ್ಯದಿಂದಲೋ , ಖುಷಿಯಿಂದಲೋ ಬೆನ್ನು ತಟ್ಟಿದರು. ಸಖತ್ತಾಗಿ ಬರಿತಿದೀಯ. ಮುಂದುವರೆಸು ಅಂತ ಹೇಳಿದರು. ಹೇಗೆ ಬರೆದಿದ್ದೆನೋ ಗೊತ್ತಿಲ್ಲ. ಒಟ್ಟು ಸಿಕ್ಕಾಪಟ್ಟೆ ಸ್ಪೂರ್ತಿ ಸಿಕ್ಕಿದ್ದೆಂತೂ ನಿಜ ಆ ಘಟನೆಯಿಂದ.

ಆಮೇಲೆ ಸತ್ತ ಹೆಣದ ಮೆರವಣಿಗೆ, ಶಿವಮೊಗ್ಗದ ಕನ್ಯಕಾ ಪರಮೇಶ್ವರೀದೇವಿ, ಶಿವಮೊಗ್ಗ ಜಿಲ್ಲೆ .. ಹೀಗೆ ಸಿಕ್ಕಿದ್ದೆಲ್ಲಾ ಕವಿತೆಯ ವಸ್ತುಗಳಾಗುತ್ತಾ ಹೋದವು. ಆಗ ನನ್ನ ಹೈಸ್ಕೂಲ್ ಗೆಳೆಯ ಆದಿ ನೀನು ಬರೆದಿದ್ದೆಲ್ಲಾ ಈ ಫೇಸ್ಬುಕ್ಕೆಂಬ ಸಾಗರದಲ್ಲಿ ಕಳೆದುಹೋಗುವುದು ಬೇಡ. ನಿನ್ನದೇ ಒಂದು ಬ್ಲಾಗೆಂದು ಆರಂಭಿಸು. ಅದರಲ್ಲಿ ಇಲ್ಲಿ ಹಾಕಿದ್ದನ್ನೇ ಹಾಕು. ಫೇಸ್ಬುಕ್ಕಲ್ಲಿ ನಿನ್ನ ಗೆಳೆಯರಾಗದವರೂ ನಿನ್ನ ಬ್ಲಾಗಿಗೆ ಬಂದು ಓದಲನುವಾಗತ್ತೆ. ನಿನಗೂ ಬರೆದ ಅಂಶಗಲ ದಾಖಲೆಯಿರುತ್ತೆ ಎಂದ್. ಸರಿಯೆನಿಸಿ ಶುರುಮಾಡಿದ್ದೇ ಪ್ರಶಾಂತವನ. ಬ್ಲಾಗೆಂದು ಶುರುಮಾಡಬೇಕೆಂದಾಗ ಎಲ್ಲಿ ಶುರುಮಾಡೋದು ಎಂಬ ಶಂಕೆ ಕಾಡಿದ್ದು ನಿಜ. ಪದವಿಯ ಮೊದಲ ವರ್ಷದಲ್ಲಿ ಇಂಗ್ಲೀಷಲ್ಲಿ ಒಂದು ಬ್ಲಾಗ್ ಪ್ರಾರಂಭಿಸಬೇಕೆಂಬ ಪ್ರಯತ್ನದಲ್ಲಿ livejournal ಹೊಕ್ಕು ಅಲ್ಲಿನ ಸೌಲಭ್ಯಗಳನ್ನು ನೋಡಿದ್ದೆ. wordpress ಅನ್ನೂ ತಡಕಿದ ನಂತರ ಯಾಕೋ blogspotನಲ್ಲಿನ ವಿನ್ಯಾಸಗಳು ಇಷ್ಟವಾಯ್ತು. ತಗೋ ಇಲ್ಲೇ ಶುರುಮಾಡೋಣ ಅಂದಾಗ ಬಂದಿದ್ದು ಹೆಸರಿನ ಸಮಸ್ಯೆ. ಏನಂತ ಶುರುಮಾಡೋಣ ? ಜನ್ಮವಿತ್ತೋರ ನೆನಪಿಗೆ ಸವಿತಾಪ್ರಭಾಕರತನಯ ಅಂತ ಇಡೋಣವಾ ಅಂತ ಪ್ರಯತ್ನಿಸಿದೆ. ಯಾಕೋ ಸ್ವಲ್ಪ ಉದ್ದವಾಯ್ತು ಅನಿಸಿ ಮನೆಯ ಹೆಸರಾದ ಪ್ರಶಾಂತವನ ಎಂದು ಯೋಚಿಸಿದೆ. ಅದೇ ಇಷ್ಟನಾಮವಾಗೋಯ್ತು ಬ್ಲಾಗಿಗೆ. ಅಂಬೆಗಾಲಿಡುತ್ತಿದ್ದ ಬ್ಲಾಗಿನಲ್ಲಿ ದಿನಗಳೆದಂತೆ ಕತೆಗಳು, ಕವನಗಳು, ಪ್ರವಾಸ ಕಥನಗಳು ತುಂಬುತ್ತಾ ಹೋದವು. ಹಾಗೇ ಬೇರೆಯವರ ಬ್ಲಾಗಿಗೆ ಹೋಗಿ ಓದುವುದು. ಅಲ್ಲಿ ಲಿಂಕು ಸಿಕ್ಕ ಮತ್ತೊಬ್ಬರ ಬ್ಲಾಗಿಗೆ ಹೋಗುವುದು. ಅವರು ನನ್ನಲ್ಲಿಗೆ ಬರುವುದು ಹೀಗೆ ಸುಮಾರಷ್ಟು ಸಮಾನಮನಸ್ಕರ ಪರಿಚಯವಾಗೋಕೆ ಶುರುವಾಯ್ತು.

ಈ ಸಮಯದಲ್ಲೇ ಪರಿಚಯವಾದ ಸತ್ಯಚರಣರು ಪರಿಚಯಿಸಿದ್ದು ನಿಲುಮೆ, ಕೆಂಡಸಂಪಿಗೆ ಮತ್ತು ಸಂಪದ. ಸಂಪದದ ಪಾರ್ಥಸಾರಥಿಯವರು, ಶ್ರೀಧರ ಬಂಡಿಯವರು, ನಿಲುಮೆಯ ಸಾತ್ವಿಕ್ ಅವರು ಬರಹಗಳಿಗೆ ಬೆನ್ನುತಟ್ಟುತ್ತಿದ್ದ ಪರಿ ಇನ್ನೂ ಕಣ್ಣಿಗೆ ಕಟ್ಟುತ್ತದೆ. ಈ ಬರಹಗಳಿಂದಲೇ ನಮ್ಮ ಕಾಲೇಜಿನ ಸುಮಾರಷ್ಟು ಜೂನಿಯರ್ಗಳೂ ಬರೆಯುವ ಬಗೆ ತಿಳಿಯಿತು. ಅದಕ್ಕಾಗಿ ಸ್ವಲ್ಪ ಓಡಾಡಿ, ಸ್ವಲ್ಪ ವರ್ಷದಿಂದ ನಿಂತೇ ಹೋಗಿದ್ದ ಬ್ರಾಂಚ್ ಮ್ಯಾಗಜೀನನ್ನ "ಕೌಶಲ್ಯದೀಪ"ವೆಂಬ ಹೆಸರಲ್ಲಿ ಮರುಸ್ಥಾಪಿಸಿದ್ದೂ ಆಯ್ತು. ಆದರೆ ಇಷ್ಟೆಲ್ಲಾ ಆಗುವಷ್ಟರ ಹೊತ್ತಿಗೆ ಕೊನೆಯ ವರ್ಷದ ಎಕ್ಸಾಂಗಳು ಸಮೀಪಿಸಿತು.
ಎಕ್ಸಾಮೆಂದರೆ ಗೊತ್ತಲ್ಲ. ಬರಹವಿಲ್ಲ. ಬ್ಲಾಗಿಲ್ಲ. ಕಾಲೇಜೇ ಎಲ್ಲಾ ಆದ ಮೌನ.

ಕೊನೆಗೂ ಪದವಿ ಮುಗಿಯಿತು. ಕೆಲಸಕ್ಕೆ ಸೇರೋ ಮುನ್ನ ಮನೆಯಲ್ಲಿದ್ದ ಸಮಯದಲ್ಲಿ ಮತ್ತದೇ ಓದು-ಬರಹ. ಇದೇ ಕಾರಣಕ್ಕೆ ೨೦೧೧ರ ಬ್ಲಾಗ್ ಪೋಸ್ಟುಗಳ ಸಂಖ್ಯೆ ೧೪೧ ಮುಟ್ಟಿತು ಅಂತೇನು ಹೇಳಬೇಕಾಗಿಲ್ಲ. ಈ ಬರಹಗಳ , ಬ್ಲಾಗುಗಳ ಮೂಲಕ ಪರಿಚಯವಾದವರು ಒಬ್ಬಿಬ್ಬರಲ್ಲ. ಈಶ್ವರ ಕಿರಣರು, ಬದ್ರಿ ಭಾಯ್, ಮಂಜು ಭಾಯ್, ಪಂಜು ನಸೀಮ, ಶ್ರೀಕಾಂತಣ್ಣ, ದಿ.ರವಿ ಮೂರ್ನಾಡು, ಸತ್ತಾರ್ ಭಾಯ್, ಹೃದಯ ಶಿವಣ್ಣ, ಪುಷ್ಪಣ್ಣ, ಹೀಗೆ ಅನೇಕ ಹಿರಿಯರು ನಮ್ಮ ಜಮಾನಾದ ಭಾಗ್ಯ, ಪದ್ಮಾ, ಚಿನ್ಮಯ್, ಸತೀಶ್, ವೆಂಕಟೇಶ್, ಸುಷ್ಮಾ, ಶ್ರೀವತ್ಸ, ಪ್ರಸಾದ್, ಪಮ್ಮಿ.. ಹೀಗೆ ಹತ್ತಾರು ಸ್ನೇಹಿತರ ಮುಖ ನೋಡೋ ಮೊದಲೇ ಬ್ಲಾಗುಗಳ ಮೂಲಕ ಆತ್ಮೀಯರೆನಿಸಿಬಿಟ್ಟಿದ್ದರು, ನಮ್ಮ ಕಾಲೇಜಿನವರು ಕಾಲೇಜು ಬಿಟ್ಟ ನಂತರವೂ ಮತ್ತೆ ಆತ್ಮೀಯರೆನಿಸಿದ್ದು ಈ ಬರಹಗಳಿಂದಲೇ.. ಎಲ್ಲರ ಬಗ್ಗೆಯೂ ಬರೆಯಹೋದರೆ ಅದೇ ಒಂದು ಕತೆಯಾಗಬಹುದು. ಸಖಿಯಲ್ಲಿ, ವಿ.ನೆಕ್ಟಿನಲ್ಲಿ ಬರೆಯೋ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಅದಕ್ಕೆ ಮುಖ್ಯ ಕಾರಣ ನನ್ನ ಬರಹವನ್ನು ಎಲ್ಲೋ ಓದಿದ, ಮೆಚ್ಚಿದ ಪುಣ್ಯಾತ್ಮರೆನಿಸುತ್ತೆ. ಆದರೂ ಸಿಕ್ಕಾಪಟ್ಟೆ ಬೇಸರವಾದಾಗ , ಖುಷಿಯಾದಾಗ ಗೀಚಿದ ಗೀಚುಗಳನ್ನ ಬ್ಲಾಗಲ್ಲಿ ದಾಖಲಿಸೋಕೆ, ಹಿಂದೆಂದೋ ಬರೆದದ್ದನ್ನ ಓದೋಕೆ, ಹೀಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಹೀಗೆ ಬರೆಯಬಾರದಿತ್ತೇನೋ ಎಂದುಕೊಳ್ಳೋಕೆ ಸಖತ್ ಖುಷಿಯಾಗುತ್ತೆ. ಬರಹವನ್ನು ಓದಿ ಎಂದು ತೆಗೆದುಕೊಂಡು ಹೋಗಿ ಎರಡು ಮೂರು ಸಲ ಹೋದ ಗುರುಗಳು ನೀನು ಇಲ್ಲಿಯವರೆಗೆ ಬರೆದದ್ದೆಲ್ಲಾ ವ್ಯರ್ಥ ಎಂದಾಗ ಬೇಜಾರಾಗಿ ಬರಹವನ್ನೇ ನಿಲ್ಲಿಸಿಬಿಟ್ಟಾಗಲೂ ಮತ್ತೆ ಬರೆಯಲು ಪ್ರೋತ್ಸಾಹಿಸಿದ್ದು ಸಮಾನ ಮನಸ್ಕ ಬ್ಲಾಗಿಗರು. ಯಾವುದೋ ಸರಣಿಯನ್ನು ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸಿದಾಗಲೋ, ಸಮಯಕ್ಕೆ ಸರಿಯಾಗಿ ಬರೆಯದಾಗಲೋ ಪ್ರೀತಿಯಿಂದ ಗದರಿದವರು, ಚೆನ್ನಾಗಿ ಬರೆಯದಿದ್ದಾಗ ಪ್ರತ್ಯಕ್ಷ/ಪರೋಕ್ಷವಾಗಿ ಬೈದ ಬಂಧುಗಳೂ ಇವರೇ. ಫೇಸ್ಬುಕ್ಕಲ್ಲಿ ಹಾಕಿದ್ದಾನಲ್ಲಾ, ಬೇಜಾರಾಗುತ್ತೆ ಅನ್ನೋ ಸಂಕಟಕ್ಕಾದರೂ ಒಂದಿಷ್ಟು ಜನ ಓದದೆಯೂ ಲೈಕಿಸಬಹುದು. ದಾಕ್ಷಿಣ್ಯಕ್ಕೆ ಕಮೆಂಟಿಸಬಹುದು. ಆದ್ರೆ ಬ್ಲಾಗುಗಳಲ್ಲಿ ಹಾಗಲ್ಲ. ಬ್ಲಾಗಿಗರಲ್ಲೇ ಒಂದಿಷ್ಟು ಪಂಗಡಗಳಿವೆ. ಅವರು ಬೇರೆಯವರ ಬ್ಲಾಗಿಗೆ ಜಪ್ಪಯ್ಯ ಅಂದ್ರೂ ಬರೋಲ್ಲ ಅನ್ನೋ ಬೇಸರಗಳು ಮೊದಲಿಗೆ ಇದ್ದರೂ ಎಷ್ಟೋ ಕಾಲದ ನಂತರ ನಮ್ಮ ಬ್ಲಾಗಿಗೆ ಬಂದು, ಕಾಮೆಂಟುಗಳಿಲ್ಲದ ಪೋಸ್ಟುಗಳನ್ನು ಓದುವುದಕ್ಕೂ ಖುಷಿಯಾಗುತ್ತದೆ.

ಅಷ್ಟಕ್ಕೂ ಬರೆಯುವುದು ನಮ್ಮ ಖುಷಿಗೆಂದ ಮೇಲೆ ಲೈಕು , ಕಾಮೆಂಟುಗಳ ಚಿಂತೆಯೇಕೆ ? ಬ್ಲಾಗಲ್ಲಿ ನನ್ನ ಪಾಡಿಗೆ ಗೀಚುತ್ತಿದ್ದ  ಸಮಯದಲ್ಲಿ ಅಂಕಣಕಾರನಾಗಿ  ಅವಕಾಶ ಕಲ್ಪಿಸಿದ್ದು ಪಂಜು. ಸಾಹಿತ್ಯ ಗ್ರೂಪೊಂದರ ನಿರ್ವಾಹಕನಾಗೆಂದಾಗ ಕೆಲಸದ ಒತ್ತಡದಲ್ಲಿ ಆಗೋಲ್ಲವೆಂದು ನಿರಾಕರಿಸಿದ್ದ ನಾನು ಈ ಪ್ರತೀ ವಾರ ಬರೆಯೋ ಕೆಲಸಕ್ಕೆ ಒಪ್ಪಿದ್ದು ಒಂತರಾ ಆಕಸ್ಮಿಕವೇ. ಕೆಲಸದ ನಡುವೆ ಕಳೆದುಹೋಗಿ ಬ್ಲಾಗಲ್ಲಿ ತಿಂಗಳಿಗೊಂದು ಬರಹವನ್ನೂ ಹಾಕಲಾಗದ ದುಸ್ಥಿತಿಗೆ ತಲುಪಿದ್ದ ನನ್ನಲ್ಲಿ ಪ್ರತೀವಾರವೂ ಏನಾದ್ರೂ ಬರೆಯೂ ಅನಿವಾರ್ಯತೆಯನ್ನ, ಉತ್ಸಾಹವನ್ನ ಹುಟ್ಟುಹಾಕಿದ ಪಂಜುವಿಗೆ ನಾನೆಷ್ಟು ಕೃತಜ್ನನಾದ್ರೂ ಕಮ್ಮಿಯೇ ಅನಿಸುತ್ತೆ. ಇದು ಬರೀ ನನ್ನ ಆತ್ಮಕಥನವೆಂದಲ್ಲ. ಪಂಜುವಿಗಾಗಿ ಬರೆದ ಇನ್ನೂರೈವತ್ತಕ್ಕಿಂತಲೂ ಹೆಚ್ಚಿನ ಸಾಹಿತಿಗಳನ್ನು ಕೇಳಿದರೆ ಕನಿಷ್ಟವೆಂದರೂ ಇನ್ನೂರು ಬ್ಲಾಗುಗಳು ಸಿಕ್ಕೀತು ! ಪಂಜುವಿನಂತಹ ಸಾವಿರಾರು ಓದುಗರು ಓದುವ ಮುಖ್ಯವಾಹಿನಿಗೆ ಬರುವುದು ವಾರಕ್ಕೋ, ತಿಂಗಳಿಗೋ ಆದರೂ ಅವರ ಸಾಹಿತ್ಯ ಕೃಷಿಯ ದಾಖಲಾತಿ ಬ್ಲಾಗುಗಳಲ್ಲಿ ನಿರಂತರವಾಗಿ ಸಾಗೇ ಇದೆ. ಮುಂದೊಮ್ಮೆ ಬ್ಲಾಗುಗಳಲ್ಲಿನ ಸಾಹಿತ್ಯವೂ ಪುಸ್ತಕವಾಗಿ ಅಥವಾ ಪುಸ್ತಕಗಳಷ್ಟೇ ಮನ್ನಣೆ ಪಡೆಯುವಂತೆ ಸಾಹಿತ್ಯದ ಮುಖ್ಯವಾಹಿನಿಗೆ ಬಂದೀತೆ ? ಸದ್ಯಕ್ಕೆ ಕೆಲ ಬ್ಲಾಗ್ ಸಾಹಿತ್ಯವನ್ನೇ ಪುಸ್ತಕವಾಗಿಸುವ ಕೆಲಸ ಕೆಲವೆಡೆ ನಡೆಯುತ್ತಿದೆ. ಲಘುವಾಗಿದ್ದನ್ನು ಮಾತ್ರ ಬ್ಲಾಗಲ್ಲಿ ಬರೆ, ಸೀರಿಯಸ್ಸಾಗಿದ್ದನ್ನು ಪುಸ್ತಕವಾಗಿಸೆಂಬ ಮಾತಿದ್ದರೂ ಪುಸ್ತಕವನ್ನಾಗಿಸಲು ಪ್ರಕಾಶಕರು ಸಿಗದವರು, ತಮ್ಮ ಸಾಹಿತ್ಯ ಕೃಷಿಗಿನ್ನೂ ಪುಸ್ತಕವಾಗಿಸುವಷ್ಟು ಪ್ರೌಢಿಮೆ ಬಂದಿಲ್ಲವೆನ್ನೂ ಅಭಿಪ್ರಾಯದ ಗೆಳೆಯರು.. ಹೀಗೆ ಹಲತರದ ಮನೋಭಾವದವರು ತಮ್ಮ ಸಾಹಿತ್ಯ ಕೃಷಿಯನ್ನು ಸಾಯಗೊಡದೇ ಬ್ಲಾಗುಗಳ ಮೂಲಕ ಜೀವಂತವಾಗಿಟ್ಟಿದ್ದಾರೆ. ಆಗೊಮ್ಮೆ , ಈಗೊಮ್ಮೆ ಸಣ್ಣ ಪುಟ್ಟ ವೇದಿಕೆಗಳಲ್ಲಿ ಮಿನುಗುತ್ತಿದ್ದಾರೆ.ತುಂಬಾ ದಿನಗಳಿಂದ ಸೆಂಟಿಮೀಟರುಗಳಲ್ಲಿದ್ದ ಮಾತುಗಳನ್ನು ಇಂದು ಇಂಚಿಂಚಾಗಿ ಹೊರಹರಿಸಲು ಸಹಾಯ ಮಾಡಿದ್ದು ಮತ್ತದೇ ಭಾವ ಪ್ರವಾಹ, ಮತ್ತದೇ ಬ್ಲಾಗು ಪ್ರಭಾವ.

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ