Buddi Deepa |
ಕರಗಿ ಹೋಯಿತೆ ನಮ್ಮ ಕನಸ ರೂಪ ?
ತಲುಪದಿದ್ದರೂ ಇಲ್ಲಿ ಸೂರ್ಯ ಚಂದ್ರನ ಬೆಳಕು
ದೊರಕೀತೆ ಮಬ್ಬೆಳಕ ಬುಡ್ಡಿ ದೀಪ ?
ಸೋಲ ಧೂಳಿನ ಪರದೆ ಹೊದ್ದು ಮಲಗಿದ ದೀಪ
ಎಣ್ಣೆ ಕಂಡೆಷ್ಟಾಯ್ತೊ ತಿಂಗಳಿಲ್ಲಿ?
ನಿರ್ಲಕ್ಷ್ಯದಾ ಒದೆತ ನಗ್ಗಿಸಿದ ಅಂಗಗಳು
ಅಡಗಿಹವು ಜೇಡನಾ ಬಲೆಗಳಲ್ಲಿ
ಎದ್ದೇಳೊ ದೀಪವೇ , ಬೇಸರವು ಕತ್ತಲೆಯು
ಜಾಢ್ಯ ಹೊದ್ದಿದೆ ಜಗವು ನೀನಿಲ್ಲದೆ
ಬೆಳಕಿಲ್ಲದಾ ಬಾಳು ನೂರು ಗೋಳಿನ ಹೋಳು
ಮೌಢ್ಯ ತೊರೆ,ಬೆಳಕ ತೆರೆ ಬಾ ಜ್ಯೋತಿಯೇ
ಸೋಲ ತಿಮಿರವ ತೊಡೆಯೆ ಛಲದ ಜ್ವಾಲೆಯು ಬರಲಿ
ಶ್ರಮದಿ ತನ್ನನೆ ಸುಡುವ ಎಣ್ಣೆಯೊಡನೆ
ಬದುಕ ಬಿಸಿ ಲೆಕ್ಕಿಸದೆ ಬೆಳಕ ಗುರಿ ಸಾಧಿಸುವ
ದೀಪಲೋಹದ ಪರಿಯ ಧೃಢತೆಯೊಡನೆ
ಎದರಾಗೋ ಅಪಜಯದಿ ಧೈರ್ಯವಡಗುವ ನೋಟ
ಜೀವ ತೆಗೆಯದೆ ಇರಲಿ ಗೋರಿಯಾಗಿ
ಸೋಲ ಧೂಳೆಮ್ಮನ್ನು ಕಾಡೋ ಸ್ಥಿತಿಯಾ ಪಾಟ
ಕಾಪಿಡಲಿ ನಾಳೆಗಳ ದಾರಿಯಾಗಿ
ಮನೋ ಧೈರ್ಯವನು ಕೊಡುವ ಉತ್ತಮ ಕವನ.
ReplyDeleteಎಣ್ಣೆ ಕಂಡೆಷ್ಟಾಯ್ತೊ ತಿಂಗಳಿಲ್ಲಿ? ಎಂದರೂ, ಮೌಢ್ಯ ತೊರೆ,ಬೆಳಕ ತೆರೆ ಬಾ ಜ್ಯೋತಿಯೇ ಎನ್ನುವ ಕರೆ ನೆಚ್ಚಿಗೆಯಾಯಿತು.
ಬದುಕ ಬಿಸಿ ಲೆಕ್ಕಿಸದೆ ಬೆಳಕ ಗುರಿ ಸಾಧಿಸುವ ಛಲವನ್ನೂ ಪ್ರೇರೇಪಿಸುತ್ತಿದೆ.
ತುಂಬಾ ಧನ್ಯವಾದಗಳು ಬದ್ರಿ ಭಾಯ್.. ಈ ವಾರದ ಅತ್ಯುತ್ತಮ ಬ್ಲಾಗ್ ಪೋಸ್ಟ್ ಅಂತ ತಾವು 3k ಯಲ್ಲಿ ಗೌರವಿಸಿದ್ದನ್ನು ಕಂಡು ಸಖತ್ ಖುಷಿಯಾಯಿತು ಮತ್ತು ಆ ಗೌರವಕ್ಕೆ ಈ ಪೋಸ್ಟ್ ಅರ್ಹವಾ ಎಂಬ ಸಂದೇಹವೂ ಕಾಡಿತು. ಬರೆಯುವುದು, ಕಲಿಯುವುದು ಬೇಕಷ್ಟಿದೆ. ಸದಾ ಬೆನ್ನು ತಟ್ಟುತ್ತಿರುವ ನಿಮಗೆ ವಂದನೆಗಳು.
Deletehttps://www.facebook.com/groups/3KKannada/1563336117259204/?notif_t=group_comment_follow
ತುಂಬ ಚೆನ್ನಾಗಿ ಬರೆದಿದ್ದೀರಿ
ReplyDeleteಅಭಿನಂದನೆಗಳು
ಧನ್ಯವಾದಗಳು
DeleteGreat posst
ReplyDelete