Haalu mudde ಹಾಲುಮುದ್ದೆ |
ಬೇಕಾದ ಸಾಮಗ್ರಿಗಳು:
ರವೆ-೨ ಕಪ್ಪು
ಸಕ್ಕರೆ/ಬೆಲ್ಲ- ೨ ಕಪ್ಪು
ತುಪ್ಪ-೧ ಕಪ್ಪು
ಹಾಲು- ೪ ಕಪ್ಪು
ಏಲಕ್ಕಿ- ೧
ಲವಂಗ- ೪
ದ್ರಾಕ್ಷಿ- ಸ್ವಲ್ಪ
ಮಾಡೋ ವಿಧಾನ:
ರವೆಯನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಹುರಿದುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿಕೊಂಡು ಅದಕ್ಕೆ ಹುರಿದ ರವೆಯನ್ನು ಹಾಕಿ. ರವೆಯನ್ನು ಹಾಕಿದ ತಕ್ಷಣ ನಿಧಾನವಾಗಿ ತೊಳೆಸುತ್ತಾ ಸಕ್ಕರೆ/ಬೆಲ್ಲ, ಸ್ವಲ್ಪ ತುಪ್ಪ ಮತ್ತು ಪುಡಿ ಮಾಡಿದ ಏಲಕ್ಕಿ, ಲವಂಗಗಳನ್ನು ಹಾಕಬೇಕು. ಗಟ್ಟಿಯಾಗುವ ತನಕ ತಳಹಿಡಿಯದಂತೆ ತೊಳೆಸುತ್ತಾ ಇರಬೇಕು. ಸುಮಾರು ಹತ್ತು-ಹದಿನೈದು ನಿಮಿಷಗಳ ನಂತರ ಈ ಮಿಶ್ರಣ ಉಂಡೆ ಕಟ್ಟುವಷ್ಟು ಗಟ್ಟಿಯಾಗುತ್ತೆ. ಆಗ ದ್ರಾಕ್ಷಿ ಹಾಕಿ ಉಂಡೆಕಟ್ಟಿದ್ರೆ ಹಾಲುಮುದ್ದೆ ಸವಿಯಲು ಸಿದ್ದ. ಇದನ್ನು ತುಪ್ಪದೊಂದಿಗೆ ಅಥವಾ ಚಟ್ನಿಪುಡಿಯೊಂದಿಗೆ ತಿನ್ನಬಹುದು.
ರೆಸಿಪಿ ಕ್ರೆಡಿಟ್ಸ್: ಅಕ್ಷತಾನ ಅಜ್ಜಿ
ಮಾಡಿದ್ದು: ನಮ್ಮನೆ ಅಕ್ಷತಾ
ಅಂದ ಹಾಗೆ ಇದನ್ನು ಶ್ರಂಗೇರಿ ಕಡೆ ಜಾಸ್ತಿ ಮಾಡ್ತಾರಂತೆ ಅಂತ ನಮ್ಮನೆಯವ್ರು ಹೇಳ್ತಾ ಇದ್ರು. ಇನ್ನೂ ಹೆಚ್ಚಿನ ಮಾಹಿತಿ ಗೊತ್ತಿರೋರು ಹಂಚ್ಕೊಂಡ್ರೆ ಇನ್ನೊಂದಿಷ್ಟು ತಿಳ್ಕೋಬೋದು