ಇದೇ ಏಪ್ರಿಲ್ ಒಂದರಲ್ಲಿ ೭೩.೫ ಇದ್ದ ಪೆಟ್ರೋಲು ಈಗ ೮೧.೭ ಮುಟ್ಟಿದೆ.ಒಂದೇ ತಿಂಗಳಲ್ಲಿ ಅಂದಾಜು ೭ ರೂ ಹೆಚ್ಚಳ! ಪ್ರತೀ ಬಾರಿ ಹೆಚ್ಚಾದಾಗ್ಲೂ ಕೇಂದ್ರ ಸರ್ಕಾರ ಏನ್ಮಾಡ್ತಾ ಇದೆ? ರಾಜ್ಯ ಸರ್ಕಾರ ಏಕೆ ಸುಮ್ನಿದೆ ಅಂತ ಬೊಬ್ಬೆ ಹಾಕೋದು, ಸೈಕಲ್ ಸವಾರಿ ಮಾಡ್ಬೇಕು ಇನ್ಮುಂದೆ, ನಟರಾಜ ಸರ್ವೀಸು ಮಾಡೋಣ ಅಂತ ಸುಮ್ನೆ ಉಡಾಫೆ ಮಾಡೋದೆ ಆಯ್ತು. ಯಾರೆಷ್ಟೇ ಪ್ರತಿಭಟನೆ ಮಾಡಿದ್ರೂ ಇವ್ರು ಬಗ್ಗೊಲ್ಲ ಅಂತ ಅವ್ರಿಗೆ ಹಿಡಿಶಾಪ ಹಾಕಿದ್ರೆ ಪರಿಸ್ಥಿತಿ ಸರಿ ಆಗತ್ಯೆ? ನಮ್ಮ ಭೂಮಿಯಲ್ಲಿರೋ ನವೀಕರಿಸಲಾಗದ (ಪೆಟ್ರೋಲು, ಡೀಸೆಲು ಮುಂತಾದ)ಇಂಧನ ಮೂಲಗಳನ್ನ ಹೀಗೆ ಉಪಯೋಗಿಸ್ತಾ ಹೋದ್ರೆ ಇನ್ನು ಅಂದಾಜು ಮೂವತ್ತು ವರ್ಷಗಳಲ್ಲಿ ಅವುಗಳೆಲ್ಲಾ ಖಾಲಿ ಆಗುತ್ತೆ ಅಂತ ಹೈಸ್ಕೂಲಿನಲ್ಲೇ ಓದಿದ ನೆನಪು .
ಆದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ ಏಕೆ? ಸುಧಾರಣೆ ಆಗಲಿ, ಆದರೆ ಅದು ನಮ್ಮಿಂದ ಅಲ್ಲ, ಶಂಕರಾಚಾರ್ಯರು ಹುಟ್ಟಲಿ, ಆದರೆ ಪಕ್ಕದ ಮನೆಯಲ್ಲಿ ಎಂಬಂತ ಧೋರಣೆ ಏಕೆ?
ಕೆಲವೇ ವರ್ಷಗಳ ಹಿಂದೆ ಜತ್ರೋಪಾದಂತಹ ಗಿಡಗಳಿಂದ ಜೈವಿಕ ಇಂಧನ ತಯಾರಿಸೋ ಬಗ್ಗೆ ಚರ್ಚೆ ನಡೆದಿತ್ತು. ಅವುಗಳನ್ನು ಮರುಭೂಮಿಯಂತಹ ನೀರಿಲ್ಲದ ಕಡೆಯೂ ಬೆಳೆಸಬಹುದು ಎಂಬ ವದಂತಿಯೂ/ಸುದ್ದಿಯೂ ಹಬ್ಬಿತ್ತು. ನಮ್ಮ ಕಡೆಯೂ ಅದನ್ನ ಬೇಲಿ ಬದಿಯಲ್ಲಿ ಅದನ್ನು ಹಾಕಿದ್ದೆವು. ಆಮೇಲೆ ಅದರ ಬೀಜವನ್ನು ಖರೀದಿಸುವ ಬಗ್ಗೆಯಾಗಲಿ, ಎಣ್ಣೆ ಮಾಡುವ ಸುದ್ದಿಯಾಗಲಿ ಬರಲೇ ಇಲ್ಲ. ಇಂಥಹ ಪ್ರಯತ್ನಗಳೆಲ್ಲಾ ನಿರಂತರವಾಗಿರಬಾರದೇ? ಪೆಟ್ರೋಲ್ ದರ ಜಾಸ್ತಿ ಆದಾಗ ಮಾತ್ರ ಎಲ್ಲಿ ಜತ್ರೋಪಾದವರು ಎಂದು ಗುಟುರು ಹಾಕಬೇಕೇ ?
ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಐಟಿಪಿಲ್ ಕಡೆ ಎಷ್ಟೊಂದು ಬಸ್ಸುಗಳು ಸಂಚರಿಸುತ್ತದೆ, ಅದರಲ್ಲಿ ಎಷ್ಟೊಂದು ಓಲ್ವೋಗಳು ಬೇರೆ. ಆದರೂ ಯಾವುದೇ ಸಿಗ್ನಲ್ಲಲ್ಲಿ ನೋಡಿದರೂ ಸರಾಸರಿ ಒಂದು ಬಸ್ಸಿಗೆ ೧೫-೨೦ ಬೈಕು, ೭-೮ ಕಾರುಗಳು ನಿಂತಿರುತ್ತದೆ. ಅದೂ ಒಂದು ಕಾರಿನಲ್ಲಿ ನಾಲ್ಕು ಜನರು ಬರುವ "ಕಾರ್ ಪೂಲ್" ಪದ್ದತಿಯನ್ನಾದರೂ ಅನುಸರಿಸುತ್ತಿದ್ದೇವಾ ? ಅದೂ ಇಲ್ಲ. ಎಲ್ಲ ಕಾರಿನಲ್ಲೂ ಒಬ್ಬೊಬ್ಬರೇ!! ದಯವಿಟ್ಟು ಅನ್ಯಥಾ ಭಾವಿಸದಿರಿ. ಯಾರನ್ನೂ ದೂಷಿಸುತ್ತಿಲ್ಲ.ಈ ಮಾರ್ಗ ಒಂದೇ ಅಲ್ಲ. ಬಹಳಷ್ಟು ಕಡೆ ಇದೇ ಕಥೆ. ಸರಕಾರವನ್ನು ಅಥವಾ ಇನ್ಯಾರನ್ನೋ ಎಲ್ಲದಕ್ಕೂ ದೂಷಿಸುವ ನಾವು ಇರೋ ಪೆಟ್ರೋಲನ್ನು ಉಳಿಸುವತ್ತ ನಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸಿದ್ದೇವಾ ಎಂದರೆ ಇಂತಹ ನಿರಾಶಾದಾಯಕ ಉತ್ತರಗಳೇ ದುತ್ತೆಂದು ಎದುರಾಗುತ್ತವೆ. ಸೌರಶಕ್ತಿಯ ಬಳಕೆ ಇರಬಹುದು, ಕಾರ್ಪೂಲಿಂಗ್ ಇರಬಹುದು. ನವೀಕರಿಸಲಾಗದ ಶಕ್ತಿ ಮೂಲಗಳನ್ನು ಉಳಿಸಲು, ಸಮರ್ಪಕವಾಗಿ ಬಳಸಲು ತಂತ್ರಜ್ನಾನಗಳು ನೂರೆಂಟು ಇವೆ. ಅದರಲ್ಲಿ ನ್ಯೂನತೆಗಳೂ ಇರಬಹುದು. ಆದರೆ ಮನಸ್ಸಿದ್ದಲ್ಲಿ ಮಾರ್ಗ.ಅದನ್ನು ಬಿಟ್ಟು ಇನ್ಯಾರನ್ನೋ ಗೂಬೆ ಕೂರಿಸುತ್ತಾ ಕೂತರೆ ಪೆಟ್ರೋಲ್ ರೇಟು ತೊಂಬತ್ತಲ್ಲ , ಸದ್ಯದಲ್ಲೇ ನೂರೂ ದಾಟಬಹುದು. ಇನ್ನೂರೂ ದಾಟಬಹುದು
Image Source: allaboutindia.org
ಪ್ರಶ್... ಒಂದು ಬೆರಳನ್ನು ತೋರುವ ಮೊದಲು ನಾಲ್ಕು ಬೆರಳು ನಮ್ಮತ್ತ ಇವೆಯಲ್ಲಾ...ಇದಕ್ಕೆ ಏನೆನ್ನ್ನುತ್ತೀರೀ ಎನ್ನುವ ಅರ್ಥದ ಕಾಳಜಿಭರಿತ ತರ್ಕ ಬಹಳ ಚನ್ನಾಗಿದೆ.. ನಿಜ ಸರ್ಕಾರದ ಖರ್ಚುಗಳು ಎಲ್ಲಿ ಹೆಚ್ಚು, ಯಾರು ಹೀಗೆ ಆಗಲು ಕಾರಣಕರ್ತರು, ?? ವಿಚಾರಾಧಿನಮಾಡಲು ವಿವಶರನಾಗಿಸುವ ಲೇಖನ ಚನ್ನಾಗಿದೆ,.
ReplyDeleteಧನ್ಯವಾದಗಳು ಆಜಾದಣ್ಣ :-) ಪ್ರಶಾಂತವನಕ್ಕೆ ಸುಸ್ವಾಗತ :-) ನಿಮ್ಮ ಭೇಟಿಯಿಂದ ಸಂತೋಷವಾಯಿತು :-)
ReplyDeleteಧನ್ಯವಾದಗಳು ಆಜಾದಣ್ಣ :-) ಪ್ರಶಾಂತವನಕ್ಕೆ ಸುಸ್ವಾಗತ :-) ನಿಮ್ಮ ಭೇಟಿಯಿಂದ ಸಂತೋಷವಾಯಿತು :-)
ReplyDeleteಕಾಳಜಿಯುಕ್ತ ಲೇಖನ ಪ್ರಶಸ್ತಿ. ತಟ್ಟನೆ ವಸ್ತು ವಿಷಯಗಳನ್ನು ಆರಿಸಿಕೊಳ್ಳುವಲ್ಲಿ ಚತುರ ನೀವು. ಪ್ರಸ್ತುತಿ ಚೆನ್ನಾಗಿದೆ.
ReplyDeleteಧನ್ಯವಾದಗಳು ಚೌಟರೇ :-)
Deleteಎಂತೆಂತಹ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ವಿಜ್ಞಾನಿಗಳು ಜಗತ್ತಿನಲ್ಲಿದ್ದಾರೆ. ಈ ಇಂಧನ ವಿಚಾರವನ್ನು ಯಾಕೆ ಗಂಭೀರವಾಗಿ ಪರಿಗಣಿಸಿಲ್ಲವೋ. ಎಲ್ಲೋ ಅಲ್ಲಿ ಇಲ್ಲಿ ಸೌರ, ಪವನ ಮೂಲದಂದ ಓಡುವ ಕಾರು, ವಿಮಾನ ಎಂದು ಸುದ್ದಿಯಾಗುತ್ತದೆಯೋ, ಅದು ಒಂದು ದಿನದ ಸುದ್ದಿ, ಆಮೇಲೆ ಅದಕ್ಕೆ ಏನಾಯಿತೆಂದು ಹೇಳುವವರು ಯಾರೂ ಇಲ್ಲ. ಸೌರ ವಿಮಾನ ಬೇಡ, ಸಾಮಾನ್ಯರಿಗೆ ಸೌರ, ಇಲ್ಲ ವಿದ್ಯುತ್ ದ್ವಿಚಕ್ರವಾಹನ ಅಭಿವೃದ್ಧಿ ಪಡಿಸಿದರೆ ಸಾಕು, ಎಷ್ಟೋ ಜನರ ಆರ್ಥಿಕ ಸಮಸ್ಯೆ ಉತ್ತಮವಾಗುತ್ತದೆ
ReplyDeleteಹೌದು ದೀಪಸ್ಮಿತಾ ಅವರೇ.. ಜನಸಾಮಾನ್ಯರಿಗೆ ವಿಜ್ನಾನದ ಪ್ರಯೋಜನ ತಲುಪಿಸುವಂತಹ ಆವಿಷ್ಕಾರಗಳು ಆಗುತ್ತಿಲ್ಲ. ಪ್ರಶಾಂತವನಕ್ಕೆ ಸ್ವಾಗತ.. ಭೇಟಿಗೆ ಧನ್ಯವಾದಗಳು :-)
Deleteಕನ್ನಡಪ್ರಭದ "ಪತ್ರಪ್ರಭ" (ಪುಟ ೬) ರಲ್ಲಿ ಪ್ರಕಟವಾದ ನನ್ನ ಲೇಖನ :-)
ReplyDeletehttp://www.kannadaprabha.com/pdf/epaper.asp?pdfdate=5%2F29%2F2012