Thursday, July 19, 2012

ಒಂಟಿ ಭಾವ

ಒಂಟಿ ಭಾವ ಜೊತೆಯಾಗಿ ಅಂಟಿ
-ಸಲು ಮುರಿದ ಭಾಳ ಬಂಡಿ
ನಂಬಿದಾ ಮೋಡ ಒಲವ ಬದಲಿತ್ತ
ದ್ರೋಹ ಸಿಡಿಲ ನುಂಗಿ |೧

ಹೃದಯ ಹಿಂಡಿರಲು ಕಾಲ ಗಾಣ
ನಂಬಿಕೆಯು ಕರಗಿ ಎಣ್ಣೆ
ಒಂಟಿ ಭಾವ ಅದ ಹೀರೋ ಬತ್ತಿ
ಬೆಳಕಾಯ್ತು ಸುಟ್ಟು ತನ್ನೆ |೨

ಬೇರಾದ ಜೀವಗಳು ಮರೆಸಿ ಮಾತು
ನರಳುತಿದೆ ಜೀವ ಕಾಂಡ
ಎಲೆಯಾಗಿ ನಿಂತು ಹಲ ಜೀವ ತಂತು

ನೆಲೆಯಾಯ್ತು ಸ್ವರ್ಣ ಭಾವ|೩

4 comments:

  1. nimma kavanadalli ontibhaavaneya bhaava thumbaa chennaagi moodibandide.

    ReplyDelete
    Replies
    1. ಮೆಚ್ಛುಗೆಗೆ ಧನ್ಯವಾದಗಳು ಉಷೋದಯ ಅವರೇ :-)

      Delete
  2. ಅಂತಹ ಸ್ವರ್ಣ ಭಾವವೇ ಬದುಅನ್ನು ಮುನ್ನಡೆಸುವ ದೀಪ.

    ಇಲ್ಲಿ ಬಂದು ಹೋಗುವ ಚಿತ್ರಗಳು ಹಲವು ಆಯಾಮಗಳನ್ನು ತೆರೆದಿಡುತ್ತವೆ.

    ReplyDelete
    Replies
    1. ಧನ್ಯವಾದಗಳು ಬದರಿ ಸರ್.. ನಿಮ್ಮಗಳ ಮೆಚ್ಚುಗೆಯ ಮಾತುಗಳೇ ಮತ್ತೆ ಬರೆಯಲು ಸ್ಪೂರ್ತಿ :-)

      Delete