ಮರೆತಿಹ ನಿನ್ನೆಯ ಮರೆಯದ ಕನಸು
ಚುಚ್ಚಿ ಕೊಲ್ಲುವುದು ಅನವರತ
ಕಾದಿಹೆ ನೀನು ಕಷ್ಟದ ವರ್ಷವ
ತಾಳ್ಮೆಯ ಶರಧಿಯ ಬತ್ತಿಸುತ |೩
ಕಾಲದ ಬಿಸಿಲಿಗೆ ಸುಟ್ಟಿಹ ಗಾಯ
ನಿನ್ನ ಅಗಲುವಿಕೆ ಮರೆಯುವುದೆ ?
ಮಾತ ಹಿಂದಿನ ಅವಿತಿಹ ಚಾಟಿ
ಏಟ ಕಾರಣವ ಅರಿತಿರದೆ
ಮರಳೋ ನೆನಪಲೇ, ಅದು ಯಾಕೋ ಯಾತನೆ
ವೇದನೆಯಲ್ಲದ ಭಾವನೆಯು
ಇದು ಮಾಮರ ಮರೆಯದ ಮಾಮಿಡಿಯು
ಮರೆಯಲಾರದಿದ ಮರೆಸುವ ಮುನ್ನ
ಮೆರೆಯೋ ಸಾಧನೆ ಯಾಚನೆಯು
ಯಾತನೆಗಳೇ ಹಾಗೆ ಅವು ನಿರಂತರ ಕಾಡುವುಅ ಹುಣ್ಣುಗಳು. ಪಟುತ್ವ ಮತ್ತು ಲಯವಿದೆ.
ReplyDeleteಮಾಮಿಡಿ ಪದ ಪ್ರಯೋಗ ನನಗೆ ಮೆಚ್ಚಿಗೆಯಾಯಿತು.
ನನ್ನ ಬ್ಲಾಗಿಗೂ ಸ್ವಾಗತ.
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು ಬದ್ರಿ ಸರ್.. ನಿಮ್ಮ ಬ್ಲಾಗಿಗೆ ನನ್ನ ಭೇಟಿ ಇದ್ದೇ ಇದೆಯಲ್ಲ :-)
Deleteಕಾಲದ ಬಿಸಿಲಿಗೆ ಸುಟ್ಟಿಹ ಗಾಯ
ReplyDeleteನಿನ್ನ ಅಗಲುವಿಕೆ ಮರೆಯುವುದೆ....
channagide
ಧನ್ಯವಾದಗಳು ದಯಾನಂದರೇ :-)
Deleteಅಕ್ಷರವಾಗಿಹ ಭಾವಗಳಲ್ಲಿ
ReplyDeleteನೋವುಗಳೆಲ್ಲಾ ನಕ್ಕಿಹುದು
ಮರೆಯಲಾರದಿದ ಮರೆಸುವ ಮುನ್ನ
ಮೆರೆಯೋ ಸಾಧನೆ ಯಾಚನೆಯು
ವೇರ್ ವಾ!! ಕವನ ತುಂಬಾ ಚೆನ್ನಾಗಿದೆ,
ಮೇಲಿನ ಸಾಲುಗಳು ಬಹಳ ಹಿಡಿಸಿತು.
ತುಂಬಾ ಧನ್ಯವಾದಗಳು ವೀರಭದ್ರರೇ :-)
Deletemanamidiyuva kavana.heege moodi barthaa irali.
ReplyDeleteತುಂಬಾ ಧನ್ಯವಾದಗಳು ಉಷೋದಯ ಅವರೇ.. ಪ್ರಯತ್ನಿಸುತ್ತೇನೆ :-)
Deleteನಿಮ್ಮ ಮನಸಿನಲ್ಲಿ ಸಂಜೆಯೇ, ನಿಲ್ಲು ಒಂದು ಕ್ಷಣ.... ಎಂಬ ಮುಗ್ಧತೆ ಇದ್ದ ಹಾಗಿದೆ...
ReplyDeleteಓದುವಾಗ ನಡುನಡುವೆ ಯಾಕೋ ಒಂದೊಂದು ಅಕ್ಷರ ತಡವರಿಸಿದಂತಾಯ್ತು....
ನನ್ನ ತಪ್ಪೂ ಇರಬಹುದು!!
ಧನ್ಯವಾದಗಳು ವಿನಾಯಕ ಭಟ್ರೆ :-)
Deleteಮುಂದಿನ್ ಬಾರಿ ಬರೆಯುವಾಗ ನೀವು ಹೇಳಿದ ಮಾತುಗಳನ್ನು ಗಮನದಲ್ಲಿಟ್ಟುಕಂಡು ಬರೆಯಲು ಪ್ರಯತ್ನಿಸುತ್ತೇನೆ.
ಬ್ಲಾಗ್ ಭೇಟಿಗಾಗಿ ವಂದನೆಗಳು :-)