ತಂಪ ಮಳೆಯೀವ ಭಾವ ಮೋಡ
ಮರೆಯಾಗೋ ಓಟ ಹೂಡಿ
ಮುನಿಸು ದಹಿಸಿದ ಮೂಕ ಮನಸು
ಒಣ ಕಾಲ ಮುಗಿಲ ನೋಡಿ
ಕಾಲದಂತೆಯೇ ಎಲ್ಲ ಹಸಿವು
ಮರೆಸೋ ಹಸಿವು ಕವಿತೆ
ಜಾರೋ ಭಾವ ಮೋಡಿ ಮಾಡಿ
ಕರೆತಾರೋ ಗಾಡಿ ಕವಿತೆ
ನೋವ ತಮದಿ ಮನವೆಲ್ಲೊ ಕಳೆದಿರೆ
ನಲಿವ ಬೆಳಕ ಹಣತೆ
ಬಾಳ ನೋವಿಗೆ ಬಿರಿಯೂ ತನುವಿಗೆ
ತಂಪ ನೀರು ಕವಿತೆ
ಮನ ತಣಿವ ಚೆಲುವೆ ಕವಿತೆ
ಮರೆಯಾಗೋ ಓಟ ಹೂಡಿ
ಮುನಿಸು ದಹಿಸಿದ ಮೂಕ ಮನಸು
ಒಣ ಕಾಲ ಮುಗಿಲ ನೋಡಿ
ಕಾಲದಂತೆಯೇ ಎಲ್ಲ ಹಸಿವು
ಮರೆಸೋ ಹಸಿವು ಕವಿತೆ
ಜಾರೋ ಭಾವ ಮೋಡಿ ಮಾಡಿ
ಕರೆತಾರೋ ಗಾಡಿ ಕವಿತೆ
ನೋವ ತಮದಿ ಮನವೆಲ್ಲೊ ಕಳೆದಿರೆ
ನಲಿವ ಬೆಳಕ ಹಣತೆ
ಬಾಳ ನೋವಿಗೆ ಬಿರಿಯೂ ತನುವಿಗೆ
ತಂಪ ನೀರು ಕವಿತೆ
ಮನ ತಣಿವ ಚೆಲುವೆ ಕವಿತೆ
ಒಂದು ಒಳ್ಳೆಯ ಕವಿಯೆ ಕವಿಯಲ್ಲೂ ಮತ್ತು ಓದುಗನಲ್ಲೂ ಉಂಟು ಮಾಡಬಲ್ಲ ಎಲ್ಲ ಭಾವಗಳ ಸಮಿಶ್ರಣ ಈ ಕವನ.
ReplyDeleteಪದ ಲಾಲಿತ್ಯದಿಂದ ಇದು ಅನನ್ಯವಾಗಿ ನಿಲ್ಲುತ್ತದೆ.
ಮೆಚ್ಚುಗೆಗೆ ಮತ್ತು ಬ್ಲಾಗ್ ಭೇಟಿಗೆ ಧನ್ಯವಾದಗಳು ಬದ್ರಿ ಸರ್ :-)
Deleteಒಳಗಿಂದ ಭಾವ ಸ್ಪುರಿಸಿದಾಗ ಮಾತ್ರ ಹುಟ್ಟುವುದು ಕವಿತೆ.....
ReplyDeleteಚಂದದ ಕವಿತೆ...
ಧನ್ಯವಾದಗಳು ಸುಷ್ಮಾ ಅವರೆ :-)
Deletechandada kavite oduva bhaagya karunisiddakke prashastiyavare thamage dhanyavaadagalu...
ReplyDeleteನಿಮ್ಮ ಚೆಂದದ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ ವಂದನೆಗಳು ಉಷೋದಯ ಅವರೇ :-)
Delete