Tuesday, September 11, 2012

ಯಾವ ನೋವ ಹಿಂದೆ

ಯಾವ ನೋವ ಹಿಂದ್ಯಾವ ಗಾಯವೋ
ತೆರೆಯ ಹಿಂದೆ ಚಿಂತೆ
ಬೆಸೆದ ನಂಟುಗಳ ಬಿರುಕಿನಂಟನು
ಮರೆತ ನೆನಪ ಸಂತೆ |೧|

ದೂರ, ದೂರ ಹಾರೋ ಹಕ್ಕಿ ನಾ
ಹಿಂದೆ ನಿನ್ನೆ ಸೋಲು
ಬಾರಿ, ಬಾರಿ ಕೈಸೋತು ಕುಸಿಯಲು
ಕಾಲ ಗಾಳಿ ಪಾಲು |೨|


ಬರ ಕಂಡಿದೆ ನಗುವಿಂದಿಗೆ
ಬರಿದು ಸ್ಪೂರ್ತಿ ಭಾವವು
ನೀನಿಲ್ಲದೆ ಒಣಗಿ ದೇಹ
ನೀರಿಲ್ಲದ ಬಾವಿಯು|೩|

ರೆಕ್ಕೆ ಹರಿದರೂ, ಪಕ್ಕೆ ಮುರಿದರೂ
ನಿಲ್ಲದಿಂದು ಪಯಣ
ನೆನಪ ಬಿಸಿಗೆ ಮನ ಮೇಣ ಕರಗಿ
ನವ ರೂಪ ತಂತು ಕಾಣ.
ದೂರ ದೂರ ಸಾಗೋ ಹಕ್ಕಿ ನಾ
ಮರೆತು ಹಳೆಯ ನೆನಪು
ಬಾನಿನಲ್ಲಿ ಮೈ ಮರೆತು ನಲಿವೆ ನಾ
ಜೀವ ಸಾಥಿ ದೊರೆತು|೪|

4 comments:

  1. ಹಳೆಯ ನೆನಪುಗಳೇ ಹಾಗೆ .

    ಯಾವ ನೋವಿನ ಹಿಂದೆ ಯಾರ ವ್ಯಥೆಯ ಗಾಯವೋ ತಿಳಿಯುತ್ತಿಲ್ಲ .

    ಭಾವನೆಗಳು ಇಷ್ಟವಾದವು ,ಮುಂದುವರೆಸಿ .

    ReplyDelete
    Replies
    1. ಧನ್ಯವಾದಗಳು ಭಾಗ್ಯ :-)

      ಬ್ಲಾಗಿಗೆ ಸ್ವಾಗತ :-)

      Delete
  2. ನೋವುಗಳಿಗೆಲ್ಲ ಕನಸ್ಸುಗಳೇ ಮುಲಾಮು ಗೆಳೆಯ. ಒಳ್ಳೆಯ ಭಾವ ತೀವ್ರ ಕವನ.

    ReplyDelete
    Replies
    1. ಹೌದಲ್ವಾ ಬದ್ರಿ ಸರ್. .
      ನಿಮ್ಮ ಪ್ರತಿಕ್ರಿಯೆಗೆ, ಮೆಚ್ಚುಗೆಗೆ ಧನ್ಯವಾದಗಳು :-)

      Delete