Welcome to Prashantavanam
Saturday, September 15, 2012
Engineer's Day ಸ್ಪೆಷಲ್
ಬೆಳಿಗ್ಗೆ ಎದ್ದಾಗ ಗೆಳೆಯ ಗೌತಮನ ಮೆಸೇಜು ನೋಡಿದಾಗಲೇ ನೆನ್ಪಾಗಿದ್ದು ಇವತ್ತು ಇಂಜಿನಿಯರರ ದಿನ ಅಂತ.
ಆಮೇಲೆ ಯಥಾಪ್ರಕಾರ ಫೇಸ್ಬುಕ್ಕಿಗೆ ಬಂದ್ರೆ ಎಲ್ಲಾ ಕಡೆ ವಿಶ್ವೇಶ್ವರಯ್ಯನವರ ಫೋಟೋಗಳೇ ತುಂಬಿದ್ದವು.
Full photos of a great engineer who made all engineers proud and recall colourfull memories on every sept 15.
ಒಂದೂವರೆ ವರ್ಷ.. ಕಾಲೇಜು ಮುಗಿಸಿ.. ಫೈನಲ್ ಸೆಮ್ಮಲ್ಲಿದ್ದಾಗ ಇಂಜಿನಿಯರ್ ದಿನ ಅಂತ ಭಾಗವಹಿಸಿದ ನೆನಪಿಗೆ ಈಗ ೨ ವರ್ಷ. ಹಳೆಯ ನೆನ್ಪುಗಳನ್ನೆಲ್ಲಾ ಮೆಲುಕು ಹಾಕ್ತಾ ಹೋದ್ರೆ ಏನೋ ಒಂಥರಾ ರೋಮಾಂಚನ. ಏನೋ ಕಾಂಪಿಟೇಷನ್ನು ನಡ್ಸಿ, ಭಾಷಣ ಕೇಳಿ ಈ ಸೆಮ್ಮಿಗೆ ಅರ್ಧ ಇಂಜಿನಿಯರ್ ಆದ್ವಿ, ಮುಕ್ಕಾಲು ಆದ್ವಿ. ಆಗೇ ಬಿಟ್ವಿ ಇಂಜಿನಿಯರ್ ಅಂತ ಆಚರಿಸ್ತಾ ಇರೋ ಆ ದಿನಗಳ್ಗೂ ಸ್ವಂತ ಇಂಜಿನಿಯರ್ ಆಗಿ ಕೆಲ್ಸ ಮಾಡ್ತಿರೋ ಈ ದಿನಗಳಿಗೂ ಎಷ್ಟೊಂದು ವ್ಯತ್ಯಾಸ ಅಲ್ವಾ ಅನ್ಸುತ್ತೆ.
ಇದ್ದಾಗ ಅದ್ರ ಬೆಲೆ ಗೊತ್ತಿರಲ್ಲ, ಇಲ್ದಿದ್ದಾಗ್ಲೇ ಅದ್ರ ಬೆಲೆ ಗೊತ್ತಾಗೋದು ಅಂತಾರೆ ಅಲ್ವಾ.. ಆ ಬೆಳ್ಕು ಈ ಟ್ಯೂಬ್ಲೈಟುಗಳಿಗೆ ಹೊಳೆಯೋದು ಹಬ್ಬಗಳಿಗೆ, ಇಂಥಾ ದಿನಗಳಿಗೆ ಶುಭಾಶಯ ಹೇಳಕ್ಕೆ ಅಂತ ಮೆಸೇಜ್ ಮಾಡ್ದಾಗ..
ತಿಂಗಳುಗಟ್ಲೆ ಆಗಿರತ್ತೆ. ನಾವೂ ಮೆಸೇಜು ಹಾಕಿರಲ್ಲ, ಅವ್ನೂ ಹಾಕಿರಲ್ಲ. ತೀರಾ ತುರುಸ್ಕಳಕೂ ಪುರುಸೊತ್ತಿಲ್ಲದಷ್ಟು ಬಿಜಿ ಅಂತೇನೂ ಅಲ್ಲ. ಆದ್ರೂ ತಮ್ಮದೇ ಲೋಕದಲ್ಲಿ ಒಂತರಾ ಬಿಸಿ!!. ಅವ್ನು ಹಾಕ್ಲಿ , ಪ್ರತೀ ಸಲ ನಾನ್ಯಾಕೆ ಹಾಕ್ಬೇಕು ಅಂತ ಇವ್ನು, ನಾನ್ಯಾಕೆ ಹಾಕ್ಲಿ ಇವ್ನು ಹೆಂಗಿದ್ರೂ ಹಾಕ್ತಾನಲ್ಲ ಅವಾಗ ರಿಪ್ಲೇ ಮಾಡಿದ್ರಾತು ಅಂತ ಅವ್ನು.. ಇದೇ Ego clash ಗಳಲ್ಲಿ ಎಷ್ಟೋ ಗೆಳೆತನಗಳು ಮುರಿದು ಬಿದ್ದಿರತ್ತೆ. ಇಂಜಿನಿಯರ್ಗಳೂ ಹೊರತಲ್ಲ ಬಿಡಿ ಇದಕ್ಕೆ.. ಅಲ್ಲ, ಅವಶ್ಯಕತೆ ಇದ್ದಾಗ ನೆನಪಾಗಿ, ನೆರವಾಗಿ ಇಲ್ದಿದ್ದಾಗ ನೀನ್ಯಾರೋ ನಾನ್ಯಾರೋ ಅಂತ ಇದ್ದು ಬಿಡೋ adhoc connection ಗಳಾ ಗೆಳೆತನಾ ? ಹೇ,ಹೆಂಗಿದ್ರೂ ಫೇಸ್ಬುಕ್ಕು , ಮೊಬೈಲ್ ನಂಬರ್ ಇದ್ಯಲ್ಲಾ ಕೊನೆವರ್ಗೂ ಕಾಂಟಾಕ್ಟಲ್ಲಿರೋಣ ಅಂತ ಬೀಡ್ಕೋಡಿಗೆ ಸಮಾರಂಭದಲ್ಲಿ ಹೇಳಿರೋ ಮಾತುಗಳು ಅಣಕಿಸಿದಂಗೆ ಆಗತ್ತೆ..ಜಗತ್ತಿರೋದೇ ಕೊಡು ಕೊಳ್ಳೋದ್ರ ಮೇಲೆ ಅಂತ ಯಾರೋ ತತ್ವಜ್ಞಾನಿ ಹೇಳಿದ ಮಾತು ನೆನ್ಪಾಗತ್ತೆ..
ಹೊಸ ನೀರು ಬಂದಾಗ ಹೆಂಗೆ ಹಳೇ ನೀರು ತೊಳ್ಕಂಡು ಹೋಗತ್ತೋ ಹಂಗೆ, ಆಫೀಸಿನ colleague ಗಳೇ ಹೊಸ ಫ್ರೆಂಡ್ಸ್ ಆಗ್ತಾರೆ. ನೆನಪಾಗದ "ಸ್ವಾರ್ಥಿ"!! ( ಆ ಕಡೆಗೂ ಹಿಂಗೇ ಅನ್ಸಿರಬಹುದು) ಗೆಳೆಯರ ಸ್ಥಾನಾನ ಈ ಹೊಸ ಗೆಳೆಯರು ತುಂಬಿರ್ತಾರೆ. ನೀನು ನನ್ನ ಬೆಸ್ಟ್ ಫ್ರೆಂಡ್ ಕಣೋ, ನಿನ್ನ ಜಾಗ ಯಾರೂ ತುಂಬಕ್ಕೆ ಆಗಲ್ಲ ಅಂತ ಎಷ್ಟೇ ಹೇಳಿದ್ರೂ ದೂರದ ಜೊತೆಗೆ ನೆನ್ಪುಗಳು ಮಾಸೋಕೆ ಶುರುವಾದ್ರೆ, ಆ ಜಾಗಕ್ಕಲ್ದಿದ್ರೂ ಹೊಸ ಜಾಗ ಮಾಡಿ ಹೊಸಬ್ರು ಬಂದು ಕೂರ್ತಾರೆ.
ನಿಜ, ೪ ವರ್ಷ ಜೊತೆಗೆ ಓದಿದ ಮಾತ್ರಕ್ಕೆ ಜೀವಮಾನ ಇಡೀ ಜೊತೆಗೆ ಇರಕ್ಕೆ ಆಗಲ್ಲ!! ಇದು ಎಲ್ಲಾ ವರ್ಗಕ್ಕೂ ಅನ್ವಯಿಸತ್ತೆ. ನಿನ್ನ ಜೊತೆಗೆ ಒಂದನೇ ಕ್ಲಾಸು ಓದಿದ ಎಲ್ರೂ ನಿನ್ನ ಜೊತೆಗೇ ಇಂಜಿನಿಯರಿಂಗ್ ಗೆ ಬಂದಿದ್ರಾ? ಎಲ್ರೂ ಕಾಂಟಾಕ್ಟಲ್ಲಿ ಇದಾರಾ ಈಗ್ಲೂ ಅಂತ ಪ್ರಶ್ನೆ ಬರ್ತಿರುತ್ತೆ, ಇಂಜಿನಿಯರ್ ಗೆಳೆಯರ ಅಗಲುವಿಕೆ ನೆನ್ಪಾದಾಗಲ್ಲ.
ಎಲ್ಲಾ ೩ ಈಡೀಯಟ್ಸ ರಾಂಚೋ ತರ ಎಲ್ಲೋ ಮಾಯ ಆದ್ರೂ ಅಂತಲ್ಲ. ಅತ್ವಾ ನಾನೇ ರಾಂಚೋ ಅಂತ್ಲೂ ಅಲ್ಲ.
ಆದ್ರೂ ಹಳೆಯ ಮೆಸೇಜುಗಳು, ವಿಷ್ಗಳು , ಅಪ್ಯಾಯಮಾನತೆ ಅವ್ರಿಂದ ಕಡ್ಮೆ ಆಗಿರುತ್ತೆ. ಎಷ್ಟೋ ಜನರಿಂದ ಮೆಸೇಜುಗಳಿಗೆ ಪದೇ ಪದೇ who is this ರಿಪ್ಲೆ ಬರ್ತಿರುತ್ತೆ. ಯಾರೂ ಗೆಳೆಯರಿಲ್ಲದ, ಬೇಡದ ಸ್ವಾರ್ಥಿ, ಒಂಟಿ ಜೀವ ಅಂತಲ್ಲ. ಆದ್ರೂ ಅರಿವಿಗೇ ಬರದೇ ಮರೆಯಾಗ್ತಿರೋ ಗೆಳೆತನ ಒಂತರಾ ಬೇಜಾರು ಮಾಡತ್ತೆ.. ಪರಿವರ್ತನೆ ಜಗದ ನಿಯಮ !!!
ಯಾಕೆ ಮೈಮೇಲೆ ಬಿದ್ದು ಮಾತಾಡ್ಸೋದು, ಮೇಲ್ ಹಾಕೋದು, ಮೆಸೇಜು ಹಾಕೋದು.. ನಮ್ಮ ನೆನ್ಪಿರದೋರಿಗೆ ಮತ್ಯಾಕೆ ನೆನ್ಪು ಮಾಡಿ ಕಷ್ಟ ಕೊಡೋದು, ನಂ ಪಾಡಿಗೆ ಸುಮ್ನಿದ್ದು ಬಿಡೋಣ ಅಂತ ಅನೇಕ ಸಾರಿ ಅನುಸ್ತಾ ಇರತ್ತೆ.
.
.
.
ಆದ್ರೆ ಆ ಭಾವ ಶಾಶ್ವತ ಅಲ್ಲ. ಸುಮಾರು ವರ್ಷಗಟ್ಲೆ ಆದ್ಮೇಲೆ ಸಿಕ್ಕಿರ ಗೆಳೆಯರನ್ನ ಮಾತಾಡ್ಸಿದಾಗ , ಫೇಸ್ಬುಕ್ಕಲ್ಲಿ ಸಿಕ್ಕಾಗ್ಲೋ, ಸುಮ್ನೇ ಹಿಂಗೇ ಅಂತ ಹಾಕಿರೋ ಮೆಸೇಜಿಗೆ ರಿಪ್ಲೆ ಬಂದಾಗ ಆಗೋ ಖುಷಿ ಇದ್ಯಲ್ಲ.. ಅದು ಹಳೆಯ ಎಲ್ಲಾ ನೆನ್ಪುಗಳನ್ನೂ ತೊಳೆದು ಬಿಡತ್ತೆ. ಎಷ್ಟಕ್ಕೂ ಮನುಷ್ಯ ಸಂಘ ಜೀವಿ, ಭಾವ ಜೀವಿ ಅಲ್ವಾ.. ಯಾವ್ದೋ ಖುಷೀಲಿ ಇನ್ಯಾವ್ದೋ ಬೇಜಾರು ಮರೆಯಾಗತ್ತೆ. ಏನಪ್ಪಾ ನೀನು ಬಿಜಿ ಮನುಷ್ಯ. ಒಂದು ಮೆಸೇಜು ಹಾಕೋ ಅಷ್ಟು ಪುರುಸೊತ್ತು ಇಲ್ವಾ
ಹಾಳಾದವ್ನೆ ಅಂತ ಪರಸ್ಪರ ಬೈದಾಡಿಕೊಂಡಾಗ ಮತ್ತೆ ಮುರುಟಿರೋ ಸ್ನೇಹ ಚಿಗುರುತ್ತೆ.
ಯಾರೋ ಹೊಸ ಗೆಳೆಯರು ಸಿಕ್ಕಾಗ ಮರೆತೋದ ಗೆಳೆಯರು ಮರೆತೊಗ್ತಾರೆ.. ಈ adhoc ಸಂಪರ್ಕಗಳ ಮಧ್ಯೆ ಕೆಲವು ಪರ್ಮನೆಂಟು ಅನ್ಸೋ ಪೆಪ್ಪರಮೆಂಟಿನಂತೆ ಸ್ನೇಹದ ಸವಿ ಹಂಚಿದ, ಹಂಚುವ ಗೆಳೆಯರೂ ಸಿಕ್ಕಿರ್ತಾರೆ.೫ನೇ ಕ್ಲಾಸಿಂದ ೩ ವರ್ಷ ಜೊತೆಗೆ ಓದಿದ್ರೂ ಇನ್ನೂ ಸಂಪರ್ಕದಲ್ಲಿರೋ ಹಲವು ಗೆಳೆಯರು, ಎಸ್ಸೆಸ್ಸೆಲ್ಸಿ ಗೆಳೆಯರು, ಪಿಯು ಮಿತ್ರರ ಜೊತೆಗೆ ಈ ಇಂಜಿನಿಯರ್ ಮಿತ್ರರೂ ಕಾಲದ ನೆನಪಿನ ಪುಟದಲ್ಲಿ ದಾಖಲಾಗಿದಾರೆ.
ಎಲ್ಲೋ ಒಮ್ಮೊಮ್ಮೆ ಬದಲಾವಣೆ ಗಾಳಿ ಬೀಸಿ ಪುಸ್ತಕದ ಮುಂದಿನ ಪುಟ ಕಾಣೋ ಬದ್ಲು ಹಿಂದಿನದ್ದೆಲ್ಲಾ ಪಟ ಪಟ ಸದ್ದಿನೊಂದಿಗೆ ತಿರುಗೋಕೆ ಶುರು ಮಾಡಿ ಅಲ್ಲಲ್ಲಿ ನಿಲ್ಲೋ ಪುಟಗಳಿಂದ ಇಣುಕ್ತಾರೆ.. ಬದುಕನ್ನೋ ಪೇಪರ್ ದೋಣಿ ಸಾಗ್ತಾ ಇದೆ. ಮಧ್ಯ ಮಧ್ಯ ಯಾವ್ದೋ ಕಸ, ಕಡ್ಡಿ ಸಿಕ್ಕು ಪಯಣಕ್ಕೆ ಅಲ್ಪ ವಿರಾಮ. ಆ ವೇಳೆ ಅಲ್ಲಿ ಬಂದು ಸೇರೋ ಉಳಿದ ದೋಣಿಗಳೇ ಗೆಳೆಯರು . ಹಂಗಂತಾ ಆ ನಿಲುಗಡೆ ಶಾಶ್ವತ ಅಲ್ಲ. ಸ್ವಲ್ಪ ಕಾಲದ ನಂತರ ಬರೋ ಜೋರು ನೀರಲ್ಲಿ , ಬೀಸೋ ಗಾಳೀಲಿ ಕಡ್ಡಿ ಸರಿದಾಗ ಮತ್ತೆ ನಂನಮ್ಮ ಪಯಣ ನಮ್ಮ ಪಾಡಿಗೆ.. ಈ ಪಯಣದಲ್ಲಿ ಜೊತೆ ಸಿಕ್ಕ ಎಲ್ಲಾ ದೋಣಿಗಳಿಗೂ ಇಂದು ಒಂದು ಕೆಲ್ಸ ಅಂತ ಮಾಡೋಕೆ ಕಾರಣ ಆಗಿರೋ ಎಲ್ಲಾ ಗಾಳಿಗಳಿಗೂ , ನೋವು ಮರೆಸೊ ಸವಿನೆನಪಿನ ಮುಲಾಂಗಳಿಗೂ.. ನನ್ನ ಜೀವ , ಜೀವನ ರೂಪಿಸಿದ, ಕಟ್ಟಿದ, ಬೆಳೆಸುತ್ತಿರುವ ಎಲ್ಲಾ ಇಂಜಿನಿಯರ್ರುಗಳಿಗೂ ಮತ್ತೊಮ್ಮೆ ಸಲಾಂ
ಇಂತಿ,
ನಿಮ್ಮವ
ಪ್ರಶಸ್ತಿ
Subscribe to:
Post Comments (Atom)
Ego clash ಗಳಲ್ಲಿ ಎಷ್ಟೋ ಗೆಳೆತನಗಳು ಮುರಿದು ಬಿದ್ದಿರತ್ತೆ
ReplyDeleteTrue
ಹೂಂ :-( ಧನ್ಯವಾದಗಳು
Deleteಮನಸ್ಸನ್ನು ತಾಕುವ ಗೆಳೆತನಗಳಷ್ಟೇ ಚಿರ ಕಾಲ ಉಳಿಯುತ್ತವೆ. ಮಿಕ್ಕವು ರಸ್ತೆಯಲ್ಲಿ ಕಣ್ಣಿಗೆ ಕಟ್ಟುವ ಭುವನ ಸುಂದರಿಯರ ಚಿತ್ರಗಳಷ್ಟೇ.
ReplyDeleteಹೌದು ಸರ್ :-( :-)
Delete