Wednesday, October 17, 2012

ನೂರ್ನಳ್ಳೀಲಿ ಅವ -1


ಮುಂಚೆ ಎಲ್ಲ ಬರಿ, ಬರಿ ಬರಿತಿದ್ದೋನು ಈಗ್ಯಾಕೋ ಬರ್ಯೋದೇ ಕಮ್ಮಿ ಆಗ್ಬಿಟ್ಟಿದೆ! ಓದೋದೂ ಕಮ್ಮಿ ಆಗ್ಬಿಟ್ಟಿದೆ!!.
ಕಾರಣ ? ಹುಡ್ಕಿದರೆ ನೂರು ಸಿಗ್ಬೋದೇನೋ.. ಆದರೆ ಬರೀದಿರೋಕೆ ನೂರು ಕಾರಣ ಹುಡ್ಕೋಬದ್ಲು ಬರೀಬೇಕು ಅನ್ನೋ ಒಂದೇ ಉತ್ಸಾಹ ಮೇಲಲ್ವೇ ? ಹಂಗಾಗೇ ಸುಮಾರು ದಿನದಿಂದ ಮನ್ಸಲ್ಲಿ ಅರ್ಧಬಂರ್ದ ಮೂಡಿದ್ದ ಕತೆಗೊಂದು ಆಕಾರ ಕೊಡೋ ಪ್ರಯತ್ನ ಇದು..

ಹೀಗೇ ಬಸ್ಸಲ್ಲಿ ಕಿಟಕಿ ಪಕ್ಕಕ್ಕೆ ಕೂತಿದ್ದ ಅವ. ಬೀಸ್ತಾ ಇದ್ದ ಗಾಳಿ ಅವನ ಗಡ್ಡ ನೇವರಿಸ್ತಾ ಇತ್ತು. ಆ ಗಡ್ಡ ಅವ್ನು ಸಂಪ್ರದಾಯಕ್ಕನುಸಾರ ಉಳಿಸಿದ್ದಾ ಅತ್ವಾ ಫ್ಯಾಷನ್ನಿಗಾಗಿ ಬೆಳೆಸಿದ್ದಾ ಅಲ್ಲಿದ್ದವ್ರಿಗೆ ಯಾರಿಗೂ ಗೊತ್ತಿರ್ಲಿಲ್ಲ. ಕುಂಕುಮ, ನಾಮ, ವಿಭೂತಿ, ಟೋಪಿ, ಕೊರಳಲ್ಲಿ ಕ್ರಾಸು, ತಾಯಿತ ಈ ತರದ್ಯಾವ್ದೂ ಕಾಣಿಸ್ದೇ ಇದ್ದಿದ್ರಿಂದ ಅವ್ನ್ಯಾರು ಅಂತ ಊಹಿಸೋದೂ ಸ್ವಲ್ಪ ಕಷ್ಟವೇ ಆಗಿತ್ತು. ಜುಬ್ಬಾ ಹಾಕಿದ್ರೂ ಯಾವ ಸೆಂಟೂ ಇರ್ಲಿಲ್ಲ. ಬುದ್ದಿಜೀವಿನಾ ಅನ್ನೋಕೆ ಜೋಳಿಗೆ ಇರ್ಲಿಲ್ಲ. ಮುಖ ಗಂಟುಹಾಕಿದಂಗೆ ಇತ್ತು. ಡೈವರ್ ಹಿಂದಿನ ಸೀಟಲ್ಲಿ ಕೂತಿದ್ದ ಅವ ಯಾವಾಗ್ಲೋ ಕಿಟಕಿ ಹೊರಗೆ ಏನೋ ಹುಡುಕೋ ತರ ನೋಡ್ತಿರ್ತಿದ್ದ.. ಹಂಗಾಗಿ ಬಸ್ಸಲ್ಲಿರೋ ಯಾರೂ ಅವ್ನ ಮಾತಾಡ್ಸೋ ಉಸಾಬರಿಗೆ ಹೋಗಿರ್ಲಿಲ್ಲ. ನೂರ್ನಳ್ಳಿ ಬಸ್ಸಲ್ಲಿ ದಿನಾ ನೂರಾರು ಜನ ಓಡಾಡ್ತಾರೆ. ಆದ್ರೂ ಈ ವಿಚಿತ್ರ ವೇಷದವ್ನ ಬಗ್ಗೆ ಕೆಲವ್ರಿಗೆ ಕುತೂಹಲ, ಅನುಮಾನ ಬಂದ್ರೂ ಕೇಳೋ ಧೈರ್ಯ ಮಾಡಿರ್ಲಿಲ್ಲ.

ಬಸ್ಸು ಕುಲುಕಾಡ್ತಾ ಸಾಗ್ತಾ ಇತ್ತು. ಸ್ವಲ್ಪ ಹುಷಾರಾಗಿ ಓಡ್ಸಪ್ಪ ಡ್ರೈವರಪ್ಪ ಅಂದ್ರು ಹಿರಿಯರೊಬ್ರು ಈ ಕುಲುಕಾಟ ತಡ್ಯಕಾಗ್ದೆ. ಏನ್ ಮಾಡ್ಲಿ ಅಜ್ಜ ಚಂದ್ರ, ಮಂಗಳ ಗ್ರಾದಲ್ಲೂ ಈ ಪಾಟಿ ಗುಂಡಿ ಇದಾವೋ ಇಲ್ಲೋ ಗೊತ್ತಿಲ್ಲ. ನನ್ ಕರ್ಮ . ಏನ್ ಮಾಡ್ಲಿ ಅಂತ ರಸ್ತೆ ಮಾಡಿದ ಕಾಂಟ್ರಾಕ್ಟರ್ಗೆ, ದುಡ್ಡು ನುಂಗಿದ ಮತ್ತೊಬ್ಬ ದೊಡ್ಮನ್ಷಂಗೆ ಶಾಪ ಹಾಕ್ತಿದ್ದ ಡ್ರೈವರಣ್ಣ. ಬಸ್ಸು ತೀರಾ ತುಂಬಿ ಹೋಗ್ದಿದ್ರೂ ಕೆಲವರು ನಿತ್ತಿದ್ರು. ಡ್ರೈವರಿಗೆ ಪ್ರಶ್ನೆ ಹಾಕಿದ ವಯಸ್ಸಾದವ್ರಿಗೆ ಪಾಪ ಕುಲುಕಾಡೋ ಬಸ್ಸಲ್ಲಿ ನಿಲ್ಲೋದು ಸ್ವಲ್ಪ ಕಷ್ಟ ಆಗ್ತಿತ್ತು. ಆದ್ರೆ ಜಾಗ ಬಿಟ್ಕೊಡಿ ಅಂತ ಕೇಳೋಕೆ ಸ್ವಲ್ಪ ಮುಜುಗರ ಆಯ್ತು. ಕೊನೆಗೆ ಅಲ್ಲೇ ಪಕ್ಕ ಕೂತಿದ್ದ ಈ ವಿಚಿತ್ರ ಆಸಾಮಿ ಮೇಲೆ ಅವ್ರ ದೃಷ್ಟಿ ಬಿತ್ತು.

ಎಲ್ಲಿಗೋಗ್ತಿದೀಯಪ್ಪ ಅಂದ್ರು. ಅವ್ನು ತಿರ್ಗೂ ನೋಡ್ಲಿಲ್ಲ. ಹೊರಗೆ ನೋಡ್ತಿದ್ನಲ ಅದ್ಕೆ ತಾವು ಕರ್ದಿದ್ದು ಅವ್ನಿಗೆ ತಿಳಿಲಿಲ್ವೋ ತಾವು ಕರೀತಿರೋ ಭಾಷೆ ಅವ್ನಿಗೆ ಅರ್ಥ ಆಗ್ತಿಲ್ವಾ ಅನ್ನೋ ಸಂಶಯ ಬಂತು ಹಿರೀರಿಗೆ. ಇವ್ನು ಕೆಪ್ನೇನಪ್ಪ ಅಂತ ಆ ಹೊಸ್ಬನ ಪಕ್ಕ ಕೂತಿದ್ದ ನೂರ್ನಳ್ಳಿಯ ಒಬ್ನಿಗೆ ಕೇಳಿದ್ರು..ಇವ್ನೂ ಆ ವಿಚಿತ್ರ ಆಸಾಮೀನ ಮಾತಾಡ್ಸೋ ಗೋಜಿಗೆ ಹೋಗಿರ್ಲಿಲ್ಲ. ವಯಸ್ಸಾದೋರ ಸಡನ್ನಾದ ಪ್ರಶ್ನೆಯಿಂದ ತನ್ನ ಸೀಟಿಗೆ ಎಲ್ಲಿ ಸಂಚಕಾರ ಬಂತಪ ಅಂದ್ಕೊಂಡ ಇವ.
(ಮುಂದುವರಿಯುತ್ತದೆ..)


ಮುಂದೆ..
೧)ದೂರದ ಬೆಂಗ್ಳೂರಿನಲ್ಲಿ ಯಾರೋ ಬಾಂಬ್ ಹಾಕಿದೋನು ತಪ್ಪಿಸ್ಕಂಡಿದಾನಂತೆ ಅವ್ನು ಇವ್ನೇನಾ ಅಂತ..
.. ನೂರ್ನಳ್ಳೀಲಿ ಅವ: ಭಾಗ -೨

6 comments:

  1. ಬರೆ, ಚಮಚದಲ್ಲಿ ಕೊಟ್ರೆ ಎಲ್ಲಿ ಸಾಕಾಗುತ್ತೆ ಮಾರಾಯ?

    ReplyDelete
    Replies
    1. ಮಾಡರ್ನು ಧಾರಾವಾಹೀಲಿ ಇರ್ತಲ ಕಿಣ್ಣ...ಸ್ವಲ್ಪನೇ ಕತೇನ ಮೂರು ವರ್ಶ ಎಳ್ಯದು.. ಹಂಗೆ ಇದು :-)

      Delete
  2. ’ಆನೆಗೆ ಗಂಜಿ ಹುಯ್ದಂಗೆ’ ಅಂತ ಒಂದು ಗಾದೆ ಇದೆ ಗೊತ್ತಾ ಪ್ರಶಸ್ತಿ? ಇಷ್ಟು ಸಮಯ ಬರೆಯದೆ ಸತಾಯಿಸಿದ್ದಾಯ್ತು ಇಇಗ ಹೀಗೆ ಚೂರು-ಚೂರೇ ಕೊಟ್ಟು ನಾಲಿಗೆ ಚಪ್ಪರಿಸುವಾಗ ಮರೆಯಲ್ಲವಿತುಕೊಂಡಿರಲ್ಲಾ? ;) ಕಥೆಗೆ ಒಳ್ಳೆಯ ಪ್ರಾರಂಭ ಸಿಕ್ಕಿದೆ. ಮುಂದುವರೆಸಿ. :)

    ReplyDelete
    Replies
    1. ಧನ್ಯವಾದಗಳು "ಮಂಜಿನ ಹನಿ" :-)

      Delete