Tuesday, March 31, 2015

Time to C something :-)

One of my friend wanted to know what is function, what is pointer, pass by value, what is pass by reference in C. So, i thought to scribble something in linux to show what it is

Here is a simple code which explains some basic concept
===========
#include <stdio.h>
int add(int a, int b)//pass by value function
{
    return a+b;
}

int addr(int *c,int *d)//pass by reference function
{
    return( *c + *d );
}

int main()
{
    //printf("Hello, World!\n");
    int a,b;
    printf("enter 2 digits");
   
    scanf("%d%d", &a,&b);
    printf("there sum is %d",add(a,b)); //invoking pass by value
   
    int *p; //creating a pointer to variable
    p=&a;
    *p=26;
   
    printf("\nmodified value of a is %d",a);
  
    printf("\n using reference\n");
    printf("%d",addr(&a,&b)); //invoking pass by reference function

    return 0;
}

===========

But somehow, it did not work in linux. "using namespace std" did not help.
So, i thought of some online editor and it eased the job.
Ide One compilation
Modified the add() function to edit the value of a,b to show that does not affect the passed values
however similar thing in addr() affecting value of passed variable(as address of the variable is being passed and not the value of it.


The happiness to see the concepts being understood made me happy as well and scribble down the same scriplet here as well.. 

Sunday, March 22, 2015

ಬೆಂಗಳೂರ ಅತೀ ಪುರಾತನ ದೇವಾಲಯ -೪:ಹಲಸೂರು ಸೋಮೇಶ್ವರ ದೇಗುಲ



outside wall of Halasooru someshwara temple
ಪೀಠಿಕೆ:
ಬೆಂಗಳೂರ ಅತೀ ಪುರಾತನ ದೇಗುಲ ಯಾವುದು ಅಂದಾಗ ಕೆಲವರು ಬೇಗೂರು ಪಂಚಲಿಂಗೇಶ್ವರ ಅಂದ್ರೆ ಕೆಲವರು ದೊಮ್ಮಲೂರ ಚೊಕ್ಕನಾಥೇಶ್ವರ ಎಂದೂ ಕೆಲವರು ಮಡಿವಾಳದ ಸೋಮೇಶ್ವರನೆಂದೂ ಹೇಳುತ್ತಾರೆ. ಇನ್ನು ಕೆಲವರ ಪ್ರಕಾರ ಅದು ಹಲಸೂರು ಸೋಮೇಶ್ವರ ದೇಗುಲ. ಸೋಮೇಶ್ವರ ದೇಗುಲಕ್ಕೆ ಹೋಗೋ ಹೊತ್ತಿಗೆ ಆಂಜನೇಯನ ಗುಡಿ ಯಾಕೆ ಸಿಗುತ್ತೆ(ಹಿಂದಿನ ಎರಡು ಭಾಗಗಳಲ್ಲಿ ಸಿಕ್ಕಂತೆ ಇಲ್ಲೂ ಸಿಗುತ್ತಾ ?) ಮತ್ತು ಸೋಮೇಶ್ವರ ಕಟ್ಟಿದ್ದು ಯಾರ ಕಾಲದಲ್ಲಿ, ಉಳಿದ ಮೂರು ದೇಗುಲಗಳಿಗೂ ಇದಕ್ಕೂ ಇರೋ ಸಮಾನತೆಯೇನು, ಭಿನ್ನತೆಗಳೇನು ಅನ್ನೋ ಒಂದಿಷ್ಟು ಪ್ರಶ್ನೆಗಳನ್ನು ಹೊಕ್ಕು ಇಂದು ಹೊಕ್ಕಿದ್ದು ಹಲಸೂರು ಸೋಮೇಶ್ವರನ ಸನ್ನಿಧಿಗೆ
Praveshadwara, See the lday and flower designs

ಇಲ್ಲಿಯವರೆಗೆ ನೋಡಿದ ಬೆಂಗಳೂರ ಚೋಳರ ದೇಗುಲಗಳಲ್ಲೇ ಅತೀ ಸುಂದರವಾದ ಮತ್ತು ತನ್ನ ಮೂಲ ಸ್ವರೂಪವನ್ನು ಬಹಳಷ್ಟು ಮಟ್ಟಿಗೆ ಉಳಿಸಿಕೊಂಡಿರುವುದು ಹಲಸೂರು ಸೋಮೇಶ್ವರ ದೇಗುಲ. ಇಲ್ಲಿಯವರೆಗೆ ನಾ ಕಂಡ ಬೆಂಗಳೂರ ಪುರಾತನ ದೇಗುಲಗಳಲ್ಲೇ ಅತೀ ಸುಂದರ ದೇಗುಲವಿದು.ಸ್ವಾಗತ ದ್ವಾರದಲ್ಲಿರುವ ಬಾಲೆಯರೇ ಆಗಲಿ, ಅವುಗಳ ಮೇಲಿರುವ ಹೂವಿನ ಹಲವು ಕೆತ್ತನೆಗಳೇ ಆಗಲಿ, ಪ್ರವೇಶಗೋಪುರದ ನಾಲ್ಕು ದಿಕ್ಕಿನಲ್ಲಿರುವ ಕೆತ್ತನೆಗಳೇ ಆಗಲಿ, ನಂತರ ಒಳಗೆ ಸಿಗುವ ಕಂಬಗಳಲ್ಲಿರುವ ಕೆತ್ತನೆಗಳೇ ಆಗಲಿ ತಮ್ಮ ಶಿಲ್ಪಕಲೆಯಿಂದ ಮನಸೂರೆಗೊಳ್ಳುತ್ತವೆ

ಹೋಗೋದು ಹೇಗೆ ?
ದೊಮ್ಮಲೂರಿನಿಂದ ಬರೋದಾದ್ರೆ ಬಸ್ ಸಂಖ್ಯೆ ೨೦೧.
ಮಾರತ್ತಳ್ಳಿ ಕಡೆಯಿಂದ ಬರೋದಾದ್ರೆ: ಶಿವಾಜಿನಗರದ ಬಸ್ಸಿನಲ್ಲಿ ಟ್ರಿನಿಟಿ ವೃತ್ತದಲ್ಲಿ ಇಳಿದು, ಐ.ಎನ್.ಜಿ ವೈಶ್ಯ ಬ್ಯಾಂಕಿನ ಎದುರಿನಲ್ಲಿರುವ ರಸ್ತೆಯಲ್ಲಿ ಎಡಕ್ಕೆ ತಿರುಗಿ 1MG ಮಾಲಿನ ಎದುರಿನಲ್ಲಿರುವ ರಸ್ತೆಯಲ್ಲಿ(ಹಳೇ ಮದ್ರಾಸ್ ರಸ್ತೆ)  ಹಾಗೇ ಮುಂದೆ ಬಂದರೆ ಮತ್ತೊಂದು ಸರ್ಕಲ್ ಸಿಗುತ್ತೆ.ಅದರಲ್ಲಿ ಬಲಕ್ಕಿರುವ ಬಜಾಜ್ ಸ್ಟ್ರೀಟ್ ರಸ್ತೆಯಲ್ಲಿ ಸ್ವಲ್ಪ ಹೊತ್ತು ಸಾಗಿದರೆ ಒಂದು ಆಂಜನೇಯನ ದೇಗುಲ ಸಿಗುತ್ತದೆ. ಅಲ್ಲಿಂದ ಹಾಗೇ ಸ್ವಲ್ಪ ಮುಂದಕ್ಕೆ ಸಾಗಿದರೆ ಒಂದು ಹಳೇ ಕಾಲದ ಕಾಂಪೌಂಡ್ ಸಿಗುತ್ತೆ. ಅದೇ ಸೋಮೇಶ್ವರ ದೇಗುಲ.  
ಮಾರತ್ತಳ್ಳಿಯಿಂದ ಮೆಜೆಸ್ಟಿಕ್ ಬಸ್ಸು ಹತ್ತಿದ್ರೆ: ಹಲಸೂರು ಪೋಲೀಸ್ ಸ್ಟೇಷನ್ ಬಳಿ ಇಳಿದು ಅಲ್ಲಿಂದ ಟ್ರಿನಿಟಿ ವೃತ್ತಕ್ಕೆ ತೆರಳಿದ್ರೆ ಅಲ್ಲಿಂದ ಮೇಲಿನಂತೆ ತೆರಳಬಹುದು.
ವಾಪಾಸ್ ಮೆಜೆಸ್ಟಿಕ್/ಶಿವಾಜಿನಗರ/ದೊಮ್ಮಲೂರಿಗೆ ಬರೋಕೆ: ಸೋಮೇಶ್ವರನ ದೊಡ್ಡ ತೇರಿನ ಹಿಂಭಾಗದಲ್ಲೇ ಸಿಗ್ನಲ್ಲು ಮತ್ತೆ ಬಸ್ಟಾಪಿದೆ. ಅಲ್ಲಿಂದ ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ದೊಮ್ಮಲೂರು , ಟಿನ್ ಫ್ಯಾಕ್ಟರಿ, ಶಿವಾಜಿನಗರ.. ಹೀಗೆ ಹಲವೆಡೆಗೆ ಬಸ್ಸುಗಳು ಸಿಗುತ್ತೆ.


Degulada Ratha

 ಇತಿಹಾಸ:
೧)ದೇಗುಲದ ಸುತ್ತಮುತ್ತಲು ನಡೆದ ಪುರಾತತ್ವ ಇಲಾಖೆಯ ಅಗೆತಗಳಿಂದ ೧೨೦೦ ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾದ ಕಲ್ಯಾಣಿ ದೊರಕಿದ್ದು ಇದು ಚೋಳರ ಕಾಲದ ದೇಗುಲವಿರಬಹುದು, ನಂತರದಲ್ಲಿ ಯಲಹಂಕ ನಾಡಪ್ರಭು ಜಯಪ್ಪಗೌಡ(೧೪೨೦-೫೦)ಮತ್ತು ನಂತರದಲ್ಲಿ ವಿಜಯನಗರದ ಕಾಲದಲ್ಲಿ ಬಂದ ಕೆಂಪೇಗೌಡನ ಕಾಲದಲ್ಲಿ ಒಂದಿಷ್ಟು ನವೀಕರಣಗಳಾಗಿರಬಹುದು ಎನ್ನುತ್ತವೆ ಕೆಲವು ಮೂಲಗಳು.
೨)ಮತ್ತೊಂದು ಮೂಲಗಳ ಪ್ರಕಾರ ಪ್ರಸಕ್ತ ಹಲಸೂರಿನ ಬಳಿ ಬೇಟೆಗೆ ಬಂದಿದ್ದ ಜಯಪ್ಪಗೌಡ ಸುಸ್ತಾಗಿ ಒಂದು ಮರದ ಕೆಳಗೆ ಮಲಗುತ್ತಾನೆ. ಆಗ ಅವನ ಕನಸಿನಲ್ಲಿ ಪ್ರತ್ಯಕ್ಷನಾದ ವ್ಯಕ್ತಿಯೊಬ್ಬ ಆತ ಮಲಗಿರುವ ಜಾಗದಲ್ಲಿ ಶಿವಲಿಂಗವಿದೆಯೆಂದೂ ,ಅದನ್ನು ಅಗೆಸಿ ಅಲ್ಲೇ ದೇಗುಲವನ್ನು ನಿರ್ಮಿಸಬೇಕೆಂದೂ ತಿಳಿಸುತ್ತಾನೆ. ಜಯಪ್ಪಗೌಡ ಅಲ್ಲೇ ಅಗೆಸಲಾಗಿ ಶಿವಲಿಂಗವೂ, ನಿಧಿಯೂ ದೊರೆಯಿತೆಂದೂ ಅದರಿಂದ ದೇಗುಲ ನಿರ್ಮಾಣವಾಯಿತೆಂದೂ ತಿಳಿಸುತ್ತವೆ ಮೂಲಗಳು.

೩)ಮತ್ತೊಂದು ಕೊಂಚ ಭಿನ್ನವಾದ ಮೂಲಗಳ ಪ್ರಕಾರ ಯಲಹಂಕವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡಿದ್ದ  ಕೆಂಪೇಗೌಡನು ಬೇಟೆಗೆ ತೆರಳಿದ್ದಾಗ ತನ್ನ ರಾಜಧಾನಿಯಿಂದ ದೂರ ದೂರಕ್ಕೆ ತೆರಳಿ ಈ ಪ್ರದೇಶಕ್ಕೆ ಬರುವಷ್ಟರಲ್ಲಿ ಸುಸ್ತಾಗಿ ಹೋಗುತ್ತಾನೆ.ಇಲ್ಲೇ ರಾತ್ರಿಯಾಗಿ ಒಂದು ಮರದಡಿ ಮಲಗಿರಲು ಆತನ ಕನಸಿನಲ್ಲಿ ಇಲ್ಲಿಯ ದೇವನಾದ ಸೋಮೇಶ್ವರನು ಪ್ರತ್ಯಕ್ಷನಾಗಿ ತನಗೊಂದು ದೇಗುಲವನ್ನು ಕಟ್ಟಿಸುವಂತೆ ಕೋರುತ್ತಾನೆ. ತದನಂತರದಲ್ಲಿ ಕೆಂಪೇಗೌಡನಿಗೆ ಅದೇ ಜಾಗದಲ್ಲಿ ನಿಧಿಯೂ ದೊರಕಿ ದೇಗುಲ ನಿರ್ಮಾಣವಾಗುತ್ತದೆ.
೪)ಮದ್ರಾಸ್ ಮತ್ತು 1890 ಎಂದು ಇಂಗ್ಲೀಷ್ ಅಕ್ಷರ/ಅಂಕಿಗಳಲ್ಲಿಯೂ , ಕೆಳಗೆ ತಮಿಳಿನ ಲಿಪಿಯಲ್ಲಿಯೂ ಬರೆಯಲ್ಪಟ್ಟ ದೀಪದ ಕಂಬದಂತಹ ಕಂಬವೊಂದು ದೇಗುಲದ ಹಿಂಭಾಗದಲ್ಲಿವೆ. ಆಗಿನ ಮದ್ರಾಸ್ ಸರ್ಕಾರದಿಂದ ದೇಗುಲಕ್ಕೆ ಸಿಕ್ಕಿರಬಹುದಾದ ಅನುದಾನ/ಮರ್ಯಾದೆಯ ಕುರುಹೇ ಇದು ಎಂಬ ಪ್ರಶ್ನೆಗೆ ಸದ್ಯಕ್ಕೆಂತೂ ಉತ್ತರ ಸಿಕ್ಕಿಲ್ಲ. ಆಗಿನ ಸರ್ಕಾರ ಮತ್ತು ಈ ದೇವಸ್ಥಾನದ ಸಂಬಂಧದ ಬಗೆಗೆ ಯಾರಾದರೂ ಬೆಳಕು ಚೆಲ್ಲಿದರೆ ಅದೂ ಕುತೂಹಲಕರವಾದೀತು.
ನಿರ್ಮಾಣ ಹೇಗೆ ಆಗಿರಲಿ, ಯಾರಿಂದಲೇ ಆಗಿರಲಿ.ಒಂದಂತೂ ಸ್ಪಷ್ಟ. ಮಹಿಷ ಮರ್ಧಿನಿ, ನರಸಿಂಹನ ಕೆತ್ತನೆಗಳಿರುವ ಮಂಟಪದ ಶಿಲ್ಪಗಳಿಗೂ ಹೊರಾಂಗಣದಲ್ಲಿರುವ ತಮಿಳು ಋಷಿಗಳಂತಹ ಶಿಲ್ಪಗಳ ಶೈಲಿಗೂ ಭಿನ್ನತೆಯಿದೆ. ಹಾಗಾಗಿ ಒಂದು ಕಾಲದಲ್ಲಿ ನಿರ್ಮಾಣಗೊಂಡ ದೇಗುಲ ನಂತರ ಬೇರೆ ಬೇರೆ ಕಾಲದಲ್ಲಿ ಹಲವು ರೂಪಾಂತರಗಳನ್ನು ಕಂಡಿರಬಹುದು ಅನ್ನೋ ಊಹೆಯಷ್ಟೆ. ಇಲ್ಲಿನ ಕೆಲವೆಡೆ ಶಾಸನಗಳಿದ್ದಿರಬಹುದಾದ ಕುರುಹಿದ್ದರೂ ಯಾವ ದಾನಪತ್ರ, ಶಿಲಾಶಾಸನಗಳೂ ಕಾಣದಿರುವುದು ಇಲ್ಲಿಯವರೆಗೆ ನೋಡಿದ ಚೋಳ ದೇಗುಲಗಳಿಗಿಂತ ಇದನ್ನು ಭಿನ್ನವಾಗಿಸುತ್ತದೆ.

Line of Munis and Devas
Stamba having inscription about Madras and 1890

A Closer look

ಕೆತ್ತನೆಗಳು:
ಪ್ರಧಾನ ದೇಗುಲದ ಗರ್ಭಗೃಹದಲ್ಲಿ ಸೋಮೇಶ್ವರನಿದ್ದರೆ , ಹೊರಭಾಗದಲ್ಲಿರುವ ಮತ್ತೊಂದು ದೇಗುಲದಲ್ಲಿ ಮೀನಾಕ್ಷಾಂಬ ಇದ್ದಾಳೆ. ನಂತರದಲ್ಲಿ ಆಂಜನೇಯನ ಗುಡಿಯಿದ್ದರೂ ಅದು ಇತ್ತೀಚೆಗೆ ಕಟ್ಟಲಾಗಿದೆಯೆಂದು ಭಾಸವಾಗುತ್ತದೆ. ಪ್ರಧಾನ ದೇಗುಲದ ಪ್ರದಕ್ಷಿಣಾ ಪಥದಲ್ಲಿ ಮಹಾಗಣಪತಿ, ನಾಗದೇವತೆಗಳು ಮುಂತಾದ ಹಲವು ದೇವತೆಗಳು ದೇಗುಲದ ಸಣ್ಣ ಸಣ್ಣ ಗೂಡುಗಳಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದ್ದಾರೆ.ಸೋಮೇಶ್ವರನ ಎದುರಿಗಿರುವ ಸಿಂಹದ ಕಂಬವನ್ನು ನೋಡಲು ಮರೆಯದಿರಿ. ಎದುರು ಬದರಾಗಿರುವ ಎರಡು ಕಂಬಗಳಲ್ಲೂ ನೆಲಕ್ಕೆ ತನ್ನ ಕಾಲು ಮತ್ತು ಕೈಗಳನ್ನು ಅಪ್ಪಳಿಸಿ ಕೂತಿರುವ ಸಿಂಹದ ಬೆನ್ನ ಮೇಲೆ ಕಂಬ ಇದ್ದು, ದೊಡ್ಡ ಕಂಬ ಮುಕ್ತಾಯಗೊಳ್ಳುವ ಭಾಗದಲ್ಲಿ ಮತ್ತೊಂದು ಸಿಂಹ. ಅದರ ಮೇಲೆ ಮತ್ತೊಂದು ಸಿಂಹವಿದ್ದು ಅದರ ಮೇಲೆ ಮತ್ತೊಂದು ಸಣ್ಣಕಂಬವಿರುವಂತಹ ಕೆತ್ತನೆಯಲ್ಲಿ ಸಿಂಹಗಳೇ ಕಂಬಗಳನ್ನು ಹೊತ್ತಂತಾ ಸುಂದರ ರಚನೆಯಿದೆ.


ಹಾಗೇ ಹೊರಬಂದರೆ ಸೋಮೇಶ್ವರನ ಎದುರಿಗೆ ನಂದೀಶ್ವರ ವಿರಾಜಮಾನನಾಗಿದ್ದಾನೆ. ಅವನ ತಲೆಯ ಮೇಲಿನ ಮೇಲ್ಛಾವಣಿಯಲ್ಲಿ ಹಲವು ಭಂಗಿಯ ತೋಳಗಳು, ಹಸುಗಳ ಸಾಲಿದೆ.  ನಂದಿಯ ಎದುರಿನ ಪ್ರವೇಶದ್ವಾರದ ಎಡಭಾಗದಲ್ಲಿ ಕೈಲಾಸವೆತ್ತಲು ಪ್ರಯತ್ನಿಸುತ್ತಿರುವ ದಶಾನನ ಮತ್ತು ಕೈಲಾಸದಲ್ಲಿ ಕುಳಿತಿರುವ ಶಿವ ಪಾರ್ವತಿ ಮತ್ತು ಪರಿವಾರದ ಚಿತ್ರಣವಿದೆ. ಬಲದ್ವಾರದ ಪಕ್ಕದಲ್ಲಿ ಮಹಿಷಾಸುರ ಮರ್ಧಿನಿಯ ಕೆತ್ತನೆಯಿದೆ. ದ್ವಾರದ ಎಡಪಾರ್ಶ್ವದಲ್ಲಿ ದೇವದೇವಿಯರು ಕೂತಿರುವ ರತ್ನಗನ್ನಡಿ ಮತ್ತು ಉಯ್ಯಾಲೆ ಮಂಟಪವಿದೆ. ಹಲವು ಸಾಲಿನ ಕಲ್ಲುಗಳ ಮಂಟಪಗಳಲ್ಲಿ ಒಂದು ಕಾಲಲ್ಲಿ ಸಿಂಹ, ಮತ್ತೊಂದು ಕಾಲಲ್ಲಿ ಆನೆಯನ್ನು ಹಿಡಿದಿರುವ ಎರಡು ತಲೆಯ ಪಕ್ಷಿ ಗಂಡಭೇರುಂಡ, ಮಂಟಪವನ್ನು ಹೊತ್ತಿರುವ ಸಿಂಹ, ನಂದಿ, ಆನೆ, ಶಿವಲಿಂಗ ಮುಂತಾದ ಕೆತ್ತನೆಗಳು ಕಂಡುಬರುತ್ತವೆ. ಇಲ್ಲಿಯವರೆಗೆ ನೋಡಿದ ಎಲ್ಲಾ ಚೋಳ ದೇಗುಲಗಳಲ್ಲಿರುವ ಶಿಲ್ಪಗಳು ಇಲ್ಲಿವೆ, ಅಲ್ಲೆಲ್ಲೂ ಇಲ್ಲದ ಹಲವು ಇಲ್ಲಿವೆ ಅಂದ್ರೆ ಶಿಲ್ಪಕಲೆಯ ಅಗಾಧತೆಯನ್ನು ನೀವು ಊಹಿಸಬಹುದು. ಉದಾಹರಣೆಗೆ ಅಂಬೆಗಾಲಿಡುತ್ತಿರುವ ಬೆಣ್ಣೆ ಕೃಷ್ಣ, ಹಾವಿನೊಂದಿಗೆ ಆಡುತ್ತಿರುವ ಮಂಗ, ಬೇಡರ ಕಣ್ಣಪ್ಪನ ತರಹದ ಶಿಲ್ಪ, ಕುದುರೆಯೇರಿ ಹೊರಟ ಸವಾರ ಮುಂತಾದ ಹಲವು ಶಿಲ್ಪಗಳಿವೆ. ಫೋಟೋ ತೆಗೆಯಹತ್ತಿದರೆ ಪ್ರತೀ ಕಂಬದ ನಾಲ್ಕು ಕೋನಗಳನ್ನೂ ತೆಗೆಯಬೇಕಾದೀತು. ಇನ್ನು ದೇಗುಲದ ಹೊರಾವರಣದಲ್ಲಿರುವ ಷಣ್ಮುಖ, ಬ್ರಹ್ಮದೇವ, ವಿಷ್ಣುವಿನ ಅವತಾರಗಳು, ಋಷಿಮುನಿಗಳು.. ಹೀಗೆ ಫೋಟೋಗಳದ್ದೇ ಒಂದು ದೊಡ್ಡ ರಾಶಿಯಾದೀತು. ಆನೆಯ ಮೇಲಿನ ಸಿಂಹವನ್ನು ಸವಾರಿ ಮಾಡುತ್ತಿರುವ ಶಿಲ್ಪ ಇದರ ನಂತರ ಬಂದ ಹಲವು ದೇಗುಲಗಳಲ್ಲಿ ಕಾಣಸಿಗುತ್ತದಾದರೂ ಸಿಂಹದ ಹಲ್ಲುಗಳನ್ನು, ಕೇಶರಾಶಿಯನ್ನೂ ಗುರುತಿಸುವಷ್ಟು ಸುಂದರ ಶಿಲ್ಪವನ್ನು ಇಲ್ಲಿಯವರೆಗೂ ಕಂಡಿರಲಿಲ್ಲ. ದೇಗುಲದ ಪ್ರಾಂಗಣದಲ್ಲಿ ಫೋಟೋಗ್ರಫಿಗೆ ಅನುಮತಿಯಿರದ ಕಾರಣ ಮತ್ತು ನೀವು ಅಲ್ಲೇ ಹೋಗಿ ಆ ಸೌಂದರ್ಯವನ್ನು ಸವಿಯಲೆಂಬ ಉದ್ದೇಶದಿಂದ ಆ ಸುಂದರ ಶಿಲ್ಪಗಳ ಫೋಟೋಗಳನ್ನಿಲ್ಲಿ ಹಾಕುತ್ತಿಲ್ಲ.

Outside of Temple
Back view
A closer look at the shikhara from the back. Stamba of Madras lies infront of this

ಹಂಸವಾಹನ ಬ್ರಹ್ಮ ಮತ್ತು ಮಯೂರವಾಹನ ಕಾರ್ತೀಕೇಯ
one more shot
ದೇಗುಲದ ಪಕ್ಕದಲ್ಲಿರುವ ನಾಗಪುಷ್ಪ
Gap between somwshwara and Kamakshamba temple. This pathway is also having lots of scluptures

ಸಿಂಹಸವಾರ. ಕೆತ್ತನೆಯ ಸೂಕ್ಷ್ಮತೆಗಳನ್ನು ಗಮನಿಸಿ
 ದೇಗುಲದ ಸೌಂದರ್ಯ ಬರೀ ಒಳಗಡಗಿಲ್ಲ. ಪ್ರವೇಶದ್ವಾರದಲ್ಲಿ ಮತ್ತು ನಾಲ್ಕು ದಿಕ್ಕಿನಲ್ಲೂ ನಂದಿಗಳಿಂದ ಕೂಡಿದ ನಂದಿಧ್ವಜದ ಶಿಲ್ಪಗಳಲ್ಲೂ ಇದನ್ನು ಕಾಣಬಹುದು

Dhwaja stambha
ಧ್ವಜಸ್ಥಂಭದಲ್ಲಿರುವ ದೇವಿಯ ಎರಡು ರೌದ್ರಾವತಾರಗಳು,ನಂದಿ ಮತ್ತು ಗಣಪತಿಯ ಕೆತ್ತನೆಗಳನ್ನು ನೋಡಲು ಮರೆಯದಿರಿ




 ಸದ್ಯದಲ್ಲಿ ಭೇಟಿ ಕೊಡಬಹುದಾದ ವಿಶೇಷ ಸಮಯ: ಇದೇ ಬರುವ ಏಪ್ರಿಲ್ ೪ ರಂದು ದೇಗುಲದಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದ್ದು ಬೆಳಗ್ಗೆ ೮:೩೦ ಇಂದ ಮಧ್ಯಾಹ್ನ ಒಂದರವರೆಗೆ ಅದರ ಕಾರ್ಯಕ್ರಮಗಳು ನಡೆಯುತ್ತವೆಯಂತೆ. ಆ ಸಮಯದಲ್ಲಿ ಸಜ್ಜುಗೊಳ್ಳುವ ರಥವನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು




Thursday, March 19, 2015

ಬೆಂಗಳೂರ ಅತೀ ಪುರಾತನ ದೇವಾಲಯ -೩: ಮಡಿವಾಳ ಸೋಮೇಶ್ವರ ದೇವಾಲಯ

ಪೀಠಿಕೆ:
ಇತಿಹಾಸದ ಬುನಾದಿಯ ಮೇಲೆ ವಾಸ್ತವದ ಸೌಧವೇಳೋದು ಸಾಮಾನ್ಯ. ಆದ್ರೆ ಇತಿಹಾಸದ ಸಮಾಧಿಯ ಮೇಲೆ ವಾಸ್ತವದ ಕಟ್ಟಡಗಳೆಬ್ಬಿಸಹೊರಟರೆ ? ಉತ್ತರ ಗೊತ್ತಿಲ್ಲದ ಮೇಲಿನ ಪ್ರಶ್ನೆ ಕಾಡಹತ್ತಿದ್ದು ಮಡಿವಾಳದ ಸೋಮೇಶ್ವರ ದೇಗುಲಕ್ಕೆ ಭೇಟಿ ಕೊಟ್ಟಾಗ. ಬೆಂಗಳೂರ ಚೋಳ ದೇಗುಲಗಳ ಹುಡುಕಾಟದಲ್ಲಿದ್ದ ನಾನು ದೊಮ್ಮಲೂರಿನ ಚೊಕ್ಕನಾಥಸ್ವಾಮಿ ದೇಗುಲ, ಬೇಗೂರಿನ ಪಂಚಲಿಂಗೇಶ್ವರಗಳ ದರ್ಶನದ ನಂತರ ನಾನು ಹೊಕ್ಕಿದ್ದು ಮಡಿವಾಳದ ಸೋಮೇಶ್ವರನ ಸನ್ನಿಧಿಗೆ

Madivaala Someshwara temple
ಹೋಗೋದು ಹೇಗೆ ? :
ಮಡಿವಾಳ ಬಸ್ಟಾಪಿನಲ್ಲಿಳಿದು ಹಳೇ ಮಡಿವಾಳಕ್ಕೆ ಹೋಗೋದು ಹೇಗೆ ಅಂದ್ರೆ ಯಾರಾದ್ರು ದಾರಿ ತೋರಿಸ್ತಾರೆ. ಇಲ್ಲವೆಂದ್ರೆ ಹನುಮಾನ್ ದೇವಸ್ತಾನ ಎಲ್ಲಿ ಅಂದ್ರೆ ಅದು ಇನ್ನೂ ಸುಲಭ. ಹನುಮಾನ್ ದೇವಸ್ಥಾನ ಎಲ್ಲಪ್ಪ ಅಂದ್ರಾ ? ಮಡಿವಾಳದ ಟೋಟಲ್ ಮಾಲಿನ ಹತ್ತಿರದಲ್ಲೇ ಅದರ ಎದುರ ರಸ್ತೆಯಲ್ಲಿ ಅಂದ್ರೆ ಇನ್ನೂ ಸುಲಭ.ಹನುಮಂತನ ದರ್ಶನ ಪಡೆದು ಅದರ ಪಕ್ಕದಲ್ಲಿ ಹೋಗೋ ದಾರಿಯಲ್ಲಿ ಸಿಗೋ ಮೊದಲ ಕತ್ತರಿ(ಕವಲುದಾರಿ)ಯಲ್ಲಿ ಎಡಕ್ಕೆ ಸಾಗಿ ಆ ರಸ್ತೆಯ ಕೊನೆಯ ತನಕ ಸಾಗಿ ಮತ್ತೆ ಎಡ ಬಲಗಳ ಕವಲಲ್ಲಿ ಎಡಕ್ಕೆ ತಿರುಗಿ ಮುಂದೆ ಸಾಗುವುದು. ಅದೇ ದಾರಿಯಲ್ಲಿ ಮುಂದೆ ಸಾಗಿ ಹಳೇ ಮಡಿವಾಳದ ಸಾಲು ಸಾಲು ಅಂಗಡಿಗಳು, ಸೇತುವೆಯನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಸಿಗುವುದೇ ಸೋಮೇಶ್ವರ ದೇಗುಲ. ಮಡಿವಾಳದಿಂದ ನಡೆದು ಹೋದರೆ ಸುಮಾರು ಹದಿನೈದು ನಿಮಿಷದ ಸಮಯ. ಆಟೋ/ವಾಹನಗಳನ್ನವಲಂಬಿಸೋ ಅನಿವಾರ್ಯತೆಯಿಲ್ಲ. ಇದ್ದರೆ ಇನ್ನೂ ಬೇಗ ತಲುಪಬಹುದಷ್ಟೆ 

Madivaala hanuman temple
ಇತಿಹಾಸ:
ಇಲ್ಲಿನ ಸೋಮೇಶ್ವರ ದೇಗುಲವನ್ನು ೧೨೬೭ರಲ್ಲಿ ಚೋಳರಸ ಮೂರನೇ ವೀರ ಬಲ್ಲಾಳನ(1291-1343 AD) ಕಾಲದಲ್ಲಿ ಕಟ್ಟಲಾಯಿತೆಂದು ಇಲ್ಲಿರುವ ತಮಿಳು ಶಾಸನಗಳು ತಿಳಿಸುತ್ತವೆ



Altered portion of the Someshwara temple

ವಿಶೇಷತೆ:
ಹೊರಗೆ ಸಿಮೆಂಟು, ಲೈಟುಗಳ ಅಲಂಕಾರದಿಂದ ತನ್ನ ಮೂಲ ಸೌಂದರ್ಯವನ್ನು ಕಳೆದುಕೊಂಡಿರುವ  ಈ ದೇಗುಲದ ಒಳಭಾಗದಲ್ಲೂ ನೆಲಕ್ಕೆ ಟೈಲ್ಸು ಮತ್ತು ಛಾವಣಿಗಳಲ್ಲಿ ಲೈಟುಗಳನ್ನು, ಹೊರವಲಯದಲ್ಲಿ ಪ್ರಥಮ ಗಣಪತಿ, ದಕ್ಷಿಣಾಮೂರ್ತಿ ಇತ್ಯಾದಿ ಹತ್ತು ಹಲವು ದೇವರನ್ನೊಳಗೊಂಡು ಇದು ಚೋಳರ ಕಾಲದ್ದಾ ಅಥವಾ ಇತ್ತೀಚೆಗೆ ಕಟ್ಟಿದ ಯಾವುದೋ ದೇಗುಲವಾ ಎನ್ನೋ ಅನುಮಾನ ಮೂಡಿಸುವಂತಿದೆ. ಆದರೆ ಮುಜರಾಯಿ ಇಲಾಖೆಗೆ ಸೇರಿದ ಇದರ ಹೊರಗೋಡೆಯಲ್ಲಿರುವ ತಮಿಳು ಶಾಸನ ಇದು ಚೋಳರ ಕಾಲದ್ದೇ ಅನ್ನುವುದಕ್ಕೆ ಪುರಾವೆಯೊದಗಿಸುತ್ತದೆ.

Tamil Inscription of the Someshwara temple

ಒಳಾಂಗಣ:
ದೇಗುಲದ ಒಳಗೆ ಕೆಲವರು ಉದ್ಭವ ಲಿಂಗ ಎಂದು ನಂಬುವ ಸೋಮೇಶ್ವರ ಮತ್ತು ಅವನ ಎದುರಿಗೆ ನಂದೀಶ್ವರನಿದ್ದಾನೆ. ತದನಂತರದಲ್ಲಿ ಸ್ಥಾಪಿಸಿರಬಹುದಾದ ನಾಗಸುಬ್ರಹ್ಮಣ್ಯ ವಿಗ್ರಹವೂ ಇದೆ. ಇದಲ್ಲದೇ ಅಲ್ಲಿನ ಕಂಬಗಳಲ್ಲಿ ನಂದಿ, ಲಿಂಗ, ಸಿಂಹ, ನರಸಿಂಹ, ಹಸು, ಆನೆ, ಗಣಪತಿ,ನರ್ತಕ-ನರ್ತಕಿ,ಹೆಡೆಯೆತ್ತಿದ ಹಾವಿನೊಂದಿಗೆ ಮಾತನಾಡುತ್ತಿರುವ ಮಂಗ, ಛಾಮರ ಬೀಸೋರು,ಬೇಡರ ಕಣ್ಣಪ್ಪ,ಕಮಂಡಲದ ಮೇಲೆ ತನ್ನೆಲ್ಲಾ ದೇಹಭಾರವನ್ನು ನೀಡಿ ಧ್ಯಾನಿಸುತ್ತಿರುವ ಮುನಿ ಮುಂತಾದ ಕೆತ್ತನೆಗಳನ್ನು ಕಾಣಬಹುದು. ತಮಿಳು ಬಲ್ಲ ಗೆಳೆಯರು ಜೊತೆಗಿದ್ದರೆ ಕೆಳಗೆ ಕೊಟ್ಟಿರೋ ಶಾಸನಗಳಲ್ಲೇನಿದೆ ಎಂದು ಓದಲು ಅನುಕೂಲ.


Tamil Inscription @Someshwara temple, Madivala, Pic 2
ಮುಗಿಸೋ ಮುನ್ನ:
ದೇಗುಲದ ಒಳಗೆ ಫೋಟೋಗ್ರಫಿ ನಿಷಿದ್ದ ಎನ್ನುವುದು ಸರಿ. ಆದರೆ ಈ ಶಾಸನಗಳ ಅಧ್ಯಯನ ಮಾಡಲೆಂದು ಫೋಟೋ ತೆಗೆಯಲು ಹೋದ್ರೂ ಅಲ್ಲಿನ ಅರ್ಚಕರಿಂದ ಬೈಸಿಕೊಳ್ಳಬೇಕಾದ ಪ್ರಸಂಗ ಬಂತು !ಇದ್ರ ಫೋಟೋ ತೆಗಿಬೋದಾ ಅಂತ ಅಲ್ಲೇ ಕೂತಿದ್ದ ಆಡಳಿತ ಮಂಡಳಿಯವರನ್ನ ಕೇಳಿ ಅವರು ಹೂಂ ಅಂದ ಮೇಲೆ ತೆಗೆಯೋ ಪ್ರಯತ್ನದಲ್ಲಿದ್ದಕ್ಕೆ ಬೆಲೆ ಇಲ್ಲ ! ಏನೋ ಅಧ್ಯಯನ ಮಾಡ್ತಾ ಇದ್ದಾರೆ ಅನ್ಸತ್ತೆ. ಹೊರಗೋಡೆಯ ಮೇಲಿರೋ ಶಾಸನದ ಫೋಟೋ ತೆಕ್ಕಂಡ್ರೆ ತಪ್ಪೇನು ಅಂತ ಅಲ್ಲಿದ್ದ ಕೆಲ ಭಕ್ತರು ಆಕ್ಷೇಪಿಸಿದ ಮೇಲೆ ಆಡಳಿತ ಮಂಡಳಿಯವರು ಇದ್ರ ಫೋಟೋ ಯಾಕೆ ತೆಗಿತಾ ಇದ್ದೀರಿ ? ಏನು ಮಾಡ್ತೀರಿ ಇದ್ರಿಂದ ಎಂಬ ಇನ್ನೂ ಹಲವು ಪ್ರಶ್ನೆಗಳೊಂದಿಗೆ ಬಂದ್ರು. ನಾನು ಬೆಂಗಳೂರ ಚೋಳ ದೇಗುಲಗಳನ್ನು ಒಂದೊಂದಾಗಿ ಸಂದರ್ಶಿಸುತ್ತಾ ಇದ್ದೀನಿ. ಸದ್ಯಕ್ಕೆ ಇವುಗಳ ಫೋಟೋ ತೆಗೆದು ನಂತರದಲ್ಲಿ ತಮಿಳು ಬಲ್ಲ ಗೆಳೆಯರ ಸಹಾಯದಿಂದ ಇದರಲ್ಲಿರೋ ಇತಿಹಾಸವನ್ನರಿಯೋ ಪ್ರಯತ್ನದಲ್ಲಿದ್ದೇನೆ ಎಂಬ ಉತ್ತರದಿಂದಲೂ ಯಾಕೋ ಅವರಿಗೆ ನಂಬಿಕೆ ಹುಟ್ಟಿದಂತೆ ಕಾಣಲಿಲ್ಲ. ಸರಿ, ನೀವು ಅಧ್ಯಯನ ಮಾಡ್ತಿದೀರೋ ಅದ್ರ ಕಾಪಿಯೊಂದ ನಮಗೂ ಒಂದು ಕಳಿಸಿಕೊಡಿ ಅಂತನ್ನೋ ಬೇಡಿಕೆಗೆ ಹೂಂಗುಟ್ಟಿ ಹೊರಬರೋದ್ರಲ್ಲಿ ಸಾಕಾಯ್ತು. ಈ ಬ್ಲಾಗು, ಅದರ ವಿಳಾಸ ಎಲ್ಲಾ ಕೊಟ್ಟು ಓದಿ ಅಂತ ಹೇಳಬಹುದಿತ್ತೇನೋ. ಆದ್ರೆ ಇಲ್ಲೇನಿದೆ ಅಂತ ನಮಗೂ ಗೊತ್ತಿಲ್ಲ, ನೀವೇನಾದ್ರೂ ಓದಿದ್ರೆ ನಮಗೂ ಒಂದು ಕಾಪಿ ಕೊಡಿ ಅನ್ನೋ ಅವರ ಮಾತಿಗೆ ಹೇಗೆ ಪ್ರತಿಕ್ರಯಿಸಬೇಕೋ ಎಂದು ಗೊತ್ತಾಗದೇ ನಮ್ಮ ಇತಿಹಾಸದ ಬಗ್ಗೆ ನಮ್ಮ ಜನರಿಗೇ ಇರೋ ಭಾವದ ಬಗೆಗಿನ ಬೇಸರದಿಂದ ಹಾಗೇ ಹೊರಬಂದಿದ್ದೆ.

ಜೀರ್ಣೋದ್ದಾರ ಅನ್ನೋ ಹೆಸರಿನಲ್ಲಿ ದೇಗುಲದ ಮೂಲಸ್ವರೂಪವನ್ನೇ ಬದಲಿಸಿ ಇನ್ನೇನೋ ಮಾಡಿದರೆ ಅದು ತಪ್ಪಲ್ಲ ! ಆದ್ರೆ ಪೈಂಟುಗಳ ಲೇಪದಡಿ, ಸಿಮೆಂಟೀಕರಣದಡಿ ಹೇಗೋ ತಮ್ಮ ಚೂರು ಪಾರು ಅಸ್ತಿತ್ವ ಉಳಿಸಿಕೊಂಡಿರೋ ಇತಿಹಾಸವನ್ನರಿಯ ಪ್ರಯತ್ನಿಸಿದರೆ ಅದು ತಪ್ಪು ! ಅಷ್ಟಕ್ಕೂ ಇತಿಹಾಸ ಪ್ರೇಮ ಅನ್ನುವುದು ಅದರಲ್ಲಿ ಡಿಗ್ರಿ ಪಡೆದ ಜನರ ಪೇಟೆಂಟು ಪಡೆದ ಆಸ್ತಿಯೇ ? ಅದರ ಬಗ್ಗೆ ಕೊಂಚ ಆಸಕ್ತಿ ಹೊಂದಿದ ಜನಸಾಮಾನ್ಯನೊಬ್ಬ ಆ ನಿಟ್ಟಿನಲ್ಲಿ ಪ್ರಯತ್ನಿಸಲೂ ಬಾರದೇ ?   ಶ್ರವಣಬೆಳಗೊಳದಲ್ಲಿನ ಬೆಟ್ಟದಲ್ಲಿರೋ ಪ್ರತೀ ಶಾಸನಕ್ಕೂ ಗಾಜಿನ ಹೊದಿಕೆ ಹೊಚ್ಚಿ ಅದು ಹಾಳಾಗದಂತೆ ಕಾಪಿಡುವುದು ಹೋಗಲಿ ಇಲ್ಲಿನ ಶಾಸನದಲ್ಲಿ ಏನಿದೆ ಎಂದಾಗಲಿ, ದೇವಸ್ಥಾನದ ಇತಿಹಾಸದ ಬಗ್ಗೆಯಾಗಲಿ ಒಂದು ಮಾಹಿತಿ ಫಲಕವನ್ನೂ ದೇಗುಲದ ಪ್ರಾಂಗಣದಲ್ಲಿ ಕಾಣಲಾಗಲಿಲ್ಲ. ಕೆಳದಿ,ಇಕ್ಕೇರಿಗಳಂತ ಊರುಗಳಲ್ಲಿ, ಹಾಸನದ ಹಳ್ಳಿ ಹಳ್ಳಿಗಳಲ್ಲಿ ಭಗ್ನಗೊಂಡ ಮೂರ್ತಿಗಳ ಆದ್ರೆ ಇನ್ನೂ ತಮ್ಮ ಮೂಲಸ್ವರೂಪದಲ್ಲೇ ಉಳಿದ ದೇಗುಲಗಳ ಬಗ್ಗೆ ಹಳ್ಳಿಗರಿಗೆ ಇತಿಹಾಸದ ಗಂಧಗಾಳಿಯೂ ಇಲ್ಲ ಎಂದು ಜರಿಯೋ ಜನ ಈ ತರಹ ಇತಿಹಾಸವನ್ನು ಸಿಮೆಂಟಿನ ಸಮಾಧಿಗಳಿಗೆ ತಳ್ಳುತ್ತಿರುವ ಬಗ್ಗೆ ಏನನ್ನುತ್ತಾರೆ ? ಸದ್ಯಕ್ಕೆಂತೂ ತಿಳಿಯುತ್ತಿಲ್ಲ. ಈ ಕೆಳಗಿನ ತಮಿಳು ಬರಹಗಳಲ್ಲಿ ಕೆಲವನ್ನಾದರೂ ಭಾಷಾಂತರಿಸಲು ತಮ್ಮಿಂದ ಅಥವಾ ತಮಿಳು ಬಲ್ಲ ತಮ್ಮ ಸ್ನೇಹಿತರಿಂದ ಸಾಧ್ಯವಾಗೋದಾದ್ರೆ ಮುಂದೆ ಬರೋ ಓದುಗರಿಗೆ ಸಹಾಯವಾದೀತೆಂಬ ನಿರೀಕ್ಷೆಯಲ್ಲಿ. 

Tamil Inscription @Someshwara temple, Madivala, pic 3

Tamil Inscription @Someshwara temple, Madivala-pic 4
Dhwajastambha outside Someshwara temple
ಜಗಮಗಿಸುತ್ತಿರುವ ಸೋಮೇಶ್ವರ ದೇಗುಲ. ಇದರ ಹಿಂದೆ ಒಂಭೈನೂರು ವರ್ಷಗಳ ಇತಿಹಾಸ ತಣ್ಣಗೆ ಮಲಗಿದೆಯೆಂದ್ರೆ ಮೊದಲ ಬಾರಿ ಬಂದವನಿಗೆ ನಿಜಕ್ಕೂ ಸಂದೇಹ ಬರೋದ್ರಲ್ಲಿ ಸಂದೇಹವಿಲ್ಲ!
ಈ ದೇಗುಲದ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಬೇಕಂದ್ರೆ ಈ ಕೊಂಡಿಯನ್ನು ನೋಡಬಹುದು

Monday, March 16, 2015

ಬೆಂಗಳೂರ ಅತೀ ಪುರಾತನ ದೇಗುಲ -2: ಬೇಗೂರ ಪಂಚಲಿಂಗೇಶ್ವರ ದೇಗುಲ

ದೊಮ್ಮಲೂರ ಚೊಕ್ಕನಾಥಸ್ವಾಮಿ ದೇಗುಲ ಎಂಬ ಚೋಳರ ದೇಗುಲ ನೋಡಿದಾಗಿಂದ ಬೆಂಗಳೂರಲ್ಲಿ ಇಂತಾ ನೋಡದೇ ಹೋದ ಚೋಳರ ದೇಗುಲಗಳು ಎಷ್ಟಿರಬಹುದಪ್ಪಾ ಅಂತ ಕುತೂಹಲಕ್ಕೊಮ್ಮೆ ಗೂಗಲಾಡಿಸಿದ್ದೆ. ಅತೀ ಆಶ್ಚರ್ಯವೆನ್ನುವಂತೆ ಹೆಸರೇ ಕೇಳದ ಅನೇಕಾನೇಕ ದೇಗುಲಗಳ ವಿವರಗಳು ತೆರೆದುಕೊಂಡಿದ್ದವು ಆಗ. ಪಟ್ಟಣದ ಜಗಮಗದ ನಡುವೆ ತಣ್ಣಗೆ ಮೂಲೆಯಲ್ಲೆಲ್ಲೋ ಕೂತು ತಮ್ಮ ಇರುಹನ್ನೇ ತೋರ್ಪಡಿಸದಂತೆ ತಣ್ಣಗೆ ಉಸಿರಾಡುತ್ತಿರುವ ಅಂತಹ ಎರಡು ದೇಗುಲಗಳ ದರ್ಶಿಸುವ ಭಾಗ್ಯ ದೊರಕಿತ್ತು ಈ ವಾರ. ಶಾಸನ ಅನ್ನೋದು ದೇಗುಲದ ಹೊರಭಾಗದಲ್ಲಿ ಇರೋ ಗೋಡೆಯ ಡಿಸೈನ್ ತರ, ಹೊರಭಾಗದಲ್ಲಿನ ಪತ್ರೆ ಗಿಡಗಳ ಬಳಿಯ ಉಳಿದೆಲ್ಲಾ ಕಲ್ಲುಗಳ ರೀತಿ ತುಂಡಾದ ಮತ್ತೊಂದು ಕಲ್ಲಿನಂತೆ ಕಾಣಲ್ಪಡುವ ಸ್ಥಿತಿಯಲ್ಲಿದ್ದ ಇವುಗಳ ಕಂಡು ಸಖತ್ ಬೇಸರವಾಯ್ತು. ಒಂದೆಡೆ ಚೋಳರ ಕಾಲದ ಕೆತ್ತನೆಗಳು ಫ್ಯಾಷನ್ ಇಲ್ಲದವಂತೆ ಕಾಣಲ್ಪಟ್ಟು ಪೈಂಟ್ ಹೊದಿಕೆಯಡಿ ಉಸಿರುಗಟ್ಟುತ್ತಿದ್ದರೆ ಮತ್ತೊಂದೆಡೆ ಲೈಟು, ಉತ್ಸವಗಳ ಝಗಮಗದಲ್ಲಿ ಮೂಲ ಸೌಂದರ್ಯವೇ ಮರೆತು ಹೋಗುವಂತಿತ್ತು. ಇಂತಾ ಎಷ್ಟೋ ದೇಗುಲಗಳು ತಮ್ಮ ಸ್ವರೂಪವನ್ನೇ ಕಳೆದುಕೊಂಡು ಕಾಲಗರ್ಭದಲ್ಲಿ ಮರೆಯಾಗೋ ಮುನ್ನ ಆಸಕ್ತಿಯುಳ್ಳ ಕೆಲ ಸ್ನೇಹಿತರಿಗಾದರೂ ಅವನ್ನು ಪರಿಚಯಿಸೋ ಪ್ರಯತ್ನವೇ ಈ ಲೇಖನ

ಬೇಗೂರಿನ ಪಂಚಲಿಂಗೇಶ್ವರ ದೇಗುಲ:
Begur Panchalingeshwara temple

ಬೇಗೂರಿನಲ್ಲಿನ ನಾಗೇಶ್ವರ ಅಥವಾ ನಾಗನಾಥೇಶ್ವರ ದೇಗುಲವು ಪಂಚಲಿಂಗೇಶ್ವರ ದೇಗುಲವೆಂದೂ ಹೆಸರು ಪಡೆದಿದೆ. ಶ್ರೀ ಕಾಳೀಕಮಟೇಶ್ವರ, ಶ್ರೀ ನಗರೇಶ್ವರ, ಶ್ರೀ ಪಾರ್ವತೀ ನಾಗೇಶ್ವರ, ಶ್ರೀ  ಚೋಳೇಶ್ವರ, ಶ್ರೀ ಕರ್ಣೇಶ್ವರನೆಂಬ ಐದು ಪ್ರಧಾನ ದೇಗುಲಗಳು ಇಲ್ಲಿರುವುದರಿಂದ ಇದಕ್ಕೆ ಪಂಚಲಿಂಗೇಶ್ವರನೆಂದೂ ಹೆಸರು. ಚೋಳರ ಕಾಲದ ದೇಗುಲಗಳ ಅರಸುತ್ತಿದ್ದ ನನಗೆ ಗಂಗರ ಕಾಲದ ದೇಗುಲವಿದು ಅಂತ ತಿಳಿದು ಇನ್ನೂ ಆಶ್ಚರ್ಯವಾಯ್ತು. ಇಲ್ಲಿನ ನಾಗೇಶ್ವರ ಅಥವಾ ನಾಗನಟೇಶ್ವರ ದೇಗುಲವೆಂಬುದು ಪಶ್ಚಿಮದ ಗಂಗರಸ  ನೀತಿಮಾರ್ಗ ೧(843-870) ಮತ್ತು ಅವನ ಮೊಮ್ಮಗ ಹಿರಿಗಂಗ ನೀತಿಮಾರ್ಗ೨(೯೦೭-೯೨೧)ನ ಕಾಲದಲ್ಲಿ ಕಟ್ಟಿಸಲ್ಪಟ್ಟಿದ್ದು ಅನ್ನುತ್ತವೆ ಮೂಲಗಳು. ಗಂಗರ ಕಾಲದಲ್ಲಿ ಚೋಳೇಶ್ವರ ಅನ್ನೋ ದೇಗುಲ ಹೇಗೆ ಬಂತಪ್ಪಾ ಅಂದ್ರಾ ? ಅದೊಂದು ಆಸಕ್ತಿಕರ ವಿಷಯ.ಕ್ರಿ.ಶ ೩೫೦ ರಿಂದ ೧೦೦೦ರದ ವರೆಗೆ ಆಳಿದ ಗಂಗರ ಆಳ್ವಿಕೆ ಕೊನೆಗೊಳ್ಳುವಲ್ಲಿ ಕ್ರಿ.ಶ ೯೪೯ರ ತೆಕ್ಕೋಲಂ ಕಾಳಗ, ಸಾವಿರದ ಸುಮಾರಿಗೆ ಮಾನ್ಯಕೇಟದ ಯುದ್ದದಲ್ಲಿ ಗಂಗರು ಸಾಮಂತರಾಗಿದ್ದ ರಾಷ್ಟ್ರಕೂಟರು ಕಲ್ಯಾಣದ ಚಾಲುಕ್ಯರಿಗೆ ಸೋತುದು ಪ್ರಮುಖ ಪಾತ್ರವಹಿಸುತ್ತದೆ. ತೆಕ್ಕೋಲಂ ಕಾಳಗದಲ್ಲಿ ಪಶ್ಚಿಮದ ಗಂಗ, ವೈದುಂಬರ, ಬಾಣರ ಸಂಯುಕ್ತ ಸೇನೆಯ ಚೋಳರಸ ರಾಜಾದಿತ್ಯನನ್ನು ಸೋಲಿಸಿದರ ಪ್ರತೀಕಾರವೆಂಬಂತೆ ಕ್ರಿ.ಶ ಸಾವಿರದ ಸುಮಾರಿಗೆ ಗಂಗರ ಮೇಲೆ ಯುದ್ದ ಸಾರಿದ ಚೋಳರಸ ರಾಜ ರಾಜ ಚೋಳನು ಅವರನ್ನು ಸೋಲಿಸಿ ಪಶ್ಚಿಮ ಗಂಗರ ಸುದೀರ್ಘ ಆಡಳಿತವನ್ನು ಕೊನೆಗಾಣಿಸುತ್ತಾನೆ ಎಂಬುದನ್ನು ಹಿಂದಿನ ಭಾಗದಲ್ಲಿ ನೋಡಿದ್ದೆವು.. ಗಂಗರನ್ನು ಸೋಲಿಸಿದಾಗ ಬೆಂಗಳೂರು ಚೋಳರ ಕೈವಶವಾಗುತ್ತದೆ. ನಂತರದಲ್ಲಿ ಮೂಲ ದೇಗುಲಗಳ ಜೊತೆಗೆ ಶ್ರೀ ಚೋಳೇಶ್ವರ ಮತ್ತಿತರ ದೇಗುಲಗಳ ನಿರ್ಮಾಣವಾಯಿತು ಎನ್ನುತ್ತದೆ ಇತಿಹಾಸ.


ಬೇಗೂರಿಗೆ ಹೋಗೋದು ಹೇಗೆ ?
ಬೊಮ್ಮನಹಳ್ಳಿಯಿಂದ ಬೇಗೂರು ಕಡೆ ಹೋಗೋ ಸುಮಾರಷ್ಟು ಬಸ್ಸುಗಳು ಸಿಗುತ್ವೆ. ಬನಶಂಕರಿಯಿಂದ ಹೋಗ್ಬೋಕೂಂದ್ರೆ ೬೦೦ ಸೀರಿಸ್ ನ ಬಸ್ಸುಗಳು ಸಿಗುತ್ವೆ

Sri Nagareshwara temple, Begur
ಕಟ್ಟದ ಸಂಕೀರ್ಣ ಮತ್ತು ಹೊರಾಂಗಣ ವಿನ್ಯಾಸ:
ದೇಗುಲಕ್ಕೆ ಈಗಿರುವ ಗೇಟಿನ ಮೂಲಕ ಪ್ರವೇಶಿಸಿದರೆ ಮೊದಲು ಸಿಗುವುದು ಶ್ರೀ ನಗರೇಶ್ವರ ದೇವಸ್ಥಾನ. ಅದರ ಬಲಭಾಗದಲ್ಲಿ ಕಾಳೀ ಕಮಟೇಶ್ವರ ದೇಗುಲ. ಕಾಳೀ ಕಮಟೇಶ್ವರನ ಪಕ್ಕದಲ್ಲಿ ಪಾರ್ವತೀ ಸಮೇತ ನಾಗೇಶ್ವರ ಮತ್ತು ಶ್ರೀ ಚೋಳೇಶ್ವರ ದೇಗುಲಗಳಿವೆ. ಅದರ ಪಕ್ಕದಲ್ಲಿ ಸ್ವಲ್ಪ ದೂರದಲ್ಲೆಂಬಂತೆ ಇರುವುದು ಶ್ರೀ ಕರ್ಣೇಶ್ವರ ದೇಗುಲ. ಎಡಮೂಲೆಯಲ್ಲಿರುವ ನಗರೇಶ್ವರ ಮತ್ತು ಬಲಮೂಲೆಯಲ್ಲಿರುವ ಶ್ರೀ ಕರ್ಣೇಶ್ವರ ದೇಗುಲಗಳಿಗೆ ಯಾವುದೇ ಗೋಪುರಗಳಿಲ್ಲ. ಉಳಿದ ದೇಗುಲಗಳಿಗೆ ಗೋಪುರಗಳಿವೆ. ಸಣ್ಣದಾದ ಶ್ರೀ ಕಾಳೀ ಕಮಟೇಶ್ವರವು ಸಣ್ಣದಾದ ಗೋಪುರವನ್ನು ಹೊಂದಿದ್ದರೆ ಶ್ರೀ ನಾಗೇಶ್ವರ ದೇಗುಲವು ವಿಶಾಲವಾದ ವೃತ್ತಾಕಾರದ ಗೋಪುರವನ್ನು ಹೊಂದಿದೆ.
Gopura of Kali kamateshwara

Round shaped dome of Nageshwara temple



ಇದರಲ್ಲಿರುವ ಎಂಟು ನಂದಿಗಳು ಪರಸ್ಪರ ನೋಡುವಂತಿರುವ ಎರಡೆರಡು ನಂದಿಗಳ ಜೋಡಿಗಳಲ್ಲಿವೆ. ಪಕ್ಕದಲ್ಲಿರುವ ಚೋಳೇಶ್ವರ ದೇಗುಲದ ಗೋಪುರವು ಚೌಕಾಕಾರದಲ್ಲಿದ್ದು ನಾಲ್ಕೇ ನಂದಿಗಳನ್ನು ಹೊಂದಿದೆ. ಈ ನಂದಿಗಳು ನಾಲ್ಕು ದಿಕ್ಕಿಗೆ ಮುಖ ಮಾಡದೇ ಎರಡು ದಿಕ್ಕಿಗೆ ಮುಖ ಮಾಡಿದ ಎರಡು ನಂದಿಗಳ ಎರಡು ಜೋಡಿಯಂತಿವೆ. ನಾಗೇಶ್ವರ ಮತ್ತು ಚೋಳೇಶ್ವರ ದೇಗುಲಗಳ ಮಧ್ಯೆ ಶಿವಭಕ್ತ ಚಂಡಿಕೇಶ್ವರನ ಪುಟ್ಟ ಗುಡಿಯಿದೆ. ಚಂಡಿಕೇಶ್ವರನಿಗೆ ಚಪ್ಪಾಳೆಯ ಮೂಲಕ ನಮಸ್ಕಾರ ಎಂಬ ಭಕ್ತರ ನಂಬಿಕೆಯಿರುವುದರಿಂದ ಇಲ್ಲಿಗೆ ಬರೋ ಭಕ್ತರು ಈ ಗುಡಿಯ ದ್ವಾರದ ಮೂರು ಮೂಲೆಗಳಿಗೆ ಬಡಿದು ನಮಸ್ಕರಿಸುತ್ತಾರೆ ! ಮೂಲ ಕಟ್ಟಡಗಳಲ್ಲದೇ ದೇಗುಲದ ಎರಡೂ ದಿಕ್ಕಿನಲ್ಲಿ ದೊಡ್ಡ ದೊಡ್ಡ ಪ್ರವೇಶದ್ವಾರಗಳನ್ನು ಕಟ್ಟುವ ಕೆಲಸವೂ ನಡೆಯುತ್ತಿದೆ.



Chandikeshwara between Nageshwara and Choleshwara joint temples

One Veeragallu beside Sri Nagareshwara temple

Closer view of the dome of Nageshwara temple

View of Begur temple complex. You can see the Praveshadwaras being onstructed in East, Northen directions

ವಿಶೇಷತೆ:
ಶ್ರೀ ನಗರೇಶ್ವರನ ಎದುರಿಗೆ ಇರುವ ನಂದಿಯ ತಲೆ ಮೇಲಿರುವ ಮಂಟಪದಲ್ಲಿ ನವಗ್ರಹಗಳ ಕೆತ್ತನೆಗಳಿವೆ. ಹೊಯ್ಸಳರ ದೇಗುಲಗಳಲ್ಲಿನ ಪ್ರವೇಶದ್ವಾರದಲ್ಲಿ, ನಂದಿ ಮಂಟಪದ ಮೇಲ್ಛಾವಣಿಯಲ್ಲಿ ಸಾಮಾನ್ಯವಾಗಿ ಕಾಣಸಿಗುವ ನವಗ್ರಹಗಳ ಕೆತ್ತನೆಗಳಿಗೆ ಗಂಗರ ಶಿಲ್ಪಕಲೆ ಸ್ಪೂರ್ತಿ ನೀಡಿರಬಹುದಾ ಎಂದೊಂದು ಅನುಮಾನ ಇಲ್ಲಿನ ಕೆತ್ತನೆಗಳ ಕಾಣುವಾಗ. ಅಲ್ಲಿಂದ ಒಳಸಾಗಿ ನಗರೇಶ್ವರ ಮತ್ತು ಪಕ್ಕದಲ್ಲಿನ ಪರಿವಾರ ದೇವತೆಗಳ ನಮಸ್ಕರಿಸಿ ವಾಪಾಸ್ ಬಂದರೆ ಕಾಳಿ ಕಮಟೇಶ್ವರ. ಅಪ್ರದಕ್ಷಿಣೆಯಾಗುತ್ತೆ ಎಂದರೆ ಕಾಳೀಕಮಟೇಶ್ವರ ದೇಗುಲಕ್ಕೇ ಮೊದಲು ಭೇಟಿ ಕೊಟ್ಟು ಅಲ್ಲಿಂದ ಮುಂದೆ ಸಾಗಬಹುದು. ಹೊಯ್ಸಳರ ದೇಗುಲಗಳಲ್ಲಿ ಸಾಮಾನ್ಯವಾಗಿರುವ ಮಹಿಷಮರ್ಧಿನಿ ಶಿಲ್ಪ ಇಲ್ಲಿನ ನಗರೇಶ್ವರ ದೇಗುಲದಲ್ಲಿ ಇದ್ದರೂ ಇವರಲ್ಲದೇ, ನಂತರ ಬಂದ ಚಾಲುಕ್ಯರೂ ಕೂಡ ಕಾಳಿಗೆ ಒಂದು ದೇಗುಲದವನ್ನು ಕಟ್ಟಿಸಿದ ನಿದರ್ಶನಗಳು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ ಎನ್ನಬಹುದು(ವಜ್ರದ ವ್ಯಾಪಾರಿ ಕಟ್ಟಿಸಿದ ದೊಡ್ಡಗದ್ದವಳ್ಳಿ ಲಕ್ಷ್ಮೀ ದೇವಸ್ಥಾನವನ್ನು ಹೊರತುಪಡಿಸಿ) ಹಾಗಾಗಿ ಈ ದೇಗುಲವನ್ನು ನಂತರದ ಕಾಲದಲ್ಲಿ ಕಟ್ಟಿಸಿರಬಹುದು ಎಂಬ ಊಹೆ. ಅದೇ ರೀತಿ ನಂದಿಮಂಟಪದ ಎದುರಿಗಿರುವ ಸೂರ್ಯನಾರಾಯಣನ ಕಿರುಗುಡಿಯನ್ನೂ ತದನಂತರ ಕಟ್ಟಿಸಿರಬಹುದೆನಿಸುತ್ತದೆ.

One Utsava statue outside Kali kamateshwara temple

Nandi infront of Nagareshwara temple
Navagraha at the top of Nandi Mantapa

Sri Surya Narayana swamy infront of Nandi of Nagareshwara temple

One of the Veeragallu. See how one can destroy something with paint :-(

One more Veeragallu

ನಂತರ ಸಿಗುವ ಶ್ರೀ ಪಾರ್ವತೀ ಸಮೇತ ನಾಗೇಶ್ವರ ದೇಗುಲದ ಮೂಲ ದೇಗುಲದಲ್ಲಿ ನಾಗೇಶ್ವರನ ಲಿಂಗವಿದೆ. ಹೊರಗಡೆ ಪಾರ್ವತಿಯ ದರ್ಶನವನ್ನು ಪಡೆಯಬಹುದು. ಗರ್ಭಗೃಹದ ಹೊರಗೆ ಅಂತರಾಳ ಎಂದು ಕರೆಯಲ್ಪಡುವ ಕೋಣೆಯಲ್ಲಿ ಅಷ್ಟಮಾತೃಕೆಯರು, ಗಣಪರಿ, ಮಹಿಷಮರ್ಧಿನಿ ಮುಂತಾದ ಶಿಲ್ಪಗಳನ್ನು ಕಾಣಬಹುದು.ಇಲ್ಲಿರುವ ನಾಲ್ಕು ಕಂಬಗಳಲ್ಲಿ ನರ್ತಿಸುತ್ತಿರುವ ಬಾಲೆಯರು, ಹೂ ಬಳ್ಳಿಗಳು ಮುಂತಾದ ಕೆತ್ತನೆಗಳನ್ನು ಕಾಣಬಹುದು, ಅದರಿಂದ ಹೊರಬಂದರೆ ನವರಂಗ. ಅಂತರಾಳವೆನ್ನುವುದು ದೈವಿಕ ಮತ್ತು ನವರಂಗವೆನ್ನುವುದು ಸಾಮಾಜಿಕ/ಲೌಕಿಕ ಭಾವಗಳನ್ನು ಬಿಂಬಿಸುವ ಕೆತ್ತನೆಗಳನ್ನು ಹೊಂದಿರುತ್ತದೆ ಎನ್ನುತ್ತಾರೆ ಹಲವರು. ಅದಕ್ಕೆ ತಕ್ಕಂತೆ ನವರಂಗದ ಕಂಬಗಳಲ್ಲಿ ವಿವಿಧ ವಾದ್ಯಗಳನ್ನು ನುಡಿಸುತ್ತಿರುವವರ ಚಿತ್ರಗಳನ್ನು ಕಾಣಬಹುದು. ನವರಂಗ ಅಂತರಾಳಕ್ಕಿಂತ ದೊಡ್ಡದಾಗಿದ್ದು ಇಲ್ಲಿ ನರ್ತನ,ಗಾಯನ ಸೇವೆಗಳು ನಡೆಯುತ್ತಿರಬಹುದಾದ ಕುರುಹನ್ನು ಕೊಡುತ್ತದೆ. ನವರಂಗವನ್ನೂ ದಾಟಿದರೆ ಸಿಗುವ ಅಗ್ರ ಮಂಟಪದಲ್ಲಿ ಸದ್ಯಕ್ಕೊಂದು ನಂದಾ ದೀಪದ ತರದ ದೀಪವನ್ನು ಬೆಳಗಿಸಲಾಗಿದೆ.
Naganatheshwara temple

ನಂತರ ಸಿಗುವ ಶ್ರೀ ಪಾರ್ವತೀ ಸಮೇತ ನಾಗೇಶ್ವರ ದೇಗುಲದ ಮೂಲ ದೇಗುಲದಲ್ಲಿ ನಾಗೇಶ್ವರನ ಲಿಂಗವಿದೆ. ಹೊರಗಡೆ ಪಾರ್ವತಿಯ ದರ್ಶನವನ್ನು ಪಡೆಯಬಹುದು. ಗರ್ಭಗೃಹದ ಹೊರಗೆ ಅಂತರಾಳ ಎಂದು ಕರೆಯಲ್ಪಡುವ ಕೋಣೆಯಲ್ಲಿ ಅಷ್ಟಮಾತೃಕೆಯರು, ಗಣಪರಿ, ಮಹಿಷಮರ್ಧಿನಿ ಮುಂತಾದ ಶಿಲ್ಪಗಳನ್ನು ಕಾಣಬಹುದು.ಇಲ್ಲಿರುವ ನಾಲ್ಕು ಕಂಬಗಳಲ್ಲಿ ನರ್ತಿಸುತ್ತಿರುವ ಬಾಲೆಯರು, ಹೂ ಬಳ್ಳಿಗಳು ಮುಂತಾದ ಕೆತ್ತನೆಗಳನ್ನು ಕಾಣಬಹುದು, ಅದರಿಂದ ಹೊರಬಂದರೆ ನವರಂಗ. ಅಂತರಾಳವೆನ್ನುವುದು ದೈವಿಕ ಮತ್ತು ನವರಂಗವೆನ್ನುವುದು ಸಾಮಾಜಿಕ/ಲೌಕಿಕ ಭಾವಗಳನ್ನು ಬಿಂಬಿಸುವ ಕೆತ್ತನೆಗಳನ್ನು ಹೊಂದಿರುತ್ತದೆ ಎನ್ನುತ್ತಾರೆ ಹಲವರು. ಅದಕ್ಕೆ ತಕ್ಕಂತೆ ನವರಂಗದ ಕಂಬಗಳಲ್ಲಿ ವಿವಿಧ ವಾದ್ಯಗಳನ್ನು ನುಡಿಸುತ್ತಿರುವವರ ಚಿತ್ರಗಳನ್ನು ಕಾಣಬಹುದು. ನವರಂಗ ಅಂತರಾಳಕ್ಕಿಂತ ದೊಡ್ಡದಾಗಿದ್ದು ಇಲ್ಲಿ ನರ್ತನ,ಗಾಯನ ಸೇವೆಗಳು ನಡೆಯುತ್ತಿರಬಹುದಾದ ಕುರುಹನ್ನು ಕೊಡುತ್ತದೆ. ನವರಂಗವನ್ನೂ ದಾಟಿದರೆ ಸಿಗುವ ಅಗ್ರ ಮಂಟಪದಲ್ಲಿ ಸದ್ಯಕ್ಕೊಂದು ನಂದಾ ದೀಪದ ತರದ ದೀಪವನ್ನು ಬೆಳಗಿಸಲಾಗಿದೆ

Sri Karneshwara temple

ನಾಗೇಶ್ವರನ ಪಕ್ಕದಲ್ಲಿ ಚೋಳೇಶ್ವರ ದೇಗುಲವಿದೆ. ಇದರ ಶಿಲ್ಪಕಲೆ ನಾಗೇಶ್ವರನಿಗಿಂತ ಭಿನ್ನವಾಗಿರುವುದಲ್ಲದೇ ಶಿಲ್ಪಕಲಾ ವೈಭವದಲ್ಲೂ ಮೊದಲಿನದಕ್ಕಿಂತ ಸಪ್ಪೆಯೆನಿಸುತ್ತದೆ. ಹಾಗೇ ಹೊರಬರುವಾಗ ಇತ್ತೀಚೆಗೆ ಸ್ಥಾಪಿಸಿರಬಹುದಾ ಎನ್ನುವಂತಹ ದೇವಾನುದೇವತೆಗಳ ವಿಗ್ರಹಗಳು ಸಿಕ್ಕುತ್ತವೆ. ಇದರ ಪಕ್ಕದಲ್ಲಿ ಸಣ್ಣ ಗುಡಿಯಲ್ಲಿರುವುದೇ ಶ್ರೀ ಕರ್ಣೇಶ್ವರ. ಅರ್ಜುನ ಶಿವನನ್ನು ಮೆಚ್ಚಿಸಿ ಪಾಶು ಪತಾಸ್ತ್ರ್ಹವನ್ನು ಪಡೆದ ಕತೆ ಗೊತ್ತಿದ್ದರೂ ಶ್ರೀ ಕರ್ಣೇಶ್ವರನೆಂಬ ಹೆಸರು ಬಂದ ಬಗೆ ಕುತೂಹಲಕಾರಿಯೇ.ಸದ್ಯಕ್ಕೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲವಾದರೂ ಮತ್ತೊಮ್ಮೆ ಇನ್ನೂ ಹೆಚ್ಚು ತಿಳಿಯೋ ಪ್ರಯತ್ನ ಮಾಡಬೇಕು.


Outer view of temple

ದೇಗುಲಗಳ ಎದುರಿನ ನಂದಿಮಂಟಪದ ಮೇಲ್ಗಣ ನಾಲ್ಕು ಮೂಲೆಗಳಲ್ಲಿ ನಂದಿಗಳಿದ್ದರೆ ಕೆಳಗಿನ ನಾಲ್ಕು ಮೂಲೆಗಳಲ್ಲಿ ನಂದಿ, ತ್ರಿಶೂಲ, ಢಮರುಗ, ಬಳ್ಳಿಯ ಚಿತ್ರಗಳಿವೆ. ಪಕ್ಕದಲ್ಲಿನ ಧ್ವಜಸ್ಥಂಭದಲ್ಲಿ ಗಣಪತಿ ಮತ್ತು ಹೂಗಳ ಕೆತ್ತನೆಗಳನ್ನು ಕಾಣಬಹುದು.

ಶಾಸನಗಳು:
ಬೆಂಗಳೂರು ಎಂಬ ಉಲ್ಲೇಖ ಮೊದಲು ಕಂಡುಬಂದ ಶಾಸನ ಇಲ್ಲೇ ದೊರಕಿದ್ದು ಎಂಬ ಮಾಹಿತಿ ಕೇಳಿದ್ದ ನಾನು ಎಲ್ಲಿದೆ ಶಾಸನ ಎಂಬ ಕುತೂಹಲದಿಂದ ಪ್ರಶ್ನಿಸಿದಾಗ ಅಲ್ಲಿದ್ದವರು ಎದುರಿಗಿದ್ದ ಬಿಲ್ವಪತ್ರೆಯ ಮರದ ಕಡೆಗೆ ಕೈತೋರಿಸಿದರು. ಅಲ್ಲಿ ತೆರಳಿ ಶಾಸನಗಳ ದುರವಸ್ಥೆ ನೋಡಿದಾದ ಕರುಳ ಹಿಂಡಿದ ಭಾವ. ಅಲ್ಪ ಸ್ವಲ್ಪ ಓದಲು ಸಾಧ್ಯವಿದ್ದ ಶಾಸನವೊಂದು ಯಾವ ರಕ್ಷಣೆಯೂ ಇಲ್ಲದೆ ಬಿಸಿಲು ಮಳೆಗೆ ಕರಗುತ್ತಾ ಕಾಲದಲ್ಲಿ ಜೀರ್ಣವಾಗುತ್ತಲಿತ್ತು.
Inscriptions of 10th century AD or before is lieng unprotected
Ways of how can you spoil a sclupture
Ways of how not to keep scluptures !



Quite distubing status of Scluptures !

Dhwaja stamba
ಮಾಹಿತಿ ಮೂಲಗಳು:
೧.http://en.wikipedia.org/wiki/Nageshvara_Temple,_Begur
.http://en.wikipedia.org/wiki/Western_Ganga_dynasty