Monday, July 18, 2011

ದಿನಪತ್ರಿಕೆಗಳ(ಲ್ಲಿ) ಕೊಲೆ

ಇಂದು(೧೮/೭/೧೧) ಬೆಳಗ್ಗೆ ಎದ್ದು ದಿನಪರ್ತಿಕೆ ತೆಗೆದರೆ ಕೊಲೆ ಸುಲಿಗೆಗಳೇ ಮುಖಪುಟದಲ್ಲಿ ರಾರಾಜಿಸುತ್ತಿದ್ದವು. ಇತ್ತೀಚೆಗೆ ಅವುಗಳದೇ ಹಾವಳಿ. ಅಂತರ್ಜಾಲದಲ್ಲೂ ಅದೇ ಸುದ್ದಿ.. ಅದರ ಬಗ್ಗೆ ಯೋಚಿಸುತ್ತಿದ್ದಾಗ ಹೊಳೆದಿದ್ದು ಈ ಕವನ


ದಿನಪತ್ರಿಕೆಗಳ(ಲ್ಲಿ) ಕೊಲೆ

ಇವನ ಹತ್ಯೆ, ಅವಳ ಕೊಲೆ
ಎಲ್ಲೋ ಗಲಭೆ, ಯಾಕೋ ಸುಲಿಗೆ
ದಿನವೂ ದಿನಪತ್ರಿಕೇಲಿ
ಇವುಗಳದ್ದೇ ಹಲಬಗೆ|1

ಇದೇ ಓದಿ ಬೋರಾಯಿತು
ಪುಟ ತಿರುಗಿಸಿ ನೋಡಾಯಿತು
ಕಣ್ಣುಗಳೀಗೆ ರಾಚಿತು ರಾಜಕೀಯ ವಾರ್ತೆ
ಪರರ ತುಳಿದು ತಾವು ಬೆಳೆದ ಭ್ರಷ್ಟರ ಭರಾಟೆ|2|

ಇವೇ ಇವುಗಳಿಗೆ ವಾರ್ತೆ?
ಸುದ್ದಿಗಿಹುದೆ ಕೊರತೆ?
ಬೆವರ ಬಸಿವ ಸಾಧಕರು ಸುದ್ದಿಯಲ್ಲ ಇವಕೆ
ಮುಖ್ಯ ಸುದ್ಧಿ ಮೂಲೆಗಾಕಿ,ಖಧೀಮರದೇ ಫೋಟೋ ಹಾಕಿ
ಕೆಲವು ಸುದ್ದಿ ಹಲುಬಿ ತಿರುಚಿ
ಬರೆವ ಬುದ್ದಿ ಜೀವಿಗಳಿಗೆ ಇಲ್ಲಿಲ್ಲ ಕೊರತೆ|3|

ಜನ ಓದೋದನ್ನೆ ಬರೀತಿವಂತಾರವರು
ಕೊಲೆಗಳನ್ನೇ ಇಷ್ಟಪಡುವರೆಷ್ಟು ಕಲಾವಿದರು?
ಇಹರೇ ಸತ್ತ ಸುದ್ದಿ ಓದಿ ಸಂತೋಷಿಸೋ ಜನರು
ಪುಟ ತುಂಬಿಸೋ ಜಾಹಿರಾತಲೆಲ್ಲೋ ಅವಿತ ಅಪ್ರತಿಮರ
ಆಗಸದಲಿ ಚಿಕ್ಕಿಯಂತೆ, ಬೇಕಾದುದ ಹೆಕ್ಕಿ ಓದೋ
ಕರ್ಮ ಶಪಿಸೋ ಜನರು
ಎಂದು ನಿಲ್ಲುವುದೀ ರೀತಿ ದಿನಪತ್ರಿಕೆಗಳ(ಲ್ಲಿ) ಕೊಲೆ

No comments:

Post a Comment