Sunday, September 25, 2011

ಅಜ್ಜಿಮನೆ ರಸ್ತೆಯಲಿ


ಅಜ್ಜಿಮನೆ ರಸ್ತೆಯಲಿ, ಕುಲುಕಾಡೋ ಬಸ್ಸಿನಲಿ,
ಅಲುಗಾಡೋ ಬಾಗಿಲು ಮುರಿದಿತ್ತು.
ಆಧಾರ ಬೇಡಿದರೆ ಮೈಮೇಲೆ ಎರಗುವೆ,
ಸ್ವಂತ ಬಲದಲೇ ಏರು ಎಂದಿತ್ತು.
ಅದರಾಸರೆಗೆ ಕಟ್ಟಿದ ಪ್ಲಾಸ್ಟಿಕು
ಹಗ್ಗದಾಸೆಯೂ ಹರಿದು ಹೋಗಿತ್ತು
ಅದ ಹಿಡಿದ ಆತನೇ ಅದಕೊಂದು ಆಧಾರ,
ಎಲ್ಲರೂ ಒಂದೇ ಎಂಬೋನ ಉಪಕಾರ

ಅರಿಯಲಿರೆ ಒಳನೋಟ ಎಲ್ಲ ಜೀವನ ಪಾಟ,
ಅದಿಲ್ಲದಿರೆ ಎಲ್ಲ ಬರಿಯ ಕಾಟ
ಬಸ್ಸು ಜೀವನ ಯಾತ್ರೆ ,ಡ್ರೈವರನೇ ಪರದೈವ
ಘಾಟಿಗಳ ದಾಟಿಸಿ , ಅಪಘಾತ ತಪ್ಪಿಸು.
ಬೇಕೆಂದೆಡೆ ನಿಲುಗಡೆ ಕೊಡುವ ಸಮಯ ಕಂಡಕ್ಟ್ರು
ದೂರಕ್ಕೆ ಗುರಿಯಿಟ್ಟು ಮುಂಚೆಯೇ ಇಳಿದರೂ
ತಡೆಯದ ಅವನಾ ವೃತ್ತಿಪರತೆ

ಗುರಿಬಂದ ತಕ್ಷಣ ಎಚ್ಚರಿಸಿ ಇಳಿಸೋದ
ಎಂದಿಗೂ ಇನಿತೂ ಬಿಡದಾತನು

ಪ್ರಶಸ್ತಿ.ಪಿ

No comments:

Post a Comment