Monday, September 26, 2011

ಹಾಯ್ಕು ??

.ಅಕ್ಷಯ, ಹೆಸರಂತ ಆರೋಗ್ಯ
ಲೆಕ್ಕಿಸದೆ ಕುಡಿದ ಧೂಮ
ಅವನೀಗ ಕ್ಷಯರೋಗಿ ಚಿಕಿತ್ಸೆಗೆ
ಹಣವೆಲ್ಲ ನೀರ ಮೇಲಿನ ಹೋಮ

.ನಿಂಪ್ರೇಮ ಪ್ರದರ್ಶನಕ್ಕಿಡಬೇಡಿ
ಎಂಬ ಫಲಕ ಸೆಳೆಯಿತು ಕಣ್ಣ
ಅದೇ ಈಗ ಪಾರ್ಕಲ್ಲಿ
ಪ್ರೇಮಿಗಳ ನೆಚ್ಚಿನ ತಾಣ



. ಅವ ಬಂದ ಇವ ಬಂದ ಡೇಟಿಗೆ ಪಾರ್ಕಲ್ಲಿ
ಅನಿರೀಕ್ಷಿತ ಭೇಟಿ, ಹಲವರ್ಷದ ಕಥೆ
ಪ್ರೇಯಸಿ ಬರಲಿಲ್ಲವೆಂದಿಬ್ಬರಿಗೂ ಗಲಿಬಿಲಿ
ದೂರದಿಂದ್ಲೇ ನೋಡಿವ್ರ ಅವಳಿದ್ಲು ಶಾಕಲ್ಲಿ

.ಪ್ರಕೃತಿಯೊಂದಿಗೆ ಬದುಕಿ, ವಿಷ ಬಿಡಿ
ಅಂತ ಭಾಷಣ ಕುಟ್ಟುತ್ತಿದ್ದ ಬುದ್ದಿಜೀವಿ
ಈಗ ಅವನದೇ ಪ್ರಕೃತಿ ಕಂಪೆನಿಯ ವಿಷ
ಮೀನುಗಳು ಸತ್ತಿವೆ, ಮನುಷ್ಯರ ಕಥೆ ಬಿಡಿ

. ಗೋಗರೆದ ಜನರೆದುರು ಗೋಳ ಕೇಳಿ ನಂದು
ಯಾರೂ ಕಿವಿಗೊಡಲಿಲ್ಲ ದಿನವೂ ಇದೆಯೆಂದು
ಅದನೆ ಕಲೆ ಹಾಕಿದ ಪ್ರೇಮಕವನಗಳೆಂದು
ಕೇಳುತ್ತಿದ್ದಾರವರೆ ಈಗ ಇನ್ನೊಂದು, ಮತ್ತೊಂದು

. ಪರಿಸರಮಾಲಿನ್ಯದ ಬಗ್ಗೆ ವಿಪರೀತ
ಮಾತಾಡಿದವಗೆ ಬಿಸ್ಲೇರಿ ಬೇಕಾಯಿತು
ಕುಡಿದಾದ ಮೇಲೆ ಇನ್ನೇನು ಬಾಟಲಿ
ಅಲ್ಲೇ ಬಿಸಾಡಬೇಕಾಯಿತು

. ಕೈಮೇಲೆ ಬರಿಬೇಡ, ಬಸ್ ಟಿಕೇಟ್ ಬಿಸಾಕು
ಎಂದೊಂಬ್ಬ ಇನ್ನೊಬ್ಬ ಬುಕ್ಕಿತ್ತ ಬರಿಯಿಂದು
ಅವನೀಗ ಚಿತ್ರ ವೀಕ್ಷಿಸಿ ವಾವೆನ್ನೋ ಪ್ರೇಕ್ಷಕ
ಇವನೀಗ ಅದೇ ಚಿತ್ರದ ನಿರ್ದೇಶಕ

. ಖುಷಿ ಕೊಡೋದು ಕವನ ಅಂದ
ಅವ, ವಾ.. ಎಂಥಾ ಕವಿ ಅಂದ್ರು
ಇಬ್ರನ್ನೂ ಜೊತೆಗೆ ನೋಡಿದ ಮೇಲೆ
ಗೊತ್ತಾಯ್ತು ಅವಳು ಕವನ ಅಂತ

. ಮರ ಎಲ್ಲ ಕಡಿತೀರಿ ವಿವೇಕವಿಲ್ಲ
ಬೆಂಕಿಪೊಟ್ಟಣಕ್ಕೆಷ್ಟು ಮರ ಗೊತ್ತ
ಎಂದ ಬುದ್ದಿಜೀವಿ ಚಿಂತೆ ಹೆಚ್ಚಾಯ್ತೆಂದು
ಪ್ಯಾಕೆರೆಡು ಸಿಗರೇಟು ಸುಟ್ಟ

೧೦.ಆತ ಬುದ್ಧಿವಂತ, ಸ್ಕೂಲಿಗೆ ಫಸ್ಟು
ವಿದ್ಯಾರ್ಥಿವೇತನ, ಯು.ಎಸ್ಗೆ ಎಸ್ಸು
ಅಲ್ಲಿಂದ ಬರಲಾರ ಆದ ಮದುವೆಯ ಭಾರ
ಲಾಸ್ಟಾದ ಹಿರಿಮಗ ಅಮ್ಮನ ಸಾಕುತಿದ್ದಾನೆ

No comments:

Post a Comment