ಹಳೆತನವು ಬೇಸತ್ತು ಹೊಸತನದ ಹುಡುಕಾಟ
ಶುರುವಾಗಿ ನೆನಪಾದೆ ನನ್ನ ನಲ್ಲೆ
ಕಳೆದಿರುವ ನನ್ನನ್ನೆ ನೆನಪಿಸಿದೆ ಮತ್ತೊಮ್ಮೆ
ಮೌನ ಸಾಗರದಲ್ಲಿ ಕಳೆದೆ ಎಲ್ಲೆ |೧
ಒಡೆದಿಹುದು ಗಾಜಲ್ಲ, ಪ್ರೀತಿ ವಜ್ರ
ಕುಬ್ಜವಾಯಿತೆ ಮನಸ ತಿಂದ ಕನಸು
ಮುರುಟಿದ್ದು ಸುಟ್ಟಿದ್ದು ಮೊಗ್ಗಲ್ಲ ಇನಿಯೆ
ಹೆಚ್ಚಿ ಹಾಕಿದ ಹೃದಯ ತ್ಯಜಿಸಿದುಸಿರು|೨|
ಮಳೆಗಾಲದಾ ಮಿಂಚು, ಗುಡುಗು ಸಿಡಿಲು
ನಿನ್ನ ಪ್ರೀತಿಯ , ಸಿಟ್ಟ , ಮೋಡಿ ಮಡಿಲು
ಮಾತನಾಡದೆ ಮೌನ ದೂರವೇಕೆ ?
ಮೌನ ಚಡಿಯೇಟಿನ್ನು ತಾಳೆ , ಸಾಕೆ.. |೩|
ವ್ಹಾ ಪ್ರಶಸ್ತಿ..:)) ಭಾವಗಳ ಸಾಗರದಲ್ಲಿ ಒಮ್ಮೆ ಕೊಚ್ಚಿ ಹೋಗಿ ಮತ್ತೆ ದಡಕ್ಕೆ ಬಂದಪ್ಪಳಿಸಿದ ಅನುಭವವಾಯಿತು.. ಕಾಣದೆ ಮನಸ್ಸು ಬಿಕ್ಕಿತು ನಿಮ್ಮ ಕವಿತೆಗೆ ಕಿವಿಯಾನಿಸಿ.. ಪದಪ್ರಯೋಗದಲ್ಲಿ ಮೇರೆ ಮೀರಿದ್ದೀರಿ..
ReplyDeleteಮಳೆಗಾಲದಾ ಮಿಂಚು, ಗುಡುಗು ಸಿಡಿಲು
ನಿನ್ನ ಪ್ರೀತಿಯ , ಸಿಟ್ಟ , ಮೋಡಿ ಮಡಿಲು
ಮಾತನಾಡದೆ ಮೌನ ದೂರವೇಕೆ ?
ಮೌನ ಚಡಿಯೇಟಿನ್ನು ತಾಳೆ , ಸಾಕೆ.. |೩|
ಈ ಸಾಲುಗಳಲ್ಲಿ ನೆಲೆಗೊಂಡ ಮನ ಬರಲೊಪ್ಪುತಿಲ್ಲ.. ಮಾತನಾಡದ ನಲ್ಲೆ ನಸು ನಗಲೂ ಇಲ್ಲ..!
ತುಂಬಾ ಧನ್ಯವಾದಗಳು ಪ್ರಸಾದ್ :-)
Deleteಸುಂದರ ಕವನ :)
ReplyDelete