Friday, March 30, 2012

ಹೊಸ ಕೆಲಸದ ತುಮಲಗಳು

(ಹೊಸದಾಗಿ ಕೆಲಸಕ್ಕೆ ಸೇರಿದ ಯುವಕನೊಬ್ಬನ ಮನದ ದುಗುಡಗಳ ಕೆಲ ಎಳೆಗಳನ್ನು ಬಿಡಿಸಲು ಒಂದು ಪ್ರಯತ್ನ)

ಹಲವು ದಾರಿ ಸಿಕ್ಕು ಜೇಬು ಭಾರ
ಹೆತ್ತ ತಾಯ ಕರೆಯೂ  ಕಿರಿಕಿರಿ
ಚಂಚಲೆಯ ಜೊತೆ ಹಲವ್ಯಸನ ಸ್ವಪ್ನ
ಸಾಕೆ ಎತ್ತ ದುಡಿತ , ಹಳೆ ಹೊರೆ..? |೧|

ಭಾವನೆಯಿಲ್ಲದ ಜೇವನವೇಕೆ?
ಗುರಿ ನೂಲಿಲ್ಲದ ಪಟದಂತೆ
ತಾತ್ಸಾರ ಹಾಸು,ಮತ್ಸರದ ಮುಳ್ಳು
ನಿನ್ನೆ ನಾಳೆಗಳ ದೈನೇಸಿ |೨|

ಅವರಿವರ ಮರ್ಜಿ, ಹಚ್ಚು ಬೆಣ್ಣೆ
ಸ್ವಂತಿಕೆಯ ಸಾವೆ ಈ ಕೆಲಸ
ಬಡವ ನಾನು ಭಾವಕ್ಕು ಬರವು
ಮಿತ್ರರ ಪಾಲಿನ ಹಾಸ್ಯ, ಕಸ
ಗುಡಿಸುತ ಹುಡುಕುವೆ ಕಳೆದಿಹ
ನನ್ನನೆ ಸಾಧನೆಯ ದಾರಿಯಲಿ ಅನವರತ|೩|

2 comments:

  1. ಚೆನ್ನಾಗಿದ್ದು ಪ್ರಶಸ್ತಿ :) ಬರೀತಾ ಇರು :)

    ReplyDelete
  2. ತುಂಬಾ ಧನ್ಯವಾದಗಳು :-)

    ReplyDelete