Sunday, April 28, 2013

ಮುದಿ ಮನದ ಮಾತುಗಳು..

ಕಾದು ಸೋತೆನು ನಾನು
ಚೌಕಿಯಾ ಹಾದಿಯಲಿ
ದಕ್ಕೀತೆ ಹನಿ ಪ್ರೀತಿ ಭಿಕ್ಷೆಯಂತೆ ?
ಸಿಡಿದು ದೂರಾದವರು
ಹಿಡಿದು ತಮಗೊಂದಾದಿ
ಬರುವ ಹಾದಿಯ ಕಾವ ಹಕ್ಕಿಯಂತೆ

ಎಲ್ಲ ನನ್ನವರೆಂದೆ ನಲಿವಿನಾ ದಿನಗಳಲಿ
ಮೆರೆದಿದ್ದು ಉರಿವಂತೆ ನೆರೆಕೆರೆಯ ಜನರು
ಸೋಲಲ್ಲಿ ಅವರಿಲ್ಲ, ಧನವಿಲ್ಲ, ನನಗೆಂದು
ಕಣ್ಣೀರು ಕಾಣಿಸದ ಜಾಣತನ, ಮರೆವು

ಬೇಸತ್ತ ಮುದಿಕತ್ತೆಯಂತಿಹುದು ಬಾಳಿಂದು
ಮರೆತಿಹರು ಹೊತ್ತಿದ್ದ ಸಂಸಾರ ಭಾರ
ಕೈಲಾಗದಿಂದೆಂದು ಹೊರದಬ್ಬಿ ಬೀದಿಗೆ
ತುತ್ತೂಟಕೂ ನಾಸ್ತಿ, ಬಾಳೆಲ್ಲ ತಿಮಿರ

ಕಾದಿಹೆನು ‍ಚೌಕಿಯಲಿ ಭಿಕ್ಷೆಗೆಂದು
ಕರುಳಬಳ್ಳಿಯ ಪೊರೆದ ಶಿಕ್ಷೆಗೆಂದು !
ಮೆರೆವಾಗ ತೊರೆದಿದ್ದ , ಬೆದರಿದ್ದ ಗೆಳೆಯರಲೆ
ಒಬ್ಬನಾದರೂ ಸಿಗುವ ಇಚ್ಚೆಯಿಂದ
ಕೋಪ, ಏಟೇ ಮೇಲು
ಸಹಿಸೆನೀ ತಾತ್ಸಾರ
ಮುಗಿಸಿಬಿಡಿ, ಕೃಶದೇಹಿ ಎನ್ನಲೆಂದು
ಶಾಪವಾದರು ಬೇಡೆ ಪ್ರೀತಿಯಿಂದ

http://prashasti-prashantavanam.blogspot.in/2013/04/blog-post_24.html
ನ ಮುಂದುವರೆದ ಭಾಗದಂತಾದರೂ ಇದನ್ನು ತೆಗೆದುಕೊಳ್ಳಬಹುದು..

ಇದು ಜೀವನದ ಸಂಜೆಯಲ್ಲಿ ಕರುಳಬಳ್ಳಿಗಳಿಂದ ತಿರಸ್ಕೃತಗೊಂಡ ಮುದಿ ಜೀವಗಳ ಬಗ್ಗೆ ಬರೆವ ಯೋಚನೆಯಲ್ಲಿ ಮೂಡಿದ್ದು.. ಹಾಗಾಗಿ ಇದು ಚಿತ್ರಕ್ಕಿಂತ ಹೊರಬಂದು ಬೇರೆಯದೇ ಹಾದಿಯಲ್ಲಿ ಸಾಗಿದಂತೆನಿದರೆ ಕ್ಷಮಿಸಿ..
ಸ್ಪೂರ್ತಿಯೆಂತೂ ಮತ್ತದೇ ಶ್ರೀವತ್ಸ ಕಂಚೀಮನೆಯವರ ಚಿತ್ರ..

4 comments:

  1. ಚಿತ್ರ ಅದೇ ಆದರೂ ಭಾವಗಳು ಬೆಳೆಯುತ್ತ ಹೋಗಿ ಘನ ಕವಿತೆಯಾದ ಪರಿ ಚಂದ...

    ReplyDelete
  2. ಕೆಲವು ಚಿತ್ರಗಳು, ಪತ್ರಗಳು ನೆಲವಿದ್ದಂತೆ
    ಬಗೆದಷ್ಟು ಇಳಿಯಬಹುದು ಆಳಕ್ಕೆ
    ಸಿಕ್ಕ ಪದರ ಉದರದ ಮೇಲೆ ನಿಂತಿರುವ ಹೃದಯಕ್ಕೆ ತಾಕಿದಾಗ
    ಬಿಂದುವಾಗಿ ಹರಿವುದು ಕಣ್ಣಲ್ಲಿ ಮುತ್ತಿನ ಧಾರೆ!

    ಸುಂದರ ಗೆಳೆಯ ಇಷ್ಟವಾಯಿತು

    ReplyDelete
  3. ವೃದ್ಧಾಪ್ಯವೇ ಅಪರಾಧ ಸದೃಶ ಬದುಕು! ಗೆಳೆಯ ಇವೆಲ್ಲ ನೋಡುತ್ತಿದ್ದಾರೆ ನನಗೆ ನಾನು ಆ ವಯಸ್ಸಿನವರೆಗೂ ಬದುಕಿರುವುದೇ ಬೇಡ ಅನಿಸಿಬಿಡುತ್ತದೆ.

    ಒಂದೇ ಚಿತ್ರಕ್ಕಾ ಹಲವು ಭಾವಗಳು. ಹೌದಲ್ಲ ನೋಡುವ ಕಣ್ಣೀರಲು... ಎನ್ನುತ್ತಾನೆ ಕವಿಯೊಬ್ಬ.

    ಮನಸ್ಸನ್ನು ವಿಹ್ವಲವಾಗಿಸಿದ ಕವನವಿದು.

    ReplyDelete
  4. ಸಾಲುಗಳು ಇಷ್ಟವಾಯ್ತು :)

    ReplyDelete