Tuesday, August 20, 2013

ತಾರೆಯ ಪ್ರೀತಿ..

ಸ್ತ್ರೀ ಅಂದರೆ ಅಷ್ಟೇ ಸಾಕೆ .. ಹಾಡಿನ ಧಾಟಿಯಲ್ಲಿ ಹೊಳೆದ ಕೆಲವು ಸಾಲುಗಳು

ತಾರೆಯ ಪ್ರೀತಿ..
**********************
ಭಾವನೆಗಳ ಭೂಮಿಯಲ್ಲಿ,
ತಾನೇ ತಾನೆಂಬ ರೀತಿಯಲ್ಲಿ
ಮೂಡಿರುವ ಮೊಗ್ಗಿಗೆ ಹೆಸರು ಬೇಕೆ ?
ಪ್ರೀತಿ ಎಂದರೆ ಅಷ್ಟೆ ಸಾಕೆ ?

ಬಾಳಂತ ಕಾರಿರುಳ ಕಪ್ಪಿನಲ್ಲಿ
ಮಿನುಗೋ ತಾರೆಯ ಬೆಳಕೇ ನಿಶೆಗಾಭರಣ
ಹೊತ್ತು ಮುಳುಗೋ ಹೊತ್ತು ಬೆಳಗೋ ಮುತ್ತು
ಮಿನುಗಿದ ಬೆಳಕ ಸವಿಯು ನಂದೇ ಸ್ವತ್ತು !

ತಾರೆಗಳ ತೋಟದ ಕೂಲಿ ನಾನು
ನಿನ್ನೊಂದು ಕಣ್ಣೋಟಕೆ ಸೋತೆ
ನಿನ್ನ ನಸುನಗುವಲಿ ನನ್ನೇ ಮರೆತೆ
ಮಿಂಚೋ ಕಲೆಯನ್ನ ಅರಿಯೆ ನಾನು
ಒಳಸಂಚು,ದ್ವೇಷಗಳ ಅರಿಯದವನು
ನನ್ನ ಮನ ಕದ್ದಿರುವ ಚೆಲುವೆ
ಮಿನುಮಿನುಗಿ ಕನಸಲ್ಲೂ ಬರುವೆ

ಹಾಲ ಬಿಳುಪಿನ ನಡುವೆ ಕಪ್ಪ ಹುಡುಕಿ
ಹೊಳೆವ ಶಶಿಯ ಮೊಗದಿ ಮಸಿಯ ಕೆದಕಿ
ಪ್ರೀತಿ ಹಣಿಯಲೆಂದೇ ಹುಡುಕಬೇಕೆ ?
ನೀನ್ಯಾರೋ ತಿಳಿದಿಲ್ಲ ಎನ್ನೇ ಕೂಸೇ
ಭಿಕ್ಷೆಯೆಂದೇ ನೀಡಿದನ,ಕೊನೆಯ ಆಸೆ
ಪ್ರೀತಿಗೆ ಸಿರಿತನದ ಹೊನಲೇ ಬೇಕೇ?
ಬಡತನದ ಕೋಪ ನಮ್ಮ ಪ್ರೀತಿಗೇಕೆ ?

4 comments:

  1. Replies
    1. ಧನ್ಯವಾದಗಳು ಕಿಣ್ಣ :-)

      Delete
  2. ಚಂದದ ಭಾವ ..
    ಸ್ತ್ರೀ ಎಂದರೆ ಅಷ್ಟೇ ಸಾಕೇ ? ಸಾಲುಗಳಲ್ಲೇನೋ ಹೊಸತಿದೆ :)

    ಇಷ್ಟ ಆಯ್ತು

    ReplyDelete
    Replies
    1. ಇಷ್ಟಪಟ್ಟಿದ್ದು ಕೇಳಿ ಖುಷಿ ಆತು :-)

      Delete