ಮುಂದುವರೆದ ಭಾಗ:
ಬಿದರ್ತಳ ಊರಿಗೆ ಕಾಲಿಡೋ ಮುಂಚಿನ ಗುಡ್ಡಗಳಲ್ಲಿ ಮೂರ್ನಾಲ್ಕು ತರದ ಮಲ್ಲಿಗೆಗಳು ಕಂಡವು. ಬುಡದಲ್ಲಿ ಕೆಂಪಾಗಿರುವ ಜಾಜಿ ಮಲ್ಲಿಗೆ, ಕಾಕಡ ಮಲ್ಲಿಗೆ, ಮತ್ತಿತರ ಹೆಸರರಿಯದ ಮಲ್ಲಿಗೆಗಳು ಕಂಡವು
 |
ಜಾಜಿ ಮಲ್ಲಿಗೆ; jaaji mallige |
 |
ಕಾಕಡ ಮಲ್ಲಿಗೆ; kakada jasmine |
 |
unknown jasmine #1 |
 |
ಸೂಜಿ ಮಲ್ಲಿಗೆ |
ಬಿದರ್ತಳ ಊರು ತಲುಪೋ ಹೊತ್ತಿಗೆ ಘಂಟೆ ಒಂದಾಗುತ್ತಾ ಬಂದಿತ್ತು. ಹಾಗಾಗಿ ಅಲ್ಲೇ ಮರಗಳ ನೆರಳಲ್ಲಿ ಊಟದ ಕಾರ್ಯಕ್ರಮ. ಇಲ್ಲಿ ಊಟ ಮಾಡುತ್ತಿದ್ದ ನಮಗೆ ಕಣ್ಣು ಸೆಳೆದಿದ್ದು ಕೊಳಿ ಗೂಡು ! ನಮ್ಮ ಕಡೆಯೆಲ್ಲಾ ಪಾರಿವಾಳಕ್ಕೆ ಗೂಡು ಅಂತ ಮಾಡಿದ್ದನ್ನ ನೋಡಿದ ನೆನಪು. ಇದೇನಪ್ಪ ಕೋಳಿ ಗೂಡು ಅಂದ್ವಿ. ಅಲ್ಲಿ ಬೆಕ್ಕು, ಹಾವು, ಕಾಡು ಕಿರುಬನಂತಹ ಪ್ರಾಣಿಗಳು ರಾತ್ರಿ ಹೊತ್ತು ಬಂದು ಮನೆ ಪಕ್ಕದಲ್ಲಿದ್ದ ಕೋಳಿಗಳನ್ನ ಹಿಡಿದು ತಿಂದು ಬಿಡುತ್ತವಂತೆ. ಅದರಿಂದ ಕೋಳಿಗಳ ರಕ್ಷಣೆಗೆ ಈ ಗೂಡು
 |
ಕೋಳಿ ಗೂಡು |
 |
ಎಕ್ಕದ ತರ ಕಾಣುವ ಹೂವು ! |
ಬಿದರ್ತಳದಿಂದ ಕೊಂಚ ಮುಂದೆ ಬಂದು ಜಾರ್ಪಾಸಿ ದುರ್ಗ ಹತ್ತಿಳಿದು ಎತ್ತಿನ ಭುಜದತ್ತ ಸಾಗಿದೆವು.
 |
ಜಾಪ್ರಾಸಿ ದುರ್ಗದ ಪಯಣದಲ್ಲಿ ವಿದ್ರುಮ, ಭಾಗ್ಯ ಮತ್ತು ಗಿರೀಶಣ್ಣ |
ಎತ್ತಿನ ಭುಜ ದೂರದಲ್ಲಿ ಕಂಡರೂ ಅದಕ್ಕೆ ಹೋಗುವ ಪ್ಲಾನಿರಲಿಲ್ಲ. ಅದನ್ನು ದೂರದಲ್ಲೇ ಕಂಡು ಮತ್ತೊಂದು ಮೂಲೆಯಲ್ಲಿ ಕಾಣುತ್ತಿದ್ದ ಅಮೇದಿ ಕಲ್ಲು ಮತ್ತು ಒಲೆಗಲ್ಲುಗಳನ್ನೂ ದೂರದಿಂದಲೇ ಕಂಡು ನಮ್ಮ ಪಯಣ ಛತ್ರಿಗಲ್ಲಿನತ್ತ ಸಾಗಿತು
ಈ ಹಾದಿಯ ಪಯಣವನ್ನು, ಪ್ರಕೃತಿಯ ಸೊಬಗನ್ನು ಮಾತಲ್ಲಿ ಹೇಳುವ ಬದಲು ಅಲ್ಲಿನ ಕೆಲವು ಚಿತ್ರಗಳನ್ನು ಹಾಕಿದರೆ ಅವೇ ಅಲ್ಲಿನ ಕತೆ ಹೇಳುತ್ತದೆ ಅನಿಸುತ್ತದೆ !
 |
ದೂರದಲ್ಲಿ ಕಾಣುತ್ತಿರುವ ಎತ್ತಿನ ಭುಜ
|
ನಡೆದು ನಡೆದು ಸುಸ್ತಾದವರಿಗೊಂದು ವಿಶ್ರಾಂತಿ. ಕೆಲವರ ಬಳಿ ನೀರಿದ್ದರೆ ಕೆಲವರ ಬಳಿ ಮೂಸಂಬಿ, ಗ್ಲೂಕೋಸುಗಳು. ಹಂಚಿ ತಿಂದರೆ ಸ್ವರ್ಗವೆಂಬ ಮಾತಿನ ಸಾರ ಮತ್ತೊಮ್ಮೆ ಅನುಭವಕ್ಕೆ ಬಂದ ಭಾವವಿಲ್ಲಿ
ವಿಶ್ರಾಂತಿಯ ನಂತರ ಎದುರಿಗೆ ಕಾಣುತ್ತಿದ್ದ ಅಮೇದಿಕಲ್ಲನ್ನು ಕಾಣುತ್ತಾ ಅತ್ತ ಸಾಗದೇ ಎಡಭಾಗದ ಛತ್ರಿಕಲ್ಲಿನತ್ತ ಸಾಗುತ್ತಿದ್ದ ಇಳಿವ ಹಾದಿಯನ್ನು ಹಿಡಿದೆವು
 |
ಇಳಿವ ಹಾದಿಯಂತೆ ಕಂಡರೂ ಹತ್ತುವ ಕೆಲಸ ಮುಗಿದಿರಲಿಲ್ಲ ಇನ್ನೂ ! |
 |
ಕಲ್ಲರಳಿ ಹೂವಾಗಿ ! ಬಂಡೆಯ ಮಧ್ಯದಲ್ಲೂ ಜೀವಸೆಲೆಯ ಆಲ ! |
 |
ಇದೊಂತರ ಪಾಚಿ ಕಣ್ರಿ ! |
 |
ಅಬ್ಬಾ , ಅಂತೂ ಕೊಡೆಗಲ್ಲಿನ ಹತ್ರ ಬಂದ್ವಿ ! |
 |
ದೂರದಿಂದ ಸಣ್ಣಕ್ಕೆ ಕಾಣುತ್ತಿದ್ದ ಛತ್ರಿಗಲ್ಲು ಅಥವಾ ಕೊಡೆಗಲ್ಲು ಎಷ್ಟು ದೊಡ್ಡದಿದೆ ಅಂತ ಅದರ ಹತ್ತಿರಕ್ಕೆ ಹೋದಾಗ್ಲೇ ಗೊತ್ತಾಗೋದು ! |
 |
ಕೊಡೆಗಲ್ಲಿನ ಬಳಿ ಕೂತಿರುವ ಜನರನ್ನು ನೋಡಿ ! |
 |
ಕೊಡೆಗಲ್ಲಿನ ಆಚೆ ಕಾಣುತ್ತಿರೋದು ಅಮೇದಿ ಕಲ್ಲು. ಇದರಿಂದ ಎಡಭಾಗದಲ್ಲಿ ಒಲೆ ಹೂಡಿಟ್ಟಂತೆ ಕಾಣುವುದರಿಂದ ಒಲೆ ಕಲ್ಲು ಎಂದು ಕರೆಯಲ್ಪಡುವ ಕಲ್ಲಿದೆ |
 |
ಕೊಡೆಗಲ್ಲಿನ ಕೆಳಗೆ ಒಂದಿಷ್ಟು ಚಾರಣಿಗರೊಂದಿಗೆ ನಾನು |
 |
ಸೂರ್ಯ ಮುಳುಗೋ ಹೊತ್ತಾಗ್ತಾ ಬಂತಾ ಅನಿಸ್ತು ಒಮ್ಮೆ. ಆದ್ರೆ ಇಲ್ಲ. ಕೊಡೆಗಲ್ಲಿನ ತುದಿಗೆ ಹತ್ತಲು ಸುಸ್ತಾಗಿರೋ ಸೂರ್ಯ ಕಂಡಿದ್ದು ಹೀಗೆ ! |
 |
ಕೊಡೆಗಲ್ಲಿನ ಬಳಿ ಗಿರೀಶಣ್ಣನ ಜೊತೆ ನಾನು.. |
 |
ಗಡಿಗಲ್ಲುಗಳು ಅಂದ್ರೆ ಇದೇ ನೋಡ್ರಪ್ಪ |
 |
ಬೆಟ್ಟ ಹತ್ತೋದೇಗೋ ಹತ್ತಿಬಿಟ್ವಿ. ಇಳಿಯೋದು ಸುಲಭ ಅಂದ್ಕೊಂಡ್ರಾ ? ಇಳಿಯೋದು ಅಂದ್ಕೊಂಡಷ್ಟು ಸುಲಭವಲ್ಲ ಅನ್ನುತ್ತಿದ್ದ ಹುಲ್ಲುಗಾವಲು |
 |
ನೋಡೋಕೆ ಮಲ್ಲಿಗೆಯಂತಿರೋ ರಂಜಬಟ್ಟಲು ಜಾತಿಯ ಮತ್ತೊಂದು ಹೂವು |
 |
ಮಾವಿನ ಹೂವಿನ ತರ ಕಾಣೋ(ದೂರದಿಂದ) ಇದು ಅದಲ್ಲ. ಇದ್ರ ಹೆಸ್ರು ಗೊತ್ತಿರೋರಿದ್ರೆ ಹೇಳ್ರಪ್ಪ.. |
ಅಂತೂ ಕೆಳಗಿಳಿದ ನಾವು ರಾಮಲಕ್ಷ್ಮಣರ ಮರವನ್ನು ಕಂಡು ಅಲ್ಲಿಂದ ಮುಂದೆ ನೀರನರೆಸಿ ಸಾಗಿದೆವು. ಗುಂಪಿನ ಹೆಚ್ಚಿನವರು ಜೀಪುಗಳನ್ನರಸಿ ಇಳಿದಲ್ಲೇ ಕುಳಿತಿದ್ರೂ ಬಾಯಾರಿಕೆ ತಾಳಲಾರದ ಎಂಟತ್ತು ಜನರು ಮುಂದೆ ನಡೆದಿದ್ದೆವು. ಸುಮಾರು ಒಂದೂವರೆ ಕಿ.ಮೀ ನಡೆದ ಮೇಲೆ ಅಲ್ಲೊಂದು ಸಣ್ಣ ನೀರ ಝರಿ ಕಂಡಾಗ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ. ಹನಿಹನಿಯಾಗಿ ಎಲ್ಲೆಲ್ಲೋ ಬೀಳುತ್ತಿದ್ದ ನೀರ ಧಾರೆಯನ್ನು ಬಾಟಲಿಗೆ ಗುರಿ ಹಿಡಿದು ಆಂತೂ ಚೂರು ಬಾಟಲಿ ತುಂಬಿದಾದ ಕುಡಿಯೋ ಖುಷಿಯಿದ್ಯಲ್ಲ ಅದನ್ನ ಅಲ್ಲಿ ಹೋಗೇ ಅನುಭವಿಸಬೇಕು !!
ಅಷ್ಟರಲ್ಲಿ ಬಂದ ಜೀಪನ್ನು ಹತ್ತಿ ಹೊಸದಾಗಿ ನಿರ್ಮಾಣವಾಗುತ್ತಿದ್ದ ತೇಜಸ್ವಿ ಪ್ರತಿಷ್ಟಾನದ ಕಟ್ಟಡದ ಹತ್ತಿರ ಬಂದೆವು. ಮಂದಿನ ಬಾರಿ ಅಲ್ಲಿಗೆ ಹೋಗುವಾಗ ಪೂರ್ಣವಾಗಿರಬಹುದಾದ ಕಟ್ಟಡ ಹೇಗಿರಬಹುದೆಂಬ ಕುತೂಹಲ ಈಗಲೇ ಕಾಡುತ್ತಿದೆ !
ಅಲ್ಲಿದ್ದ ನೀರಿನಲ್ಲಿ ಮತ್ತೆ ನಮ್ಮ ಬಾಟಲಿಗಳನ್ನು ತುಂಬಿಸಿಕೊಂಡ ನಾವು ಸೂರ್ಯಾಸ್ತದ ಸೊಬಗನ್ನು ಸವಿದು ಬೇಸ್ ಕ್ಯಾಂಪಿನತ್ತ ಸಾಗಿದೆವು..
ಬೇಸ್ ಕ್ಯಾಂಪಿನಲ್ಲಿ ಚಹಾ ಹೀರುತ್ತಾ ಒಬ್ಬೊಬ್ಬರನ್ನು ಬೀಳ್ಕೊಡುವ ಸಂದರ್ಭ ಮತ್ಯಾಕೋ ಬೇಸರ. ಮತ್ತೆ ಸಿಗೋಣವೆಂಬ ಟಾಟಾಗಳಲ್ಲೂ ಇನ್ಯಾವಾಗ ಸಿಕ್ಕೇವೆಯೋ ಎಂಬ ಸಣ್ಣ ಚಿಂತೆ. ತೇಜಸ್ವಿಯವರ ಭಾವ, ಬಾಪು ರವಿಯವ್ರು, ಹುಚ್ಚರಾಯಪ್ಪನವರು, ಪಾಟೀಲ್ ಅಕ್ಕತಂಗಿಯರು, ಗಿರೀಶಣ್ಣ, ವಿದೃಮ, ಭಾಗ್ಯ, ಕನಫ್ಯೂಸ್ ಆಗುವಷ್ಟು ಗಣೇಶ್ಗಳು, ಮಂಗಳೂರು ಫ್ಯಾಮಿಲಿ, ಬೆಂಗಳೂರವ್ರು, ಅದೆಷ್ಟೋ ಪ್ರವಾಸ ಮಾಡಿದವರು, ಪುಸ್ತಕ ಬರೆದವರು, ಚಾರಣಿಗರು.. ಹಿಂಗೆ ಅದೆಷ್ಟೋ ತರ ತರ ಭಾವಗಳ ಕಂಡ ಖುಷಿ
ಅಂದ ಹಾಗೆ ಸ್ನೇಹಿತರೊಬ್ಬರು ಈ ಪ್ರವಾಸದ ಬಗ್ಗೆ ಬರೆದ ಲೇಖನ times of india ದಲ್ಲಿ ಪ್ರಕಟವಾಗಿದೆ ಎಂಬ ಖುಷಿಯಲ್ಲಿ.. ಮತ್ತೊಮ್ಮೆ ವಿಸ್ಮಯ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಭಾಗವಹಿಸೋ ಕಾತುರದಲ್ಲಿ..
ನಿಮ್ಮೊಲುಮೆಯ
ಪ್ರಶಸ್ತಿ
No comments:
Post a Comment