Thursday, October 13, 2011

ಕರೆಂಟಿಲ್ಲದೆ

ಕರೆಂಟಿಲ್ಲದೆ ಕಿರಿಕಿರಿಯೆಲ್ಲ
ಪಟ್ಟಿ ಮಾಡಲು ಒಂದೆರಡಲ್ಲ
ರಾತ್ರಿ ಮೆಸೇಜಿಗೆ ಉತ್ತರವಿಲ್ಲ
ಮುನಿದ ಗೆಳತಿಗೆ ತಿಳಿಸಲಿ ಹೇಗೆ
ತಂಟೆಯ ತಮ್ಮನ ತಣಿಸವುದೇಗೆ? |1|

ಏನ ಕೇಳಲಿ ಬ್ಯಾಟರಿಯಿಲ್ಲ
ಪೇಟೆಗೆ ಗಂಟೆ, ಹಳ್ಳಿಗೆ ತಂಟೆ
ತೆಗೆಯುವ ನೀವು ಯಾಕೀಗೆಂದು
ಅರಿಯೆವು ನಾವು ವಟವಟವೆಂದು
ಏಳುವ ಅಜ್ಜಿಗೆ ಮಧ್ಯರಾತ್ರಿಗೆ
ಓದೋ ತಂಗಿಗೆ ಬರುವೆಕ್ಸಾಮಿಗೆ
ಹುಡುಕುತಾ ದೀಪವ ಕೂರೋ ಶಾಪ|2|

ಅಂಗಡಿಯಿಟ್ಟೆ ಹಾಲು ಮೊಸರಿಗೆ
ಪ್ರಿಜ್ಜಲೂ ಕೊಳತದಿ ನಿಮ್ಮ ಚೇಷ್ಟೆಗೆ
ರಾತ್ರಿಯೂ ಉಳಿಸುವ ಖಾತರಿಯಿಲ್ಲ
ಏನ ಹುಡಕಲಿ ಬರಡು ಬದುಕಿಗೆ |3|

ಭೂಮಿಯ ನಂಬಿ ಬೆಳೆಯ ಬಿತ್ತಿದೆ
ಜಲವನ್ನು ನಂಬಿ ಮೊಟಾರಿಕ್ಕಿದೆ
ಜವರಾಯನಂತೆ ಬಂದೆಯ ಸ್ವಾಮಿ
ಕರೆಂಟೆ ಇಲ್ಲ ತ್ರೀಫೇಸೆಲ್ಲಿ?
ಒಣಗಿ ಸಾಯುತಿಹೆ ಮಕ್ಕಳು ಇಲ್ಲಿ

2 comments:

  1. ಕವಿತೆ ಲಯಬದ್ಧತೆಯನ್ನು ಕಂಡುಕೊಂಡಿದೆ ಪ್ರಶಾಂತ್‍. ಉತ್ತಮ ಸಮಾಜಮುಖಿ ವಸ್ತುವಿಷಯ ನಿಮ್ಮದೇ ಆದ ಆಲೋಚನೆಯಲ್ಲಿ ಬೆಳೆದು ನಿಂತಿದೆ.ಅಭಿನಂದನೆಗಳು.

    ReplyDelete
  2. ಧನ್ಯವಾದಗಳು ರವಿ ಅವರೇ :-)

    ReplyDelete