Welcome to Prashantavanam
Wednesday, August 10, 2011
ಬೇಸರದ ಬಿಸಿಲಿಗೆ ಬಾಡಿದೆ ಮನಲತೆಯು
ಬೇಸರದ ಬಿಸಿಲಿಗೆ ಬಾಡಿದೆ ಮನಲತೆಯು
ನಂಬಿ ಕೆಟ್ಟಿಹ ನೋವು ಸುಳಿದಾಡುತಿಹುದು
ವಾತ್ಸಲ್ಯ ನೀರಿಲ್ಲ, ಸ್ನೇಹದ ನೆರಳಿಲ್ಲ
ನೈಜತೆಯ ಮುಖಕೊಡೆವ ನಗೆಯ ಮುಖವಾಡ
ತರಕಾರಿ ಕೊಟ್ಟರೂ ತಪ್ಪಿಲ್ಲ ತಕರಾರು
ಉಪಕಾರ ನೆನಪಿಲ್ಲ, ದೈನತೆಯ ಅರಿವಿಲ್ಲ
ಕೆಳ ಕೆಳಗೆ ಎಳೆವುದೇ ದಿನ ಕಾಯಕ
ಇದಕೆ ಬಗ್ಗದೆ ಇಹುದೆ ನಿರ್ಣಾಯಕ
ಅರಿಯದ ಮರುಳನಿಗೇಕೆ ದು:ಖ ಲತೆಯೇ?
ಅರಿವಾಸೆ ಇರುವವರು ಹೇಳದುದನರಿವರು
ಅರೆಮನಸಲಿರುವವಗೆ ಹೇಳೂ ಸುಖವಿಲ್ಲ
ಇದ್ದಲನೆ ಬಯಸುವ ಚಿನ್ನದವನಿರುವಾಗ
ಸಿಗದ ಜಡದವಗೇಕೆ ನಿನ್ನ ಕೊರಗು?
ನಿನ್ನಿಂದ ಹಣ್ಣಾದ ಹಕ್ಕಿಗಳ ಪಾಲಾದ
ಫಲದಲ್ಲಿ ನೀನಿರುವೆ, ಮತ್ತೆ ಹುಟ್ಟುವೆ ನೀ
ಹರಿದಂಗಿಯಂತೆ ನಿನ್ನೀ ಬಡ ದೇಹ
ಹೊಸದು ಕಾದಿಹುದು ,ಅಳಬೇಡ ಲತೆಯೆ
ಚಿತ್ರಕೃಪೆ: ವಿಜಯಕಾಂತ ಪಾಟೀಲ, ಗೂಗಲ್
Subscribe to:
Post Comments (Atom)
No comments:
Post a Comment