ನೂರೆಂಟು ಮಾತು ಅಲ್ಲಲ್ಲೆ ಅವಿತು
ಹೊರತಂತು ವಿರಹ ಬರಹ
ಮೀಟಿ ಸೋತೆ ನಾ ಪ್ರೀತಿ ತಂತಿ
ಕೊಡದಾದೆ ದುಡಿದು ವರಹ
ನಾ ಜಲ್ಲೆಯಂತೆ ನೀ ಹರಿವ ಹಾಲು
ಬೇರಾದೆ ನೂರು ತರಹ
ನಾನು ಹಕ್ಕಿ , ಅರೆ ಹಕ್ಕಿ ನೀನು
ಹುಡುಕೋಣ ಪ್ರೀತಿ ಕಾಳ
ಎಂದುಸುರಿ ಒಮ್ಮೆ, ಕಲಿಸಿದ್ದೆ ಕನಸ ಬಾಳ
ಅಂದರಿಯದಾದೆ ನಾ ಪಾರಿವಾಳ
ನೀ ಹೊಂಚಿ ಕಾಯೋ ಗಿಡುಗ
ಮನಸಿಟ್ಟ ನನಗೆ ಕೈ ಕೊಟ್ಟೆಯಲ್ಲೊ ಹುಡುಗ
ಕವನ ಚೆನ್ನಾಗಿದೆ. (ಎಲ್ಲವೂ).
ReplyDeleteಬ್ಲಾಗೂ ಚೆನ್ನಾಗಿದೆ. ಇನ್ನೊಮ್ಮೆ ಓದಿ ಪ್ರತಿಕ್ರಿಯಿಸುತ್ತೇನೆ. ಮುಂದುವರೆಯಲಿ. ಕವನಕ್ಕಿಂತಲೂ ಇಷ್ಟವಾಗಿದ್ದು ಲೇಖನವೆನ್ನಬಹುದಾದ ಹರಟೆಗಳು. ಖುಷಿಯೆನಿಸುತ್ತದೆ.
chennagide
ReplyDelete