ಕಟ್ಟೆರ ಕಚ್ಚಿದೆ, ಕಪ್ಪನೆ ಕಟ್ಟೆರ
ಅಂಗುಲಿ ಅಂಗುಲ ಉರಿ ಭಾರಿ
ಕಾಲ ಮೇಲೆಲ್ಲಾ ಮುತ್ತಿ ಕಚ್ಚಲು
ಕಾಲ್ಕೀಳುವುದೊಂದೇ ದಾರಿ
ಪರಿಪಾಟಲನು ನೋಡಿ ನಗುವೆಯಾ?
ಕಚ್ಚಿದ್ದು ನಿನಗಲ್ಲ ಪ್ರಭುವೆ ಹರಿ
ಹೆತ್ತ ತಾಯಿಯ ಗರ್ಭದಿ ಒದ್ದೆ
ಹೊತ್ತ ಭೂಮಿಯ ಒಡಲನೆ ಬಗೆದೆ
ನ್ಯಾಯನೀತಿಗಳ ಮೂಲೆಗೆ ಒಗೆದೆ
ನೀ ಬಗೆದೆ ಇರುವೆ ಈ ಕರಿಕೋಟು
ಸಂತೋಷವೆಂಬ ವರದಿಯ ಕಟ್ಟೆರ
ನಿನ್ನಾಸೊಕ್ಕಿಗೆ ಕಚ್ಚಿದೆ ಕಟ್ಟೆರ
ಇದ್ರ ಎರಡನೇ ಪ್ಯಾರಾವನ್ನು ಹೀಗೆ ಬರೀಬೇಕಂತಿದ್ದೆ..
ಅದು ಈಗ ಮೂರನೇದು ಅಂತನಾದ್ರೂ ಓದ್ಕಳಿ
ತಾ ಮಲಗಿದ್ದರೂ ಇತರರೆಚ್ಚರಿಸೊ ಜಗದೋದ್ದಾರಕ ನೀನಂತೆ
ತುಳಿವವಗೆ ಉಳಿಗಾಲವಿಲ್ಲ ಎಂದೆಚ್ಚರಿಸಿದೆ
ನಿದ್ರೆಯಿಂದ ನನ್ನೆತ್ತಿದೆ ದೇವ
ಮನ್ನಿಸೋ ಮಹೇಶ
ಕಾಯೋ ಲಕ್ಷ್ಮೀಶ
ಪ್ರಶಸ್ತಿ.ಪಿ
No comments:
Post a Comment