ಭಕ್ತ ಮಾರ್ಕಂಡೇಯ ನಾಟಕದ ಕೊನೆಯ ಸನ್ನಿವೇಶ. ಸಾಯಬೇಕಾಗಿದ್ದ ಮಗ ಶಿವಕೃಪೆಯಿಂದ ಬದುಕಿ ಬಂದುದನ್ನು ತಿಳಿದ ವೃದ್ದ ತಂದೆ ತಾಯಿ ಪರಶಿವನನ್ನು ಸ್ತುತಿಸೋ ಪ್ರಸಂಗ.. ಈ ಸಂದರ್ಭಕ್ಕೆ ಹಾಡೊಂದು ಬೇಕು ಅಂತ ದೊಡ್ಡಪ್ಪ ಹುಡುಕ್ತಾ ಇದ್ದರು. ಆಗ ಹೊಳೆದ ಸಾಲುಗಳು..
ಪರಮೇಶ್ವರನೇ ಪಾರ್ವತಿಪತಯೇ
ನೀಲಕಂಠನೇ ನಮೋ ನಮೋ
ವಿಷವನೆ ಹೀರಿದ ಯಮನನೆ ತಡೆದ
ಮೃತ್ಯುಂಜಯನೇ ನಮೋ ನಮೋ
ಅಲ್ಪಾಯುಷಿಯನು ಅಮರನಾಗಿಸಿದೆ
ಮಸಣವಾಸಿಯೇ ನಮೋ ನಮೋ
ಮರಣ ಶಯ್ಯೆಯ ಮಗನ ಬದುಕಿಸಿದೆ
ಮುಕ್ಕಣ್ಣ ದೇವ ನಮೋ ನಮೋ
No comments:
Post a Comment