ಭಾವ ತೇರಲಿ ಕಳೆದ ಕಾಲ ನಾ
ಸವಿಯ, ನಿನ್ನ ಮಿಲನ
ಎದುರು ಕಾಯುತ ಕೊರಗೋ ಕ್ಷಣಗಳೇ
ಸಾವಿನಾಲಿಂಗನ|1|
ಅಲುಗೋ ಹೂವಲ್ಲಿ ಕಂಡೆ ಪ್ರಿಯೆ
ನೀ ತಿರುಗಿ ನಕ್ಕ ನೆನಪ
ಸವಿಯೊ ಬಯಕೆಯೇ , ಬೆಣ್ಣೆಯೇಕೆ
ತರಲೇ ಚಂದ್ರ, ತುಣುಕ ? |2|
ಎಲ್ಲ ಕಷ್ಟ , ಬಿಸಿ ನಾನು ಮರೆಸುವೆ
ಐಸ ಕ್ಯಾಂಡಿಯಂತೆ
ಕರಗಿ ಹೋಗುವೆ , ನೆನಪ ಸಿಹಿಯುಳಿಸಿ
ಹೊತ್ತು ಜೊತೆಗೆ ಚಿಂತೆ|3|
ನಿನ್ನ ಮಾತೆಲ್ಲ ಗಾನ ಕೋಗಿಲೆ
ಮಾಮರವು? ನಾನೆ ಬರುವೆ
ಒಂದು ನಗುವಿಗೇ ಎಲ್ಲ ಜೀವನ (?)
ಸ್ವರ್ಗ ಎನಿಸಿಬಿಡುವೆ|4|
(ಒಂದು ಟ್ಯೂನ್ಗೆ ರೊಮ್ಯಾಂಟಿಕ್ ಬರ್ಯೋ ಅಂತ ಕೇಳ್ತಿದ್ದ ಗೆಳೆಯ ಶಿಶಿರ . ಆದ್ರೆ ಈ ಸಲನೂ ಅದು ಅದೇ .. )
ತನುವಂತೆ ಮನವು, ಕಳೆ ಕಳೆದು ಒಣಗಿ
ಬೇಸತ್ತು ನೀರ ಕಾದು
ಎಂದು ಬರುವೆಯೋ ಎಂದು ಬೀಳುವುದೊ
ಬಾಳ ಬಿಸಿಗೆ ಸೆಟೆದು
ಚೆನ್ನಾಗಿದೆ ಪ್ರಯತ್ನ..ಕಷ್ಟ ಓದಲೆ , ಇದಕ್ಕೆ ಇನ್ನೂ ಲಲಿತವಾದ ಶಬ್ಧ ಬಳಸಬೇಕು ..
ReplyDeleteತುಂಬಾ ಧನ್ಯವಾದಗಳು. ಮುಂದಿನ ಸಲ ಬರೆಯುವಾಗ ಪ್ರಯತ್ನ ಮಾಡುತ್ತೇನೆ :-)
ReplyDelete