ಬೀರು , ವಿಸ್ಕಿಗಳ ನಡುವೆ ಕರಗದೆ
ಹಲವು ಹೊಗೆಯಲಿ ಉಸಿರುಗಟ್ಟದೇ
ಹೇಯ ತಾಣದಲಿ ಮನಸ ತೆತ್ತದೇ
ಉಳಿಯುವುದೊಂದೇ ಬದುಕೆ ಸಖಿ ?
(ಈ.ಕೀ ಭಟ್ಟರ ಕ್ಷಮೆ ಕೇಳುತ್ತಾ .. )
ಪ್ರೀತಿಯಿಲ್ಲದ, ಮನದ ಮೋಜಿಗೆ
ಸರಿಯೇ ಈ ತರ ಸ್ವೇಚ್ಛೆ, ರೇಜಿಗೆ
ಒಳ್ಳೆಯವನೆ ಮನೆಗೆ, ಮನಕೆ ?
ನನ್ನ ದೃಷ್ಟಿಯನೆ ಸಹಿಸೆ ಸಖಿ
ಏನೋ ಮಗನೆ, ಹೇಗಿದ್ದೀಯ
ಎಂದು ತಾಯ ಕರೆ
ಏನು ಉತ್ತರ ?
ಕಳೆದೆ ಜೂಜಲಿ, ಹಣದ ಹೊಳೆಯಲಿ
ಮೋಹಿನಿ ನಗುವಲಿ, ಹೊಗೆಯ ಉಸಿರಲಿ
ಎಂದೇ ?
ನನ್ನ ದ್ವನಿಯೂ ಕೇಳದಷ್ಟು
ಪಾತಾಳದಲ್ಲಿ ಕೈಕಾಲು ಕಟ್ಟಿ
ಬೆಂದು ಬಿದ್ದಿರುವೆ
ಕಳೆದಿಹ ನನ್ನ ಹುಡುಕೆ ಸಖಿ..
ಮತ್ತೆ ಹಳೆಯ ’ನಾನು’ ತಾರೆ ಸಖಿ
ಸಖಿ ನನ್ನ ಟ್ರೇಡ್ ಮಾರ್ಕಲ್ಲ ಪ್ರಶಸ್ತಿ :) ಚೆನ್ನಾಗಿದೆ... ಹಕ್ಕಿಗಳೆಲ್ಲಾ ಚೆನ್ನಾಗಿ ಕೂತು , ಫೋಟೋ ತೆಗೆಯಬೇಕೆನಿಸುವಷ್ಟರಲ್ಲಿ ಹಾರಿಹೋದಂತೆನಿಸಿತು.. ಯಾಕೆ ಹೀಗಂದೆ ಎಂದರೆ, ಕವನದ ಮೊದಲ ಓಘ ನಂತರ ಕಡಿಮೆಯಾದಂತನಿಸಿತು.. ಮುಂದುವರೆಯಲಿ.
ReplyDeleteಧನ್ಯವಾದಗಳು ಕಿಣ್ಣಣ್ಣ.. ಪ್ರಾಯಶ: ಹಕ್ಕಿಗಳಿಗೆ ನಾನು ಹಾಕಿದ ಕಾಳು(ಓದು ) ಕಮ್ಮಿ ಆಗಿರಬಹುದು :-) ಹೆಚ್ಚೆಚ್ಚು ಕಾಳು ಹಾಕಿದಂತೆಲ್ಲಾ ಅವು ಹೆಚ್ಚೆಚ್ಚು ಹೊತ್ತು ಕೂರಬಹುದೇನೋ .. ಪ್ರಯತ್ನಿಸುತ್ತೇನೆ :-)
Deleteಕವಿತೆಯೊಳಗೆ ಕ್ಷಮೆ ಕೇಳಬೇಡಿ. ಈ ಭಾವ ಯಾಕೆ ನುಸುಳಿತೋ ಅಂತ ಆಶ್ಚರ್ಯವಾಯಿತು. ಪ್ರೇರಿತ ಮತ್ತೊಂದು ಹೊಸ ನವೋಲ್ಲಾಸವನ್ನು ತರುವ ಆಯಾಮ ಬೇಕು. ಅದನ್ನು ಮುಂದೆ ನಿರೀಕ್ಷಿಸುತ್ತೇವೆ. ಕವಿತೆ ನಿಮ್ಮ ಮಗುವಾಗಲಿ. ಮುದ್ದಿಸಿ ಲಾಲಿಸಿ ಪದಗಳ ತೊಟ್ಟಿಲಲ್ಲಿ.
ReplyDeleteಕ್ಷಮಿಸಿ ರವಿಯಣ್ಣ. ’ಸಖಿ’ ಎಂದು ಕೊನೆಗೊಳ್ಳುವ ಕವಿತೆಯನ್ನು ಆಗಷ್ಟೇ ಈ.ಕೀ. ಭಟ್ಟರಿಂದ ಓದಿದ್ದೆ. ಆದ್ದರಿಂದ ಪುನ: ಅದರ ಬಳಕೆಗಾಗಿ ಕ್ಷಮೆ ಕೋರಿದೆ ಅಷ್ಟೇ.. ನೀವು ಹೇಳಿದ ದೆಸೆಯಲ್ಲಿ ಪ್ರಯತ್ನಿಸುತ್ತೇನೆ. ಧನ್ಯವಾದಗಳು :-)
Deleteಕೊಳೆಯಲ್ಲಿ ಕಳೆದು ಹೋದ ವ್ಯಕ್ತಿ ಮತ್ತು ವ್ಯಕ್ತಿತ್ವನ್ನು ಹೊಸ ಗಾಳಿ ಬೆಳಕಿಗೆ ತೆರೆಯಲು ಸಖಿಯಲ್ಲಿ ಕೋರಿಕೆ...
ReplyDeleteಬಹಳ ಚೆನ್ನಾಗಿದೆ....
ಧನ್ಯವಾದಗಳು :-)
Delete