ಭಾವವಿಲ್ಲದೆ ಬರೆಯಲಿ ಹೇಗೆ
ಸಾರವಿಲ್ಲದ ಸಾಲುಗಳ
ನೀರೆ ಇಲ್ಲದೆ ಉಳಿಸಲಿ ಎಂತು
ಬಾಳ ಬಳಲಿದ ಪೈರುಗಳ
ಬತ್ತಿದೆ ಕೆರೆ, ನಗು ಅಲೆಯಿಲ್ಲ
ಮೋಸದ ಮೋಡದ ಸುಳಿವಿಲ್ಲ
ಮುನಿಸ ತಾಪ, ತಳ ಬಿರುಕಿದೆಯಲ್ಲ
ಕಳೆಯಲ್ಲೂ ತ್ವಚೆ ಹಸಿರಿಲ್ಲ
ನೀನಾರೋ , ನಾನಾರೋ ಕಳೆದಿರುವ ಕಾಲದಿ
ಇಂದ್ಯಾಕೆ ನೆನಪಾಗಿ ಕಾಡಿಹುದೋ ಬೇಗುದಿ
ಸುಳಿಯೇ ಒಮ್ಮೆ
ನೀ ಹನಿಮಳೆಯಾಗಿ
ಬರ ಕಾಡಿದೆ, ಬದುಕಿಸೆ ಚೆನ್ನೆ
ಬೇಡುತಿಹೆ ಒಣ ನೆಲ ನಿನ್ನೆ
ವಿಭಿನ್ನವಾಗಿ ಭಾವವನ್ನು ಅರಳಿಸಬಲ್ಲಿರಿ. ಸಾಧಾರಣವಾಗಿ ನಿಮ್ಮ ವಯಸ್ಸಿನವರು ತೆಗೆದುಕೊಳ್ಳುವ ವಿಷಯಕ್ಕಿಂತ ನಿಜ ಬದುಕಿನ ದಿಕ್ಕಿಗೆ ಆಳವಾಗಿ ಹೋಗಬಲ್ಲಿರಿ. ಅದು ಇಲ್ಲಿ ನೋಡುತ್ತಿದ್ದೇನೆ. ಸುಂದರ ಭಾವ.
ReplyDeleteಧನ್ಯವಾದಗಳು :-) ಬಹಳ ದಿನಗಳ ಬಳಿಕದ ನಿಮ್ಮ ಭೇಟಿಯಿಂದ ತುಂಬಾ ಸಂತೋಷವಾಯಿತು :-)
Deleteಚ೦ದದ ಸಾಲುಗಳು..
ReplyDeleteಧನ್ಯವಾದಗಳು "ಚುಕ್ಕಿ ಚಿತ್ತಾರ" :-)
DeleteThis comment has been removed by the author.
ReplyDeleteತೀರಾ ನೀನಿಲ್ಲದೆ ಬಾಳಿಲ್ಲ ಅನ್ನೋ ಸ್ಥಿತಿ...
ReplyDeleteಉತ್ತಮ ನಿರೂಪಣೆ ಪ್ರಶಸ್ತಿ...
ಚೆನ್ನಾಗಿದೆ....
-Sushma Moodbidri
ತುಂಬಾ ಧನ್ಯವಾದಗಳು ಸುಷ್ಮಾ ಅವರೇ :-) ಬ್ಲಾಗಿಗೆ ಸ್ವಾಗತ :-)
Delete