ನೀರಿಲ್ಲ ಇಂದು ಬಾವಿಯಲ್ಲಿ
ಇದೆ ಕಾಯೋ ನೂರು ನಲ್ಲಿ
ಬತ್ತಿಹುದು ಅನ್ನದಾತನ ಕಂಗಳಲ್ಲಿ
ಇದೆ ಪಕ್ಕ ಪಾರ್ಕಿನಲ್ಲಿ
ಬಸ್ಸಲ್ಲಿ ಬೇಯುತಿಹೆ, ನೀರು ಖಾಲಿ
ದೂರ ಅಂಗಡಿ, ಕೋಲ ಥೈಲಿ ಖಾಲಿ
ಕಬ್ಬು, ಎಳನೀರವಗೆ ಹಣದ ಪೈರು
ಅದ ಬೆಳೆದು,ಕಡಿವವಗೆ ಇಲ್ಲ ನೀರು
ಮೊಡವೆ ಸಾಲದೆ ಮೈಗೆ ಬೆವರಸಾಲೆ
ಹಲತರದ ದುರ್ಗಂಧ , ಸನಿಹ ತಾಳೆ !
ನೀರಿಲ್ಲದೇ ಅಳುವ ನನ್ನ ಹಕ್ಕಿ
ಕಲ್ಲು, ಕಬ್ಬಿಣದಲ್ಲೂ ಅದನು ಹುಡುಕಿ
ಕುಡಿದಷ್ಟು ಸಾಲದಿದು
ಬೆಂಕಿ ತರಹ
ಅಳಿಸಿತೇನೋ ಬರಹ
ಒರೆಸಿ ಬೆವರ
ಚೆನ್ನಾಗಿದೆ ಕವನ :-)
ReplyDeleteಫೊಟೋವನ್ನು ಬಲಬದಿಗೆ ಇರುವಂತೆ ಮಾದುವುದೊಳ್ಳಿತು. ಒಳ್ಳೆ ಸಾಲುಗಳು
ಮೊಡವೆ ಸಾಲದೆ ಮೈಗೆ ಬೆವರಸಾಲೆ
ಹಲತರದ ದುರ್ಗಂಧ , ಸನಿಹ ತಾಳೆ!
ನೀರಿಲ್ಲದೇ ಅಳುವ ನನ್ನ ಹಕ್ಕಿ
ಕಲ್ಲು, ಕಬ್ಬಿಣದಲ್ಲೂ ಅದನು ಹುಡುಕಿ
ಧನ್ಯವಾದಗಳು ಕಿಣ್ಣಣ್ಣ.. ಸರಿಪಡಿಸಿದ್ದಿ :-)
Deleteಈ ಕೆಳಗಿನ ಸಾಲು ಚೆನ್ನಾಗಿದೆ ..
ReplyDeleteನೀರಿಲ್ಲದೇ ಅಳುವ ನನ್ನ ಹಕ್ಕಿ
ಕಲ್ಲು, ಕಬ್ಬಿಣದಲ್ಲೂ ಅದನು ಹುಡುಕಿ
ಧನ್ಯವಾದಗಳು ಮೂರ್ನಾಡರೇ :-)
Deleteಬಿಸಲ ಬೇಗೆಯ ವಿವಿಧ ಆಯಾಮಗಳನ್ನು ಕವಿತೆಯ ಒಡಲೊಳಗುದುಗಿಸಿದ ಪರಿ ಮನೋಜ್ಞ.. ವಿಶೇಷವಾಗಿ ಶಬ್ಧಗಳ ಪ್ರಯೋಗ ಮನಸ್ಸೆಳೆಯಿತು.. ಬೇಸಿಗೆಯ ಅಡ್ಡ ಪರಿಣಾಮಗಳ ಬಗ್ಗೆ ಪರಿಣಾಮಕಾರಿಯಾಗಿ ಬೆಳಕು ಚೆಲ್ಲಿರುವ ಕವಿತೆ.. ಹಿಡಿಸಿತು..
ReplyDeleteಧನ್ಯವಾದಗಳು ಪ್ರಸಾದ್ :-)
Delete