ಅಕ್ಟೋಬರ್ ೨೨ರ ಮಂಗಳವಾರ. ಅದಾದ ಮೇಲೆ ಮೂರು ದಿನ ದೀಪಾವಳಿ ಮತ್ತೆ ಶನಿವಾರ, ಭಾನುವಾರಗಳಂತ ಐದು ದಿನಗಳ ಸಾಲು ರಜಾ. ರಜಾ ಅಂದ ಮೇಲೆ ಸಹಜವಾಗೇ ಊರಿಗೆ ಹೋಗೋ ಸಂಭ್ರಮ ಮತ್ತು ಬಸ್ಸು ಸಿಗತ್ತೋ ಇಲ್ವೋ ಅದೆಷ್ಟೋ ಟ್ರಾಫಿಕ್ಕೋ ಅನ್ನೋ ತಲೆಬಿಸಿ. ಅದೇ ಸಮಯದಲ್ಲಿ ಚಿಕ್ಕಮಗಳೂರಿನ ದೇವೀರಮ್ಮನ ಬೆಟ್ಟ ಹತ್ತೋ ಪ್ಲಾನಿದೆ ಯಾರ್ಬರ್ತೀರ ಅಂದ್ರು ಭಾಗ್ಯಮ್ಮ. ಈ ಬೆಟ್ಟಗುಡ್ಡಕ್ಕೂ ನಮ್ಗೂ ಸಿಕ್ಕಾಪಟ್ಟೆ ಪ್ರೀತಿಯಾಗಿ ಬಿಟ್ಟಿರೋದ್ರಿಂದಲೋ ಅಥವಾ ವರ್ಷಕ್ಕೊಮ್ಮೆ ಅದೂ ದೀಪಾವಳಿ ಸಮಯದಲ್ಲಿ ಮಾತ್ರ ಹತ್ತೋಕೆ ಬಿಡೋ ಈ ದೇವೀರಮ್ಮನ ಗುಡ್ಡ ಹತ್ತೋ ಭಾಗ್ಯ ಬಿಡ್ಲೇ ಬಾರ್ದು ಅಂತ್ಲೋ ಗೊತ್ತಿಲ್ಲ ನಾನೂ ಬರ್ತೀನಿ ಅಂದ್ಬಿಟ್ಟೆ. ಬೆಂದಕಾಳೂರ ಟ್ರಾಫಿಕಲ್ಲಿ ಕೊಂಚ ಕಮ್ಮಿಯೇ ಅನ್ನುವಷ್ಟು ಬರೀ ಒಂದೂಮುಕ್ಕಾಲು ಘಂಟೆ ಕಾದು ಮೆಜೆಸ್ಟಿಕ್ ತಲುಪಿ ಚಿಕ್ಕಮಗಳೂರಿಗೆ ಆಗ್ಲೇ ಹೋಗ್ತಿರೋ ಬಸ್ಸು ಹತ್ತೋ ಹೊತ್ತಿಗೆ ಒಂಭತ್ತೂಮುಕ್ಕಾಲು. ಜೊತೆಯಾದ್ದು
’ಗಿರಿ--ಶಿಖರ’ ರ ಬ್ಲಾಗಿಗ ಗೆಳೆಯ ಗಿರೀಶ್ ಮತ್ತವರ ಕಾಲೇಜ್ ದೋಸ್ತ ಪೂರ್ಣೇಶ್. ರಾತ್ರೆ ಬಸ್ಸಿರೋದೇ ಮಾತಾಡೋಕೆ ಅನ್ನೋ ಅವರಿಬ್ಬರ ದೆಸೆಯಿಂದ ಅಂತೂ ಇಂತೂ ಚಿಕ್ಕಮಗಳೂರು ತಲುಪೋ ಹೊತ್ತಿಗೆ ಬೆಳಗಿನ ಜಾವ ಮೂರೂಮುಕ್ಕಾಲು. ಇದೇನಿದು ಅವಾಗಿಂದ ಬರೀ ಮುಕ್ಕಾಲುಗಳಲ್ಲೇ ಹೇಳ್ತಾ ಇದೀನಿ. ಅದೇ ಮೂರಾಗಿರೋದ್ರಿಂದ ಮೂರು ಮುಕ್ಕಾಲು ಅಂತಿದೀನಿ ಅಂದ್ಕೊಂಡ್ರಾ ? ನಾವು ಚಿಕ್ಕಮಗಳೂರು ಮುಟ್ಟೋ ಹೊತ್ತಿಗೆ ನಿಜವಾಗ್ಲೂ ಸಮಯ ಮೂರೂ ಮುಕ್ಕಾಲು ಮಾರ್ರೆ. ಬಸ್ಟಾಂಡಿಗೆ ಬರೋ ಹೊತ್ತಿಗೆ ಐದತ್ತು ನಿಮಿಷ ಇಲ್ಲಲ್ಲಿ ಆಗಿರಬಹುದು ಬಿಡಿ :-) ಅಲ್ಲೇ ಬಸ್ಟಾಂಡಲ್ಲಿ ಪ್ರಕೃತಿಗೆ ಓಗೋಟ್ಟು ಮುಂದೆ ಹೋಗೋಕೆ ನಿರ್ಧರಿಸಿದ್ವಿ. ೪೧೫ ಬೆಟ್ಟ, ೪೧೭ ಬೆಟ್ಟ ಅಂತ ನಿರಂತರ ಬೆಟ್ಟಕ್ಕೆ ಹೋಗನಲುವಾಗಿ ಬಿಟ್ಟಿದ್ದ ಸ್ಪೆಷಲ್ ಬಸ್ಸುಗಳ ಬಗ್ಗೆ ಕೂಗ್ತಿದ್ದ ದನಿ ಒಂದಿಷ್ಟು ಸಲ ಕೇಳುವಷ್ಟರಲ್ಲಿ ಇದ್ದ ಅರೆಬರೆ ಮಂಪರು ದೂರಾಗಿತ್ತು.
|
Place from where Devirammana betta trekking begins |
|
ನಾಲ್ಕೂ ಹದಿನೈದಕ್ಕೆ ರೆಡಿಯಾದ ನಮಗೆ ಸಿಕ್ಕಿದ ಬಸ್ಸಿನ ಸಂಖ್ಯೆಯೂ ನಾನೂರ ಹದಿನೈದು (೪:೧೫ --> ೪೧೫) ಆಗಬೇಕೇ ? ಐದರ ಲೆಕ್ಕ ಇಲ್ಲಿಗೆ ಮುಗಿಯೋದಲ್ಲ. ಅಲ್ಲಿಂದ ಬೆಟ್ಟದ ಬಸ್ಚಾರ್ಜು ಕೂಡ ೨೫ ರೂ ಅನ್ನೋದು ಆಶ್ಚರ್ಯ ಆದ್ರೂ ನಿಜ. ಬೆಟ್ಟಕ್ಕೆ ಬರೋರೆಲ್ಲಾ ಬೆಳಗ್ಗೆಯೇ ರೆಡಿಯಾಗಿ ವಿಭೂತಿ ಹಚ್ಚಿ , ಚಪ್ಪಲಿಯಿಲ್ದೇ ಬಂದಿದ್ರೆ ನಮ್ಮದು ಹಿಂದಿನ ದಿನ ಇನ್ನೂ ಸ್ನಾನ ಕಾಣದ ಮುಖ. ಚಪ್ಪಲಿ ಹಾಕಿ ಬೆಟ್ಟ ಹತ್ತುವಂತಿಲ್ಲ ಅಂತ ಗಿರೀಶ್ ಹೇಳಿದಾಗ ಛೇ, ಬಸ್ಟಾಂಡಿನ ಲಗೇಜ್ ರೂಮಲ್ಲೇ ೨-೩ ಕೇಜಿ ತೂಕದ ಭಾರೀ ಬಟ್ಟೆ ಬ್ಯಾಗಿನ ಜೊತೆ ಚಪ್ಪಲೀನೂ ಇಟ್ಟು ಬರಬೇಕು ಅನಿಸಿಬಿಟ್ತು. ದೇವೀರಮ್ಮನ ಬೆಟ್ಟ ಹತ್ತೋಕೆ ಅಷ್ಟು ವಜೆ ಬಟ್ಟೆ ಬ್ಯಾಗೆಂತಕೆ ತಗೋಬಂದೆ ಅಂದ್ಕೊಂಡ್ರಾ ? ಮುಂದೆ ಐದು ದಿನ ರಜ ಅಲ್ಲ ಮಾರ್ರೆ. ಬೆಟ್ಟ ಇಳಿದವ ಹಾಗೇ ಊರಿಗೆ ಹೋಗೋ ಪ್ಲಾನಲ್ಲಿದ್ದವ ನಾನು. ಹಾಗಾಗಿ ಹಬ್ಬಕ್ಕಂತ ತಗೊಂಡ ಅದೂ ಇದು ಅಷ್ಟು ವಜೆ(ಭಾರ)ವಾಗಿತ್ತು. ಆಮೇಲೇನಾಯ್ತು ಅಂತ ಮುಂದೆ ಹೇಳ್ತೀನಿ ಬಿಡಿ. ಒಂದಿಷ್ಟು ಜನ ಜಪ ಮಾಡೋ ಹಂಗಿದ್ರೆ ಮತ್ತೊಂದಿಷ್ಟು ತರುಣರು ಆ ಕತ್ತಲೇಲೂ ಮೊಬೈಲಲ್ಲಿ ಸೆಲ್ಫಿ ತೆಗೆಯೋ ಉಮೇದಲ್ಲಿದ್ರು. ಕತ್ತಲೆ ಎಷ್ಟಿತ್ತು ಅಂದ್ರಾ ? ಕೆಳಗೆ ಹಾಕಿರೋ ಚಿತ್ರ ನೋಡಿ.
|
Pitch Darkness @5:05 AM. Although there are few lights here and there, ppl generally start trekking in midnight with their batteries or mobile lights |
ಅಂತೂ ಸುಮಾರು ನಾಲ್ಕೂ ಐವತ್ತೈದರ ಹೊತ್ತಿಗೆ ಬೆಟ್ಟದ ಬುಡದ ಊರಿಗೆ ತಲುಪಿದ್ರೆ ಅಲ್ಲಿನ ಮಿರ್ಚಿ, ದೋಸೆ, ಬೋಂಡಾ ಅಂಗ್ದಿಗಳ ಜಗಮಗ ನಮ್ಮನ್ನು ಸ್ವಾಗತಿಸ್ತಾ ಇತ್ತು. ಆ ಅಂಗ್ಡಿಗಳ ಮಧ್ಯೆ ಒಂದು ಅಂಗ್ಡಿಯವರತ್ರ ನಮ್ಮ ಚಪ್ಪಲಿ ಇಡೋಕೆ ಇಲ್ಲೆಲ್ಲಾದ್ರೂ ಸ್ಟಾಂಡು ಇದ್ಯಾ ಅಂತ ಕೇಳಿದ್ವಿ. ಇಲ್ಲಿ ಆ ತರ ಏನೂ ಇಲ್ಲ. ನಮ್ಮ ಅಂಗಡೀಲೇ ಹಿಂದ್ಗಡೆ ಕಟ್ಟಿಗೆ ಬುಡದಲ್ಲಿ ಇಟ್ಟು ಹೋಗ್ರಪ್ಪಾ ಪರ್ವಾಗಿಲ್ಲ. ಬೆಟ್ಟ ಹತ್ತೋರಿಗೆ ಇಷ್ಟಾದ್ರೂ ಅನುಕೂಲ ಮಾಡ್ಕೊಡೋಣ ನಮ್ಕಡೆ ಇಂದ ಅನ್ಬೇಕೇ ಅವ್ರು ! ನಮ್ಮಂಗ್ಡೀಲಿ ಹಣ್ಣು/ಹೂವು ತಗೊಂಡ್ರೆ ನಿಮ್ಮ ಚಪ್ಲಿ ಪ್ರೀ ಆಗಿ ಇಲ್ಲೇ ಇಡ್ಬೋದು ಅಂತ ಸುಮಾರಷ್ಟು ಜನ ಆಫರ್ ಕೊಡೋಕೆ ಬಂದಿದ್ದ ಪುಣ್ಯ ಕ್ಷೇತ್ರವನ್ನು ಕಂಡಿದ್ದ ನನಗೆ ಈ ಕಲಿಯುಗದಲ್ಲಿ ಹೀಗೂ ಉಂಟೆ ಅನಿಸಿದ್ದು ಸುಳ್ಳಲ್ಲ. ಈ ಸೇವಾ ಮನೋಭಾವ ಇಲ್ಲಿಗೇ ಮುಗಿಯೋದಲ್ಲ. ಅದರ ಪರಿ ಎಷ್ಟು ಅನ್ನೋದ್ನ ಮುಂದೊಮ್ಮೆ ಹಾಕಿದ್ದೇನೆ ನೋಡಿ. ಚಪ್ಪಲಿಗೊಂದು ವ್ಯವಸ್ಥೆ ಮಾಡಿದ ಮೇಲೆ ೫:೦೫ ಕ್ಕೆ ಕಡುಗಪ್ಪ ಕತ್ತಲೆಯಲ್ಲಿ ನಮ್ಮ ಚಾರಣ ಶುರು ಮಾಡಿದ್ವಿ.
|
ಬೆಟ್ಟ ಹತ್ತೋ ದಾರಿಯಲ್ಲಿ. ಇಲ್ಲಿಯವರೆಗೆ ಇದ್ದ ಸುಮಾರು ಒಂದೂವರೆ ಕಿ.ಮೀ ರ ಟಾರು ರೋಡು ಮುಗಿದು ಇಲ್ಲಿಂದ ಮಣ್ಣ ರಸ್ತೆ ಪ್ರಾರಂಭ |
|
ಸಮಯ ಆರಾಗ್ತಾ ಬಂದಿದೆ. ಮೂಡ್ತಿರೋ ಇಂಚಿಂಚು ಬೆಳಕಲ್ಲಿ ಬಲಗಡೆಯಿಂದ ಇಳೀತಿರೋ, ಎಡಗಡೆಯಿಂದ ಹತ್ತುತಿರೋ ದಂಡಿ ದಂಡಿ ಜನರ ಕಾಣಬಹುದು. ಜನಸಾಗರದ ಮಧ್ಯೆದಲ್ಲಿರೋ ಹೀರೋ ನಮ್ಮ ರೂಪದರ್ಶಿ ಗಿರೀಶಣ್ಣ ;-) |
|
ಬಿಂಡಿಗ ಗ್ರಾಮ ಅಂತ ಸ್ವಾತಗ ಕಮಾನು ಸಿಗ್ತಲ್ಲ, ಅದಾದ ಮೇಲೆ ಜನಜಂಗುಳಿ ವಿಪರೀತ. ಅಲ್ಲಿಂದ ರಸ್ತೆ ಬಿಟ್ಟು ಅತ್ತ ಇತ್ತ ಹೋಗೋ ಅಂತ ಇಂತ ಅನೇಕ ದಾರಿಗಳಿವೆ |
|
ಕಾಫೀ ತೋಟದ ಮಧ್ಯೆ ಗಿರೀಶಣ್ಣ.ಬೇಕಿತ್ತಾ ಈ ಟೈಟಲ್ಲು ಅಂದ್ಕಂಡ್ರಾ ? ಹೂಂ. ನಾನೂ ಅದೇ ಅಂದ್ಕೋತಾ ಇದ್ದೆ ;-) |
|
'ಗಿರಿ'ಯ ಕೈಯಲ್ಲಿ ಮರಿಸೂರ್ಯ |
|
ಚಾರಣದ ಸಂದರ್ಭದಲ್ಲಿ ಸೂರ್ಯೋದಯದ ಸೊಬಗು |
|
ಕಾಫೀ ತೋಟಗಳ ಸಾಲು ದಾಟಿದ್ರೆ ಕಾಣುತ್ತೆ ನೋಡಿ. ಅದೇ ದೇವೀರಮ್ಮನ ಗುಡ್ಡ. ನೋಡೋಕೆ ಹತ್ರ ಅನಿಸಿದ್ರೂ ಹತ್ತೋ ದಾರಿ ಇನ್ನೂ ತುಂಬಾ ಇದೆ ಸ್ವಾಮಿ. ಸಮಯ ಆರೂವರೆ ಸುಮಾರು |
|
ಕಷ್ಟಪಟ್ಟು ಹತ್ತುತಾ ಇದೀವಿ. ನಂದೂ ಒಂದು ಪಟ ತೆಗಿಯಪ್ಪ ;-) |
|
ಬಾಲರವಿಯ ದೃಶ್ಯಕಾವ್ಯಕ್ಕೆ ಕುಂಚವಾಗಿದ್ದು ದೇವೀರಮ್ಮನ ಬೆಟ್ಟ |
|
ನೋಡಿ ಸ್ವಾಮಿ. ನಾವಿರೋದೇ ಹೀಗೆ |
|
ಬೆಟ್ಟದ ತುದಿಗೆ ಬಂದೇ ಬಿಟ್ವಿ ಅನುಸ್ತಾ ?ಗೊತ್ತಿಲ್ಲ. ಆದ್ರೆ ಬೆಳಗ್ಗೆ ಎರಡೂವರೆ, ಮೂರಕ್ಕೆ ಹೊರಟು ಇಲ್ಲಿ ಕೂತಿರೋ ಜನಕ್ಕೆ ಹೋಲಿಸಿದ್ರೆ ಸಿಕ್ಕಾಪಟ್ಟೆ ಬೇಗ(?) ಹತ್ತಿರೋ ನಮ್ಮ ಸಾಧನೆಗೆ ಖುಷಿಪಡುತ್ತಾ.. |
|
ಬೆಟ್ಟ ಹತ್ತೋದು ಅಂದ್ರೆ ಸುಲಭದ ಮಾತಲ್ರಿ. ಹಿಂಗಿದೆ ಬೆಟ್ಟ |
|
ಇಲ್ಲೊಂದ್ಕಡೆ ಜನ ಎಲ್ಲಾ ಹತ್ತುತಾ ಇದ್ರು ಅಂತ ಬಂದ್ವಪ್ಪ.. ಶಾರ್ಟು ಕಟ್ಟಂತೆ ಇದು ! |
|
ಶಾರ್ಟುಕಟ್ಟಿನ ಬೆನ್ನತ್ತಿ ಅರ್ಧಘಂಟೆ ಲೇಟಾದ್ದು ನಮ್ಮ ಕತೆಯಾದ್ರೆ ತಮ್ಮ ಪಾಡಿಗೆ ಸರಿದಾರೀಲೆ ಬರ್ತಿರೋ ಜನಸಾಗರ ! ಮುಂದಿನ ಸಲಕ್ಕೆ ಈ ದಾರಿ ನೆನ್ಪಿಟ್ಕೊಳ್ಳಿ :-) |
|
ಬೆಟ್ಟ ಹತ್ತೋಕೆ ಬೇರ್ಬೇರೆ ದಾರಿಗಳು. ಒಂದೇ ದೇವನ ತಲುಪೋಕೆ ಹಲವು 'ಧರ್ಮ' ಅನ್ನೋ ದಾರಿಗಳಿದ್ದಂಗೆ ! |
|
ಕೋತಿರಾಮನಿಂದ ಪ್ರಭಾವಿತರಾಗಿರೋರು ಕಮ್ಮಿ ಇಲ್ಲ ಸಾರ್ !! |
|
ಮುಗಿಲ ಮಾರಿಗೆ ರಾಗ ರತಿಯಾ.. ಅಂತ ಹಾಡಬಹುದೇನೋ ಇಲ್ಲಿ |
|
ಶಾರ್ಟುಕಟ್ಟು ಅಂತ ಹತ್ತೋದೇನೋ ಹತ್ತಿಬಿಟ್ವಿ. ಆದ್ರೆ ಮುಖ್ಯ ದಾರಿಗೆ ಮರಳೋದು ನೋಡಿ ಎಷ್ಟು ಪಚೀತಿ!.ಅದ್ಕೇ ಹೇಳೋದು ಅನ್ಸತ್ತೆ.. shortcuts make your life short ಅಂತ |
|
ಇದು ಕಾಡ್ಮನ್ಷ ಅಲ್ಲ ಮಾರ್ರೆ. ನಾನೇ !. ಎಲ್ಲಾದ್ರೂ ಬಂಡೆ ಹತ್ತೋಕೆ ಹೋಗಿ ವಾಪಾಸ್ ಮುಖ್ಯ ದಾರಿಗೆ ಮರಳೋ ಬುದ್ದಿ ಕಲಿತಾಗ ಇಂತಹ ಹಲವು ಚಿತ್ರಗಳು ಸಿಗ್ಬೋದು ! |
|
ಜನಸಾಗರದಲ್ಲಿ ಸಾಗರದ ಹುಡ್ಗ :-) |
|
ಅಂತೂ ಮೇಲೆ ತಲುಪಿದ್ವಿ ಅಂತಾಯ್ತು |
|
ದೇವೀರಮ್ಮನಿಗೆ ನಮನವೆನ್ನುತ್ತಾ |
|
ಇವ್ರೇ ನಮ್ಮ ಶಾಸಕರು |
|
ದೇವೀರಮ್ಮನ ಬೆಟ್ಟದಿಂದ ಕಾಣೋ ಮಾಣಿಕ್ಯಧಾರಾ ಜಲಪಾತದ ಮಗ್ಗುಲು. ಮಾಣಿಕ್ಯಧಾರಾ ಕಡೆಯಿಂದಲೂ ಇಳಿದು ದೇವೀರಮ್ಮನ ಬೆಟ್ಟಕ್ಕೆ ಬರೋರು ಅಥವಾ ಇದನ್ನು ನೋಡಿ ಅದನ್ನೂ ನೋಡಿ ಹೋಗೋರು ಸುಮಾರು ಜನ. ದೇವೀರಮ್ಮನ ಬೆಟ್ಟ ಹತ್ತಿದ ಸುಸ್ತು ಮಾಣಿಕ್ಯಧಾರಾಕ್ಕೂ ಹತ್ತಿ ಅಲ್ಲಿನ ಐಸಿನಂತ ನೀರಲ್ಲಿ ತಲೆಯೊಡ್ಡಿದ್ರೆ ಕ್ಷಣಾರ್ಧದಲ್ಲಿ ಮಾಯವಾಗ್ಬೋದೇನೋ.
ಮುಂದಿನ ಸಲ ಆ ಪ್ರಯತ್ನ ಮಾಡ್ಬೇಕೆಂಬ ಮನಸ್ಸಲ್ಲಿ. ಆ ಕಡೆಯಿಂದ ಬರ್ತಾ/ಹೋಗ್ತಾ ಇರೋ ಜನರನ್ನ ಇರುವೆಗಳಂತೆ ಚಿತ್ರದಲ್ಲಿ ಕಾಣ್ಬೋದು |
|
ಮಾಣಿಕ್ಯಧಾರೆಯ ಬೆಟ್ಟದ ಮತ್ತೊಂದು ಮುಖ |
|
ಮೋಡಗಳ ಮೊಹಬ್ಬತ್ ಅಂದ್ರೆ ಇದೇನಾ ? |
|
ಅಂತೂ ಚಾರಣ ಮುಗಿಸಿ ಮುಕ್ಕಾಲು ಘಂಟೆ ದರ್ಶನಕ್ಕಾಗಿ ಕಾದು ಎಂಟೂವರೆ ಹೊತ್ತಿಗೆ ಕೆಳಗಿಳಿಯುತ್ತಿರೋ ಸಮಯದ ಪೋಸು |
|
ಹಿಂದೂ ಗಿರಿ. ಮುಂದೂ ಗಿರಿ ! |
|
ಬೆಟ್ಟದ ಸೌಂದರ್ಯಕ್ಕೆ ಮರುಳಾಗಿ ಇಳಿಯಲೊಲ್ಲೆ ಎಂದು ಅಲ್ಲೇ ಕೂತು ಬಿಟ್ಟ ಜನ ! |
|
ಬೀಳ್ಬೇಡ ಮಾರಾಯ.. ಶಾರ್ಟುಕಟ್ಟು ಅನ್ನೋದು ಬೇಗ ಹೋಗೋಕೆ ಹೊರ್ತು ಎದ್ದು ಬಿದ್ದು ಇನ್ನೂ ಲೇಟಾಗೋಕಲ್ಲ ! |
|
ದಾರಿಯ ಜನಜಂಗುಳಿ ಬೇಸತ್ತು ಒಂದು ಶಾರ್ಟಕಟ್ಟನ್ನರಸಿ |
|
ಬೆಟ್ಟ ಅಂದ್ಮೇಲೆ ಬೆಟ್ಟದ ನೆಲ್ಲಿಯಿಲ್ಲದಿದ್ರೆ ಹೇಗೆ ? |
|
ರಸ್ತೆ ಮೇಲೆ ಹೋಗಿದ್ರೆ ಚೆನ್ನಾಗಿತ್ತಾ ಅಂತ ! |
|
ಬಿಂಡಿಗದ ಬೋರ್ಡ ಬಳಿ ಮತ್ತೆ.. ಇಳಿದೇ ಬಿಟ್ವಾ ಅಂತೂ ! ನಡೆಯೋದು ಇನ್ನೂ ಇದೆ :-) |
| | | | | |
ಈ ಕಾಲುಗಳು ನಮ್ಮದೇನಾ ? ಪ್ರಕೃತಿ ಚಿಕಿತ್ಸೆ | | | | | | | | | | | | | | | | | |
|
ಬೆಟ್ಟದ ತಪ್ಪಲಲ್ಲಿ ನಿಂತು ಇಳಿದು ಬರೋ ಭಕ್ತರಿಗೆ ನೀರ ಹಂಚೋ ಸೇವೆ ಮಾಡ್ತಿರೋ ಇವ್ರ ಸಾಧನೆಯೇನು ಕಮ್ಮಿಯೇನ್ರಿ .. |
|
ಅದೇ ತರ ಉಚಿತ ಬಾದಾಮಿ ಹಾಲು, ಪಾನಕ ಹಂಚೋರ ಸೇವೆ. ಆ ದಣಿವಿಗೆ ಪಾನಕ ಸೂಪರ್ರು ಕಣ್ರಿ. ನಿಮ್ಮ ಮನೋಭಾವಕ್ಕೊಂದು ಹ್ಯಾಟ್ಸಾಪ್ ಕಣ್ರಿ |
|
ಹತ್ತೋಕೆ ಕರೆದ ಭಾಗ್ಯಮ್ಮನಿಗೊಂದು ಉಡುಗೊರೆ. ಭಾಗ್ಯಮ್ಮ ಯಾರು ಅಂದ್ರಾ ? ಗೊತ್ತಿರೋರಿಗೆ ಹೇಳೋ ಅಗತ್ಯವಿಲ್ಲ. ಗೊತ್ತಿಲ್ಲದವರಿಗೆ ಹೇಳೂ ಉಪಯೋಗಿಲ್ಲ ;-) | |
No comments:
Post a Comment