ತುಮಕೂರಿನ ಸುತ್ತಮುತ್ತ ಇರುವ ವೀಕ್ಷಣೀಯ ಸ್ಥಳಗಳು ಅಂತ ಹುಡುಕುತ್ತಿದ್ದಾಗ ಕಂಡಿದ್ದು ಅರಳಗುಪ್ಪೆ. ಇಲ್ಲಿ ಹೊಯ್ಸಳರ ಒಂಭತ್ತನೇ ಶತಮಾನದ ಕಲ್ಲೇಶ್ವರ ದೇಗುಲ ಮತ್ತು ಹದಿಮೂರನೇ ಶತಮಾನದ ಚೆನ್ನಕೇಶವ ದೇಗುಲವಿದೆ ಅಂತ ಓದಿದಾಗಲಂತೂ ಇಲ್ಲಿಗೆ ಹೊಗಲೇಬೇಕೆಂಬ ಆಸೆ ಹುಟ್ಟಿಬಿಟ್ಟಿತ್ತು. ಬೆಂಗಳೂರಿನಿಂದ ಅರಳಗುಪ್ಪೆಗೆ ಬೆಳಗ್ಗೆ ಆರೂವರೆಗೆ, ಏಳೂಮುಕ್ಕಾಲಿಗೆ ನೇರ ರೈಲುಗಳಿವೆ. ವಿವರಗಳಿಗೆ
ಈ ಕೊಂಡಿಯನ್ನು ಕ್ಲಿಕ್ಕಿಸಿ. ಏಳೂ ಮುಕ್ಕಾಲಿನ ರೈಲಲ್ಲಿ ಮೂವತ್ತು ರೂಗಳಿಗೆ ೧೨೪ ಕಿ.ಮೀ ದೂರ ಹೋಗೋ ಭಾಗ್ಯ ! ಅರಳಗುಪ್ಪೆಯ ನಿಲ್ದಾಣದಲ್ಲಿ ಇಳಿದು ಎಡಕ್ಕಿರೋ ರಸ್ತೆಯಲ್ಲಿ ಬಂದರೆ ಮೊದಲು ಬಲಗಡೆಗೊಂದು ದಾರಿ ಸಿಗುತ್ತೆ. ಅದರಲ್ಲಿ ಕಣ್ಣು ಹಾಯಿಸಿದ್ರೆ ಎದ್ರಿಗೆ ಕಾಣೋದೇ ಚೆನ್ನಕೇಶವ ದೇವಸ್ಥಾನ. ಬಲಕ್ಕೆ ಹೋಗದೇ ಸೀದಾ ಹೋದರೆ ಸಿಗುವುದೇ ಕಲ್ಲೇಶ್ವರ ದೇಗುಲ.ಕಲ್ಲೇಶ್ವರ ದೇಗುಲ ಗಂಗರ ಆಡಳಿತದಲ್ಲಿ ಒಂಭತ್ತನೇ ಶತಮಾನದಲ್ಲೇ ಕಟ್ಟಿಸಿದ್ದರಿಂದ ಈ ಸರಣಿಯಲ್ಲಿ ಅದರ ಬಗ್ಗೆ ಬರೆಯುತ್ತಿಲ್ಲ. ಮುಂದೊಮ್ಮೆ ಅದರ ಬಗ್ಗೆ ನೋಡೋಣ.
 |
Backview of Chennakeshava temple |
 |
ದೇಗುಲಕ್ಕೆ ಹೋಗುವಾಗ ಸಿಗುವ ಹನುಮ |
 |
ಚೆನ್ನಕೇಶವ ದೇಗುಲದ ಎದುರಿನ ದೃಶ್ಯ |
 |
ದೇಗುಲದ ಒಳಗೆ |
 |
ಕಂಬಗಳಲ್ಲಿನ ನಾಜೂಕಾದ ಕೆತ್ತನೆಯನ್ನು ಗಮನಿಸಿ ! |
 |
ದೇಗುಲದ ಹಿಂಭಾಗದ ದೃಶ್ಯ. ಎತ್ತ ಕಣ್ಣು ಹಾಯಿಸಿದರತ್ತ ಕಾಣುವ ಶಿಲ್ಪಗಳು ಇಲ್ಲಿಯ ವೈಶಿಷ್ಟ್ಯ ! |
 |
ಹಿಂಭಾಗದಲ್ಲಿ ಕಾಳಿಂಗಮರ್ಧನ ಮತ್ತು ವಿಷ್ಣುವಿನ ೨೪ ರೂಪಗಳನ್ನು ನೋಡಬಹುದು ! |
 |
ಜಾವಗಲ್, ಬೆಳವಾಡಿಯಲ್ಲಿದ್ದಂತದೇ ಸಾಲುಗಳು. ಇಲ್ಲಿ ರಾಮಾಯಣ, ಮಹಾಭಾರತದ ಚಿತ್ರಣಗಳನ್ನು ಕಾಣಬಹುದು |
 |
ಆಕ್ರಮಣಕ್ಕೆ ಸಿಕ್ಕಿದ ನತದೃಷ್ಟರು |
 |
ಮತ್ತೊಮ್ಮೆ ಷಡ್ಭುಜ ಸರಸ್ವತಿ ಮತ್ತು ವಿಷ್ಣುವಿನ ರೂಪಗಳು |
 |
ಶಿಲೆಯಲ್ಲವಿದು. ಕಲೆಯ ಬಲೆಯು |
 |
ಕಾಳಿಂಗಮರ್ಧನದ ಶಿಲ್ಪ ಅದೇ ಇದ್ದರೂ ಮೇಲಿರುವ ಪ್ರಭಾವಳಿಯಲ್ಲಿ ಜಾವಗಲ್, ಬೆಳವಾಡಿ ಮತ್ತು ಇಲ್ಲಿನ ಶಿಲ್ಪ, ಈ ಮೂರಲ್ಲೂ ಭಿನ್ನತೆಯಿದೆ ! ಅಲ್ಲಗಳೆಯೋ ಮುನ್ನ ಸೂಕ್ಷ್ಮವಾಗಿ ಗಮನಿಸಿ |
 |
ರಾಮಾಯಣದಲ್ಲಿ ರಾಮ, ಭರತ, ಅವಳಿ ಮಕ್ಕಳಾದ ಲಕ್ಷ್ಮಣ-ಶತ್ರುಜ್ಞರನ್ನು ತೂಗುತ್ತಿರುವ ದೃಶ್ಯ |
 |
ರಾಮಾಯಣದ ಕೆತ್ತನೆಯಲ್ಲಿ ಅಂಬೆಗಾಲಿಕ್ಕುತ್ತಿರುವ ರಾಮ ಲಕ್ಷ್ಮಣ ಭರತ ಶತ್ರುಜ್ಞರನ್ನು ಗಮನಿಸಬಹುದು |
 |
ವೇಣುಗೋಪಾಲ |
 |
ಲಕ್ಷ್ಮೀ ನರಸಿಂಹ |
 |
ಶ್ರೀರಾಮ ? ನಮ್ಮ ಕಲ್ಪನೆಯ ಬಿಲ್ಲಿಗೆ ಹೋಲಿಸಿದರೆ ಈ ಬಿಲ್ಲು ತಿರುಗುಮುರುಗಾಗಿರುವಂತೆ ಇಲ್ಲವೇ ? ! ಅಥವಾ ನಮ್ಮ ಇಂದಿನ ಕಲ್ಪನೆಯೇ ತಿರುಮುರುಗೇ ? ಎರಡಕ್ಕಿಂತ ಹೆಚ್ಚು ಕೈಗಳಿರುವ ಕಾರಣ ಇದು ಶ್ರೀರಾಮನಲ್ಲ. ವಿಷ್ಣುವಿನ ಮತ್ತೊಂದು ರೂಪ |
 |
ಮೂಲೆಮೂಲೆಗಳಲ್ಲೂ ಕಲೆಯ ಸೆಲೆ |
 |
ಜಾವಗಲ್ಲಿನಲ್ಲಿ ಬಲಮುರಿ ಗಣಪನಾದರೆ ಇಲ್ಲಿ ಎಡಮುರಿ ಗಣಪ |
 |
ಷಡ್ಭುಜ ಸರಸ್ವತಿ. ಇಲ್ಲಿನೀ ಶಿಲ್ಪ ಜಾವಗಲ್ಲು, ಬೆಳವಾಡಿಯ ಶಿಲ್ಪಗಳಿಗಿಂತ ದೊಡ್ಡದಾಗೂ, ಸುಂದರವಾಗೂ ಇದೆ |
 |
ಆದಿಶೇಷನ ಮೇಲೆ ಕೂತ ಭಂಗಿಯ ವಿಷ್ಣು. ಹಿಂದಿನ ದೇಗುಲದಲ್ಲಿ ಕಂಡತಹ ಅಪರೂಪದ ದೃಶ್ಯ |
ವಿಷ್ಣುವಿನ ರೂಪಗಳು:
 |
ಬಲಭಾಗದಲ್ಲಿರುವ ದೇವನ ಕೈಯಲ್ಲಿರುವ ಆಯುಧ ಗೊತ್ತಾಗುತ್ತಿಲ್ಲ ! ಅರಿತವರು ತಿಳಿಸಿ |
ಮುಂದಿನ ಭಾಗ: ಚೆನ್ನಕೇಶವ ದೇವಸ್ಥಾನ, ತುರುವೇಕೆರೆ
No comments:
Post a Comment