ನೂರೆಂಟು ನೆನಪೋಲೆ
ಆದರೂ ಮರೆತು ಜನ್ಮ
ಕೇಳಿದರೆ ಉಚಿತ ಉಪದೇಶ
ಸಿಡಿದು ಬೆಂಕಿ ಕಾರೋ ಮುನ್ನ
ತಣಿಸಿಬಿಡು ತಲೆ ಒಲೆಯ|೧|
ಜಂಗಮದ ಒಳಪೆಟ್ಟಿಗೆಯಂತೆ ಜನರು?
ಓದುವ ಮೊದಲೇ ಸ್ಮೃತಿಯಿಂದ
ತೆಗೆದು ಆಮೇಲೆ ಪರಿತಾಪ
ಸತ್ತದ್ದು ದಕ್ಕುವುದೇ ಶಾಪಕೆ?|೨|
ಒಂದೆಡೆಯಿಂದ ಕಿರುಚಿದರೆ
ಇನ್ನೊಬ್ಬನಿಗೆ ಮೌನವೇ
ಕೇಳುವವರೆಗೆ ಕೇಳಿ ಮುಂದೆ
ಹೊರಲೂ ಸಿಗದೆಂಟು ಕಾಲು|೩|
ಜನರು ಅಂಕಿಗಳೇ ?
ಕೂಡಿ ಕಳೆಯುವುದಕ್ಕೆ
ವಿಶ್ವಾಸ ವ್ಯಾಪಾರವೇ
ಕೊಟ್ಟೆನೆಂದು ಬಯಕೆಗೆ?|೪|
ಮುದ್ರಿತನಲ್ಲ ಗೆಳೆಯ
ಅಲ್ಲಿಲ್ಲಿಗೆ ಎಳೆದು ಮತ್ತದೇ
ಹಾಡಿಸಲಿಕ್ಕೆ, ಗೋಳ ಕೇಳಿಸಲಿಕ್ಕೆ
ಅರಿಯದೇ ಬದಲಾಗಿ
ಜಂಗಮದ ಬದುಕು|೫|
ನೂರೆಂಟು ನೆನಪೋಲೆ
ReplyDeleteಆದರೂ ಮರೆತು ಜನ್ಮ
ಕೇಳಿದರೆ ಉಚಿತ ಉಪದೇಶ
ಸಿಡಿದು ಬೆಂಕಿ ಕಾರೋ ಮುನ್ನ
ತಣಿಸಿಬಿಡು ತಲೆ ಒಲೆಯ|೧|
: ಸುಂದರ ಭಾವದ ಸಾಲು. " ತಲೆಯ ಒಲೆ" ಸೃಜನಶೀಲ ಪದಸೃಷ್ಠಿ. ಹೀಗೆ ಬರಬೇಕು ಪದಗಳ ಜನ್ಮ..
ತುಂಬಾ ಧನ್ಯವಾದಗಳು ಮೂರ್ನಾಡರೇ :-)
ReplyDelete