ಆಡಿ ಒಡೆಯೋ ವಸ್ತು
ಇಲ್ಲದಿದ್ದಾಗ ಅರ್ಥ
ಅನಿವಾರ್ಯದ ಮಳೆಗೆ
ಹೊರತಂದ ಛತ್ರಿ ಮಾತು|1|
ಕಿವಿ ತೆಗೆಯೋ ಸಿಡಿಲಿನಂತೆ
ಕಣ್ಣ, ಜೀವ ತೆಗೆದು ಮಿಂಚು
ಬೆಳಕಿದ್ದರೂ ಬೇಡವಾಗಿ
ಬದುಕುವ ಶಾಪ ಮಾತು|೨|
ಬೀಸಿದ ಗಾಳಿ ನುಂಗಿತೇ
ತರಗೆಲೆ ಸಪ್ಪಳ ಹೆಚ್ಚೇ
ಪ್ರಶಾಂತ ಉದ್ಯಾನದಲ್ಲೂ
ಕಾಲ ಕೇಳದ ಉಸಿರು ಮಾತು|೩|
ಆನೆಯನೆ ಅಶ್ವತ್ಥಾಮನೆಂದು
ನಂಬಿಸಿ ಶಸ್ತ್ರತ್ಯಜಿಸಿ,ದಿಕ್ಕುಬದಲಿಸಿ
ಸುಳ್ಳಿಲ್ಲದ ಬಾಯ ಸತ್ಯದಂತೆ
ಕಂಡ ಮೌನ ಮಾತು|೪|
ಶತಮಾನದ ದೌರ್ಜನ್ಯ
ಪ್ರತೀಕಾರದ ಹೆಸರ ಬೆಂಕಿ
ಹಲತರದ ತುಳಿತಕೂ ತೆರೆಯದ
ಹೊಲಿದ ಬಾಯ ಬಿಸಿ, ಅರಳಿದ
ಮೂಗ ಹೊಳ್ಳೆಗಳು ಮಾತು|೫|
No comments:
Post a Comment