ಎಲ್ಲೋ ಹುಡುಕಲಿ ಕಳೆದಿರುವೆ ಜೀವ ನೀ
ಹುಡುಕೀತೆ ನೀರಲ್ಲಿ ಈ ಕಂಬನಿ?
ಗಾಳಿಯನೆ ತಡಕುವೆಯ ಬಿಸಿಯುಸಿರೆ ನೀ
ಭೂಮಿಯನೆ ಬಗೆಯಲೇ ಎಲ್ಲೋದೆ ನೀ?|೧|
ಮರವನ್ನ, ನರನನ್ನ ಎಲ್ಲ ಬರಸೆಳೆದೊಮ್ಮೆ
ಯೌವನವ ಎಳಕಿಸಿ ಸಿಪ್ಪೆಯಂತೆ
ಕಿತ್ತೆಸೆದು ನಗುತಿರುವೆ ಯಮನ ದೂತನೆ ನೀನು
ಮುಪ್ಪೆಂಬ ರೂಪದಲಿ ಸಪ್ಪೆಯಾಗಿ|೨|
ವ್ರತಭೀಷ್ಮನನೆ ಕಾಡಿ ಶರದ ಹಾಸಿಗೆಯಂತೆ
ಹಿಂಡಿ ಹಿಪ್ಪೆಯ ಮಾಡಿ ಜೀವವನ್ನೇ
ಮಗನನ್ನೊ ಮಗಳನ್ನೊ ಇನ್ಯಾರ ಬೇಡಲಿ
ತುತ್ತು ಅನ್ನವ ನೀಡು ಜೀವಕೆಂದು
ಮುಂಜಾನೆ ನಾ ನೆಟ್ಟ ಗಿಡವೆಲ್ಲಾ ಮುಳ್ಳಾಗಿ
ನೆರಳು ನೀಡದೆ ಇಂದು ತೊರೆದವೆಂದು|೩|
ಇದ್ದಕಿದ್ದೊಡೆ ಯಾಕೆ ತಣಿದೆಯೋ ಓ ದೇಹ
ಕರೆದೆಯ ಓ ಯಮನೆ ಬಾರೊ ಎಂದು
ಯಾಕೀ ತಂಗಾಳಿ ಚಾಮರವ ನುಡಿದಂತೆ
ಪಕ್ಕದಲೆ ಹಣ್ಣುಗಳು ಕನಸಿನಂತೆ !! |೪|
ಆನೆ ನಿಂತಿಹುದಲ್ಲೋ ನೆರಳಾಗಿ ಹಿಂದೆಯೇ
ಅದರ ಮೇಲಿಹ ಒಬ್ಬ ಕರಿಮೊಗದವ
ಕೆಳಗಿಳಿದು ಅಲ್ಲಿಂದ ಕಾಲಿಗೆರಗಿದನಲ್ಲೋ
ನಾನಿತ್ತ ತುತ್ತೊಂದ ನೆನಪಿಟ್ಟವ
ಇಂದವನೆ ಜೀವವನು ಕಾಪಿಟ್ಟವ|೫
No comments:
Post a Comment